September 25, 2026

I “ದೊಡ್ಮನೆ ಸೊಸೆ” I

0
IMG-20250701-WA0821(1)

I “ದೊಡ್ಮನೆ ಸೊಸೆ” I

ಅವಳದಲ್ಲದ ಬದುಕಿನಲ್ಲಿ
ಅವಳಿಗಿಲ್ಲದ ಖುಷಿಗೆ
ಅವಳಿಗಲ್ಲದ ಸಂಭ್ರಮಕ್ಕೆ
ಅವಳೇ ನಿತ್ಯ ದುಡಿಯುವಳು
ಅವಳನ್ನೇ ಮರೆವಳು,

ಅವಳ ಕಣ್ಣಿನ ಕಾಡಿಗೆಯಲ್ಲಿ
ಅಂಧ ಪ್ರೀತಿ ಅಲಂಕರಿಸಿದೆ,
ಭಾವನೆಗಳು ಬಂಧಿ ಆಗಿವೆ
ಆಸೆಗಳು ಅಂತ್ಯ ಹಾಡಿವೆ
ಗುಳಿಗೆನ್ನೆ ಕಣ್ಣೀರಿಗೆ ಗುಂಡಿ ಆಗಿವೆ,
ತುಟಿಯಂಚಿನ ನಗು ನಾಟಕ ಆಡಿವೆ,

ಹೊರಗಡೆ ದೊಡ್ಮನೇ ಸೊಸೆ
ಹೊಸ್ತಿಲ ಹಿಂದೆ ಕೆಲಸದಾಕೆ,
ನೀಗಿಸಬೇಕು ಎಲ್ಲರ ಕೊರಿಕೆ
ಕೇಳುವರಿಲ್ಲ ಅವಳ ಮನದ ಬಯಕೆ,
ಬದುಕುವಳು ಅವಳಿಗಾಗಿಯಲ್ಲ ಅವರಿಗಾಗಿ,

ಬಾಡಿ ಬಸವಳಿದರು ಅರಳುವಳು ನಿತ್ಯ ಮಲ್ಲಿಗೆಯಂತೆ
ಮತ್ತೆ ನಗುವಳು ಎಲ್ಲರಂತೆ.

-ಶ್ವೇತಾ ತೀರ್ಥಹಳ್ಳಿ

Spread the love

Leave a Reply

Your email address will not be published. Required fields are marked *

error: Content is protected !!