September 24, 2026

I ಕುಳುವ ನೆಲೆಯವರು I

0
Gara 1

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕುಳುವ ನೆಲೆಯವರು I

ಕಣಿ ಹೇಳೋ ಕೊರವಂಜಿ
ಬುಟ್ಟಿ ಹೆಣೆಯೋ ಮಂಜಣ್ಣ..
ಶಹನಾಯಿ ನುಡಿಸೋ ರಾಮಣ್ಣ
ಇವರೆಲ್ಲಾ ನನ್ನವರು
ನನ್ನ ಕುಳುವ ನೆಲೆಯವರು.

ಕಿಚ್ಚಿನ ಎದೆಯವರು
ಸೆಡ್ಡಿನ ಸದ್ದಿನವರು..
ಹೆಜ್ಜೆಗಳ ಕುರುಹುಗಳಲಿ
ಸಾಗಿ ಬಂದ ಎಕಲವ್ಯರು
ಇವರೇ. ನನ್ನ ಕುಳುವ ನೆಲೆಯವರು.

ಕಾಯಕ ಕ್ರಾಂತಿಯೊಳು
ಅನುಭವ ಮಂಟಪದಿ..
ಜಗದ ಕತ್ತಲಿಗೆ ದೀವಿಗೆ ಹಿಡಿದವರು
ನುಲಿಯ ಚಂದಯ್ಯನವರು.

ಕೈಯೊಡ್ಡದ ಶ್ರಮಜೀವಿಗಳು
ಶಿರ ಬಾಗಿಸದ ರಣಧೀರರು..
ಸ್ವಾಭಿಮಾನದಿ ಪ್ರತಿಧ್ವನಿಸಿದ
ತ್ಯಾಗದ ಕಲಿಗಳಿವರು,
ಸಾಲುಗಟ್ಟಿದ ಎದುರಾಳಿಗಳ ಮಣಿಸಿ
ಬೆವರನಿಗಳಲಿ ಇತಿಹಾಸವೇ ಬರೆದರು
ನನ್ನ ಕುಳುವ ನೆಲೆಯವರು.

ಉತ್ತರದಿ ಹರಿದು ಬಂದರು
ದಕ್ಷಿಣದಿ ನಿಂದರು..
ಪ್ರಕೃತಿಯೇ ದೈವವೆಂದರು
ಕಲೆ-ವೃತ್ತಿ ಸಂಸ್ಕೃತಿಯ ಕಟ್ಟಿದರು
ನನ್ನ ಕುಳುವ ನೆಲೆಯವರು.

Spread the love

Leave a Reply

Your email address will not be published. Required fields are marked *

error: Content is protected !!