Sunday, August 2, 2026
Homeಸೂರ್ಯಗಗನ I ಕರ್ತವ್ಯನಿರತ ಪೊಲೀಸ್ ಕುಟುಂಬಕ್ಕೆ ಎಲ್ಲಿದೆ ರಕ್ಷಣೆ..?! I ಹಲ್ಲೆ, ಎಪ್.ಐ.ಆರ್ ದಾಖಲು I ಇದು...

 I ಕರ್ತವ್ಯನಿರತ ಪೊಲೀಸ್ ಕುಟುಂಬಕ್ಕೆ ಎಲ್ಲಿದೆ ರಕ್ಷಣೆ..?! I ಹಲ್ಲೆ, ಎಪ್.ಐ.ಆರ್ ದಾಖಲು I ಇದು ಗಿರಣಿ ಸದ್ದಿನ ಪ್ರಕರಣ I

 I ಕರ್ತವ್ಯನಿರತ ಪೊಲೀಸ್ ಕುಟುಂಬಕ್ಕೆ ಎಲ್ಲಿದೆ ರಕ್ಷಣೆ..?! I ಹಲ್ಲೆ, ಎಪ್.ಐ.ಆರ್ ದಾಖಲು I ಇದು ಗಿರಣಿ ಸದ್ದಿನ ಪ್ರಕರಣ I

ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಹಿಟ್ಟಿನ ಗಿರಣಿಯನ್ನ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಕಾರಣ ದೂರು ನೀಡಿದ್ದಕ್ಕೆ ಪೊಲೀಸ್ ಮತ್ತು ಅವರ ತಂದೆ 78 ವರ್ಷದ ತಂದೆಯವರನ್ನ ಗಿರಣಿಯ ಮಾಲೀಕನೇ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಅಸಲಿಗೆ ಹಲ್ಲೆಗೊಳಗಾದ ಘಟನೆ, ಹಾಗೂ ಬೆದರಿಕೆಯೊಳಗಾಗಿದ್ದು ಓರ್ವ ಕರ್ತವ್ಯನಿರತ ಪೊಲೀಸ್ ಕುಟುಂಬದ ಮೇಲೆ ಎನ್ನುವುದು ಅಚ್ಚರಿ ತರಿಸಿದೆ,

 

ಎಲ್ಲಿದೆ ಜನರಕ್ಷಣೆ ಮಾಡುವ ಪೊಲೀಸರ ಕುಟುಂಬಕ್ಕೆ ಭದ್ರತೆ ಎನ್ನುವಂತಹ ಪರಿಸ್ಥಿತಿ ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ, ಇದೀಗಷ್ಟೆ ನೂತನ ಎಸ್ಪಿ ಬಿ.ನಿಖಿಲ್ ರವರು ವರ್ಗಾವಣೆಯಾಗಿ ಬಂದಿರುವ ನಿಮಗೆ ನಗರದ ಕ್ರೈಂ ಲೋಕ ಅದೆಷ್ಟರ ಮಟ್ಟಿಗೆ ಯಾರಿಗೂ ಬೆದರದೆ ಅಮರಿಕೊಂಡಿದೆ ಎನ್ನುವುದು ಗೊತ್ತು ಮಾಡಿಕೊಳ್ಳಬೇಕಾಗಿರುವ ಅತೀ ಸೂಕ್ಷ್ಮಾತಿ ಸೂಕ್ಷ್ಮ ಜರೂರತ್ತಿದೆ,

 

ಈ ಪ್ರಕರಣವೂ ಇಂತಿದೆ : ಗಾಡಿಕೊಪ್ಪದಲ್ಲಿ ರಂಗೇಗೌಡ ಎಂಬಾತ ಲಕ್ಷ್ಮೀ ನಾರಾಯಣ ಎಂಬ ಹೆಸರಿನಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದು ಹಿಟ್ಟಿನ ಗಿರಣಿಯನ್ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾಪತ್ರ ಪಡೆಯದೆ ನಡೆಸಲಾಗುತ್ತಿದೆ. ಈ ಹಿಟ್ಟಿನ‌ಗಿರಣಿ ಹೆಚ್ಚಿನ ಡೆಸಿಬಲ್ ಶಬ್ದವನ್ನ ಹೊರಹಾಕುತ್ತಿದೆ ಎಂದು ಶೇಖರಪ್ಪ ಮತ್ತು ಅವರ ಪುತ್ರ ಪೊಲೀಸ್ ಆದ ರಮೇಶ್ ಸಹ ದೂರು ನೀಡಿದ್ದರು.

ಶೇಖರಪ್ಪನವರಿಗೆ ವಯೋ ಸಹಜ ಖಾಯಿಲೆಯಿದ್ದು ಈ ಗಿರಣಿಯ ಶಬ್ದದಿಂದ ಅವರ ಆರೋಗ್ಯವೂ ಏರುಪೇರು ಕಾಣಿಸಿತ್ತು. ಈ ಪ್ರಕರಣವನ್ನ‌ ಶಾಸಕರ ಬಳಿ ಡಿ.30 ರಂದು ರಮೇಶ್ ಶೇಖರಪ್ಪ ವಿವರಣೆ ನೀಡುತ್ತಿರುವ ವೇಳೆ ಅಲ್ಲಿಗೆ ಬಂದ ಗಿರಣಿಯ ಮಾಲೀಕ ರಂಗೇಗೌಡ ಮತ್ತು ಸಹೋದರ ಕಿರಣ್,  ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಲಾಗಿದೆ.

ಪರಿಸರ ಇಲಾಖೆ, ಮೆಸ್ಕಾಂ, ಇಲಾಖೆಗೆ ದೂರು ನೀಡ್ತೀರ ನೀಡಿ, ನಾವು ಗಿರಣಿಯನ್ನ ಹೇಗೆ ನಡೆಸಬೇಕು ಗೊತ್ತಿದೆ ಎಂದು ಜೀವಬೆದರಿಕೆ ಹಾಕಲಾಗಿದೆ ಎಂದು ತಂದೆ ಮಗ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಾಗಿದೆ, ಇನ್ನೂ ಶಿವಮೊಗ್ಗದಲ್ಲಿ ದುಂಡಾವರ್ತನೆಗಳಿಗೆ ಎಡೆಮುರಿ ಕಟ್ಟದಿದ್ದೊಡೆ, ಕ್ರೈಂ ಇಸ್ಟರಿ ಇನ್ನಷ್ಟು ದುಪ್ಪಟ್ಟು ದುಬಾರಿಯಾಗಿ ನಾಗರೀಕ ಸಮಾಜವನ್ನು ಅಣಕಿಸದೇ ಇರಲಾರದು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I