September 25, 2026

I ’31 ಡೇಸ್ ‘ ಎಂಬುವ I ವಿಭಿನ್ನ ಚಿತ್ರ ಸಂದೇಶದ I ಜರ್ನಿಯಲ್ಲಿ I

0
p 31-Days-3a033470-7746-11f0-8cab-33c580c7c62c

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ’31 ಡೇಸ್ ‘ ಎಂಬುವ I ವಿಭಿನ್ನ ಚಿತ್ರ ಸಂದೇಶದ I ಜರ್ನಿಯಲ್ಲಿ I

ಸಿನಿಮಾ ಮಂದಿಗಳಲ್ಲಿರುವ ಹುರುಪು ಕಡಿಮೆ ಆಗಿಲ್ಲ, ಹಳೆಯ ನಿರ್ಮಾಪಕರ ಸೋಲುಗಳನ್ನು ದರ್ಶಿಸಿದ್ದರೂ ಹೊಸ ನಿರ್ಮಾಣದ ತಂಡಗಳು ನಾವು ಗೆಲ್ಲುತ್ತೇವೆ ಹೊಸತನಗಳ ಕಟ್ಟಿಕೊಡುತ್ತೇವೆ, ಸ್ಟಾರ್ ನಟ, ನಟಿಯರ ನಡುವೆಯೂ ಹೊಸಬರನ್ನು ಬೆಳ್ಳಿತೆರೆಯಲ್ಲಿ ಪರಿಚಯಿಸುತ್ತೇವೆ, ವಿಭಿನ್ನ ರೀತಿಯ ಪ್ರಯೋಗಗಳನ್ನು ಯಾವುದೇ ಆತಂಕವಿಲ್ಲದೆ ಚಿತ್ರ ಸಮಾಜದ ಮುಂದಡಿ ತರುತ್ತೇವೆ ಎನ್ನುವ ಸವಾಲುಗಳು ಈ ಹೊತ್ತಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿದ್ದರೂ ಚಿತ್ರ ನಿರ್ಮಾಣಕ್ಕೆ ಮೊದಲ ಕ್ಲ್ಯಾಫ್ ಮಾಡುವ ಸಾಲಿನಲ್ಲಿ ” 31 ಡೇಸ್ ” ಎಂಬ ಚಲನಚಿತ್ರ ಬಂದು ನಿಲ್ಲುತ್ತದೆ,

ಈ ಕುರಿತಾಗಿ ರೀವ್ಹೀವ್ಸ್ ಅಲ್ಲದ ಒಟ್ಟು ಅಭಿಪ್ರಾಯವನ್ನು ಇಲ್ಲಿ ಲಗತ್ತಿಸಬೇಕಾಗಿದೆ, ಹೌದು ಈ ಚಿತ್ರದ ನಟ ನಟ ನಿರಂಜನ್ ಶೆಟ್ಟಿ ನಾಯಕನಾಗಿ ಅಭಿನಯಿಸಿದ್ದರೆ, ನಟಿ ಪ್ರಜ್ವಲಿ ಸುವರ್ಣ ನಾಯಕಿಯಾಗಿ ದರ್ಶಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ವಿ.ಮನೋಹರ್‌ರವರ ೧೫೦ನೇ ಚಿತ್ರದ ಸಂಗೀತ ಪಯಣವಾಗಿದೆ,

ಮೊನ್ನೆ ಶಿವಮೊಗ್ಗದ ಶುಭಂ ಹೊಟೇಲ್‌ನ ಆದಿ ಗ್ರ್ಯಾಂಡ್ ಹಾಲ್‌ನಲ್ಲಿ ಶುಭಂ ಶೈಕ್ಷಣಿಕ ಸಂಸ್ಥೆಯವರ ಸಹಯೋಗದಿಂದ ಚಿತ್ರ ವೀಕ್ಷಕರೊಂದಿಗೆ ‘ಕಿರು ಚಿತ್ರ ಸಂವಾದ’ ಎರ್ಪಡಿಸಿದ್ದರು, ಈ ನಂತರ ಭಾರತ್ ಸಿನಿಮಾಸ್‌ನಲ್ಲಿ ’31 ಡೇಸ್ ‘ ಚಿತ್ರ ನೋಡುವುದಾಗಿತ್ತು, ಅಲ್ಲಿ ಸಿನಿಮಾದಲ್ಲಿ ನಟಿಸಿದ್ದ ತಾರಾಬಳಗವಿತ್ತು, ಚಿತ್ರ ನಿರ್ದೇಶಕ ರಾಜ ರವಿಕುಮಾರ್ ಅವರು ಇದ್ದರು,

ಈ ಚಿತ್ರ ಕಥೆಯನ್ನು ಹೆಣೆದಿದ್ದು ಕಡಿಮೆ ಬಜೆಟ್ ಕಾರಣಕ್ಕೋ.. ಅಥವಾ ವಿಭಿನ್ನ ಪ್ರಯೋಗಕ್ಕೋ.. ಅಥವಾ ಹೊಸತನಗಳನ್ನು ಕಟ್ಟಿಕೊಡುವ ಅವಸರದೊಳು ಸಿನಿಮಾ ಚಿತ್ರೀಕರಣ ಮುಗಿಸಲಾಗಿದೆ, ಅವರು ಅಂದುಕೊಂಡಂತೆ ಪೋಸ್ಟ್ ಪ್ರೋಡಕ್ಷನ್, ತಾಂತ್ರಿಕ ಕೆಲಸಗಳನ್ನು ಪೂರೈಸಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲು ಬಿಟ್ಟಿದೆ, ಇದರ ಮೊದಲ ಪ್ರೀಮಿಯರ್ ಶೋ ಭಾರತ್ ಸಿನಿಮಾಸ್ ನಲ್ಲಿ ನೋಡಿ, ಒಮ್ಮೆಲೆ ಅಚ್ಚರಿ ತರಿಸುವಂತೆ ಹಾಗೂ ಚಿತ್ರ ನೋಡುಗರಿಗೆ ನಾಚುವಂತೆ ಮಾಡುತ್ತದೆ, ’31 ಡೇಸ್ ‘ ಚಿತ್ರದಲ್ಲಿ ಮೊದಲ ಭಾಗದ ಹದಿನೈದು ದಿನಗಳ ಕಾಲ ನಾಯಕ ನಟ, ನಟಿಯರಿಬ್ಬರೇ ಅನಾಯಾಸವಾಗಿ ಮುಗಿಸುತ್ತಾರೆ, ಇಲ್ಲಿಗೆ ಸಿನಿಮಾದ ಮಧ್ಯಂತರ ಬಿಡುವಿನೊಳಗೆ ಅಡಲ್ಟ್ ಬೇಸ್ ಅನುಭವಗಳು ಶುರುವಿಡುತ್ತದೆ, ಇದೇನು ಲೈಂಗಿಕ ಸಿನಿಮಾವೇ..?! ಎನ್ನುವಷ್ಟರ ಮಟ್ಟಿಗೆ ಸ್ಟೋರಿ, ಡೈಲಾಗ್ಸ್‌ಗಳು, ಸಂಗೀತ ನಿರ್ದೇಶಕ ವಿ.ಮನೋಹರ್‌ರವರ ಇನ್ ಸ್ಟ್ಯಾಂಜ ಹಾಡುಗಳು ಮತ್ತು ತರಿಸುತ್ತದೆ, ಹೀಗೆ ಉನ್ಮಾದತೆಗಳಲ್ಲಿ ಚಿತ್ರ ವೀಕ್ಷಕರಿಗೆ ತಳ್ಳಿ ಬಿಡುವ ಸೀನ್‌ಗಳು ಹಳ್ಳಿಯಿಂದ ನಗರ-ಪಟ್ಟಣಗಳಿಗೆ ಗುಳೆ ಬರುವ ಯುವ ಸಮುದಾಯಗಳು ಬೆಂಗ್ಳೂರು ಎನ್ನುವ ಮಾಯನಗರಿ ಹೇಗೆಲ್ಲಾ ಹಾದಿ ತಪ್ಪುವವರಿಗೆ ತಪ್ಪಿಸಿ ಬಿಡುತ್ತದೆ ಎನ್ನುವುದನ್ನು ತೋರಿಸಲಾಗುತ್ತದೆ,

ಈ ಹದಿನೈದು ದಿನಗಳ ಕಾಲದ ಕಥಾ ಹಂದರದಲ್ಲಿ ನಾಯಕ ನಟ ನಿರಂಜನ್ ಶೆಟ್ಟಿ ತನ್ನ ಕಲಾ ಕೌಶಲ್ಯವನ್ನು ಬಿತ್ತಿದ್ದರು ನಾಯಕ ನಟಿ ಪ್ರಜ್ವಲಿ ಸುವರ್ಣರವರು ಈ ಪಾತ್ರವನ್ನು ಮಾಡಲು ಒಪ್ಪಿರುವುದು, ಈ ಮೂಲಕ ಕಲೆಯಷ್ಟೆ ಬಿತ್ತಿದ್ದೇನೆ ಎನ್ನುವ ಗಟ್ಟಿ ನಿರ್ಧಾರಗಳು ತಳೆದಿರುವುದು ಮೆಚ್ಚುಗೆಯ ಮಾತಾಗಿದೆ, ಈ ಪ್ರತಿ ಸನ್ನೀವೇಶಗಳು ಆಕೆಯ ಪಾತ್ರವನ್ನು ಮತ್ತೆಲ್ಲಿಗೋ ಸೆಳೆದರೂ ಮುಂದಿನ ಅಧ್ಯಾಯ ಮುಖ್ಯ ಟ್ರ್ಯಾಕ್‌ಗೆ ತಂದು ನಿಲ್ಲಿಸುತ್ತದೆ, ಈ ಚಿತ್ರದ ಐಕಾನ್‌ನಂತೆಯೇ ದರ್ಶಿಸಿರುವ ನಟಿ ಪ್ರಜ್ವಲಿ ಸುವರ್ಣಾ ಬೋಲ್ಡ್‌ನೆಸ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಹೊಸಬರಾದರು ’31 ಡೇಸ್ ‘ ನ ಮೊದಲ ಅಧ್ಯಾಯದ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ, ಈ ಮೂಲಕ ಚಿತ್ರ ನಿರ್ಮಾಣ ಸಂಸ್ಥೆ ಇದೊಂದು ಹೊಸ ಪ್ರಯೋಗ ಎಂದಿರುವುದು ಅವರ ದೃಷ್ಟಿಕೋನ ಆಗಿದ್ದರು ಪ್ರೇಕ್ಷಕರ ಅಭಿಪ್ರಾಯವೂ ಬಲು ಮುಖ್ಯವಾಗಿದೆ,

ಒಟ್ಟಾರೆ ಕೃಷ್ಣನ ಪ್ರೀತಿಯಂತೆ, ‘ಪ್ರೀತಿ ಎಂಬುದು ಬರೀಯ ಮೋಹವಲ್ಲ’ ಪ್ರೀತಿ ಎಂಬುದು ಖಾಲಿ ಭ್ರಮೆಯು ಅಲ್ಲ, ಪ್ರೀತಿ ಎಂಬುದು ಮಾಯೆಯೂ ಅಲ್ಲ, ಪ್ರೀತಿ ಎಂಬುದು ಭಾವದ ಪ್ರತೀಕವಲ್ಲ, ಅದೊಂದು ನಿಶ್ಚಲ ಮನಸುಳ್ಳ ಸ್ವಚ್ಚಂದತೆಯಲ್ಲಿ ಮುಕ್ತತೆಯಿಂದ ಹಾರಾಡುವ ಹಕ್ಕಿ ಇದ್ದಂತೆ, ಇದಕ್ಕೆ ಯಾವ ಕಡಿವಾಣವಿಲ್ಲ, ಅಡೆತಡೆಗಳಿಲ್ಲ, ಇದನ್ನು ಮರೆತು ಕೇವಲ ಕ್ಷಣಿಕ ಸುಖಮಾನಗಳೇ ಅಂದರೆ ಕಾಮದ ತೃಷೆಯೇ ಪ್ರೀತಿ ಎಂದು ತಮ್ಮ ನೆಲ, ಜಲ, ಕೌಟುಂಬಿಕ ಪ್ರೀತಿ ಸಾಂಗತ್ಯಗಳು, ಪರಂಪರೆಗಳು ಸಂಸ್ಕೃತಿ, ಕೃಷಿಗಳನ್ನು ಮರೆವ ಯುವ ಸಮುದಾಯಕ್ಕೆ ’31 ಡೇಸ್ ‘ ಸಿನಿಮಾ ಪಾಠವಾಗಬಲ್ಲದಾಗಿದೆ, ಸಿನಿಮಾದ ಮೊದಲ ಅಧ್ಯಾಯ ಏನೇ ಇದ್ದರು ಎರಡನೇ ಅಧ್ಯಾಯ ಪ್ರೇಕ್ಷಕನ ಮನಸಿನೊಳಗೆ ಹುಟ್ಟುವ ಅನೇಕತೆಯ ಪ್ರಶ್ನೆಗಳಿಗೆ ಉತ್ತರ ಖಂಡಿತ ಸಿಗುತ್ತದೆ, ಇದರಲ್ಲಿ ಕೆಲವೇ ಪಾತ್ರಧಾರಿಗಳಿದ್ದರು ನಾಯಕ ನಟ ನಿರಂಜನ್ ಶೆಟ್ಟಿ, ನಾಯಕ ನಟಿ ಪ್ರಜ್ವಲಿ ಸುವರ್ಣ ತಮ್ಮಗಳ ಪಾತ್ರಗಳಿಗೆ ನಿಜಕ್ಕೂ ಜೀವ ತುಂಬಿದ್ದಾರೆ, ಈ ಮೊದಲೇ ಹೇಳಿದಂತೆ ಬೋಲ್ಡ್‌ನೆಸ್ ಪಾತ್ರ ನಿರ್ವಹಿಸಿರುವ ನಾಯಕ ನಟಿ ಪ್ರಜ್ವಲಿ ಸುವರ್ಣಾ ರವರು ಮುಂದಿನ ಚಿತ್ರಗಳಲ್ಲಿ ಅವಕಾಶಗಳನ್ನು ಮಾಡಿಕೊಂಡಿರುವುದು ಈ ಚಿತ್ರ ನೋಡಿದರೆ ಗೊತ್ತು ಮಾಡಿಕೊಳ್ಳಬಹುದಾಗಿದೆ,

ಇಂತಹದೊಂದು ವಿಭಿನ್ನ ಸ್ಟೋರಿಗೆ ಕ್ಲ್ಯಾಫ್ ಮಾಡಿರುವ ಚಿತ್ರ ನಿರ್ದೇಶಕ ರಾಜ ರವಿಕುಮಾರ್ ಅವರು ಗೆದ್ದಿದ್ದಾರೆ ಎಂದೇಳಬಹುದು ಹಾಗೆಯೇ ಚಿತ್ರವನ್ನು ನೋಡಿ ಚಿತ್ರ ಸಂದೇಶದ ತಳಸ್ಪರ್ಶಿಯನ್ನು ಅರಿತುಕೊಳ್ಳಿ ಎಂದು ಅಂಬೋಣಿಸುತ್ತಾ ಚಿತ್ರ ತಂಡಕ್ಕೆ ಸೂರ್ಯಗಗನ ಶುಭ ಹಾರೈಸುತ್ತದೆ.

Spread the love

Leave a Reply

Your email address will not be published. Required fields are marked *

error: Content is protected !!