Sunday, August 2, 2026
HomeಸಿನಿಮಾI ಈ ಹೊತ್ತಿನ ರಾಜ್ಯ ಸರ್ಕಾರಗಳಿಂದ ಕನ್ನಡ ಚಿತ್ರಗಳಿಗೆ ಮಹಾಮೋಸ I ಸಂಪೂರ್ಣ ತೆರಿಗೆ ವಿನಾಯಿತಿಗಾಗಿ...

I ಈ ಹೊತ್ತಿನ ರಾಜ್ಯ ಸರ್ಕಾರಗಳಿಂದ ಕನ್ನಡ ಚಿತ್ರಗಳಿಗೆ ಮಹಾಮೋಸ I ಸಂಪೂರ್ಣ ತೆರಿಗೆ ವಿನಾಯಿತಿಗಾಗಿ ಕಾಣೆಯಾದ I ಡಾ.ರಾಜಣ್ಣ ಮಾದರಿ ಹೋರಾಟ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಈ ಹೊತ್ತಿನ ರಾಜ್ಯ ಸರ್ಕಾರಗಳಿಂದ ಕನ್ನಡ ಚಿತ್ರಗಳಿಗೆ ಮಹಾಮೋಸ I ಸಂಪೂರ್ಣ ತೆರಿಗೆ ವಿನಾಯಿತಿಗಾಗಿ ಕಾಣೆಯಾದ I ಡಾ.ರಾಜಣ್ಣ ಮಾದರಿ ಹೋರಾಟ I

ಕನ್ನಡ ಚಿತ್ರರಂಗ ಇದೀಗ ಮತ್ತೊಮ್ಮೆ ತೆರಿಗೆಯ ಬರೆಗಳ ಹೊರೆ ಹೊತ್ತು ಸಾಗುತ್ತಿದೆ, ಈ ಕುರಿತಂತೆ ಚಿತ್ರ ನಿರ್ಮಾಪಕರಿಗೆ ಅಸಮಾಧಾನಗಳಿದ್ದರೂ ಒಕ್ಕರೊಲಿನಿಂದ ದನಿಗೂಡಿಸಬೇಕಾದ ಶಕ್ತಿ ಕುಂದು ಹೋಗಿದೆ ಹೀಗಾಗಿ ೨೦೧೭ರವರೆಗೆ ಇದ್ದಂತಹ ಮನರಂಜನೆಯ ತೆರಿಗೆ ದುಪ್ಪಟ್ಟು ಜೆಎಸ್‌ಟಿ ಹೆಸರಿನಲ್ಲಿ ಅಧಿಕಗೊಂಡಿದೆ, ಜಿಎಸ್‌ಟಿಯ ೨೮% ತೆರಿಗೆಯನ್ನು ಕಟ್ಟುವುದು ಬಲು ಕಷ್ಟಕರ ಇಂದಿಗೂ ಚಿತ್ರೋದ್ಯಮ ವ್ಯಾಪಕವಾಗಿ ಅಲ್ಲದಿದ್ದರೂ ಅಲ್ಲಲ್ಲಿ ಧ್ವನಿ ಎತ್ತಿದ್ದವೂ ಈ ತರುವಾಯವೇ ಜಿಎಸ್‌ಟಿ ಸಂಗತಿಯಲ್ಲಿ ಬದಲಾವಣೆಗೊಂಡು ಎರಡು ಭಾಗಗಳಾಗಿ ಪಾವತಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ತಿಳಿಸಿತು, ಇದರಂತೆ ಆಯ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ೧೦೦ರೂಗಿಂತ ಕಡಿಮೆ ಇದ್ದರೆ ೧೨%, ಹೆಚ್ಚಾಗಿದ್ದರೆ ಶೇಕಡ ೧೮% ವಿಧಿಸಲು ಮುಂದಾಗಿದೆ, ಹೀಗಿದ್ದರೂ ಹೊಸ ತೆರಿಗೆ ನೀತಿಗೆ ಇಡೀ ಚಿತ್ರೋದ್ಯಮ ತಲೆಬಾಗಿ ನಿಂದಾಗಿದೆ,

ಈ ತೆರಿಗೆ ಪಾಲಿನ ಲೆಕ್ಕಾಚಾರದಲ್ಲಿ ರಾಜ್ಯಸರಕಾರ ತೆರಿಗೆ ಮುಕ್ತ ಚಿತ್ರವೆಂದು ಘೋಷಿಸಿದರೆ ೧೮% ಶೇಕಡವಾರಿನಲ್ಲಿ ೯% ತೆರಿಗೆ ಪಾವತಿಸಲೇ ಬೇಕಾಗುತ್ತದೆ ಇನ್ನುಳಿದಿದ್ದು ಕೇಂದ್ರದ ೯% ಜಿಎಸ್‌ಟಿ ಪಾವತಿಸಿಯೇ ತೀರಬೇಕಾಗುತ್ತದೆ, ಇಲ್ಲಿ ಕಲಾಮಾಧ್ಯಮಕ್ಕೆ ಜಿಎಸ್‌ಟಿಯ ಹೊರೆಗಳು ಬಿಗ್ ಬಜೆಟ್ ಸಿನಿಮಾಗಳಿಗೆ ಹಾಗೂ ಹೊರ ರಾಜ್ಯ, ದೇಶದಲ್ಲಿ ಚಿತ್ರೀಕರಣ ನಡೆಸುವ ಚಿತ್ರಗಳ ಟೋಟಲ್ ಬಜೆಟ್‌ಗೆ ದುಷ್ಟಾರಿಣಾಮಗಳು ಬೀರದಿದ್ದರೂ ಕನ್ನಡದ ನೆಲದಲ್ಲಿ ಚಿತ್ರೀಕರಣ ನಡೆಸುವ ಚಿತ್ರಗಳಿಗೆ ಸಂಪೂರ್ಣ ಹೊರೆಯ ಬರೆಯಾಗುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ.

ಏಕೆಂದರೆ ತೆರಿಗೆ ಮುಕ್ತವಾದ ಚಿತ್ರಗಳ ಟಿಕೆಟ್ ದರ ಕಡಿಮೆಯಾಗುವುದರಿಂದ ಚಿತ್ತಸಮಾಜಕ್ಕೆ ಹಾಗೂ ಚಿತ್ರ ನಿರ್ಮಾಣಕ್ಕೆ ತಗಲುವ ಆರ್ಥಿಕ ಭಾರದಿಂದ ತಪ್ಪಿಸಿಕೊಳ್ಳಬಹುದಾಗಿದೆ, ಈ ಹೊತ್ತಿನ ಆಧುನೀಕರಣದ ತಾಂತ್ರಿಕ ಬದಲಾವಣೆಯಲ್ಲಿ ಅತೀವ ಸವಾಲುಗಳ ನಡುವೆ ಚಿತ್ರನಿರ್ಮಾಣ ಸಾಗಬೇಕಿದೆ ಹಾಗೂ ಎದುರಿಸಬೇಕಿದೆ, ಹೆಚ್ಚೆಚ್ಚು ಜನಸಮೂಹ ಚಿತ್ರಮಂದಿರಗಳತ್ತ ಧಾವಿಸಿ ಬಂದು ವೀಕ್ಷಿಸುವಂತಾದರೆ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಕನಿಷ್ಠ ಹತ್ತು ಸಾವಿರಕ್ಕೂ ಹೆಚ್ಚು ಕಲಾಕುಟುಂಬಗಳು ನೆಮ್ಮದಿಯಿಂದ ಉಸಿರಾಡಬಹುದಾಗಿದೆ,

ಈ ಚಿಂತನೆಗಳಿಟ್ಟುಕೊಂಡು ಮನನ ಮಾಡಿಕೊಂಡು ತೆರಿಗೆ ನೀತಿಯನ್ನು ವಿಧಿಸಲು ಹೊರಟಿದ್ದ ಅಂದಿನ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರ ನಿರ್ಧಾರವನ್ನು ವಿರೋಧಿಸಿ ಡಾ.ರಾಜಕುಮಾರ್‌ರವರು ಕನ್ನಡ ಚಿತ್ರರಂಗವನ್ನೇ ತ್ಯಜಿಸಿ ತಮ್ಮ ಹಳ್ಳಿಗೆ ಹೋಗುವ ನಿರ್ಧಾರ ಮಾಡುತ್ತಾರೆ, ಅದಾಗ ಮುಖ್ಯಮಂತ್ರಿಗಳೇ ಖುದ್ದು ಡಾ.ರಾಜುಕುಮಾರ್‌ರವರ ಮನೆಗೆ ಹೋಗಿ ತೆರಿಗೆ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿ, ಕನ್ನಡ ಚಿತ್ರರಂಗ ತ್ಯಜಿಸದಂತೆ ಮನವೊಲಿಸಿ ತೆರಿಗೆ ವಿಧಿಸುವ ತಮ್ಮ ನಿಲುವನ್ನು ಹಿಂತೆಗೆದುಕೊಳ್ಳುತ್ತಾರೆ. ಇದನ್ನು ಹಿರಿಯ ಪತ್ರಕರ್ತರಾದ ಬಿ.ವಿ.ವೈಕುಂಠರಾಜು ರವರ ಸಿನೆಮಾತು ಪುಸ್ತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಅದೇ ಮುಂದೆ ಕನ್ನಡ ಹಾಗೂ ಕನ್ನಡದ ನೆಲದಲ್ಲಿ ನಿರ್ಮಿಸಲಾಗುವ ಎಲ್ಲಾ ಸಿನೆಮಾಗಳಿಗೂ ೧೦೦% ತೆರಿಗೆ ವಿನಾಯಿತಿ ನೀಡಲಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ದೂರದೃಷ್ಠಿ ಕಲಾಬದುಕುಗಳ ಪರವಾಗಿ ದನಿಯಾಗುತ್ತಿದ್ದ ಡಾ.ರಾಜಕುಮಾರ್‌ರವರ ಈ ಧೀರೋದತ್ತ ನಿರ್ಧಾರದಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಸೌಲಭ್ಯವನ್ನು ಜಿಎಸ್‌ಟಿ ನೆಪದಲ್ಲಿ ಕಿತ್ತುಕೊಂಡರು ಯಾವುದೇ ಸ್ಟಾರ್‌ನಟರುಗಳು ಕಿಂಚಿತ್ತು ದನಿಯಾಗದೇ ಅತೀವ ಮೌನವಹಿಸಿರುವುದು ದುರಂತ ಎನ್ನಬಹುದಾಗಿದೆ.

ತೆರಿಗೆ ಮುಕ್ತ ಚಿತ್ರ ನಿರ್ಮಾಣದ ಕನಸು ಕಮರಿ ಹೋಗಿರುವ ಬೆನ್ನಲ್ಲೆ ಇದೀಗ ಜಿಎಸ್‌ಟಿ ತೆರಿಗೆ ಮತ್ತು ಅದರ ವಿನಾಯಿತಿಗಳು ಸಂಪೂರ್ಣವಾಗಿ ರಾಜಕೀಯಗೊಳಿಸುತ್ತಿರುವುದು ವಾಸ್ತವವಾಗಿ ಕಾಣಬಹುದಾಗಿದೆ ಇದರಿಂದ ಕನ್ನಡದ ನೆಲದಲ್ಲಿಯೇ ಚಿತ್ರೀಕರಣಗೊಳ್ಳುವ ಸಿನಿಮಾಗಳ ಮೇಲೆ ದುಷ್ಪಾರಿಣಾಮಗಳು ಬೀರುತ್ತಿರುವುದು ಆತಂಕಕಾರಿ ಬೆಳವಣಿಗೆಯೂ ಆಗಿದೆ. ಈ ಕುರಿತಂತೆ ಕನ್ನಡಪರ ಸಂಘಟನೆಗಳು ಹೋರಾಟಗಳು ರೂಪಿಸಬೇಕಿತ್ತು, ಆದರೆ ಹೋರಾಟಗಳು ರಾಜ್ಯದಲ್ಲಿ ಕಾಣಲೇ ಇಲ್ಲ, ಈ ಕುರಿತಂತೆ ಚಿತ್ರನಿರ್ಮಾಣದ ಹಿಂದಿನ ಮ್ಯಾನ್‌ಪವರ್ ಫ್ಯಾಮಿಲಿ ಉಳಿದರಷ್ಟೆ ತಾನೋರ್ವ ಸ್ಟಾರ್ ನಟ, ನಟಿ ಎನ್ನುವ ಸೆಲಿಬ್ರಿಟಿ ಅಂದುಕೊಳ್ಳದ ಯಾವ ಸ್ಟಾರ್ ನಟರುಗಳು ಈ ಕುರಿತಂತೆ ಹೇಳಿಕೆಗಳನ್ನು ನೀಡಲೇ ಇಲ್ಲ, ಬದಲಿಗೆ ಡಾ.ರಾಜಕುಮಾರ್‌ರವರ ಕಾಳಜಿಯನ್ನು ಕೂಡ ಕಿಂಚಿತ್ತು ಈ ಹೊತ್ತಿನಲ್ಲಿ ತಳೆಯಲೇ ಇಲ್ಲ, ಹೀಗಾಗಿ ಹೊಸ ಜಿಎಸ್‌ಟಿ ನೀತಿಯನ್ನು ಯಾರಿಗೆ, ಯಾವ ಚಿತ್ರಕ್ಕೆ ನೀಡಬೇಕೋ ಅಂತಹ ಚಿತ್ರಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಲು ಮುಂದಾಗಿರುವುದನ್ನು ಕೂಡ ವಿರೋಧಿಸಲು ಸಾಧ್ಯವಾಗದ ಅಥವಾ ಚರ್ಚಿಸಲಾಗದ ಅತ್ಯಂತ ಕೆಳದರ್ಜೆಯ ಮಾನಸೀಕತೆಗೆ ಸ್ಟಾರ್ ನಟರು, ಚಿತ್ರೋದ್ಯಮ ಬಂದು ನಿಂದಿರುವುದಕ್ಕೆ ಪ್ರಸ್ತುತ ಈ ವಿದ್ಯಮಾನಗಳೇ ಸಾಕ್ಷೀಕರಿಸುತ್ತದೆ.

ಇತ್ತೀಚೆಗೆ ಬಿಡುಗೊಂಡ ಕಾಶ್ಮೀರಿ ಪೈಲ್ಸ್ ಚಿತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರೆಡು ತೆರಿಗೆ ಮುಕ್ತ ಚಿತ್ರವೆಂದು ಘೋಷಿಸಿದವು, ಈ ಬಗ್ಗೆಯೂ ಚಕಾರೆತ್ತಲಿಲ್ಲ, ಇದೀಗ ತೆರೆಕಂಡ ಚಿತ್ರ ಚಾರ್ಲಿ ೭೭೭ ನೂರಕ್ಕೆ ನೂರರಷ್ಟು ತೆರಿಗೆ ವಿನಾಯಿತಿ ನೀಡಿದೆ ಅನ್ಯಭಾಷೆಯ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ ಆರೋಪದಿಂದ ಮುಕ್ತವಾಗಲು ಕನ್ನಡದ ಒಂದು ಚಿತ್ರಕ್ಕೆ ತೆರಿಗೆ ಮುಕ್ತ ಆದೇಶ ಹೊರಬಿದ್ದಿರುವುದನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಅವಲೋಕನಕ್ಕಾಗಿ ಮುಂದಾಗಲೇ ಇಲ್ಲ, ಕನ್ನಡದೊಂದು ಚಿತ್ರಕ್ಕೆ ವಿನಾಯಿತಿ ಘೋಷಿಸಲು ಮುಂದಾಗುವ ಬಿಜೆಪಿ ಹಾಗೂ ಮೈತ್ರಿ ಸರ್ಕಾರಗಳು ಬರುವ ಮೊದಲು ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಎಲ್ಲಾ ಕನ್ನಡ ಸಿನಿಮಾಗಳಿಗೆ ೧೦೦% ತೆರಿಗೆ ವಿನಾಯಿತಿ ಇತ್ತು ಎನ್ನುವುದನ್ನು ಪರೀಶಿಲಿಸಲಿ ಎನ್ನುವುದು ಈ ಹೊತ್ತಿನ ನಿರ್ಮಾಪಕರ ದನಿಯೂ ಆಗಿದೆ. ಹೀಗಾಗಿ ಹೊಸ ಜಿಎಸ್‌ಟಿ ನೀತಿಯನ್ನು ಜಾರಿಗೆ ತಂದು ಕನ್ನಡದ ಚಿತ್ರಗಳಿಗೆ ತೆರಿಗೆಯ ಹೊರೆಯ ಬರೆಯಾಗಿಸಿರುವುದು ಸಮಂಜಸವಾದುದ್ದಲ್ಲ,

ಕನ್ನಡದಲ್ಲಿಯೂ ಉತ್ತಮ ಸಮಾಜಕ್ಕೊಂದು ಸಂದೇಶವನ್ನು ನೀಡುವ ಅನೇಕ ಚಿತ್ರಗಳು ಕನ್ನಡದ ಈ ನೆಲದಲ್ಲಿಯೇ ನಿರ್ಮಿಸಲಾಗುತ್ತಿದೆ, ಈ ಚಿತ್ರನಿರ್ಮಾಣದ ಹಿಂದೆ ಸಾವಿರಾರು ಕುಟುಂಬಗಳ ಬದುಕುಗಳಿವೆ, ಈ ಎಲ್ಲಾ ಅಂಶಗಳನ್ನು ಮನಗಂಡು ಡಾ.ರಾಜಕುಮಾರ್‌ರವರ ಆಶಯದಂತೆ ೨೦೧೭ರ ಹಿಂದಿನ ತೆರಿಗೆ ನೀತಿಗಳಂತೆಯೇ ತೆರಿಗೆ ಮುಕ್ತ ಚಿತ್ರನಿರ್ಮಾಣಕ್ಕೆ ಅವಕಾಶ ನೀಡಲಿ, ಇದನ್ನು ರಾಜಕೀಯಗೊಳಿಸದೇ ಒಂದು ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಕಣ್ಣೊರೆಸುವ ತಂತ್ರಗಾರಿಕೆಯನ್ನು ಯಾವುದೇ ರಾಜ್ಯಸರಕಾರವು ಮಾಡದಿರಲಿ ಅಲ್ಲವೇ..? ಶ್ವಾನದ ಕಾಳಜಿಯಿಂದ ತಾವು ಆ ‘ಒಂದು’ ಕನ್ನಡ ಸಿನಿಮಾಗೆ ಮಾತ್ರ ೧೦೦% ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಮುಂದಾದ ನೀವು ಶ್ವಾನದಷ್ಟೇ ಜೀವಪರ ನಿಲುವು ಹೊಂದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನಿಮಾಗಳು ಪ್ರತೀ ವರ್ಷವೂ ನಿರ್ಮಾಣವಾಗುತ್ತಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಈ ನೆಲದಲ್ಲಿಯೇ ತಯಾರಾಗುತ್ತಿವೆ ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ನೀಲಿ ಹಕ್ಕಿ, ಇತ್ತೀಚೆಗಷ್ಟೆ ನಡುಬೆಟ್ಟು ಅಪ್ಪಣ್ಣ ಇನ್ನೂ ಬಹಳಷ್ಟು ಸಿನಿಮಾ ಇದೆ. ಜೊತೆಗೆ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಚಿತ್ರಗಳು ಅತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನಿಮಾಗಳು ಸಾಕಷ್ಟಿವೆ, ಇವ್ಯಾವುದಕ್ಕೂ ನೀಡದ ೧೦೦% ತೆರಿಗೆ ವಿನಾಯಿತಿ ಕೇವಲ ಒಂದು ಸಿನಿಮಾಗೆ ನೀಡುವುದು ಡಾ.ರಾಜಕುಮಾರ್‌ರವರ ಆಶಯಕ್ಕೆ ತದ್ವಿರುದ್ಧವಾದದ್ದು ಎನ್ನುವುದನ್ನು ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಗಲಿ ಭವಿಷ್ಯದ ಮುಖ್ಯಂತ್ರಿಗಳೆ ಆಗಲಿ, ಮನವರಿಕೆ ಮಾಡಿಕೊಳ್ಳಬೇಕಿದೆ,

ಹಿಂದಿ ಚಿತ್ರವೊಂದಕ್ಕೆ ನೀಡಿದ ತೆರಿಗೆ ವಿನಾಯಿತಿಯ ಆರೋಪವನ್ನು ತಣಿಸಲು ಕನ್ನಡದೊಂದು ಚಿತ್ರಕ್ಕೆ ನೀಡಿ ಕಣ್ಣೊರೆಸುವ ತಂತ್ರಗಾರಿಕೆಯಾಗಲಿ, ರಾಜಕಾರಣವಾಗಲಿ ಮಾಡಬಾರದಾಗಿದೆ. ಇನ್ನೂ ಈ ಜಮಾನದ ಕನ್ನಡದ ಯಾವೊಬ್ಬ ನಿರ್ಮಾಪಕರು ಅಣ್ಣಾವ್ರ ನೇರ ನಡೆಯಂತೆ ನಡೆಯಲಾರರು ಎನ್ನುವುದು ಇದೀಗ ಮನದಟ್ಟಾಗಿದೆ, ಅಲ್ಲದೆ ಒಕ್ಕರೊಲಿನಿಂದ ೧೦೦% ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರದ ಕೋಮ ಸ್ಥಿತಿಗೆ ಬಂದು ತಲುಪಿರುವುದು ಈ ಬದಲಾವಣೆಗಳಿಂದಲೇ ದೃಡವಾಗುತ್ತದೆ, ಇದರಿಂದ ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ನಿರ್ಮಾಪಕರು, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿ ರುವುದರಿಂದ ಅಣ್ಣಾವ್ರು ಡಾ. ರಾಜಕುಮಾರ್ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಚಿತ್ರಗಳಿಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ನಿಟ್ಟಿನಲ್ಲಿ ಸರಕಾರ ತ್ವರಿತವಾಗಿ ಯೋಚಿಸಲಿ ಎನ್ನುವುದು ನನ್ನಯ ಅಂಬೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I