September 26, 2026

I ಎನ್ವಿ ಈರೇಶ್ ಕಾಂಗ್ರೆಸ್ ಸೇರ್ಪಡೆ ಖಚಿತ I ಅಧಿಕೃತ ಘೋಷಣೆ ಬಾಕಿ I

0
1756698090839-scaled-e1756724509455 (1)
I ಎನ್ವಿ ಈರೇಶ್ ಕಾಂಗ್ರೆಸ್ ಸೇರ್ಪಡೆ ಖಚಿತ I ಅಧಿಕೃತ ಘೋಷಣೆ ಬಾಕಿ I
ಶಿಕಾರಿಪುರ : ತಾಲ್ಲೂಕಿನ‌ ಉದ್ಯಮಿ ಅಖಿಲ ಕರ್ನಾಟಕ ವೀರಶೈವ ಮಹಾಸಭಾದ   ಮಾಜಿ ತಾಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಂತರ ಅಖಿಲ ಕರ್ನಾಟಕ ವೀರಶೈವ ಮಹಾಸಭಾ ದ ರಾಜ್ಯದ ನಿರ್ದೇಶಕರಾಗಿ  ಸಾಮಾಜಿಕ ಕಳಕಳಿ ಹೊಂದಿರುವ ಕಲೆಯನ್ನು ಆರಾಧಿಸುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಿಸುವ ಕನಸು ಹೊತ್ತ ಕನಸುಗಾರ  ವೀರಶೈವ ಮಹಾಸಬಾದ  ರಾಜ್ಯ ನಿರ್ದೇಶಕರಾಗಿ ಈಶ್ವರ್ ಫೌಂಡೇಶನ ಸಂಸ್ಥಾಪನ ಅಧ್ಯಕ್ಷರಾಗಿ  ಬಿಜೆಪಿ ಪಕ್ಷದಲ್ಲಿ ಹೆಚ್ಚಿನ ಅವಧಿಯಲ್ಲಿ  ಗುರುತಿಸಿಕೊಂಡಿದ ಎನ್.ವಿ ಈರೇಶ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ ಎನ್ನುವ ಪೋಟೋ ಸಖತ್ ವೈರಲ್ ಆಗಿತ್ತು. ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಿಲ್ಲ. ಎನ್ನುವ ಮಾಹಿತಿಗಳು ಲಭ್ಯವಾಗಿದ್ದುಈ ಕುರಿತು ಎನ್ ವಿ ಈರೇಶ್ ಅವರು ಮಾಧ್ಯಮ ಸ್ನೇಹಿತರೊಂದಿಗೆ  ಮಾತನಾಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ವಿವಿಧ ಸಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಾನು  ಅನೇಕ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದ್ದು ಅಧಿಕಾರ ಸಿಕ್ಕಲ್ಲಿ ಹೆಚ್ಚಿನ ಜನಸೇವೆಯನ್ನ ಮಾಡುವ ಕನಸನ್ನು ಹೊಂದಿರುವ ನನಗೆಕಾಂಗ್ರೆಸ್ ಪಕ್ಷದ ಮೂಲಕ ಮುಂದಿನ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲು ನಮ್ಮ ಬೆಂಬಲಿಗರು ಸ್ನೇಹಿತರ ಸಲಹೆ ಅಭಿಮಾನಿಗಳ ಒತ್ತಾಯದ ಮೇರೆಗೆಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಅವಕಾಶ  ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಸಮಾಜಸೇವೆ ಮಾಡಲು ಅಧಿಕಾರ ಮುಖ್ಯ ಆ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ಕೊಡುವ ಬರವಸೆ ನೀಡಿದ್ದು ಹಾಗಾಗಿ
ಈ ಕುರಿತು ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಚೆರ್ಚಿಸಿದ್ದೇನೆ ಅಧಿಕೃತವಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ  ಎಂದು ತಮ್ಮ ಮನದಾಳದ ಮಾತುಗಳನ್ನು ತೋಡಿಕೊಂಡರು.
Spread the love

Leave a Reply

Your email address will not be published. Required fields are marked *

error: Content is protected !!