ಹರೆಯದ ಒಲವು
ಸುಕ್ಕುಗಟ್ಟಿದ ಹೃದಯಕೆ
ಹರೆಯದ ಹಿತ ತಂದಿರುವೆ,
ಸುಂದರಾಂಗನೆ ನಲ್ಲ, ಚಂದಿರನ ರಂಗಿಲ್ಲ,
ಸಪ್ತ ಸಾಗರಾಚಿನ ನಂಟಿದೆ,
ನನಗೂ ನಿನಗೂ ಹೇ ನಲ್ಲ,
ಹೆಪ್ಪುಗಟ್ಟಿದ ಭಾವನೆಗಳಿಗೆ
ಪ್ರೇಮದ ಬಿಸಿ ತಾಕಿಸಿರುವೆ,
ಚಿಮ್ಮಿದ ಒಲವಿಗೆ ಕೈ ಹಿಡಿದು
ನಡೆಸು ಪ್ರೀತಿಯ ಮಹಲಿಗೆ..!
ಖಾಲಿಯಾದ ಹೃದಯಕೆ
ಖಾಯಂ ವಿಳಾಸ ನೀನಾಗಬೇಕಿದೆ,
ಇದ್ದುಬಿಡು ರಾಜಕುಮಾರನಂತೆ,
ಪ್ರೀತಿಯ ತಿರುಬೋಕಿ ನಾನಗದಂತೆ,
ನನ್ನ ತುಟಿಯ ತವಕದಲ್ಲಿ ಮಿಂದು
ಪದಗಳು ಲೇಖನಿಗಂಟಿವೆ,
ನಶೆಯೇರಿದ ನಿನ್ನ ನೆನಪುಗಳ ಬಿಡಿಸಲು,
ಆ ಕಿರುನಗೆ ಬೇಕೇನಿಸಿದೆ,
ನಿನ್ನ ಒಲವಿನ ಮೊಗ್ಗನ್ನು,
ನನ್ನದೆಗೆ ಪೋಣಿಸಿಬಿಡು..
ಚೆಂದದ ಹಾರವಾಗಿ
ಕೊರಳ ಸೇರಲಿ ಗೆಳೆಯ..
-ಶ್ವೇತಾ ತೀರ್ಥಹಳ್ಳಿ

