Saturday, August 1, 2026
Homeಸಂಪಾದಕೀಯಈ ಹೊತ್ತಿನ I ಮೊಟ್ಟೆ ಸತೀಶ್ I ಯಾನೇ I ಸತ್ಯನಾರಾಯಣ್ ರಾಜ್..!

ಈ ಹೊತ್ತಿನ I ಮೊಟ್ಟೆ ಸತೀಶ್ I ಯಾನೇ I ಸತ್ಯನಾರಾಯಣ್ ರಾಜ್..!

ಬರೆಯುತ್ತಾರೆ ಗಾರಾ.ಶ್ರೀನಿವಾಸ್

ಈ ಹೊತ್ತಿನ ಮೊಟ್ಟೆ ಸತೀಶ್ ಯಾನೇ ಸತ್ಯನಾರಾಯಣ್ ರಾಜ್..!

ಗತ ಬದುಕಿನ ಹಾದಿಯನ್ನು ಹತ ಮಾಡಿ ಸಮಾಜಮುಖಿಯಾಗಿ ಹದಗೊಂಡು ಪತ್ರಕರ್ತನಾದ,ಲೇಖಕನಾದ ಮೊಟ್ಟೆ ಸತೀಶ್ ಯಾನೇ ಸತ್ಯನಾರಾಯಣ್ ರಾಜ್..! :
ಶಿವಮೊಗ್ಗದಲ್ಲಿ ಒಮ್ಮೆಲೆ ಮಾತಾಡುವುದಕ್ಕೆ ಹೆದರಿ ಪೆಚ್ಚು ಬೀಳಿಸುವ ಮಟ್ಟಿಗಿನ ರೌಡಿಯಾಗಿ ಮೆರೆದಿದ್ದು ಮೊಟ್ಟೆ ಸತೀಶನಾಗಿದ್ದಾಗಲೇ..ಲಾಂಗ್ ಮಚ್ಚು ಜಳಪಿಸಿ ಹೆಣ ಉರುಳಿಸಿ ಜೈಲು ಪಾಲಾಗಿ, ನಂತರದ ದಿನಗಳಲ್ಲಿ ಸಮಕಾಲೀನ ರೌಡಿ ಪಟಾಲಂಗಳಿಗಿಂತಲೂ ಹೆಚ್ಚು ಹೆಸರು ಮಾಡಿದ್ದವರಿಗೆ ಬಿಡದೇ ಮುಗಿ ಬೀಳುತ್ತಿದ್ದ ಒಂದು ಕಾಲದ ಭೂಗತ ಲೋಕದ ಹುಡುಗನಿಗೆ ಅದ್ಯಾಕೋ ಆತ್ಮದ ಪ್ರಶ್ನೆಗಳು ಮರು ಪ್ರಶ್ನಿಸುವುದಕ್ಕೆ ಶುರುವಿಟ್ಟಿದೆ,

 

ಸಾಮಾಜಿಕ ಪ್ರಜ್ಞಾ ಹಸಿವಿನ ದಾಹ ನೆತ್ತಿಗೇರಿದ ಮೇಲೆ ಇನ್ನೂ ಹೊಡೆದಾಟ,ಜೈಲು,ಗಡಿಪಾರು,ಗುಂಡಾಪಟ್ಟಿ ಎಲ್ಲವೂ ಹುಸಿಯೆನಿಸಿದೆ, ನೈಜ ಬದುಕಿನತ್ತ ಧಾವಿಸಿ ಬಿಡಬೇಕು ಎಂದುಕೊಂಡಾಗಲೆಲ್ಲಾ ಅದೆಷ್ಠೋ ಅಡ್ಡಿ ಆತಂಕಗಳು ಎದುರಾಗಿದ್ದವು ಆದರೂ ಹತ್ತಾರು ವರುಷಗಳ ನಂತರದ ಬದುಕು ಸಾಮಾಜದ ಮುಖ್ಯವಾಹಿನಿಯತ್ತ ಮಗ್ಗಲು ಬದಲಿಸಿದೆ,ಅದಾಗಲೇ ಮೊಟ್ಟೆ ಸತೀಶನೆಂಬ ಪಧವೀದರ ವಿಧ್ಯಾರ್ಥಿ ಸತ್ಯನಾರಾಯಣ್ ರಾಜ್ ನಾಗಿ ಬದಲಾಗುತ್ತಾನೆ,

ತನಗೆ ಬಹಳವಾಗಿ ಸೆಳೆದ ಪತ್ರಿಕಾರಂಗಕ್ಕೆ ಪ್ರವೇಶ ಮಾಡಿ ಸುದ್ದಿ ಜಗತ್ತಿನಲ್ಲಿ ಸದ್ದು ಮಾಡುವಷ್ಠರ ಮಟ್ಟಿಗೆ ಗುರುತಿಸಿಕೊಂಡು ಮುನ್ನೆಡೆದಿರುವ ಸತ್ಯನಾರಾಯಣ್ ರಾಜ್ಗೇ.. ಹಾರೈಕೆಯಿರಲಿ ಪ್ರಬುದ್ದ ಸಮಾಜದ ಮುಖ್ಯವಾಹಿನಿಗೆ ಮರಳುವ ಇಂತಹ ಅನೇಕರಿಗೆ ಸ್ವಾಗತವೂ ಇರಲಿ, ಹೀಗೆ ಸತ್ಯನಾರಾಯಣ್ ರಾಜ್ ಪತ್ರಕರ್ತನಾಗಿ ಬದಲಾಗಿದ್ದು ಮಾತ್ರವಲ್ಲ ಸುಧೀರ್ಘವಾಗಿ ನಡೆದ ೬ ವರುಷಗಳ ಪತ್ರಿಕಾ ಹಾದಿ ..ಪುಸ್ತಕವನ್ನು ಬರೆದು ಬಿಡಬೇಕು ಎಂದು ಪ್ರೇರೆಪಿಸಿದೆ ಅನ್ನಿಸುತ್ತೇ..ಅದಾಗಲೇ ಅವರೇ ವಿರಚಿಸಿದ ಮುನ್ನೂರು ಪುಟಗಳ ಹೊತ್ತಿರುವ “ಸತ್ಯಾಂಕಣ” ೨೦೧೭ರಲ್ಲಿ ನಡೆದ ಸಂಸ್ಕೃತಿ ಹಬ್ಬ-೨೦೧೭ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿದೆ, ಜಿ.ಎಸ್ ಯುಧಿಷ್ಠರನ ಮುನ್ನುಡಿಯಲ್ಲಿ ಹರೀಶ್ ಬೆಂಗಳೂರು ಇವರ ವಿನ್ಯಾಸಗೊಳಿಸಿದ ಮುಖಪುಟದಲ್ಲಿರುವ ‘ಸತ್ಯಾಂಕಣ’ ಇದೀಗ ಮಾರುಕಟ್ಟೆಯಲ್ಲಿರುವ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ, ಕೊನೆಯದಾಗಿ ಸಾಮಾಜಿಕ ಪ್ರಜ್ಞಾಹೀನನಾಗಿ..ನಡೆದ ಪಧವೀದರ ಹುಡುಗನೋರ್ವ ಮರು ಸಾಮಾಜಿಕ ಪ್ರಜ್ಞೆಯೊಂದಿಗೆ ಪರಿವರ್ತಿತನಾಗಿ ..ಪತ್ರಕರ್ತನಾಗುತ್ತಾನೆ ಅಲ್ಲದೇ ಲೇಖಕನಾಗಿ ಪುಸ್ತಕವನ್ನು ಬರೆಯುತ್ತಾನೆ ಅಂದರೆ ಇದೇ ಅಲ್ಲವೇ ಬದಲಾವಣೆ..

ಹೌದು ಬದಲಾವಣೆ ಎನ್ನುವುದು ಜಗದ ನಿಯಮ, ಬದಲಾಗದಿದ್ದರೆ ಅದು ಬದುಕಲ್ಲ..ಎನ್ನುವುದನ್ನು ಸತ್ಯನಾರಯಣ್ ರಾಜ್ ತಮ್ಮದೇ ಅಭಿವ್ಯಕ್ತದಲ್ಲಿ ತಿಳಿಸಿದ್ದಾರೆ ಓದುಗರಿಗೆ ಒಂದು ರೀತಿಯ ವಾಸ್ತವ ಘಟನೆಗಳನ್ನು ತೆರೆದಿಡುತ್ತಲೇ ಸಾಗಿಸುವ ಪುಟಗಳ ಅಕ್ಷರಗಳ ಸಾಲುಗಳು ಅಂತಹದ್ದೊಂದು ನೈಜ ಅನಾಹುತಗಳನ್ನು…ಮತ್ತು ಅದರ ಪಶ್ವಾತಪಗಳು ಹೊಂದಿಕೊಂಡಂತೆ ಅರಿವೆಗಳನ್ನು ಜಾಗೃತಿಯ ದಿಸೆ “ಸತ್ಯಾಂಕಣ”ದಲ್ಲಿದೆ, ನೀವು ಸಾಧ್ಯವಾದರೇ ಓದಿ ಸಮಾಜದ ಮುಖ್ಯವಾಹಿನಿಗೆ ಮರಳಿ ಜರ್ನಲಿಸ್ಟ್ ಅಂಡ್ ಲೇಖಕನಾಗಿ ನಿಂದ ಸತ್ಯನಾರಾಯಣ್ ರಾಜ್ ರವರು ಇದೀಗ ಮತ್ತೊಂದು ಹೆಜ್ಜೆಯನ್ನು ಸಮಾಜದ ಮುಂದಡಿ ಇಟ್ಟಿದ್ದಾರೆ,

ಮಲ್ನಾಡ್ ಸುದ್ದಿ ಎನ್ನುವ ದಿನಪತ್ರಿಕೆಯ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿರುವ ಸಮಾಜಮುಖಿಯಾಗಿ ಬದಲುಗೊಂಡು ಜಮಾನವೇ ಕಳೆದು ಹೋಗಿದೆ. ಮಾದರಿ ನಗರಿಯ ಅಭಿವೃದ್ದಿಗೆ ಶ್ರಮಿಸುವ ಸೋಗಿನಲ್ಲಿ ಕೋಮು ದ್ವೇಷ, ಜಾತಿ ಪ್ರೇಮ, ಸ್ವಜನತೆ ಪಕ್ಷಪಾತವನ್ನು ಸಾರುವ ಆತಂಕಕಾರಿ ಜನಪ್ರತಿನಿಧಿಗಳಂತಹ ಅನಾಹುತಕಾರಿಗಳನ್ನು ನೋಡಿದಾಗ ಸತ್ಯನಾರಾಯಣ್ ರಾಜ್ ಮನುಕುಲದ ಮಾನವೀಯತೆಯ ಮೌಲ್ಯಗಳ ಪ್ರತಿಪಾದಕರೆನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ,

ರಾಜಕೀಯ ಎನ್ನುವುದು ಎರಡು ಮೀಟರ್ ಖಾದಿ ಅಂಗಿ ತೊಟ್ಟು ಪಾಲಿಕೆಯ ಕಾಮಗಾರಿಗಳಲ್ಲಿ ಪರ್ಸೇಂಟೇಜ್ ವಸೂಲಿಗೈವ ಸಮಾಜದ ವಿಕೃತಿಗಳನ್ನು ಪಾಲಿಕೆಯಲ್ಲಿ ಆಯ್ಕೆಯಾಗಬಾರದೆನ್ನುವ ಇರಾದೆಯಲ್ಲಿ ಬದಲಾದ ಬದುಕಿನಲ್ಲಿ ಸಮಾಜದ ಹಿತ ಸಾರುವ ಪತ್ರಕರ್ತ, ಲೇಖಕ, ಪಧವೀದರ ಈ ಭಾರಿ ೨೦೧೮ರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹರಿಗೆ ಸರಹದ್ದಿನಲ್ಲಿ ಮತದಾರರ ವಿಶ್ವಾಸಮತಗಳಿಸಿಯೇ ಶ್ರೀ ಸಾಮಾನ್ಯನ ಅಭಿವೃದ್ದಿಗೆ ಮುಂದಾಗುತ್ತೇನೆ ಎನ್ನುವ ಸತ್ಯನಾರಾಯಣ್ ರಾಜ್‌ರವರು ಸಮಾಜಕ್ಕೆ ಕೊಡುಗೆಯಾಗಿ ನಿಲ್ಲಬೇಕು ಎನ್ನುವ ಅವಸರದೊಳು ಕಾರ್ಪೋರೇಟರ್ ಆಗಿ ಆಯ್ಕೆ ಆಗಿದ್ದು, ಜನ ಸಮೂಹ ಸಮಾಜಮುಖಿಯಾಗಿ ಬದಲುಗೊಳ್ಳುವಿಕೆಯನ್ನು ಸ್ವೀಕರಿಸಿದ್ದೇ ಕಾರಣ ಎನ್ನಬಹುದು,

ಇಂತಿವ ಬಹುತೇಕತೆಗಳಿಂದ ಮತ್ತೊಂದು ಪಾಲಿಕೆ ಚುನಾವಣೆ ಎದುರಾಗಿದ್ದು, ಅದು ಡಿ-ಲಿಮಿಟ್ಸ್ ಯೋಜನೆ ಹಾಗೂ ವಾರ್ಡ್ ವಿಂಗಡಣೆಗಳ ನಂತರ ಪಾಲಿಕೆ ಚುನಾವಣೆ ನಡೆಯುತ್ತದೆ ಎನ್ನವು ಇರಾದೆಗಳ ನಡುವೆ ಇದೇ ಮೊಟ್ಟೆ ಸತೀಶ್ ಯಾನೆ ಸತ್ಯನಾರಾಯಣ್ ರಾಜು ರಾಜಕೀಯ ಬೇಡವೇ ಬೇಡ ಎನ್ನುತ್ತಿದ್ದಾರೆ, ಗೋ-ಶಾಲೆ, ಜನಸೇವೆಗೆ, ತಮ್ಮದೊಂದು ಟ್ರಸ್ಟ್ ರಚಿಸಿಕೊಂಡು ಈ ಬ್ಯಾನರ್ ಅಡಿಯಲ್ಲಿ ಮುಂದಾಗುತ್ತೇನೆ ಎಂದು ಶಿವಮೊಗ್ಗದ ಹೊರಹೊಲಯದಲ್ಲಿ ಗೋಶಾಲೆಗೆ ಚಾಲನೆ ನೀಡಿದ್ದಾರೆ. ಇನ್ನು ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ಮಾಡುವುದಾಗಿ ಸೂರ್ಯಗಗನದೊಂದಿಗೆ ಹೇಳಿಕೊಂಡಿರುವ ಅವರ ಹೆಜ್ಜೆಗಳಿಗೆ ಇನ್ನಷ್ಟು ಪೂರಕ ವಾತಾವರಣಗಳು ಸಿಗಲಿ ಎಂದು ಈ ವರದಿ ಹಾರೈಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I