ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಬೆಂಗ್ಳೂರಿನ ಪಾತಕಿ I ಸೈಲೆಂಟ್ ಸುನೀಲ I ಮುಗಿಯುತ್ತಿದ್ದಾನೆ.. I
ಒಂದು ಕಾಲದ ಶುರುವಿನಲ್ಲಿ ಹೀಗೊಂದು ಈತನ ಕೊಲೆ ಪಾತಕಗಳಲ್ಲಿ ನೆಲದ ರೌಡಿಗಳ ನೆತ್ತರು ಚಿಮ್ಮಿದೆ, ಕೊಲೆ ಕೊಲೆಯತ್ನ, ಡಕಾಯಿತಿ ಹೀಗೆ ಸುಪಾರಿ ಅವಾಂತರಗಳನ್ನು ನಡೆಸಿದ್ದು ಬೆಂಗಳೂರಿನಲ್ಲಿ ಬೆನಾಮಿ ಆಸ್ತಿ ಕಟ್ಟಿಕೊಂಡಿದ್ದು ಬಹಳಷ್ಟು, ಕೊಲೆ ಅಂತಹ ಪಾತಕದ ಕಯ್ಯಾಲಿ ಬೆಳೆಸಿಕೊಂಡ ನಟೋರಿಯಸ್ ಪಾತಕಿಗೆ ಪೋಷಿಸುತ್ತಿರುವವರಲ್ಲಿ ಒಂದಿಷ್ಟು ಪಕ್ಷಾತೀತ ರಾಜಕಾರಣಿಗಳು, ಇನ್ನೊಂದೆಡೆ ಪೋಲಿಸರು ಕೂಡ ಎಂಬುದು ಪೋಲಿಸ್ ಆಯುಕ್ತರ ಕಚೇರಿಯ ಮೊಗಸಾಲೆಯಲ್ಲಿ ಪ್ರತಿಧ್ವನಿಸುತ್ತಿದೆ ಹೀಗೆ ಗಾಯತ್ರಿ ನಗರದ ಕ್ಯಾಪ್ಟನ್ ರಾಜನ ಪಟಾಲಂನಲ್ಲಿ ಗುರುತಿಸಿಕೊಂಡಿರುವ ಈ ನಟೋರಿಯಸ್ ಪಾತಕಿಯೇ ಸುನೀಲ ಯಾನೆ ಸೈಲೆಂಟ್ ಸುನೀಲ, ಆತನ ಮಂತ್ಲಿ ಮಾಮೂಲಿ ತಿಂಗಳಿಗೆ ಕೋಟಿ ಕಂತೆಗಳ ದಾಟಿದೆ. ಕೆ.ಆರ್. ಮಾರ್ಕೇಟ್ ಕಾಡ್ಸ್ ಕ್ಲಬ್, ಹೈಟೆಕ್ ವೇಶ್ಯಾವಾಟಿಕೆ , ಸ್ಕಿಲ್ ಗೇಮ್ಸ್, ರಿಯಲ್ ಎಸ್ಟೇಟ್ ಏಜೆನ್ಸಿ , ಟ್ರಾವೆಲ್ಸ್ ಹೀಗೆ ಮುಂದುವರೆದಂತೆ ಈ ಸುತ್ತಲಿನ ಮೀಟರ್ ಬಡ್ಡಿ ಮಾಫಿಯಾದವರು ಸೇರಿದಂತೆ ರಾಜಕಾರಣಿಗಳು ಕೂಡ ಕೊಲೆ ಪಾತಕಿ ಸೈಲೆಂಟ್ ಸುನೀಲನ ಮಂತ್ಲಿ ಮಾಮೂಲಿಯ ಪಟ್ಟಿಯಲ್ಲಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ ಈ ಹಪ್ತಾ ವಸೂಲಿ ಬಾಜಿಯಲ್ಲಿ ಬಂದ ೩೦% ಹಣ ಪೋಲಿಸರಿಗೆ ಸೈಲೆಂಟ್ ಸುನೀಲ್ ನೀಡುತ್ತಾನೆ. ಹೀಗಾಗಿಯೇ ಪಾತಕಿ ಸೈಲೆಂಟ್ ಸುನೀಲನ ಕಿಲ್ಲಿಂಗ್ ಸ್ಟೋರಿ ಬೆಳೆಯುತ್ತಲೇ ಸಾಗಿದೆ. ಹಾಗೆಯೇ ಸೈಲೆಂಟ್ ಸುನೀಲನನ್ನು ಮುಗಿಸಿಬಿಡಲು ಪಾತಕ ಲೋಕದ ಪಾಪಿಗಳು ಕಣ್ಣಿಗೆ ಎಣ್ಣೆ ಬಿಟ್ಟಿಕೊಂಡರಂತೆ ಬಕಪಕ್ಷಿಗಳ ರೀತಿಯಲ್ಲಿ ಹೊಂಚು ಹಾಕುತ್ತಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿಯಾದರು. ಇತ್ತಕಡೆ ಮತ್ತೊಂದು ಕ್ರೈಂ ಸೈಲೆಂಟ್ ಸುನೀಲನಿಂದ ನಡೆದು ಪೋಲಿಸರು ಕೂಡ ಎನ್‌ಕೌಂಟರ್ ಹೆಸರಿನಲ್ಲಿ ಮುಗಿಸಿ ಕೈ ತೊಳೆದುಕೊಳ್ಳಲು ಮುಹೂರ್ತ ಫಿಕ್ಸ್ ಎಂಬಂತೆ ಕಾಲವನ್ನು ದೂಡುತ್ತಿರುವುದರಿಂದ ಸೈಲೆಂಟ್ ಸುನೀಲ್ ಬರ್ಬರವಾಗಿ ಕೊಲೆಯಾಗಿಯೋ..? ಅಥವಾ ಪೋಲಿಸರ ಎನ್‌ಕೌಂಟರ್‌ನಲ್ಲಿಯೋ..? ಬೀದಿ ಹೆಣವಾಗುವ ಪಾತಕಲೋಕದ ಕ್ಷಣಗಳು ಯಾವನಿಗೆ ಬೇಕಿದೆ ಅಲ್ವಾ..?
ಹದಿವಯಸ್ಸಿನಲ್ಲಿಯೇ ಸೈಲೆಂಟ್ ಸುನೀಲ ಕೊಲೆ ಮಾಡಿ ಜೈಲು ಪಾಲಾಗಿದ್ದ : ಪಾತಕ ಲೋಕದ ಮತ್ತೊಬ್ಬ ರೌಡಿ ಗೆಡ್ಡನಾಗನ ಸಹೋದರ ಕಿಟ್ಟಿಯೇ ಸೈಲೆಂಟ್ ಸುನೀಲನ ಗುರುವಾಗಿದ್ದವನು. ಅಂದು ಕಿಟ್ಟಿಯ ಸಹೋದರಿಯೊಬ್ಬಳನ್ನು ಪೋಲಿಸ್ ಪೇದೆಯೊಬ್ಬ ಚುಡಾಯಿಸುತ್ತಿದ್ದ ಎಂಬುವ ಕಾರಣಕ್ಕೆ ಆ ಪೋಲಿಸ್ ಪೇದೆಯನ್ನು ರೌಡಿ ಕಿಟ್ಟಿ ಹಾಗೂ ಸೈಲೆಂಟ್ ಸುನೀಲ ಮತ್ತಿತರರು ಬರ್ಬರವಾಗಿ ಮರ್ಡರ್ ಮಾಡಿ ಜೈಲಿಗೆ ಎಂಟ್ರಿ ಕೊಟ್ಟಾಗಲೇ ಹೀಗೊಬ್ಬ ಮೀಸೆ ಮೂಡದವನ ಕ್ರಿಮಿನಲ್ ಪಟ್ಟಿಯಲ್ಲಿ ಸೈಲೆಂಟ್ ಸುನೀಲನ ನೇಮ್ ರಾರಾಜಿಸಿತ್ತು.
ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸೈಲೆಂಟ್ ಸುನೀಲ ಒಮ್ಮೇಲೆ ಮರ್ಡರ್ ಮಾಡಿ ಡಾನ್ ಎನ್ನಿಸಿಕೊಳ್ಳುವ ಇರಾದೆಯಿಂದಲೇ ಭೂಗತ ಲೋಕದಲ್ಲಿ ಕಾಲಿಟ್ಟಿದ್ದ ಸೈಲೆಂಟ್ ಸುನೀಲ ತೆರೆಯ – ಮರೆಯಲ್ಲಿಯೇ ಒಂದಿಷ್ಟು ಕೊಲೆ ಪಾತಕ ನಡೆಸಿ ಕಾಸು ಮಾಡಿಕೊಂಡು ಮೋಜು- ಮಜಾ ಮಾಡಿಬಿಡುವ ಈ ಪಾತಕಿಯನ್ನು ಮೊದಲು ಬಳಸಿಕೊಂಡಿದ್ದು ರಿಯಲ್ ಎಸ್ಟೇಟ್ ಹಾಗು ಕೇಬಲ್ ಮಾಫಿಯಾ ಅವನಿಗೆ ನೇಮ್ ಜೊತೆಯಲ್ಲಿ ಕಾಸು ಬೇಕಿತ್ತು ಅದಕ್ಕೆ ಕಾಸು ಚೆಲ್ಲಿ ಪೋಷಿಸಿದರು.
ಹೀಗೆ ಭೂಗತ ಲೋಕದಲ್ಲಿ ಮೆಲ್ಲನೆ ಸುದ್ದಿಯಲ್ಲಿದ್ದ ಸೈಲೆಂಟ್ ಸುನೀಲ ೧೯೯೬ರಲ್ಲಿ ರಾಜಾಜೀನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನದ ಆರೋಪದಲ್ಲಿ ಮತ್ತೆ ಜೈಲ್ ಪಾಲಾದ ಆದಾಗ ಪೋಲಿಸರು ನಡೆಸಿದ್ದ ಎನ್‌ಕೌಂಟರ್‌ನಲ್ಲಿ ಗುರು ಕಿಟ್ಟಿಯನ್ನು ಪೋಲಿಸರು ಮುಗಿಸಿದ್ರು ಈ ಸುದ್ದಿ ಜೈಲಲ್ಲಿದ್ದ ಸೈಲೆಂಟ್ ಸುನೀಲ್ ಕೇಳಿ ಅವಕ್ಕಾಗಿ ಹೋಗಿದ್ದ ಈ ನಂತರ ಜಾಮೀನಿನ ಮೇಲೆ ಹೊರ ಬಂದ ಮೇಲೆ ಕೆ.ಆರ್.ಮಾರ್ಕೇಟ್‌ನ ವೇಡಿ ಜೊತೆ ನಂಟು ಬೆಳೆಸಿಕೊಂಡು ಪಾತಕ ಲೋಕದಲ್ಲಿ ತನ್ನದೇ ಆದ ಕ್ರಿಮಿನಲ್ ಕಥಾನಕಕ್ಕೆ ಮುನ್ನುಡಿ ಬರೆದಿದ್ದ
ಮಾರ್ಕೇಟ್ ವೇಡಿ ಜೊತೆಯಲ್ಲಿ ನಂಟು ಬೆಳೆಸಿಕೊಂಡು ಬೆಂಗ್ಳೂರೇ ಬೆಚ್ಚಿಬೀಳಿಸುವ ರೀತಿಯಲ್ಲಿ ಸೈಲೆಂಟ್ ಸುನೀಲ ನೇಮ್ ಮಾಡಿದ್ದ
ಕಿಟ್ಟಿ ಎನ್‌ಕೌಂಟರ್ ಆದ ನಂತರ ಮಾರ್ಕೇಟ್ ವೇಡಿ ಜೊತೆಯಲ್ಲಿ ಗುರುತಿಸಿಕೊಂಡು ಕೆಆರ್ ಮಾರ್ಕೇಟ್‌ನ ಹಮಾಲಿ ಮಾಫಿಯಾದ ಕಾಸಿನ ಕಾರು-ಬಾರು ನೋಡಿಕೊಂಡಿದ್ದ ಸೈಲೆಂಟ್ ಸುನೀಲನಿಗೆ ಮಾರ್ಕೇಟ್ ಅಡ್ಡೆಯಾಗಿತ್ತು.
ಪುಗುಸೋಟ್ಟೆ ಕಾಸು ಹೆಂಡ-ತುಂಡು, ನೋಡಿದ್ದ ಸೈಲೆಂಟ್ ಸುನೀಲ ಮತ್ತಷ್ಟು ಕೊಲೆಯಂತಹ ಕ್ರೌರ್‍ಯಗಳಲ್ಲಿ ನೇಮ್ ಗೀಚಿ ಬಿಡಬೇಕೆಂಬುವ ಅಮಲಿನಲ್ಲಿದ್ದವನು ೨೦೦೧ರ ಸುಮಾರಿಗೆ ಸುಬ್ರಹ್ಮಣ್ಯ ನಗರದಲ್ಲಿ ಕೊಲೆಯತ್ನದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದವನು ವಿಜಯನಗರದ ಠಾಣಾ ವ್ಯಾಪ್ತಿಯಲ್ಲಿ ರವಿಕುಮಾರ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿ ಜೈಲ್ ಹಕ್ಕಿಯಾಗಿದ್ದವನು ೨೦೦೪ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದ ಸೈಲೆಂಟ್ ಸುನೀಲ್‌ನಿಗೆ ಸುಫಾರಿ ಸಿಕ್ಕಿತ್ತು. ಜಯರಾಜ್ ಕೊತ್ವಾಲ್‌ರಾಮ ಚಂದ್ರ- ಮುಂತಾದವರ ಸಮಕಾಲೀನ ರೌಡಿಯಾಗಿದ್ದ ಬೆಕ್ಕಿನ ಕಣ್ಣು ರಾಜೇಂದ್ರನನ್ನು ಚಾಲುಕ್ಯ ಸರ್ಕಲ್‌ನಲ್ಲಿ ಅಟ್ಟಾಡಿಸಿಕೊಂಡು ಮರ್ಡರ್ ಮಾಡಿ ಮುಗಿಸಿ ಮತ್ತೆ ಜೈಲು ಪಾಲಾದ ಸೈಲೆಂಟ್ ಸುನೀಲನಿಗೆ ಕಲಾಸಿಪಾಳ್ಯದ ರೌಡಿ ಮಾಹೀನ್ ಫೈನಾನ್ಸ್ ಮಾಡಲು ಮುಂದಾಗುತ್ತಾನೆ. ಆದಾಗಲೇ ಸೈಲೆಂಟ್ ಸುನೀಲನ ನೇಮ್ ಬೆಂಗಳೂರಿನ ಭೂಗತ ಜಗತ್ತಿನಲ್ಲಿ ಮೊದಲ ಸಾಲಿನಲ್ಲಿ ಸೇರಿ ಹೋಯ್ತು.. ಹೀಗೆ ಜೈಲಿನಲ್ಲಿದಷ್ಟು ದಿನಗಳು ಕೂಡ ಡೀಲಿಂಗ್ ನಡೆಸುತ್ತಿದ್ದ ಹಫ್ತಾ ವಸೂಲಿ ನಡೆಸಿ ಹುಡುಗರಿಗೊಂದಿಷ್ಟು – ಪೋಲಿಸರಿಗೊಂದಿಷ್ಟು ಕೊಟ್ಟು ಮೀಸೆ ಮುರಿಯುವ ಹೊತ್ತಿಗೆ ಹದಿಹರೆಯದವ ಸುನೀಲ- ಸೈಲೆಂಟ್ ಸುನೀಲನಾಗಿ ಪಾತಕಲೋಕದಲ್ಲಿ ಹೆಸರು ಮಾಡಿದ್ದನು.
ರೌಡಿ ಬೆಕ್ಕಿನ ಕಣ್ಣು ರಾಜೇಂದ್ರನನ್ನು ಮುಗಿಸಿ ಜೈಲ್ ಪಾಲಾಗಿ ಜಾಮೀನಿನ ಮೇಲೆ ಹೊರ ಬಂದು ಮತ್ತೂ ಕೊಲೆ ಮಾಡಿ ಜೈಲ್ ಪಾಲಾದ ಸೈಲೆಂಟ್ ಸುನೀಲ : ರೌಡಿ ಬೆಕ್ಕಿನ ಕಣ್ಣು ರಾಜೇಂದ್ರನನ್ನು ಅಟ್ಟಾಡಿಸಿ ಕೊಲೆ ಮಾಡಿ ಜೈಲ್ ಪಾಲಾಗಿದ್ದ ಸೈಲೆಂಟ್ ಸುನೀಲನ ಹೆಸರು ಕೇಳಿದ ರಿಯಲ್ ಎಸ್ಟೇಟ್, ಟ್ರಾವೆಲ್ಸ್, ವೇಶ್ಯಾವಾಟಿಕೆ, ಕೂಲಿ ಮಾಫಿಯಾ, ಮೀಟರ್ ಬಡ್ಡಿ ಮಾಫಿಯಾ, ಇತ್ಯಾದಿ ಮಂದಿಗಳು ಸೈಲಂಟಾಗಿ ಜೈಲ್ ಎಂಟ್ರಿಕೊಟ್ಟು ಮಂತ್ಲಿ ಮಾಮೂಲು ಫಿಕ್ಸ್ ಮಾಡಿಕೊಂಡಿದ್ದರು. ಮತ್ತೆ ಜಾಮೀನು ಪಡೆದು ಹೊರಬಂದ ಸೈಲೆಂಟ್ ಸುನೀಲ ಬುಲೆಟ್ ರವಿ ಹಾಗೂ ಈತನ ಸಹಚರನೆಂದು ಗುರುತಿಸಿಕೊಂಡಿದ್ದ ಶ್ರೀನಿವಾಸನನ್ನು ಬರ್ಬರವಾಗಿ ಕೊಲೆಗೈದು ತಲೆಮರೆಸಿ ಕೊಂಡಿದ್ದನು ಹೀಗೆ ಈ ಪಾತಕಿಯ ರಕ್ತ ಪಿಪಾಸುವಿನಂತಹ ಬಿಭತ್ಸಕರ ಕ್ರೌರ್ಯಕ್ಕೆ ಬೆಂಗಳೂರು ಭೂಗತ ಪಾತಕಿಗಳ ನೆತ್ತರು ಹರಿದಿದೆ. ಕೊಲೆ, ಕೊಲೆಯತ್ನ, ಅಪಹರಣ , ಡಕಾಯಿತಿ , ಬೆದರಿಕೆ , ಹಪ್ತಾವಸೂಲಿ, ಸೇರಿದಂತೆ ಆ ಹೊತ್ತಿಗೆ ಸರಿ ಸುಮಾರು ೨೫ ಪ್ರಕರಣಗಳ ಸರದಾರನಾಗಿರುವ ಪಾತಕಿ ಸೈಲೆಂಟ್ ಸುನೀಲನ ರಕ್ತ ಚರಿತ್ರೆ ಬೆಂಗಳೂರು ಭೂಗತಲೋಕದಲ್ಲಿ ಮುಂದುವರೆದಿದೆ. ಇಂತಹ ಪಾತಕಿಗೆ ಎಲ್ಲಾ ಮೂಲಗಳಿಂದ ಕೋಟಿ ಕಂತೆಗಳು ಮಂತ್ಲಿ ಮಾಮೂಲಿ ಬರುತ್ತಿದ್ದು ಇದನ್ನು ತಿಂದು ತೇಗಿದವರಲ್ಲಿ ಪೋಲಿಸರು ಇದ್ದಾರೆಂದರೆ ಅಚ್ಚರಿಯಲ್ಲದೇ ಮತ್ತೇನು..?
ಬುಲೆಟ್ ರವಿಯ ಮರ್ಡರ್ ಮಾಡಿ ಜೈಲಿನಿಂದ ಹೊರಬಂದವನು ಜಗ್ಗಿ ಕೊಲೆಗೆ ಸ್ಕೆಚ್ ಹಾಕಿದ್ದಾನೆನ್ನುವ ವದಂತಿ ಇದೆ : ಕೊಲೆ ಮಾಡುವುದು ಜಾಮೀನಿನ ಮೇಲೆ ಹೊರಬರುವುದು ಮತ್ತೆ ಕೊಲೆ – ಮತ್ತೆ ಜೈಲು ಹೀಗೆ ಸೈಲೆಂಟ್ ಸುನೀಲ ರಕ್ತಚರಿತ್ರೆಯಲ್ಲಿ ಭೂಗತ ಪಾತಕಿಯಾಗಿ ತನ್ನ ವಿಧಿಬರಹವನ್ನು ಬರೆದುಕೊಂಡಿದ್ದಾನೆ. ಗಾಯತ್ರಿ ನಗರದ ಎರಡು ಬಲಿಷ್ಠ ಗುಂಪುಗಳ ನಡುವಿನ ದ್ವೇಷ ಇದೀಗ ತಾರಕಕ್ಕೇರಿದೆ. ಜಗ್ಗಿ ತಮ್ಮನನ್ನು ಕೊಲೆ ಮಾಡಿರುವ ಲಕ್ಕಿ ಹಾಗೂ ಕ್ಯಾಪ್ಟನ್ ರಾಜ, ಸೈಲೆಂಟ್ ಸುನೀಲನನ್ನು ಮುಗಿಸಿ ಬಿಡಬೇಕೆಂದು ಜಗ್ಗಿ ಸ್ಕೆಚ್ ಹಾಕಿದ್ದಾರೆ. ಇದಕ್ಕೆ ಜೇಡ್ರಳ್ಳಿ ಕೃಷ್ಣಪ್ಪ, ಅಂಕಲ್ ನಾಯ್ಡು, ಡಾಬಸೀನ, ಪಾಯ್‌ಸನ್ ರಾಮ ಸಾತ್ ನೀಡಿದ್ದಾರೆ. ಇನ್ನೊಂದೆಡೆ ಜಾಮೀನಿನ ಮೇಲೆ ಹೊರ ಬಂದಿರುವ ಸೈಲೆಂಟ್ ಸುನೀಲ, ಲಕ್ಕಿ ಕ್ಯಾಪ್ಟನ್‌ರಾಜ, ಒಂಟೆ ಮತ್ತಿತರರು, ಜಗ್ಗಿಯನ್ನು ಮುಗಿಸಲು ಹೊಂಚುಹಾಕಿ ಕುಳಿತ್ತಿದ್ದಾರಂತೆ ಎಂಬುವುದು ಪೋಲಿಸರ ಕಟ್ಟು ಕಥೆಯೋ ಅಥವಾ ಸತ್ಯವೋ ಗೊತ್ತಿಲ್ಲವಾಗಿದೆ. ಜಗ್ಗಿ ಕಡೆ ಹುಡುಗರೆನಿಸಿಕೊಂಡ, ಲೇಹೌಟ್ ನವೀನ, ಲಾಂಗ್ ಶಿವ , ಕುರಿಸೀನ , ತಿಮ್ಮ, ಮುಂತಾದವರು ಸೈಲೆಂಟ್ ಸುನೀಲನ ಬೇಟೆಗೆ ಕಾದು ಕುಳಿತಿದ್ದಾರೆ. ಒಟ್ಟಿನಲ್ಲಿ ಎರಡು ಗುಂಪುಗಳ ನಡುವಿನ ಮಾರಾಮಾರಿ , ಬರ್ಬರ ಹತ್ಯೆಗೆ ಮುಹೂರ್ತ ಫಿಕ್ಸ್ ಆಗಿಲ್ಲದಿದ್ದರು, ಸೈಲೆಂಟ್ ಸುನೀಲ ಮಾತ್ರ ತರಾವರಿ ವೇಷ ಬದಲಿಸಿಕೊಂಡು ತಲೆಮರೆಸಿಕೊಂಡು ಅಂಡಲೆಯುತ್ತಿದ್ದಾನೆ. ಜಗ್ಗಿ ಹಾಗೂ ಸೈಲೆಂಟ್ ಸುನೀಲನ ಮಾರಾಮಾರಿಯಲ್ಲಿ ಯಾವನೇ ನೆಲಕ್ಕುರುಳಿದರು ಪೋಲಿಸರು ಉಳಿದವನೊಬ್ಬನನ್ನು ಎನ್‌ಕೌಂಟರ್‌ನಲ್ಲಿ ಮುಗಿಸಲು ಮುಹೂರ್ತ ಫಿಕ್ಸ್ ಮಾಡಿದ್ದಾರೆಂಬುದು ಭೂಗತಲೋಕದ ಧ್ವನಿಯಾಗಿತ್ತು..
ಈ ಪಾತಕ ಲೋಕದ ಹೆಜ್ಜೆಗಳೊಂದಿಗೆ ಕಳೆದ ದಿನಮಾನಗಳು ಒಮ್ಮೆಲೆ ಸೈಲೆಂಟ್ ಸುನೀಲನಿಂದ ಬ್ರೇಕ್ ಜಗ್ಗಿಯ ಸಂಗತಿ ದೂರ ಉಳಿಯುತ್ತದೆ, ಇನ್ನೇನು ಈ ಧ್ವೇಷ ತಣಿಯುವ ಹೊತ್ತಿಗೆ ವಿಲ್ಸನ್ ಗಾರ್ಡನ್ ನಾಗನ ಟೆರರ್ ಅಧ್ಯಾಯ ಶುರುವಾಗುತ್ತದೆ..



