Saturday, 31 October 2026 — Suryagagana
03:55 PM
ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I
ಅಂಕಣ

I ಶಿವಮೊಗ್ಗದ ಕಲಾ ಸಾಂಸ್ಕೃತಿಕ I ನೆಲೆಗೆ ಜೀವನಾಡಿ I ಶಿವಕುಮಾರಯ್ಯ ಮಾರವಳ್ಳಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್‌ I ಶಿವಮೊಗ್ಗದ ಕಲಾ ಸಾಂಸ್ಕೃತಿಕ I ನೆಲೆಗೆ ಜೀವನಾಡಿ I ಶಿವಕುಮಾರಯ್ಯ ಮಾರವಳ್ಳಿ I ರಂಗಭೂಮಿಯಲ್ಲಿ ಪ್ರಕಾರಗಳು ಹಲವು, ರಂಗಭೂಮಿಯನ್ನು ಅಧ್ಯಯಿಸಲು ನಿಂದರೆ ಅದರ ಮೂಲ ಒಳಹರಿವು ಜನಪದವನ್ನು ತೋರಿಸಿಕೊಡುತ್ತದೆ ಅಲ್ಲದೆ ಅದರ ವಿಸ್ತಾರತೆಯನ್ನು ಕಾಣಬಹುದು ಇಂತಹದೊಂದು ವೈಶಿಷ್ಟ್ಯಪೂರ್ಣ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್‌

I ಶಿವಮೊಗ್ಗದ ಕಲಾ ಸಾಂಸ್ಕೃತಿಕ I ನೆಲೆಗೆ ಜೀವನಾಡಿ I ಶಿವಕುಮಾರಯ್ಯ ಮಾರವಳ್ಳಿ I

ರಂಗಭೂಮಿಯಲ್ಲಿ ಪ್ರಕಾರಗಳು ಹಲವು, ರಂಗಭೂಮಿಯನ್ನು ಅಧ್ಯಯಿಸಲು ನಿಂದರೆ ಅದರ ಮೂಲ ಒಳಹರಿವು ಜನಪದವನ್ನು ತೋರಿಸಿಕೊಡುತ್ತದೆ ಅಲ್ಲದೆ ಅದರ ವಿಸ್ತಾರತೆಯನ್ನು ಕಾಣಬಹುದು ಇಂತಹದೊಂದು ವೈಶಿಷ್ಟ್ಯಪೂರ್ಣ ಅನಾದಿಯ ಸಾಂಸ್ಕೃತಿಕ ನೆಲೆ ಮುಂದೆ ರೂಪುಗೊಳ್ಳುತ್ತಾ ಮನರಂಜನೆಯ ಹೊಸ್ತಿಲಲ್ಲಿ ಅನಾವರಣಗೊಳ್ಳುತ್ತದೆ, ಬರ ಬರುತ್ತಾ ಅತಿರಂಜನೆಯ ಗೀಳಿಗೆ ಸಿಲುಕಿ ರಂಗಭೂಮಿಯನ್ನು ಪೋಷಿಸುತ್ತಿದ್ದ ನಾಟಕ ಕಂಪನಿಗಳು ಅವನತಿಯ ಕೂಪಕ್ಕೆ ನಲುಗಿದ್ದರು ರಂಗಭೂಮಿ ತನ್ನದೆ ಆದ ಜೀವಂತಿಕೆಯ ಮರುಹುಟ್ಟು ಪಡೆಯುತ್ತಲೇ ಇದೆ. ಹೀಗೆ ರಂಗಭೂಮಿಯ ಅವತರಣಿಕೆಯನ್ನು ವಿಸ್ತೃತವಾಗಿ ವಿವರಿಸುವ ಗೋಜಿಗೆ ಹೋಗದೆ ಸಣ್ಣದೊಂದು ಟಿಪ್ಪಣಿಯನ್ನು ತಮ್ಮ ಮುಂದಿಡುತ್ತಿದ್ದೇನೆ

ಇಂತಹ ಶ್ರೇಷ್ಠ ರಂಗಭೂಮಿಯ ಪರಂಪರೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡು ಊರು-ಕೇರಿ-ಜಗುಲಿಗಳಲ್ಲಿ ನಾಟಕ ಕಲೆಯನ್ನು ಜಾಗೃತಿಯ ದಿಸೆಯಲ್ಲಿ ದಶಕಗಳ ಸಾಲುಗಳ ತನಕ ಸಾಧಿತಗೊಳಿಸಿದವರು ಇದೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾರವಳ್ಳಿ ಗ್ರಾಮದ ಶಿವಕುಮಾರಯ್ಯ,

ಇಂತಿವರು ಹುಟ್ಟಿದ್ದು ೧೯೭೦ರ ಇಸವಿಯಲ್ಲಿ ತಂದೆ ಬಸವಲಿಂಗಯ್ಯ ಹಾಗೂ ತಾಯಿ ಮಹಾದೇವಮ್ಮ ಎಂಬುವ ದಂಪತಿಗಳಿಗೆ ನಾಲ್ಕನೆಯ ಪುತ್ರರಾಗಿ ಪ್ರಾಥಮಿಕ ಹಂತದ ಶಿಕ್ಷಣವನ್ನು ೧೯೭೬ರಲ್ಲಿ ಮಾರವಳ್ಳಿಯಲ್ಲಿಯೇ ಪೂರ್ಣಗೊಳಿಸುತ್ತಾರೆ. ೧೯೮೧ರಿಂದ ಶಿವಮೊಗ್ಗದ ಬಸವೇಶ್ವರ ಕಾಲೇಜಿನಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ವ್ಯಾಸಾಂಗ ಮುಂದುವರೆಸುತ್ತಾರೆ.ಅವರೇ ಹೇಳುವಂತೆ ರಂಗಭೂಮಿಯ ನಂಟು ಬಸೆಯಲು ಮುನ್ನುಡಿ ಬರೆದಿದ್ದು ಮಾರವಳ್ಳಿಯ ಶಾಲೆಯಲ್ಲಿ ರೂಪುಗೊಳಿಸಿದ್ದ ನಾಟಕದಲ್ಲಿ ಓಲೆಕಾರ ಪಾತ್ರ. ಈ ತರುವಾಯ ಶುರುವಾದ ನಾಟಕದ ಕಲೆ ಮೇರೆತ್ತರಕ್ಕೆ ನಿಲ್ಲುವಂತೆ ಮಾಡಿತ್ತು, ಇದಕ್ಕೆ ಬಲವಾದ ಕಾರಣವೇನೆಂದರೆ ಕಲೆ ಇವರಿಗೆ ಕುಟುಂಬದ ಒಳಾಂಗಣದಲ್ಲಿ ಗೂಡು ಮಾಡಿತ್ತು ಎನ್ನುವುದು.

ಹಾಗೆ ನೋಡಿದರೆ ಗ್ರ್ರಾಮೀಣ ರಂಗಭೂಮಿಯಿಂದ ಬಂದ ಕಲಾವಿದರಲ್ಲಿ ನೈಜತೆ, ನೈಪುಣ್ಯತೆ, ಕಲಾ ಪ್ರಕಾರಗಳು ಬಳುವಳಿಯಾಗಿಯೇ ಬದುಕಿನ ಜೊತೆ,ಜೊತೆ ಹೆಚ್ಚಾಗಿ ಸಾಗಿ ಬಂದಿರುತ್ತದೆ
ಹೀಗಾಗಿ ಶಿವಕುಮಾರಯ್ಯ ಮಾರವಳ್ಳಿಯವರಿಗೆ ತನ್ನ ಹುಟ್ಟೂರು, ಅಲ್ಲಿನ ಸಂಸ್ಕಾರವೇ ಗುರುವಾಗಿ ಪೋಷಿಸಿತ್ತು. ಈ ಮಾತ್ರದಿಂದಲೇ ವೀರಗಾಸೆ, ಕರಡಿ ಕುಣಿತ, ಡೊಳ್ಳು ಕುಣಿತಗಳಲ್ಲಿ ಭಾಗವಹಿಸುವುದು ಲಕ್ಷ್ಯಂ ಭಕ್ಷಯಾಮಿ ಹಾಗೂ ಕಾಲೇಜು ನಾಟಕದಲ್ಲಿ ನಿರ್ವಹಿಸಿದ ಶಾಸಕನ ಪಾತ್ರಗಳು ತನ್ನನ್ನು ಸ್ವಯಂ ಕಲೆಯನ್ನು ಮೈಗೂಡಿಸಿಕೊಳ್ಳುವಂತೆ ಮಾಡಿತ್ತು ಎನ್ನುತ್ತಾರೆ.

ಮೂಲ ಹರಿವು ಜಾನಪದವೇ ಆಗಿದ್ದರಿಂದ ಇವರಿಗೆ ರಂಗಭೂಮಿ ಹೊಸತೇನು ಅನಿಸಲಿಲ್ಲ, ಅದರ ವಿಸ್ತಾರ ಅಗಾಧವಾಗಿದ್ದರು ಆಳಕ್ಕಿಳಿವ ಆಸಕ್ತಿಗಳು ಹಳ್ಳಿಗಾಡಿನಿಂದ ದಿಲ್ಲಿಯವರೆಗೆ ನಾಟಕದ ವೇದಿಕೆಗಳಲ್ಲಿ ಹಲವಾರು ಪಾತ್ರಗಳಿಗೆ ಒಳಹೊಕ್ಕಿ ಕಲೆಯನ್ನು ಸಾರಿಸುವಂತೆ ಮಾಡಿತ್ತು. ಗ್ರಾಮೀಣ ರಂಗಭೂಮಿಯ ಒಂದು ಮುಖ್ಯ ಪ್ರಕಾರವಾದ ಹಳ್ಳಿಯ ನಾಟಕಗಳ ತಳಹದಿ ಶಿವಕುಮಾರಯ್ಯನವರನ್ನು ನೂರಾರು ನಾಟಕಗಳಲ್ಲಿ ಪಾತ್ರಧಾರಿಯಾಗುವಂತೆ ಪ್ರೇರೆಪಿಸಿ ಸ್ಪೂರ್ತಿಯ ಜೀವಸೆಲೆಯಾಯಿತು, ಮುಂದುವರೆದಂತೆ ಇವರೇ ರಚಿಸಿದ ಭಾಮತಿ ಮಾಸ್ತಿಕಲ್ಲು ಹುಡುಕೋಣ ಬನ್ನಿ ನಾಟಕಗಳನ್ನು ನಿರ್ದೇಶಿಸುತ್ತಾರೆ. ಈ ಮೂಲಕ ನಾಟಕ ರಚನೆಕಾರರು, ನಿರ್ದೇಶಕರು, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ರಂಗ ಸಂಘಟಿತರಾಗಿ ಹೊರಹೊಮ್ಮುವ ವಿಶೇಷ ಬಹುಮುಖಿ ಶಿವಕುಮಾರಯ್ಯ ಮಾರವಳ್ಳಿಯವರಿಗೆ ೨೦೦೩ರಲ್ಲಿ ರಾಜ್ಯ ಪ್ರಶಸ್ತಿ, ೨೦೦೬ರಲ್ಲಿ ರಾಷ್ಟ್ರ ಪ್ರಶಸ್ತಿ, ೨೦೦೯ರಲ್ಲಿ ರಾಜ್ಯ ಪ್ರಶಸ್ತಿಗಳು ಲಭಿಸುತ್ತದೆ,

ಇವರು ಜೀವದುಂಬಿ ನಿರ್ವಹಿಸಿದ ಪಾತ್ರಗಳು ಚಿತ್ತಸಮಾಜವನ್ನು ಒಮ್ಮೆಲೆ ಬಡಿದೆಬ್ಬಿಸುವಂತೆ ಮಾಡಿತಿತ್ತು ಅಲ್ಲದೆ ಜನಮೆಚ್ಚುಗೆಯನ್ನು ಗಳಿಸಿಯೇ ಗೌರವ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡೇ ವಾಪಸ್ಸಾಗುತ್ತಿದ್ದ ಶಿವಕುಮಾರಯ್ಯ ಮಾರವಳ್ಳಿಯವರು ರಂಗಕರ್ಮಿಯ ಲೋಕದಲ್ಲಿ ಅನ್ಯ ಕಲಾವಿದರಿಗೆ ಸ್ಪರ್ಧಾತ್ಮಕವಾಗಿ ಕಾಣುವುದಕ್ಕೆ ಶುರುವಾಗಿದ್ದರು, ಶಿವಮೊಗ್ಗದಿಂದ ಮುಂಬೈತನಕ ನೂರಾರು ರಂಗಪ್ರದರ್ಶನಗಳಲ್ಲಿ ಕಾಣ ಸಿಗುವ ಇಂತಿವರು ರಣದುಂದುಬಿ ಚಾಣಕ್ಯ ಮುದುಕನ ಮದುವೆ ಕುದುರೆ ಮೊಟ್ಟೆ ಲಚ್ಚಿ ಧರ್ಮದ ಸುಳಿಯಲ್ಲಿ ಅಹಾ ಬ್ರಹ್ಮಾಚಾರಿ ಸಂಗೊಳ್ಳಿ ರಾಯಣ್ಣ ಗಾಂಧಾರಿ ಹುಡುಕೋಣ ಬನ್ನಿ ಇನ್ನು ಹತ್ತು ಹಲವು ಸೇರಿಕೊಂಡಿವೆ.
ಒಟ್ಟಾರೆ ನಾಟಕಗಳಲ್ಲಿ ಪ್ರಾದೇಶಿಕತೆ ಸದಭಿರುಚಿಯನ್ನು ಮೇಳೈಸಿ ಸಾಮಾಜಿಕ ಜಾಗೃತಿಗಳನ್ನು ನಾಟಕಗಳ ಅಭುನಯದ ಮೂಲಕ ಕಟ್ಟಿಕೊಟ್ಟ ಅಪ್ರತಿಮ ರಂಗಭೂಮಿಯ ರಂಗಕರ್ಮಿ ಶಿವಕುಮಾರಯ್ಯ ಮಾರವಳ್ಳಿಯವರು ೨೦೦೩ರಲ್ಲಿ ಡಾ.ಶೈಲಜಾ ಹೊಸೆಳ್ಳೇರರವರೊಂದಿಗೆ ವಿವಾಹವಾಗುತ್ತಾರೆ.

ಹೀಗೆ ಸುಖಿ ಬದುಕಿನ ಜೊತೆಗೆ ರಂಗಭೂಮಿಯನ್ನು ಅಪ್ಪಿಕೊಂಡು ಸಾಗುತ್ತಿದ್ದ ಇವರು ಸಿನಿಮಾರಂಗಕ್ಕೂ ಪ್ರವೇಶಿಸಿ ಕಿರುತೆರೆ.ಚಲನಚಿತ್ರಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದುಕೊಟ್ಟಿದ್ದಾರೆ ಅವರ ಶ್ರೀಮತಿಯವರ ಸಹಕಾರದೊಂದಿಗೆ ಮತ್ತೊಂದು ಪ್ರಯತ್ನದಡಿ ಶ್ರೀ ಮಧ್‌ಭಗವದ್ಗೀತಾ ಎಂಬುವ ಕನ್ನಡ ಚಲನಚಿತ್ರವನ್ನು ನಿರ್ಮಿಸಿ ಬೆಳ್ಳಿತೆರೆಗೆ ತರುವ ನಿಟ್ಟಿನಲ್ಲಿ ಕಲಾ ಹೋರಾಟಗಳನ್ನು ನಡೆಸಿರುವ ಶಿವಕುಮಾರಯ್ಯ ಮಾರವಳ್ಳಿಯವರು ಶಿವಮೊಗ್ಗದ ಕಲಾ ಸಾಂಸ್ಕೃತಿಕ ನೆಲೆಗೆ ಜೀವನಾಡಿಯಾಗಿದ್ದಾರೆ.

Gara

Gara

Leave a comment

error: Content is protected !!