ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಚಕ್ರೆ ಅಲಿಯಾಸ್ I ಕ್ರಿಸ್ಟೋಪರ್ ಚಕ್ರವರ್ತಿಯ I ಅತಿರಂಜನೆಯ ಹೆಜ್ಜೆಗಳೂ…I
ಆ ಕಾಲಘಟ್ಟದಲ್ಲಿ ಕುಖ್ಯಾತಿ ಗಳಿಸಿದ್ದ ಪಾತಕ ಪ್ರಪಂಚದ ಎಂ.ಪಿ ಜಯರಾಜ್, ಕಾಟನ್‌ಪೇಟೆ ಪುಷ್ಪ, ಬೆಕ್ಕಿನ ಕಣ್ಣು ರಾಜೇಂದ್ರ ಇನ್ನೂ ಮುಂತಾದವರೊಂದಿಗೆ ಪಾತಕ ಹಾದಿಯಲ್ಲಿ ಹೆಜ್ಜೆಗಳನ್ನು ಹಾಕಿದ್ದು ಇತಿಹಾಸದ ಪುಟಗಳಲ್ಲಿದೆ, ವ್ಯಕ್ತಿಯ ಅಧ್ಯಾಯ ಮುಗಿದ ಮೇಲೆ ಆ ಅಧ್ಯಾಯದ ಪುಟಗಳು ತಿರುವು ಹಾಕಿದರೆ ಬರೀ ನಟೋರಿಯಸ್ ಚಟುವಟಿಕೆಗಳಿದ್ದರು ಅದೊಂದು ಸಮಾಜದಲ್ಲಿ ಕೆಟ್ಟ ಗಳಿಗೆ ಎನ್ನಬಹುದು ಆದರೆ ಚಕ್ರೆಯ ಪುಟಗಳಲ್ಲಿ ಸಮಾಜಸೇವೆ, ಮಾನವೀಯ ಮೌಲ್ಯಗಳು ಅಧಿಕವಾಗಿ ದರ್ಶಿಸಿಕೊಳ್ಳುತ್ತದೆ ಎಂದರೆ ಅವರ ಅನಿವಾರ್ಯತೆಯ ಭೂಗತ ಲೋಕ ಕಾಣ ಸಿಗುತ್ತದೆ.
ದೇಶ ಕಾಯುವ ಯೋಧರೋರ್ವರ ಮಗ ಇದ್ದಕ್ಕಿದ್ದಂತೆ ಸಹವಾಸ ದೋಷದಿಂದ ಭೂಗತ ಲೋಕದಲ್ಲಿ ತಿರುಗಿ ಬಾರದಂತೆ ಸಾಗುತ್ತಾನೆ ಎಂದರೆ ಅದೊಂದು ವಿಷವರ್ತುಲದ ಸಂದಿಗ್ಧತೆ ಆಗದೆ ಇರಲಾರದು, ಪೋಷಕರ ಮುಂದಡಿ ತಲೆಬಾಗುವ ನಿಲ್ಲಬೇಕಾದ ಪ್ರಸಂಗ, ಅತ್ತಕಡೆ ಭೂಗತ ಲೋಕದಲ್ಲಿ ತಲೆಎತ್ತಿ ನಡೆಯಲೇಬೇಕಾದ ಅನಿವಾರ್ಯತೆಗಳ ನಡುವೆ ಮಾನಸಿಕ ಯುದ್ದವನ್ನು ನಡೆಸಿದ್ದರು ಎನ್ನುವುದು ಬಹುತೇಕರ ಗೊತ್ತಿಲ್ಲದ ಸಂಗತಿ.
ಭೂಗತ ಜಗತ್ತಿನಲ್ಲಿ ಯಾರದ್ದೂ ಫರ್ಮನೆಂಟ್ ಮೊಕ್ಕಾಂ ಸಾಧ್ಯವಿಲ್ಲ, ಅವರು ಬಯಸುವುದೇ ಒಂದು, ಆಗುವುದೇ ಇನ್ನೊಂದು, ಜಿಗರ್‌ನಲ್ಲಿದ್ದಾಗ ಎಬ್ಬಿಸಿದ್ದ ಅಲೆ ಜಿಗರ್ ಡೌನ್ ಆದಾಗ ಅಲೆ ಎಂಬುದು ಹಾಗೆಯೇ ಭೂಗತ ಮೊಗಸಾಲೆಯಲ್ಲಿ ಮುದುಡಿಕೊಂಡು ಬಿಡುತ್ತದೆ, ಇಂತಹವರ ಹೆಸರುಗಳು ಇದೀಗಲು ಬೆಂಗಳೂರು ಎಂಬುವ ಬೆಂದಕಾಳೂರು ಮೆಲುಕು ಹಾಕುತ್ತದೆ, ತಾನೋರ್ವ ಕ್ರಿಮಿನಲ್, ನಟೋರಿಯಸ್, ಮರ್ಡರಿಸ್ಟ್ ಎನ್ನುವ ಪದಕಗಳ ಹೊತ್ತಿದ್ದ ಅನೇಕರಲ್ಲಿ ಮಾನವೀಯ ಮೌಲ್ಯಗಳು ಇದ್ದವೇ ಎನ್ನುವ ಲೆಕ್ಕಾಚಾರಗಳು ತುಲನೆಗೈದರೆ ಚಕ್ರೆ ಅಲಿಯಾಸ್ ಕ್ರಿಸ್ಟೋಪರ್ ಚಕ್ರವರ್ತಿ ಹೆಸರು ಮೇಲ್ಪಂಕ್ತಿಯಲ್ಲಿ ಬರುತ್ತದೆ,
ಚಕ್ರೆ ಎನ್ನುವ ಹೆಸರು ಭೂಗತ ಲೋಕದಲ್ಲಿದ್ದರೂ ಚಕ್ರೆಗೆ ಬರ ಬರುತ್ತಾ ಅಂತಹ ಡೆಡ್ಲಿ ದುಷ್ಮನ್‌ಗಳು ಇರಲಿಲ್ಲ, ಯಾವಾಗಲೂ ಲೌಲಿ ಮನಸಿನಿಂದಲೇ ಸ್ನೇಹಿತರಲ್ಲಿ ಸ್ನೇಹಿತನಾಗಿ, ಸಣ್ಣವರಲ್ಲಿ ಸಣ್ಣವರಾಗಿ, ತಮಾಷೆಯ ಬಿರು ಮಾತಿನಲ್ಲಿ ನಗೆಯ ಕಡಲಿನಲ್ಲಿ ಬದುಕನ್ನು ಕಟ್ಟಿಕೊಂಡಿದ್ದ ಚಕ್ರೆ, ಕೆಲ ಖಾಸಗಿ ಮಾಧ್ಯಮಗಳಲ್ಲಿ ನೀಡಿದ್ದ ಸಂದರ್ಶನದಲ್ಲಿ ವಾಸ್ತವದ ಘಟನೆಯನ್ನೇ ಹಾಗೆಯೇ ಯಥಾವತ್ತಾಗಿ ತಂದಿಡುತ್ತಿದ್ದರು. ಆ ಹೊತ್ತಿನ ಭೂಗತ ದುನಿಯಾದಲ್ಲಿ ತಾನೋರ್ವ ಡಾನ್ ಎನಿಸಿಕೊಂಡಿದ್ದರು ಸಹ ಬಡಿದಾಟದಲ್ಲಿ ತಾನು ಕೂಡ ಬಡಿಸಿಕೊಂಡಿದ್ದನ್ನು ಯಾವ ಅಮ್ಮುಗಳಿಲ್ಲದೆ ಹೇಳುತ್ತಿದ್ದ ಚಕ್ರೆ ಅಲಿಯಾಸ್ ಕ್ರಿಸ್ಟೋಫರ್ ಚಕ್ರವರ್ತಿ ಇಸ್ಟರಿ ನಿಜಕ್ಕೂ ಕುತೂಹಲವಾಗಿದೆ, ಅತಿರಂಜನೆಯೂ ಆಗಿದೆ, ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದ ಇಂತಿವರು ನಿರಂತರವಾಗಿ ಬಡ ಬದುಕುಗಳನ್ನು ಗೌರವಿಸಿ ಸಹಾಯವನ್ನು ಮಾಡುತ್ತಿದ್ದರು ಎನ್ನುವುದು ಚಕ್ರೆ ಬದುಕಿನಲ್ಲಿದೆ.
ಅಸಲಿಗೆ ಶ್ರೀರಾಂಪುರದ ರೌಡಿ ಶೀಟರ್ ಆಗಿದ್ದ ಚಕ್ರೆ ಯಾನೇ ಕ್ರಿಸ್ಟೋಫರ್ ಚಕ್ರವರ್ತಿ ಆ ಕಾಲಘಟ್ಟದಲ್ಲಿ ಕುಖ್ಯಾತಿ ಗಳಿಸಿದ್ದ ಪಾತಕ ಪ್ರಪಂಚದ ಎಂ.ಪಿ ಜಯರಾಜ್, ಕಾಟನ್‌ಪೇಟೆ ಪುಷ್ಪ, ಬೆಕ್ಕಿನ ಕಣ್ಣು ರಾಜೇಂದ್ರ ಇನ್ನೂ ಮುಂತಾದವರೊಂದಿಗೆ ಪಾತಕ ಹಾದಿಯಲ್ಲಿ ಹೆಜ್ಜೆಗಳನ್ನು ಹಾಕಿದ್ದು ಇತಿಹಾಸದ ಪುಟಗಳಲ್ಲಿದೆ, ವ್ಯಕ್ತಿಯ ಅಧ್ಯಾಯ ಮುಗಿದ ಮೇಲೆ ಆ ಅಧ್ಯಾಯದ ಪುಟಗಳು ತಿರುವು ಹಾಕಿದರೆ ಬರೀ ನಟೋರಿಯಸ್ ಚಟುವಟಿಕೆಗಳಿದ್ದರು ಅದೊಂದು ಸಮಾಜದಲ್ಲಿ ಕೆಟ್ಟ ಗಳಿಗೆ ಎನ್ನಬಹುದು ಆದರೆ ಚಕ್ರೆಯ ಪುಟಗಳಲ್ಲಿ ಸಮಾಜಸೇವೆ, ಮಾನವೀಯ ಮೌಲ್ಯಗಳು ಅಧಿಕವಾಗಿ ದರ್ಶಿಸಿಕೊಳ್ಳುತ್ತದೆ ಎಂದರೆ ಅವರ ಅನಿವಾರ್ಯತೆಯ ಭೂಗತ ಲೋಕ ಕಾಣ ಸಿಗುತ್ತದೆ.
ದೇಶ ಕಾಯುವ ಯೋಧರೋರ್ವರ ಮಗ ಇದ್ದಕ್ಕಿದ್ದಂತೆ ಸಹವಾಸ ದೋಷದಿಂದ ಭೂಗತ ಲೋಕದಲ್ಲಿ ತಿರುಗಿ ಬಾರದಂತೆ ಸಾಗುತ್ತಾನೆ ಎಂದರೆ ಅದೊಂದು ವಿಷವರ್ತುಲದ ಸಂದಿಗ್ಧತೆ ಆಗದೆ ಇರಲಾರದು, ಪೋಷಕರ ಮುಂದಡಿ ತಲೆಬಾಗುವ ನಿಲ್ಲಬೇಕಾದ ಪ್ರಸಂಗ, ಅತ್ತಕಡೆ ಭೂಗತ ಲೋಕದಲ್ಲಿ ತಲೆಎತ್ತಿ ನಡೆಯಲೇಬೇಕಾದ ಅನಿವಾರ್ಯತೆಗಳ ನಡುವೆ ಮಾನಸಿಕ ಯುದ್ದವನ್ನು ನಡೆಸಿದ್ದರು ಎನ್ನುವುದು ಬಹುತೇಕರ ಗೊತ್ತಿಲ್ಲದ ಸಂಗತಿ.
ತೊಂಬತ್ತರ ದಶಕದಲ್ಲಿ ಬೆಂಗಳೂರು ಭೂಗತ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದ ಶ್ರೀರಾಂಪುರದ ರೌಡಿ ಶೀಟರ್ ಕ್ರಿಸ್ಟೋಫರ್ ಚಕ್ರವರ್ತಿ ಅಲಿಯಾಸ್ ಚಕ್ರೆ ಪೊಲೀಸರಿಗೆ ಅತೀವ ತಲೆನೋವಾಗಿದ್ದವರು, ಡೆಡ್ಲಿ ಸೋಮನ ಸಹಚರ ರಾಜಶೇಖರನನ್ನು ಶಂಕರಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮರ್ಡರ್ ಮಾಡಿ ಜೈಲು ಸೇರಿಕೊಂಡ ತರುವಾಯ ಕ್ರಿಮಿನಲ್ ಆಕ್ಟಿವಿಟಿಗಳಲ್ಲಿ ತನ್ನದೇ ಆದ ಖದರ್ ಹುಟ್ಟು ಹಾಕಿಕೊಂಡಿದ್ದರು.
ಜೈಲು ಸೆರೆಯಿಂದ ಹೊರಬಂದ ಮೇಲೆ ಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸ್ಥಳೀಯ ಕಾರ್ಪೋರೇಟರ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಜನಮಾನಸದಲ್ಲಿ ನಾಯಕತ್ವವನ್ನು ಬೆಳೆಸಿಕೊಂಡಿದ್ದರು, ವಿದ್ಯಾರ್ಥಿ ಜೀವನಕ್ಕೆ, ಬಡ ಸೂರುಗಳಿಗೆ ಸ್ಪಂದನೆ, ಸ್ಥಳೀಯ ಏರಿಯಾಗಳ ಜನಜೀವನದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಬಹುತೇಕ ಯಶಸ್ಸು ಕೂಡ ಆಗಿದ್ದರು. ಇವರು ಚುನಾವಣೆಗೆ ಸ್ಪರ್ಧಿಸಿ ಮತಯಾಚನೆಯನ್ನು ಹೆಲಿಕಾಪ್ಟರ್ ಮೂಲಕ ಚುನಾವಣೆಯ ಕರಪತ್ರಗಳನ್ನು ಹಂಚಿ ಸದ್ದು ಮಾಡಿದ್ದ ಅತಿರಂಜಿತ ವ್ಯಕ್ತಿತ್ವದ ಚಕ್ರೆಯನ್ನು ಅಪ್ಪಿಕೊಂಡವರೇ ಬಹುತೇಕರು,
ರಾಜಧಾನಿ ಬೆಂಗಳೂರಿನ ಭೂಗತ ಇತಿಹಾಸದಲ್ಲಿ ರೌಡಿಸಂ ಮಾಡಿದ್ದವರು ಅನೇಕರಲ್ಲಿ ಬಹುತೇಕರು ಆಯಸ್ಸಿನ ಅರ್ಧದಲ್ಲಿಯೇ ಬಾರದ ಊರಿಗೆ ಪಯಣಿಸಿದ್ದರು, ಆದರೆ ಚಕ್ರೆ ಅಲಿಯಾಸ್ ಕ್ರಿಸ್ಟೋಪರ್ ಚಕ್ರವರ್ತಿ ಅಂತಹವರು ಮಾನವೀಯ ಮೂಲತೆಗಳನ್ನು ಅಪ್ಪಿಕೊಂಡು ಜನಸೇವೆಯಲ್ಲಿಯೇ ನೆಮ್ಮದಿ ಕಂಡಿದ್ದರು ಆದರೆ ವಿಧಿ ಲಿಖಿತ ಎಂಬಂತೆ ಮೆದುಳಿನ ರಕ್ತಸ್ರಾವದಿಂದ ಬ್ರೈನ್ ಸ್ಟ್ರೋಕ್ ಆಗಿ ಚಿಕತ್ಸೆ ಫಲಕಾರಿಯಾಗದೆ ತನ್ನ ಅತಿರಂಜನೆಯ ರೌಡಿಸಂ ಹಾಗೂ ಮನುಷ್ಯ ಮತದ ಪಯಣಕ್ಕೆ ನಿಲುಗಡೆ ಇಟ್ಟಿದ್ದರು.
ಗಾರ್ಡನ್ ಸಿಟಿಯ ಭೂಗತ ಫೀಲ್ಡ್‌ನಲ್ಲಿರುವ ಚಕ್ರೆಯ ಹೆಜ್ಜೆಗಳು ರೋಚಕತೆಯನ್ನು ಕಟ್ಟಿ ಕೊಟ್ಟಿದೆ,
ಅಂತಹ ಮಾಹಿತಿಗಳನ್ನು ಇಲ್ಲಿ ಹೆಚ್ಚಾಗಿ ವಿವರಿಸದೆ ಜನಸಮುದಾಯದ ಕೊಂಡಿ ಕಳಚಿ ಬಾರದ ಲೋಕಕ್ಕೆ ಪಯಣಿಸಿದ ಚಕ್ರೆ ಅಲಿಯಾಸ್ ಕ್ರಿಸ್ಟೋಪರ್ ಚಕ್ರವರ್ತಿ ಇನ್ನೂ ನೆನಪು ಮಾತ್ರ. ಅವರೊಂದಿಗೆ ಇದ್ದ ಸಮಯವಷ್ಟು ಇಂದಿಗೂ ಮೆಲುಕು ಹಾಕುವ ಸ್ನೇಹಿತರು, ಪರಿಚಯಸ್ಥರು ನಗುವಿನ ಹೊನಲು ತಿಳಿಸುತ್ತಾರೆ ಹಾಗೆಯೇ ಡಾನ್ ಎನ್ನುವ ಗಂಭೀರತೆಯನ್ನು ವಿವರಿಸುವುದು ನೋಡಿದಾಗ ಆತನೋರ್ವ ವಿಶೇಷ ವ್ಯಕ್ತಿತ್ವದ ಅಜಾನುಬಾಹು ಎನ್ನುವುದು ಅರಿವಿಗೆ ಬರುತ್ತದೆ. ಬದುಕಿನ ಜರ್ನಿಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ ಅದರಲ್ಲಿ ಇವರ ಜರ್ನಿ ಸಿನಿಮಾ ಮಾಡುವಷ್ಟು ಕೌತುಕಗಳ ಘಟನೆಗಳು ಘಟಿಸಿ ಹಾಗೆಯೇ ಸರಿದು ಬಿಡುತ್ತದೆ.




