Saturday, August 1, 2026
HomeಅಂಕಣI ಸಾವಿನ ಬದುಕು ಕಟ್ಟಿಕೊಂಡ I ಮಲೆನಾಡಿನ ಸ್ನೇಕ್ ಕ್ಯಾಚರ್ ಕಿರಣ್ I

I ಸಾವಿನ ಬದುಕು ಕಟ್ಟಿಕೊಂಡ I ಮಲೆನಾಡಿನ ಸ್ನೇಕ್ ಕ್ಯಾಚರ್ ಕಿರಣ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸಾವಿನ ಬದುಕು ಕಟ್ಟಿಕೊಂಡ I ಮಲೆನಾಡಿನ ಸ್ನೇಕ್ ಕ್ಯಾಚರ್ ಕಿರಣ್ I

ವಾಸ್ತವದ ಬರಹವಿದು, ಹೀಗೊಂದು ತಲೆಬರಹ ಮಲೆನಾಡಿನಲಿ ಅಣಕವಿಟ್ಟಿದೆ, ವಿಷಪೂರಿತ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿನ ಪಥದೆಡೆಗೆ ಬಿಟ್ಟು ನಾಗರೀಕ ರಕ್ಷಣೆಯ ಕೈಂಕರ್ಯವನ್ನು ಮೂರು ದಶಕಗಳಿಂದಲೂ ಶಾಶ್ವತೀಕರಿಸುವ Snake Catcher ಸ್ನೇಕ್ ಕಿರಣ್ ಯಾರಿಗಾಗಿ ಈ ಸಾವಿನ ಬದುಕನ್ನು ಹೆಣೆದುಕೊಂಡರು, ತನಗಾಗಿಯೇ, ಜೀವನ ನಿರ್ವಹಣೆಗಾಗಿಯೇ..?! ಅಥವಾ ಹವ್ಯಾಸಕ್ಕಾಗಿಯೇ..?! ಹೀಗೆಲ್ಲಾ ಪ್ರಶ್ನೆಗಳ ನಡುವೆ, ಇವರದೊಂದು ಬದುಕು ಇಲ್ಲಿ ಲಗತ್ತಿಸಿಕೊಂಡಿದೆ,

ವಾಸ್ತವವಾಗಿ ಇಂತಹ ಸಾವಿನ ಲೆಕ್ಕಕ್ಕಿಲ್ಲದೆ ಸಾಹಸಮಯ ಬದುಕು ಜನಜೀವನಕ್ಕೊಂದು ಆಸರೆಯಾಗುತ್ತಿದೆ, ಮಡುಗಟ್ಟುವ ಆತಂಕವನ್ನು ನಿರಾಯಾಸವಾಗಿ ದೂಡುತ್ತದೆ, ಎನ್ನುವುದು ನಾಗರೀಕರು ಎಂದಿಗೂ ಮರೆಯಬಾರದು,

ಇನ್ನೂ ಸ್ನೇಕ್ ಕ್ಯಾಚರ್ ಕಿರಣ್ ಆಯ್ದುಕೊಂಡ ಈ ಹವ್ಯಾಸಿ ಬದುಕಿದು ಅವರ ಕರ್ಮ, ನಾವೇನು ಮಾಡೋಕೆ ಆಗುತ್ತೇ ಅಲ್ವಾ..? ಆತ ಆರೋಗ್ಯವಾಗಿದ್ರೆ ನಮ್ಮಗಳ ಮನೆ-ಜಗಲಿಗಳತ್ತ ಬರುವ ಹಾವುಗಳನ್ನು ಹಿಡಿಸಿ Thanks ಹೇಳಿ ಬಿಟ್ರೇ ಕೆಲ್ಸ ಮುಗೀತು.. ಹೀಗೆ ಇಂತಿವುಗಳ ತಾತ್ಸಾರತೆಗಳ ಸ್ವಾದಿಸಿಕೊಂಡು ಸಾವಿರಾರು ಸಂಖ್ಯೆಯ ವಿವಿಧ ವರ್ಗದ ವಿಷಪೂರಿತ ಹಾವುಗಳನ್ನು ಹಿಡಿದು “ಮಲೆನಾಡಿನಲ್ಲಿ ವಿಶೇಷವಾಗಿ ಗುರುತಿಸಿಕೊಂಡ ಸ್ನೇಕ್ ಕ್ಯಾಚರ್ ಕಿರಣ್ ” ಇತ್ತೀಚಿಗೆ ಸಾವಿನ ದವಡೆಗೆ ಎಂಟ್ರಿ ಕೊಟ್ಟಿದ್ದರು, ಈ ಸಂದರ್ಭದಲ್ಲಿ ಹಲವರಲ್ಲಿ ಬೆರಳೆಣಿಕೆಯಷ್ಟು ಮನಸುಗಳು ಮಾತ್ರ ನೆರವಿಗೆ ನಿಂತಿದ್ದು ಬಿಟ್ರೇ ಉಳಿದವರು ಗೊತ್ತಾಗಿಯು ಮೌನದಿ ತಳೆದಿದ್ದು ನೋಡಿದರೆ ಇದೆಂತಹ ಮಾದರಿ ಮನುಷ್ಯ ಧರ್ಮವೇ..? ಎನ್ನುವ ಪ್ರಶ್ನೆ ಕಾಡದೇ ಇರಲಾಗದು, ನೋಡಿ ಉಪಕಾರಿಯ ಸಂಕಟದಲ್ಲಿ ದನಿಯಾಗದಿದ್ದರೆ ಅದೊಂದು ಅಮಾನವೀಯ ಅಲ್ಲವೇ.. ಎನ್ನುವ ಸಧ್ಯದ ಅವಲೋಕನ ನಿಮ್ಮದಾದರೆ ಇಲ್ಲಿ ನಾ ಬರೆದು ಲಗತ್ತಿಸಿದ್ದಕ್ಕೂ ಸಾರ್ಥಕವಾಗುತ್ತದೆ,

ಇಂತಿವ ಟಿಪ್ಪಣಿಯ ವಿಸ್ತೃತಕ್ಕೆ ಕಾರಣವಿದೆ, ಇತ್ತೀಚಿನ ಒಂದಷ್ಟು ತಿಂಗಳ ಹಿಂದೆ, ಹಾವು ಹಿಡಿಯಲು ದೌಡಾಯಿಸಿ ಹೋಗಿದ್ದ ಸ್ನೇಕ್ ಕ್ಯಾಚರ್ ಕಿರಣ್ಗೆ “ಕೊಳಕಮಂಡಲ ಹಾವು ಕಡಿದಿದೆ” ಈ ಕಡಿತದಿಂದ ಕಾಲಿನ ಮಾಂಸಗಳು ತೆಗೆದಿದ್ದು ಮೂಳೆಗಂಟಿಕೊಂಡ ಮಾಂಸ ಕೊಳೆವ ಹೆಜ್ಜೆಗಳಾಗಿದೆ, ದಿನದಿಂದ ದಿನಕ್ಕೆ ದೇಹದ ತೂಕ ಕಳೆದುಕೊಂಡು ಮನೆಯಲ್ಲಿ ಅನಾಯಾಸವಾಗಿ ಹಾಸಿಗೆ ಹಿಡಿದಿದ್ದರು, ಈ ಸಂಗತಿ ತಿಳಿದ ಕೆಲ ಸ್ನೇಹಿತರು ಕಿರಣ್ ರವರ ಎದೆ ಚರಿಗೆಗೆ ಬರಪೂರವಾಗಿ ಆತ್ಮಬಲ ತುಂಬುವ ಕೆಲಸ ಮಾಡಿದ್ದಾರೆ.

ಹಾವು ಕಡಿತಕ್ಕೆ ನಾವೆಲ್ಲಿ ತಮ್ಮ ಕುಟುಂಬವೆಲ್ಲಿ ಒಳಗಾಗಿ ಬಿಡುತ್ತದೋ ಎನ್ನುವ ಆತಂಕದಿ  “ಸ್ನೇಕ್ ಕ್ಯಾಚರ್ ಕಿರಣ್” ರವರನ್ನು ಅವಲಂಬಿತವಾಗಿದ್ದ ನಾಗರೀಕ ಮನಸುಗಳು ಒಂದೊಮ್ಮೆ ತಮ್ಮೊಳಗೆ ತಾವಿಳಿದು ಅವಲೋಕಿಸಿ ಸಹಾಯದ ಬರಪೂರತೆಗೆ ಮುಂದಾಗುವ ಅಗತ್ಯತೆ ಇದೆ, ಬದುಕು ಪೂರ್ಣವಾಗಿ ಬಿಗಡಾಯಿಸಿದ ಮ್ಯಾಲೆ ನೀವು ಅನುಕಂಪಿಸಿದರು ಯಾವುದೇ ಪ್ರಯೋಜನವಿಲ್ಲದಂತಾಗುತ್ತದೆ. ಇದು ನಿಮ್ಮನ್ನು ಒತ್ತಾಯಿಸುವ ಬರಹವೂ ಇದಲ್ಲ, ಕೇವಲ ಮನುಷ್ಯನೆನಿಸಿ ಕೊಳ್ಳುವ ಮಾನವೀಯತೆಗಳನ್ನು ಹುಡುಕುವ ಯತ್ನವಷ್ಟೆ ಇದಾಗಿದೆ.

ಒಂದಂಶದ ಅಚ್ಚರಿ ಎಂದರೆ ಯಾವುದೇ ಪಗಾರಿಲ್ಲದೆ ಯುವಕನೋರ್ವ ಮೂರು ದಶಕಗಳಿಂದ ನಾಗರೀಕ ರಕ್ಷಣೆಗೆ, ನೆಮ್ಮದಿಗಾಗಿ, ಸಾವಿರಾರು ಹಾವುಗಳನ್ನು ಹಿಡಿದು ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಈ ಕೈಂಕರ್ಯಗಳು ಕಾಣದೇ ರಾಜಕೀಯ ಆಡಳಿತಷಾಹಿಗಳ, ರಾಜ್ಯ ಸರ್ಕಾರದ, ಜಿಲ್ಲಾಡಳಿತದ ಸಂಘಟನೆಗಳ ಕಣ್ಣಿಗೆ ಕಪ್ಪು ಪಟ್ಟಿ ಬಿಗಿದಿರುವುದು ದುರಂತವಲ್ಲದೇ ಮತ್ತೇನು..?

ರಾಜ್ಯೋತ್ಸವ ಪ್ರಶಸ್ತಿಗಳು, ಗೌರವಗಳು, ಸಹಾಯ ಧನಗಳ ಯೋಜನೆಗಳಿಗೆ ಈ  “ಸ್ನೇಕ್ ಕ್ಯಾಚರ್ ” ಅನರ್ಹತೆ ಹೊಂದಿರುವುದು ಈ ಮೇಲಿನ ಹಸಿ ಬೆಳವಣಿಗೆಗಳಿಂದಲೇ ಸಾಬೀತಾಗುತ್ತದೆ, ಇದನ್ನು ದಿಟ್ಟಿಸಿದಾಗ ಯಾರಿಗಾದರು ಸೋಷಿಯಲ್ ಜಸ್ಟೀಸ್ ಎಲ್ಲಿದೆ..? ಎನ್ನುವ ಸುಳಿವಿದ್ದರೆ ಮತ್ತೊಮ್ಮೆ ಮಗದೊಮ್ಮೆ ಅವಲೋಕಿಸಿಕೊಳ್ಳಬೇಕಾದ ಜರೂರತ್ತಿದೆ,

ಯಾರಾದ್ರೂ ಶಿವಮೊಗ್ಗಕ್ಕೆ ಮಿನಿಸ್ಟರ್ ಊರಿಗೆ ಬರುತ್ತಾರೆ, ಕಾರ್ಯಕ್ರಮಗಳು, ಹುಟ್ಟುಹಬ್ಬಗಳು ಇದೆ ಎಂದ್ರೆ ಸಾಕು ಶುಭಾಶಯ, ಅಭಿನಂದನೆ, ಸ್ವಾಗತ, ಎನ್ನುವ ಹತ್ತಾರು ಪ್ಲೆಕ್ಸಿಗಳನ್ನು ಬೀದಿ, ಬೀದಿಯಲ್ಲಿ ಹಾಕಿಕೊಂಡು

ತಾವು ಜನಪ್ರತಿನಿಧಿಗಳೆಂದು ಮೀಸೆ ತಿರುವಿಕೊಳ್ಳುವ ಪ್ಲೆಕ್ಸಿ ನಾಯಕರು ಇತ್ತಕಡೆ ಒಮ್ಮೆ ಕಣ್ಣಾಯಿಸಬೇಕಿತ್ತು, ಆದರೆ ಇದಾಗದೇ ಭರ್ಜರಿ ಪ್ರಚಾರಗಳ ಪ್ರವಾಹದಲ್ಲಿ ಕೊಚ್ಚಿ ಹೋಗುವ ಮುನ್ನದಿ, ಸ್ನೇಕ್ ಕ್ಯಾಚರ್ ಕಿರಣ್ ಮನೆಗೊಮ್ಮೆ ತೆರಳಿ ನಾವಿದ್ದೇವೆ ನಿಮ್ಮೊಂದಿಗೆ ಎನ್ನುವ ತುಸು ಚಿಂತನೆಯ ಜನಪ್ರತಿನಿಧಿಗಳು ಈ ಬರಹವೊಮ್ಮೆ ಮನನ ಮಾಡಿಕೊಳ್ಳಬೇಕಾಗಿರುವ ಜರೂರತ್ತಿದೆ ಎನ್ನುವುದು ಈ ಹೊತ್ತಿನ ಅಂಬೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I