I ಸೊರಗುತ್ತಿದೆ ಈ ಹೊತ್ತಿನ I ಸ್ಯಾಂಡಲ್ ವುಡ್..! I
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸೊರಗುತ್ತಿದೆ ಈ ಹೊತ್ತಿನ I ಸ್ಯಾಂಡಲ್ ವುಡ್..! I
ಚೆಂದನವನ, ಸ್ಯಾಂಡಲ್‌ವುಡ್ ಇದೀಗ ಏನಾಗಿದೆ..? ಪ್ರಾದೇಶಿಕತೆ ಹಾಗೂ ಫ್ಯಾನ್ ಇಂಡಿಯಾ ಬೇಸ್‌ನಲ್ಲಿ ಬಡಿದಾಡಿಕೊಳ್ಳುತ್ತಿದಿಯಾ..? ಇಂತಿವರನ್ನು ಸ್ಟಾರ್‌ನಟರು ಎಂದು ಪೋಷಿಸಿದವರಾರು..? ಅವರು ಕನ್ನಡಿಗರಲ್ಲವೇ..?! ಇಂತಹ ಸ್ಟಾರ್ ನಟರುಗಳ ಒಂದು ಸಿನಿಮಾ ಬ್ಲಾಕ್‌ಬಸ್ಟರ್ ಆಯ್ತು, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ ಎಂದಾದರೆ ಅಲ್ಲಿಂದ ಅದೇ ಮುಂದಿನ ಆರು ವರ್ಷಗಳಾದರು ಮತ್ತೊಂದು ಸಿನಿಮಾಕ್ಕೆ ಕಾಲ್‌ಶೀಟ್ ನೀಡದೆ ಅದೇ ಮಂಪರಿನಲ್ಲಿ ಸೆಲಿಬ್ರಿಟಿಯಾಗಿಯೇ ಶೋ ಕೊಡುತ್ತಲೇ ತನ್ನ ಇಮೇಜ್ ಹೆಚ್ಚಿಸಿಕೊಳ್ಳುವ ಅಥವಾ ಉಳಿಸಿಕೊಳ್ಳುವ ಹಪಾಹಪಿನಲ್ಲಿ ಇಂದು ಸ್ಯಾಂಡಲ್‌ವುಡ್ ಸೊರಗುತ್ತಿದೆ, ಇನ್ನೂ ಒಳ ವೈಷಮ್ಯಗಳ ವಿಪರೀತ ಕಾರಣದಿಂದಾಗಿಯೇ ಸ್ಟಾರ್‌ವಾರ್‌ಗಳು ಅಸಮಾಧಾನಕ್ಕೆ ಕಾರಣವಾಗಿದೆ, ಇದನ್ನೇ ಕ್ಯಾಪಿಟಲ್ ಮಾಡಿಕೊಂಡ ದೃಶ್ಯ ಮಾದ್ಯಮ ಸೇರಿದಂತೆ ಅನ್ಯ ರಂಗಗಳು ಕನ್ನಡ ಚಿತ್ರೋದ್ಯಮದ ಮೇಲೆ ದಾಳಿಯಿಟ್ಟಿದೆ, ಪ್ರಸ್ತುತ ರಾಜ್ಯ ಸರಕಾರವು ಕೂಡ ತಮ್ಮ ಪ್ರಣಾಳಿಕೆ ಹಾಗೂ ಪಕ್ಷ ಸಿದ್ದಾಂತಗಳಿಗೆ ಅನುಗುಣವಾಗಿ ಸೇರ್ಪಡೆಯಾಗಿರೆಂದು ಇದೇ ಸ್ಟಾರ್ ನಟರುಗಳ ಮೇಲೆ ಒತ್ತಡ ಹೇರುತ್ತಿದ್ದಾರೆ,
ಒಂದು ವೇಳೆ ಪೊಲೀಟಿಕಲ್ ಬೇಡಿಕೆ ಈಡೇರದಿದ್ದೊಡೆ ಅದೇ ಸ್ಟಾರ್‌ನಟರುಗಳ ವಿರುದ್ದ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ, ಸ್ಟೇಟ್ಮೆಂಟ್‌ಗಳನ್ನು ಬಹಿರಂಗವಾಗಿಯೇ ನೀಡುತ್ತಿದ್ದಾರೆ, ಇದು ವಾಸ್ತವದ ಸ್ಥಿತಿಯಾಗಿದ್ದರು ಈ ಕುರಿತಂತೆ ಯಾವುದೇ ಸ್ಟಾರ್ ನಟರುಗಳೇ ಆಗಲಿ, ಕಲಾವಿದರ ಸಂಘಟನೆಯಾಗಲಿ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯಾಗಲಿ, ಕನ್ನಡ ಪರ ಸಂಘಟನೆಗಳಾಗಲಿ ಇದಕ್ಕೆ ಪೂರಕವಾದ ದನಿ ಎತ್ತದೆ ಇರುವುದು ಬಲು ದುರಂತದ ಸಂಗತಿಯಾಗಿದೆ, ಇನ್ನೂ ಆ ಕಾಲಘಟ್ಟದಲ್ಲಿದ್ದ ರಾಜ್ಯದ ೨೧ ನಾಟಕ ಮಂಡಳಿಗಳು ಇಂದಿಗೆ ಪೂರಾ ನಶಿಸಿ ಲೆಕ್ಕಕ್ಕೆ ಒಂದೇ ಕಂಪನಿ ಉಳಿದುಕೊಂಡಿದೆ, ಇದಾದ ತರುವಾಯ ನಶಿಸಿ ಹೋಗುತ್ತಿರುವ ಥಿಯೇಟರ್ ಸಂಪ್ರದಾಯಗಳು ಕೂಡ ನಾಟಕ ಮಂಡಳಿಗಳ ಅವನತಿ ಹಾದಿ ಹಿಡಿದಿದೆ, ಇದಕ್ಕೆ ಮುಖ್ಯ ಕಾರಣ ಕನ್ನಡಗರು ಕಟ್ಟಿಕೊಟ್ಟಿರುವ ಸ್ಟಾರ್ ನಟನ ಪಟ್ಟಗಳು ಇಂದು ಸಂಪೂರ್ಣವಾಗಿ ದುರುಪಯೋಗವಾಗುತ್ತಿದೆ,
ಫ್ಯಾನ್ ಇಂಡಿಯಾ ಎನ್ನುವ ಗೀಳಿಗೆ ಬಿದ್ದು ಒಂದು ಹಿಟ್ ಸಿನಿಮಾದ ಮಂಪರುಗಳಲ್ಲಿಯೇ ಆರು ವರ್ಷಗಳು ಕಾಲ ದೂಡುವ ಇಂತಹ ಸ್ಟಾರ್ ಮಾನಸೀಕತೆಗಳಿಂದ ವರ್ಷದಲ್ಲಿ ಸಿನಿಮಾಗಳು ನಿರ್ಮಾಣವಾಗದೆ ಹೊಸಬರ ಸಿನಿಮಾಗಳಿಗೆ ಥಿಯೇಟರ್‌ಗಳು ಹಿಡಿತ ಸಾಧಿಸಿದೆ ತನ್ನ ಮೂಲ ವೈಭವೀಕರಣವನ್ನು ಹಾಳು ಮಾಡಿಕೊಳ್ಳುತ್ತಿದೆ, ಇದು ಪುನರ್‌ಜೀವಿತಗೊಳ್ಳಬೇಕೆಂದರೆ ಸ್ಟಾರ್ ನಟರುಗಳು ಒಂದು ವರ್ಷಕ್ಕೆ ಕನಿಷ್ಠ ಮೂರು ಸಿನಿಮಾಗಳನ್ನು ಒಪ್ಪಿಕೊಳ್ಳಬೇಕು, ಅದು ಬಿಡುಗಡೆಯು ಆಗಬೇಕು ಹೀಗಾದೊಡೆ ಅಳಿದು ಹೋಗುತ್ತಿರುವ ಟಾಕೀಸ್ ಸಂಪ್ರದಾಯಗಳು ಉಳಿಯಲು ಸಾಧ್ಯವಾಗುತ್ತದೆ, ಇಲ್ಲದಿದ್ದೊಡೆ ಕನ್ನಡದ ಚಿತ್ರೋದ್ಯಮ ಬರಬರುತ್ತಾ ಸೊರಗಿ ಬಸವಳಿಯುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ, ಈ ಅಸಲಿ ಕಾರಣಗಳನ್ನು ಅರಿತುಕೊಂಡಿಯೇ ಡಾ.ರಾಜಕುಮಾರ್, ಅಂಬರೀಷ್, ಶಂಕರ್‌ನಾಗ್, ರವಿಚಂದ್ರನ್, ಇನ್ನೀತರ ಸ್ಟಾರ್‌ನಟರುಗಳು ವರ್ಷಕ್ಕೆ ಮೂರು ಸಿನಿಮಾಗಳನ್ನು ಮಾಡಲು ಒಪ್ಪಿಕೊಳ್ಳುತ್ತಿದ್ದರು ಇದರಿಂದ ಪೋಷಕ ನಟರು, ಸಹನಟರು, ಕಲಾ ತಂತ್ರಜ್ಞಾನ, ಇನ್ನೀತರ ನೂರಾರು ಬದುಕುಗಳಿಗೆ ಕೆಲಸ ನೀಡಿದಂತಾಗುತಿತ್ತು,
ಇದನ್ನು ಈ ಕಾಲಘಟ್ಟದ ಸ್ಟಾರ್ ನಟರುಗಳು ಯಾಕೆ ಚಿಂತನೆಗಳು ಮಾಡುತ್ತಿಲ್ಲ, ಬದಲಿಗೆ ಇಂತಿವರಿಗೆ ಸ್ಯಾಂಡಲ್‌ವುಡ್‌ನ ಸ್ಥಿತಿಗತಿಗಳ ಕುರಿತಾಗಿ ತುಸು ಬಲಗೊಳಿಸಬೇಕಾದ ಜವಾಬ್ದಾರಿಗಳೇ ಇಲ್ಲದಾಗಿತೇ, ಈ ಸತ್ಯಗಳ ಅನುಸಾರ ಸ್ಯಾಂಡಲ್‌ವುಡ್ ನಟ ದರ್ಶನ್ ತುಗೂದೀಪರವರು ವರ್ಷಕ್ಕೆ ಮೂರು ಸಿನಿಮಾ ಮಾಡುತ್ತೇನೆ, ಇನ್ನೂ ಫ್ಯಾನ್ ಇಂಡಿಯಾ ಎನ್ನುವ ಗೀಳಿಗೆ ಸಿಲುಕುವುದಿಲ್ಲ ನನ್ನ ನಟನೆ ಕನ್ನಡಕ್ಕೆ ಸೀಮಿತವಾಗಿರುತ್ತದೆ, ಕನ್ನಡದ ಸಿನಿಮಾಗಳಿಗೆ ನಿರ್ಮಾಣಗಳಿಗೆ ಉತ್ತೇಜಿಸುವುದೇ ನನ್ನ ಆಧ್ಯ ಕರ್ತವ್ಯ ಎಂದಿರುವುದು ಸ್ವಲ್ಪ ಸಾವಧಾನಕರ ಸಂಗತಿಯಾಗಿದೆ, ಇನ್ನೂ ದರ್ಶನ್ ಮೇಲಿನ ದಾಳಿಗಳು ಕೂಡ ಸಹಿಸಿಕೊಂಡು ಹೀಗೊಂದು ಕನ್ನಡದ ಸಿನಿಮಾ ನಿರ್ಮಾಣದ ಉಳಿವಿಗೆ, ಥಿಯೇಟರ್ ಸಂಪ್ರದಾಯದ ಉಳಿವಿಗೆ ದನಿಯಾಗಿರುವುದು ನಿಜದ ಕಾಳಜಿ ಎನ್ನಬಹುದು,
ಇಂತಹ ಅನೇಕತೆಗಳಲ್ಲಿ ಪೊಲೀಟಿಕಲ್ ವಾಗ್ದಾಳಿಗಳು ನಿಲ್ಲಬೇಕಿದೆ, ಕನ್ನಡದ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ದಾಳಿ ಮಾಡುವುದು ತರವಲ್ಲವಾಗಿದೆ ಈ ರೀತಿ ಮುಂದುವರೆದರೆ ಅದೊಂದು ಕಲಾ ಅರಾಜಕತೆಯನ್ನು ಬಿಂಬಿಸುತ್ತಾಗುತ್ತದೆ, ಹೀಗೆ ನಿರ್ಮಾಣದ ಮೇಲಿನ ಹೆಚ್ಚುವರಿ ತೆರಿಗೆಗಳು, ಕೇಂದ್ರ ಹಾಗೂ ರಾಜ್ಯದ ನೀತಿಗಳು, ಸಾಮ್ಯತೆಗಳು, ನಿರ್ಮಾಪಕರುಗಳ ಮಾನಸೀಕತೆಗಳು, ಸ್ಟಾರ್‌ವಾರ್‌ಗಳು, ಬದಲಾಗದಿದ್ದರೆ ಸೊರಗುತ್ತಿರುವ ಸ್ಯಾಂಡಲ್‌ವುಡ್‌ನ್ನು ಮತ್ತೆ ಹಿಡಿತ ಸಾಧಿಸುವಲ್ಲಿ, ವೈಭವೀಕರಿಸುವಲ್ಲಿ, ಸಾಂಸ್ಕೃತಿಕ ಮೌಲ್ಯಗಳು ಉಳಿಯುವಲ್ಲಿ ವಿಫಲಗೊಳ್ಳುವ ಎಲ್ಲಾ ಸಾಂದರ್ಭಿಕತೆಗಳು ಇಂದು ದರ್ಶಿಸಿಕೊಳ್ಳುತ್ತಿದೆ.
ಕನ್ನಡ ಚಿತ್ರರಂಗ ಇದೀಗ ಮತ್ತೊಮ್ಮೆ ತೆರಿಗೆಯ ಬರೆಗಳ ಹೊರೆ ಹೊತ್ತು ಸಾಗುತ್ತಿದೆ..! : ಈ ಕುರಿತಂತೆ ಚಿತ್ರ ನಿರ್ಮಾಪಕರಿಗೆ ಅಸಮಾಧಾನಗಳಿದ್ದರೂ ಒಕ್ಕರೊಲಿನಿಂದ ದನಿಗೂಡಿಸಬೇಕಾದ ಶಕ್ತಿ ಕುಂದು ಹೋಗಿದೆ ಹೀಗಾಗಿ ೨೦೧೭ರವರೆಗೆ ಇದ್ದಂತಹ ಮನರಂಜನೆಯ ತೆರಿಗೆ ದುಪ್ಪಟ್ಟು ಜೆಎಸ್‌ಟಿ ಹೆಸರಿನಲ್ಲಿ ಅಧಿಕಗೊಂಡಿದೆ, ಜಿಎಸ್‌ಟಿಯ ೨೮% ತೆರಿಗೆಯನ್ನು ಕಟ್ಟುವುದು ಬಲು ಕಷ್ಟಕರ ಇಂದಿಗೂ ಚಿತ್ರೋದ್ಯಮ ವ್ಯಾಪಕವಾಗಿ ಅಲ್ಲದಿದ್ದರೂ ಅಲ್ಲಲ್ಲಿ ಧ್ವನಿ ಎತ್ತಿದ್ದವೂ ಈ ತರುವಾಯವೇ ಜಿಎಸ್‌ಟಿ ಸಂಗತಿಯಲ್ಲಿ ಬದಲಾವಣೆಗೊಂಡು ಎರಡು ಭಾಗಗಳಾಗಿ ಪಾವತಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ತಿಳಿಸಿತು,
ಇದರಂತೆ ಆಯ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ೧೦೦ರೂಗಿಂತ ಕಡಿಮೆ ಇದ್ದರೆ ೧೨%, ಹೆಚ್ಚಾಗಿದ್ದರೆ ಶೇಕಡ ೧೮% ವಿಧಿಸಲು ಮುಂದಾಗಿದೆ, ಹೀಗಿದ್ದರೂ ಹೊಸ ತೆರಿಗೆ ನೀತಿಗೆ ಇಡೀ ಚಿತ್ರೋದ್ಯಮ ತಲೆಬಾಗಿ ನಿಂದಾಗಿದೆ,
ಈ ತೆರಿಗೆ ಪಾಲಿನ ಲೆಕ್ಕಾಚಾರದಲ್ಲಿ ರಾಜ್ಯಸರಕಾರ ತೆರಿಗೆ ಮುಕ್ತ ಚಿತ್ರವೆಂದು ಘೋಷಿಸಿದರೆ ೧೮% ಶೇಕಡವಾರಿನಲ್ಲಿ ೯% ತೆರಿಗೆ ಪಾವತಿಸಲೇ ಬೇಕಾಗುತ್ತದೆ ಇನ್ನುಳಿದಿದ್ದು ಕೇಂದ್ರದ ೯% ಜಿಎಸ್‌ಟಿ ಪಾವತಿಸಿಯೇ ತೀರಬೇಕಾಗುತ್ತದೆ, ಇಲ್ಲಿ ಕಲಾಮಾಧ್ಯಮಕ್ಕೆ ಜಿಎಸ್‌ಟಿಯ ಹೊರೆಗಳು ಬಿಗ್ ಬಜೆಟ್ ಸಿನಿಮಾಗಳಿಗೆ ಹಾಗೂ ಹೊರ ರಾಜ್ಯ, ದೇಶದಲ್ಲಿ ಚಿತ್ರೀಕರಣ ನಡೆಸುವ ಚಿತ್ರಗಳ ಟೋಟಲ್ ಬಜೆಟ್‌ಗೆ ದುಷ್ಟಾರಿಣಾಮಗಳು ಬೀರದಿದ್ದರೂ ಕನ್ನಡದ ನೆಲದಲ್ಲಿ ಚಿತ್ರೀಕರಣ ನಡೆಸುವ ಚಿತ್ರಗಳಿಗೆ ಸಂಪೂರ್ಣ ಹೊರೆಯ ಬರೆಯಾಗುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ.
ಏಕೆಂದರೆ ತೆರಿಗೆ ಮುಕ್ತವಾದ ಚಿತ್ರಗಳ ಟಿಕೆಟ್ ದರ ಕಡಿಮೆಯಾಗುವುದರಿಂದ ಚಿತ್ರಸಮಾಜಕ್ಕೆ ಹಾಗೂ ಚಿತ್ರ ನಿರ್ಮಾಣಕ್ಕೆ ತಗಲುವ ಆರ್ಥಿಕ ಭಾರದಿಂದ ತಪ್ಪಿಸಿಕೊಳ್ಳಬಹುದಾಗಿದೆ, ಈ ಹೊತ್ತಿನ ಆಧುನೀಕರಣದ ತಾಂತ್ರಿಕ ಬದಲಾವಣೆಯಲ್ಲಿ ಅತೀವ ಸವಾಲುಗಳ ನಡುವೆ ಚಿತ್ರನಿರ್ಮಾಣ ಸಾಗಬೇಕಿದೆ ಹಾಗೂ ಎದುರಿಸಬೇಕಿದೆ, ಹೆಚ್ಚೆಚ್ಚು ಜನಸಮೂಹ ಚಿತ್ರಮಂದಿರಗಳತ್ತ ಧಾವಿಸಿ ಬಂದು ವೀಕ್ಷಿಸುವಂತಾದರೆ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಕನಿಷ್ಠ ಹತ್ತು ಸಾವಿರಕ್ಕೂ ಹೆಚ್ಚು ಕಲಾಕುಟುಂಬಗಳು ನೆಮ್ಮದಿಯಿಂದ ಉಸಿರಾಡಬಹುದಾಗಿದೆ,
ಈ ಚಿಂತನೆಗಳಿಟ್ಟುಕೊಂಡು ಮನನ ಮಾಡಿಕೊಂಡು ತೆರಿಗೆ ನೀತಿಯನ್ನು ವಿಧಿಸಲು ಹೊರಟಿದ್ದ ಅಂದಿನ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರ ನಿರ್ಧಾರವನ್ನು ವಿರೋಧಿಸಿ ಡಾ.ರಾಜಕುಮಾರ್‌ರವರು ಕನ್ನಡ ಚಿತ್ರರಂಗವನ್ನೇ ತ್ಯಜಿಸಿ ತಮ್ಮ ಹಳ್ಳಿಗೆ ಹೋಗುವ ನಿರ್ಧಾರ ಮಾಡುತ್ತಾರೆ, ಅದಾಗ ಮುಖ್ಯಮಂತ್ರಿಗಳೇ ಖುದ್ದು ಡಾ.ರಾಜುಕುಮಾರ್‌ರವರ ಮನೆಗೆ ಹೋಗಿ ತೆರಿಗೆ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿ, ಕನ್ನಡ ಚಿತ್ರರಂಗ ತ್ಯಜಿಸದಂತೆ ಮನವೊಲಿಸಿ ತೆರಿಗೆ ವಿಧಿಸುವ ತಮ್ಮ ನಿಲುವನ್ನು ಹಿಂತೆಗೆದುಕೊಳ್ಳುತ್ತಾರೆ. ಇದನ್ನು ಹಿರಿಯ ಪತ್ರಕರ್ತರಾದ ಬಿ.ವಿ.ವೈಕುಂಠರಾಜು ರವರ ಸಿನೆಮಾತು ಪುಸ್ತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಅದೇ ಮುಂದೆ ಕನ್ನಡ ಹಾಗೂ ಕನ್ನಡದ ನೆಲದಲ್ಲಿ ನಿರ್ಮಿಸಲಾಗುವ ಎಲ್ಲಾ ಸಿನೆಮಾಗಳಿಗೂ ೧೦೦% ತೆರಿಗೆ ವಿನಾಯಿತಿ ನೀಡಲಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ದೂರದೃಷ್ಠಿ ಕಲಾಬದುಕುಗಳ ಪರವಾಗಿ ದನಿಯಾಗುತ್ತಿದ್ದ ಡಾ.ರಾಜಕುಮಾರ್‌ರವರ ಈ ಧೀರೋದತ್ತ ನಿರ್ಧಾರದಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಸೌಲಭ್ಯವನ್ನು ಜಿಎಸ್‌ಟಿ ನೆಪದಲ್ಲಿ ಕಿತ್ತುಕೊಂಡರು ಯಾವುದೇ ಸ್ಟಾರ್‌ನಟರುಗಳು ಕಿಂಚಿತ್ತು ದನಿಯಾಗದೇ ಅತೀವ ಮೌನವಹಿಸಿರುವುದು ದುರಂತ ಎನ್ನಬಹುದಾಗಿದೆ.
ತೆರಿಗೆ ಮುಕ್ತ ಚಿತ್ರ ನಿರ್ಮಾಣದ ಕನಸು ಕಮರಿ ಹೋಗಿರುವ ಬೆನ್ನಲ್ಲೆ ಇದೀಗ ಜಿಎಸ್‌ಟಿ ತೆರಿಗೆ ಮತ್ತು ಅದರ ವಿನಾಯಿತಿಗಳು ಸಂಪೂರ್ಣವಾಗಿ ರಾಜಕೀಯಗೊಳಿಸುತ್ತಿರುವುದು ವಾಸ್ತವವಾಗಿ ಕಾಣಬಹುದಾಗಿದೆ ಇದರಿಂದ ಕನ್ನಡದ ನೆಲದಲ್ಲಿಯೇ ಚಿತ್ರೀಕರಣಗೊಳ್ಳುವ ಸಿನಿಮಾಗಳ ಮೇಲೆ ದುಷ್ಪಾರಿಣಾಮಗಳು ಬೀರುತ್ತಿರುವುದು ಆತಂಕಕಾರಿ ಬೆಳವಣಿಗೆಯೂ ಆಗಿದೆ.
ಈ ಕುರಿತಂತೆ ಕನ್ನಡಪರ ಸಂಘಟನೆಗಳು ಹೋರಾಟಗಳು ರೂಪಿಸಬೇಕಿತ್ತು, ಆದರೆ ಹೋರಾಟಗಳು ರಾಜ್ಯದಲ್ಲಿ ಕಾಣಲೇ ಇಲ್ಲ, ಈ ಕುರಿತಂತೆ ಚಿತ್ರನಿರ್ಮಾಣದ ಹಿಂದಿನ ಮ್ಯಾನ್‌ಪವರ್ ಫ್ಯಾಮಿಲಿ ಉಳಿದರಷ್ಟೆ ತಾನೋರ್ವ ಸ್ಟಾರ್ ನಟ, ನಟಿ ಎನ್ನುವ ಸೆಲಿಬ್ರಿಟಿ ಅಂದುಕೊಳ್ಳದ ಯಾವ ಸ್ಟಾರ್ ನಟರುಗಳು ಈ ಕುರಿತಂತೆ ಹೇಳಿಕೆಗಳನ್ನು ನೀಡಲೇ ಇಲ್ಲ, ಬದಲಿಗೆ ಡಾ.ರಾಜಕುಮಾರ್‌ರವರ ಕಾಳಜಿಯನ್ನು ಕೂಡ ಕಿಂಚಿತ್ತು ಈ ಹೊತ್ತಿನಲ್ಲಿ ತಳೆಯಲೇ ಇಲ್ಲ, ಹೀಗಾಗಿ ಹೊಸ ಜಿಎಸ್‌ಟಿ ನೀತಿಯನ್ನು ಯಾರಿಗೆ, ಯಾವ ಚಿತ್ರಕ್ಕೆ ನೀಡಬೇಕೋ ಅಂತಹ ಚಿತ್ರಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಲು ಮುಂದಾಗಿರುವುದನ್ನು ಕೂಡ ವಿರೋಧಿಸಲು ಸಾಧ್ಯವಾಗದ ಅಥವಾ ಚರ್ಚಿಸಲಾಗದ ಅತ್ಯಂತ ಕೆಳದರ್ಜೆಯ ಮಾನಸೀಕತೆಗೆ ಸ್ಟಾರ್ ನಟರು, ಚಿತ್ರೋದ್ಯಮ ಬಂದು ನಿಂದಿರುವುದಕ್ಕೆ ಪ್ರಸ್ತುತ ಈ ವಿದ್ಯಮಾನಗಳೇ ಸಾಕ್ಷೀಕರಿಸುತ್ತದೆ.
ಇತ್ತೀಚೆಗೆ ಬಿಡುಗೊಂಡ ಕಾಶ್ಮೀರಿ ಪೈಲ್ಸ್ ಚಿತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರೆಡು ತೆರಿಗೆ ಮುಕ್ತ ಚಿತ್ರವೆಂದು ಘೋಷಿಸಿದವು, ಈ ಬಗ್ಗೆಯೂ ಚಕಾರೆತ್ತಲಿಲ್ಲ, ಇದೀಗ ತೆರೆಕಂಡ ಚಿತ್ರ ಚಾರ್ಲಿ ೭೭೭ ನೂರಕ್ಕೆ ನೂರರಷ್ಟು ತೆರಿಗೆ ವಿನಾಯಿತಿ ನೀಡಿದೆ ಅನ್ಯಭಾಷೆಯ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ ಆರೋಪದಿಂದ ಮುಕ್ತವಾಗಲು ಕನ್ನಡದ ಒಂದು ಚಿತ್ರಕ್ಕೆ ತೆರಿಗೆ ಮುಕ್ತ ಆದೇಶ ಹೊರಬಿದ್ದಿರುವುದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮತ್ತೊಮ್ಮೆ ಅವಲೋಕಿಸಲಿ, ಕನ್ನಡದೊಂದು ಚಿತ್ರಕ್ಕೆ ವಿನಾಯಿತಿ ಘೋಷಿಸಲು ಮುಂದಾಗುವ ನೀವು ಬಿಜೆಪಿ ಸರ್ಕಾರ ಬರುವ ಮೊದಲು ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಎಲ್ಲಾ ಕನ್ನಡ ಸಿನೆಮಾಗಳಿಗೆ ೧೦೦% ತೆರಿಗೆ ವಿನಾಯಿತಿ ಇತ್ತು ಎನ್ನುವುದನ್ನು ಪರೀಶಿಲಿಸಲಿ ಎನ್ನುವುದು ನಿರ್ಮಾಪಕರ ದನಿಯೂ ಆಗಿದೆ. ಹೀಗಾಗಿ ಹೊಸ ಜಿಎಸ್‌ಟಿ ನೀತಿಯನ್ನು ಜಾರಿಗೆ ತಂದು ಕನ್ನಡದ ಚಿತ್ರಗಳಿಗೆ ತೆರಿಗೆಯ ಹೊರೆಯ ಬರೆಯಾಗಿಸಿರುವುದು ಸಮಂಜಸವಾದುದ್ದಲ್ಲವಾಗಿದೆ.
ಕನ್ನಡದಲ್ಲಿಯೂ ಉತ್ತಮ ಸಮಾಜಕ್ಕೊಂದು ಸಂದೇಶವನ್ನು ನೀಡುವ ಅನೇಕ ಚಿತ್ರಗಳು ಕನ್ನಡದ ಈ ನೆಲದಲ್ಲಿಯೇ ನಿರ್ಮಿಸಲಾಗುತ್ತಿದೆ, ಈ ಚಿತ್ರನಿರ್ಮಾಣದ ಹಿಂದೆ ಸಾವಿರಾರು ಕುಟುಂಬಗಳ ಬದುಕುಗಳಿವೆ, ಈ ಎಲ್ಲಾ ಅಂಶಗಳನ್ನು ಮನಗಂಡು ಡಾ.ರಾಜಕುಮಾರ್‌ರವರ ಆಶಯದಂತೆ ೨೦೧೭ರ ಹಿಂದಿನ ತೆರಿಗೆ ನೀತಿಗಳಂತೆಯೇ ತೆರಿಗೆ ಮುಕ್ತ ಚಿತ್ರನಿರ್ಮಾಣಕ್ಕೆ ಅವಕಾಶ ನೀಡಲಿ, ಇದನ್ನು ರಾಜಕೀಯಗೊಳಿಸದೇ ಒಂದು ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಕಣ್ಣೊರೆಸುವ ತಂತ್ರಗಾರಿಕೆಯನ್ನು ಯಾವುದೇ ರಾಜ್ಯಸರಕಾರವು ಮಾಡದಿರಲಿ ಅಲ್ಲವೇ..?
ಶ್ವಾನದ ಕಾಳಜಿಯಿಂದ ತಾವು ಆ ‘ಒಂದು’ ಕನ್ನಡ ಸಿನೆಮಾಗೆ ಮಾತ್ರ ೧೦೦% ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಮುಂದಾದ ನೀವು ಶ್ವಾನದಷ್ಟೇ ಜೀವಪರ ನಿಲುವು ಹೊಂದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನಿಮಾಗಳು ಪ್ರತೀ ವರ್ಷವೂ ನಿರ್ಮಾಣವಾಗುತ್ತಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಈ ನೆಲದಲ್ಲಿಯೇ ತಯಾರಾಗುತ್ತಿವೆ ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ನೀಲಿ ಹಕ್ಕಿ ಇನ್ನೂ ಬಹಳಷ್ಟು ಸಿನೆಮಾ ಇದೆ. ಜೊತೆಗೆ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಚಿತ್ರಗಳು ಅತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನಿಮಾಗಳು ಸಾಕಷ್ಟಿವೆ, ಇವ್ಯಾವುದಕ್ಕೂ ನೀಡದ ೧೦೦% ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಗೆ ನೀಡುವುದು ಡಾ.ರಾಜಕುಮಾರ್‌ರವರ ಆಶಯಕ್ಕೆ ತದ್ವಿರುದ್ಧವಾದದ್ದು ಎನ್ನುವುದನ್ನು ಸಿಎಂ ಸಿದ್ದರಾಮಯ್ಯನವರು ಮನವರಿಕೆ ಮಾಡಿಕೊಳ್ಳಬೇಕಿದೆ,
ಹಿಂದಿ ಚಿತ್ರವೊಂದಕ್ಕೆ ನೀಡಿದ ತೆರಿಗೆ ವಿನಾಯಿತಿಯ ಆರೋಪವನ್ನು ತಣಿಸಲು ಕನ್ನಡದೊಂದು ಚಿತ್ರಕ್ಕೆ ನೀಡಿ ಕಣ್ಣೊರೆಸುವ ತಂತ್ರಗಾರಿಕೆಯಾಗಲಿ, ರಾಜಕಾರಣವಾಗಲಿ ಮಾಡಬಾರದಾಗಿದೆ.
ಇನ್ನೂ ಚಾರ್ಲಿ ಸಿನೆಮಾದ ನಿರ್ಮಾಪಕರೂ ಸೇರಿದಂತೆ ಕನ್ನಡದ ಯಾವೊಬ್ಬ ನಿರ್ಮಾಪಕರು ಅಣ್ಣಾವ್ರ ನೇರ ನಡೆಯಂತೆ ನಡೆಯಲಾರರು ಎನ್ನುವುದು ಇದೀಗ ಮನದಟ್ಟಾಗಿದೆ, ಅಲ್ಲದೆ ಒಕ್ಕರೊಲಿನಿಂದ ೧೦೦% ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರದ ಕೋಮ ಸ್ಥಿತಿಗೆ ಬಂದು ತಲುಪಿರುವುದು ಈ ಬದಲಾವಣೆಗಳಿಂದಲೇ ದೃಡವಾಗುತ್ತದೆ, ಇದರಿಂದ ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ನಿರ್ಮಾಪಕರು, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿರುವುದರಿಂದ ಅಣ್ಣಾವ್ರು ಡಾ. ರಾಜಕುಮಾರ್ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಚಿತ್ರಗಳಿಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ನಿಟ್ಟಿನಲ್ಲಿ ಸರಕಾರ ತ್ವರಿತವಾಗಿ ಯೋಚಿಸಲಿ.
ಹೀಗೊಂದು ಅಪಾಯಕಾರಿ ಬೆಳವಣಿಗೆಗಳು ನಡೆದು ಹೋಗಿತ್ತು :
ಚೆಂದನವನದಲ್ಲಿ ಸದಭಿರುಚಿ, ಕಲಾತ್ಮಕ ಚಿತ್ರಗಳನ್ನು ಸಂದೇಶಗಳನ್ನು ನೀಡಿ ಉತ್ತಮ ಸಮಾಜ್ಕೆ ಕೊಂಡಿಯಾಗಿದ್ದ ಚಿತ್ರಗಳು, ನಟರು ನಿಜ ಜೀವನದಲ್ಲಿಯೂ ತಮ್ಮ ನಾಯಕತ್ವವನ್ನು ರೂಪಿಸಿಕೊಂಡಿದ್ದರು,
ಈ ತಲೆಮಾರಿನ ನಂತರದಲ್ಲಿ ಹೀಗೂ ಕನ್ನಡ ಚಿತ್ರಗಳನ್ನು ನಿರ್ಮಿಸಬಹುದು ಎಂದುಕೊಂಡ ರಿಯಲ್ ಎಸ್ಟೇಟ್ ದಂಧೆಕೋರರನ್ನು ಮೆಲ್ಲನೆ ಸೆಲಿಬ್ರಿಟಿಯಾಗಿ ಗುರುತಿಸಿಕೊಳ್ಳುವುದಕ್ಕೆ ಶುರುವಿಟ್ಟುಕೊಂಡರು ಈ ತರುವಾಯವೇ ಗಂಧಗಾಳಿ ಗೊತ್ತಿಲ್ಲದ ರಿಯಲ್ ಎಸ್ಟೇಟ್ ದಂಧೆಕೋರರು ಒಮ್ಮೆಲೆ ನಿರ್ಮಾಪಕರಾಗಿ ಚಿತ್ರನಿರ್ಮಾಣದಲ್ಲಿ ತೂರಿಕೊಂಡರು, ಹೀಗೆ ತೂರಿಕೊಂಡ ಅನೇಕರು ಬ್ಯಾನರ್ ನೊಂದಾವಣೆ ಮಾಡಿಕೊಂಡು ಒಂದೆರೆಡು ರಿಮೇಕ್ ಚಿತ್ರ ನಿರ್ಮಿಸಿ, ಖಾಲಿಯಾಗಿ ಗಾಂಧಿನಗರದ ಮೊಗಸಾಲೆಗೆ ಸರಿದು ಕಾಣೆಯಾದರೆ, ಇನ್ನೊಂದಿಷ್ಟು ನಿರ್ಮಾಪಕರು ರಿಯಲ್‌ಎಸ್ಟೇಟ್ ಮಾಫಿಯಾದೊಂದಿಗೆ ಬೆಸೆದುಕೊಂಡು, ಆಗೊಂದು, ಹೀಗೊಂದು ಚಿತ್ರ ನಿರ್ಮಿಸಿಕೊಂಡು ಖಾಯಂ ನಿರ್ಮಾಪಕರಾಗಿ ಬಿಟ್ಟಿರುವ ಅಸಲಿ ಸಂಗತಿಯ ಜಾಡು ಹಿಡಿದು ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಕೋಲಾಹಲವೇ ಬುಗಿಲೆದ್ದು ಬಿಟ್ಟಿದೆ.
ಹೌದು ಮೊನ್ನೆಯ ಘಟನೆಯಲ್ಲಿ ಕನ್ನಡ ಚಿತ್ರ ನಿರ್ಮಾಪಕರ ಸಂಘದ ಕಛೇರಿಗೆ ಬೀಗ ಜಡಿಯುವ ಮಟ್ಟಿಗೆ ಪ್ರಕರಣ ಬಂದು ಮುಟ್ಟಿದೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಬೆನ್ನೆಲ್ಲೆ, ಸಂಘದ ಉಪನಿಯಮದನ್ವಯ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಕೂಡ ನಡೆಸಬೇಕೆಂದು ಮತ್ತು ಚುನಾವಣೆ ನಡೆಯುವವರಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ನಿರ್ಮಾಪಕ ಕೃಷ್ಣೇಗೌಡ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದರು. ಈ ನಂತರ ಈ ದೂರಿನಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿದಂತೆ ಉಪನಿಬಂಧಕರು ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಈಗಿರುವ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಅಧಿಕಾರ ಅವಧಿ ಸೆಪ್ಟೆಂಬರ್ ೨೦೨೧ಕ್ಕೆ ಮುಕ್ತಾಯವಾಗಿತ್ತು. ಈ ತರುವಾಯ ಚುನಾವಣೆ ನಡೆಸದೇ ಅಧಿಕಾರಿ ಮುಂದುವರೆಸಲಾಗಿತ್ತು. ಈ ಎಲ್ಲಾ ಕಾರಣಗಳಿಂದ ನಿರ್ಮಾಪಕ ಕೃಷ್ಣೇಗೌಡ ಅವರು ಸಹಕಾರ ಇಲಾಖೆಗೆ ದೂರು ನೀಡಿ ಸಂಘದ ಪದಾಧಿಕಾರಿಗಳ ಅವಧಿಯು ಮುಕ್ತಾಗೊಂಡಿದೆ, ಅವಧಿ ಮುಗಿದಿರುವ ಆಡಳಿತ ಮಂಡಳಿಯು ಅನಧಿಕೃತವಾಗಿ ಮುಂದುವರೆದಿರುತ್ತದೆ. ಸಂಘದ ಆಡಳಿತ ಮಂಡಳಿ ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ನಡೆಸಲು ವಿಫಲವಾಗಿರುವುದರಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದೆ,
ಈ ಆದೇಶದ ಪ್ರತಿಯನ್ನು ಖುದ್ದಾಂ ತಲುಪಿಸಲು ಹೋರಟ ಉಪನಿಬಂಧಕರ ಕಛೇರಿ ಸಿಬ್ಬಂದಿಗಳಿಗೆ ನಿರ್ಮಾಪಕರ ಸಂಘದ ಕಛೇರಿ ಬಾಗಿಲು ಹಾಕಿಕೊಂಡಿರುವುದು ಕಂಡು ಬರುತ್ತದೆ ಈ ನಂತರ ಅವರು ಹಾಲಿ ಇರುವ ಅಧ್ಯಕ್ಷರೊಂದಿಗೆ ಪೋನಾಯಿಸಿ ಆದೇಶದ ಪ್ರತಿಯನ್ನು ಸ್ವೀಕರಿಸಲು ವಿನಂತಿಸಿಕೊಂಡಿದ್ದಾರೆ ಇದಕ್ಕೆ ಸಕಾರಣಗಳ ನೀಡಿ ನುಣುಚಿಕೊಂಡ ಹಾಲಿ ಪದಾಧಿಕಾರಿಗಳ ಸಬೂಬು ಕೇಳಿ ದಂಗಾದ ಅಧಿಕಾರಿಗಳು ಬಾಗಿಲು ಮುಚ್ಚಿಕೊಂಡು ಹೋಗಿದ್ದ ನಿರ್ಮಾಪಕರ ಸಂಘದ ಕಛೇರಿಯ ಷಟರ್ ಮೇಲೆ ನೋಟಿಸ್ ಪ್ರತಿ ಲಗತ್ತಿಸಿ ಸ್ಥಳೀಯ ಪೊಲೀಸರಿಗೆ ಮತ್ತೊಂದು ಪ್ರತಿಯನ್ನು ರವಾನಿಸಿದ್ದಾರೆ.
ಈ ಬೆಳವಣಿಗೆಯಿಂದ ಕನ್ನಡ ಚಿತ್ರ ನಿರ್ಮಾಪಕರ ಸಂಘದ ಒಳಗುಟ್ಟಿನ ಅವ್ಯವಹಾರಗಳ ಬಟ್ಟಾ ಬಯಲಾಗತೊಡಗಿದೆ, ಇದನ್ನು ಸಮರ್ಥಿಸಿಕೊಳ್ಳುವಂತೆ ಇತ್ತೀಚೆಗೆ ನಿರ್ಮಾಪಕ ಕೆ.ಮಂಜು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದೂರು ನೀಡಿದ ನಿರ್ಮಾಪಕ ಕೃಷ್ಣೆಗೌಡರ ಬಗ್ಗೆಯೇ ವಾಚಮಗೋಚರವಾಗಿ ನಿಂದಿಸಿ, ಪ್ರತಿ ಆರೋಪಿಸಿದ್ದಾರೆ ಈ ಸಂಗತಿಗಳನ್ನು ಅವಲೋಕಿಸದರೆ ಯಾವುದೇ ಈ ನೆಲದ ವ್ಯಕ್ತಿ ಸಾರ್ವಜನಿಕ ಸಂಸ್ಥೆಗಳ ಭ್ರಷ್ಠಾಚಾರ ಹಾಗೂ ಅಧಿಕಾರ ದುರುಪಯೋಗ, ನಿಯಮಗಳ ಉಲ್ಲಂಘನೆ ವಿರುದ್ದ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ದೂರು ಸಲ್ಲಿಸಿ ವ್ಯಾಪಕ ತನಿಖೆಗೆ ಒತ್ತಾಯಿಸುವ ಸಂಪೂರ್ಣ ಹಕ್ಕು ಹೊಂದಿರುತ್ತಾನೆ, ಆದರೆ ಈ ರೀತಿ ದೂರು ನೀಡಿದ ಕೃಷ್ಣೆಗೌಡರ ಮೇಲೆಯೇ ಸಾರ್ವಜನಿಕವಾಗಿ ಬೆದರಿಸುವ ಕಯ್ಯಾಲಿಯಲ್ಲಿ ಬೆದರಿಕೆಯೊಡ್ಡುವುದು, ತನಿಖಾ ಹಾದಿಯನ್ನು ತಿರುಚುವುದು, ದೂರುದಾರರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಕೂಡ ದೂರು ಕಾಯ್ದೆಗಳನ್ನು ಉಲ್ಲಂಘಿಸಿದಂತಾಗುತ್ತದೆ ಎನ್ನುವುದು ಈ ಅಂಶಗಳಿಂದ ದೃಡಪಡುತ್ತದೆ.
ಇದೊಂದು ದಾಖಲೆಗಳನ್ನು ತಿರುಚುವಿಕೆಯಾಗಿದ್ದು ಉಪನಿಬಂಧಕರು ದೂರುದಾರರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ತನಿಖೆ ಮುಗಿಯುವವರೆಗೆ ಹತ್ತಿರದ ಪೊಲೀಸ್ ಠಾಣೆಗೆ ಪತ್ರ ಬರೆಯುವ ಜರೂರತ್ತಿದೆ,
ಕೆಲ ಸದಸ್ಯರು ಚಕಾರೆತ್ತಿರುವಂತೆ ನ್ಯಾಯಾಲಯದಲ್ಲಿ ಬೈಲಾ ನ್ಯೂನ್ಯತೆಗಳನ್ನು ಕುರಿತು ಮೊಕದ್ದಮೆ ದಾಖಲಿಸಿದ್ದರು ಇದನ್ನು ಪರಿಶೀಲಿಸಿದ ನ್ಯಾಯಾಲಯವು ಬೈಲಾ ತಿದ್ದುಪಡಿಯಾದ ಮೇಲೆಯೇ ಚುನಾವಣೆ ನಡೆಸಬೇಕೆಂದು ಆದೇಶಿಸಿತ್ತು ಆದರೆ ಕೋವಿಡ್-೧೯ ಕಾರಣಗಳೊಡ್ಡಿ ಬೈಲಾ ತಿದ್ದುಪಡಿಯನ್ನು ಸಂಘದ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಹಾಲಿ ಸಂಘದ ಆಡಳಿತ ಮಂಡಳಿ ದಾಖಲೆಗಳನ್ನು ಸಲ್ಲಿಸಿತ್ತು ಆದರೆ ಹಾಲಿ ಸಂಘದ ಅಧಿಕಾರ ಅವಧಿ ಮುಗಿದ ಮುಕ್ತಾಯವಾಗಿದ್ದ ತಂತ್ರಗಾರಿಕೆಯನ್ನು ಯಾವುದೇ ರಾಜ್ಯಸರಕಾರವು ಮಾಡದಿರಲಿ ಅಲ್ಲವೇ..?
ಶ್ವಾನದ ಕಾಳಜಿಯಿಂದ ತಾವು ಆ ‘ಒಂದು’ ಕನ್ನಡ ಸಿನೆಮಾಗೆ ಮಾತ್ರ ೧೦೦% ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಮುಂದಾದ ನೀವು ಶ್ವಾನದಷ್ಟೇ ಜೀವಪರ ನಿಲುವು ಹೊಂದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನಿಮಾಗಳು ಪ್ರತೀ ವರ್ಷವೂ ನಿರ್ಮಾಣವಾಗುತ್ತಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಈ ನೆಲದಲ್ಲಿಯೇ ತಯಾರಾಗುತ್ತಿವೆ ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ನೀಲಿ ಹಕ್ಕಿ ಇನ್ನೂ ಬಹಳಷ್ಟು ಸಿನೆಮಾ ಇದೆ. ಜೊತೆಗೆ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಚಿತ್ರಗಳು ಅತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನಿಮಾಗಳು ಸಾಕಷ್ಟಿವೆ, ಇವ್ಯಾವುದಕ್ಕೂ ನೀಡದ ೧೦೦% ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಗೆ ನೀಡುವುದು ಡಾ.ರಾಜಕುಮಾರ್‌ರವರ ಆಶಯಕ್ಕೆ ತದ್ವಿರುದ್ಧವಾದದ್ದು ಎನ್ನುವುದನ್ನು ಸಿಎಂ ಸಿದ್ದರಾಮಯ್ಯನವರು ಮನವರಿಕೆ ಮಾಡಿಕೊಳ್ಳಬೇಕಿದೆ,
ಹಿಂದಿ ಚಿತ್ರವೊಂದಕ್ಕೆ ನೀಡಿದ ತೆರಿಗೆ ವಿನಾಯಿತಿಯ ಆರೋಪವನ್ನು ತಣಿಸಲು ಕನ್ನಡದೊಂದು ಚಿತ್ರಕ್ಕೆ ನೀಡಿ ಕಣ್ಣೊರೆಸುವ ತಂತ್ರಗಾರಿಕೆಯಾಗಲಿ, ರಾಜಕಾರಣವಾಗಲಿ ಮಾಡಬಾರದಾಗಿದೆ.
ಇನ್ನೂ ಚಾರ್ಲಿ ಸಿನೆಮಾದ ನಿರ್ಮಾಪಕರೂ ಸೇರಿದಂತೆ ಕನ್ನಡದ ಯಾವೊಬ್ಬ ನಿರ್ಮಾಪಕರು ಅಣ್ಣಾವ್ರ ನೇರ ನಡೆಯಂತೆ ನಡೆಯಲಾರರು ಎನ್ನುವುದು ಇದೀಗ ಮನದಟ್ಟಾಗಿದೆ, ಅಲ್ಲದೆ ಒಕ್ಕರೊಲಿನಿಂದ ೧೦೦% ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರದ ಕೋಮ ಸ್ಥಿತಿಗೆ ಬಂದು ತಲುಪಿರುವುದು ಈ ಬದಲಾವಣೆಗಳಿಂದಲೇ ದೃಡವಾಗುತ್ತದೆ, ಇದರಿಂದ ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ನಿರ್ಮಾಪಕರು, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿರುವುದರಿಂದ ಅಣ್ಣಾವ್ರು ಡಾ. ರಾಜಕುಮಾರ್ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಚಿತ್ರಗಳಿಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ನಿಟ್ಟಿನಲ್ಲಿ ಸರಕಾರ ತ್ವರಿತವಾಗಿ ಯೋಚಿಸಲಿ.


