Sunday, 20 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸಿನಿಮಾ

I ಇದೇನು ಕಲ್ಟ್ ಚಿತ್ರದ ಪ್ರಮೋಷನ್ನೋ.? I ರಾಜಕೀಯ ಲಾಭದಾಯಕದ ಕ್ಲೀನ್ ಟಚ್ಚೋ..?! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಇದೇನು ಕಲ್ಟ್ ಚಿತ್ರದ ಪ್ರಮೋಷನ್ನೋ.? I ರಾಜಕೀಯ ಲಾಭದಾಯಕದ ಕ್ಲೀನ್ ಟಚ್ಚೋ..?! I ಕಲೆ ಎನ್ನೋದು ಎದೆಮಾನಸಕ್ಕೆ ಸಂಬಂಧಿಸಿದ್ದು ಅದೊಂದು ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆಗಳ ಸಾಂಗತ್ಯ ಬೆಸೆವ ಹಾಗೂ ಮನರಂಜಿಸುವ ಮಾಧ್ಯಮ, ಇದು ಬಹುಷ್ಯಃ ಬಹುತೇಕರಿಗೆ ಅರ್ಥವಾಗದಿರದು,…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಇದೇನು ಕಲ್ಟ್ ಚಿತ್ರದ ಪ್ರಮೋಷನ್ನೋ.? I ರಾಜಕೀಯ ಲಾಭದಾಯಕದ ಕ್ಲೀನ್ ಟಚ್ಚೋ..?! I

ಕಲೆ ಎನ್ನೋದು ಎದೆಮಾನಸಕ್ಕೆ ಸಂಬಂಧಿಸಿದ್ದು ಅದೊಂದು ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆಗಳ ಸಾಂಗತ್ಯ ಬೆಸೆವ ಹಾಗೂ ಮನರಂಜಿಸುವ ಮಾಧ್ಯಮ, ಇದು ಬಹುಷ್ಯಃ ಬಹುತೇಕರಿಗೆ ಅರ್ಥವಾಗದಿರದು, ಈ ಮಾಧ್ಯಮವನ್ನು ಸ್ವಚ್ಚಂದತೆಯ ಸ್ವತಂತ್ರಕ್ಕೆ ಬಿಟ್ಟು ಬಿಡಬೇಕು, ಅದಾಗ ಮಾತ್ರವೇ ಕಲೆ ಈ ನೆಲದ ಎಂಟು ಕೋಟಿ ಕನ್ನಡಿಗರ ಸೂರಿನ ಜಗಲಿಗಳಿಗೆ ತಲುಪುತ್ತದೆ, ಆದರೆ ಇದಕ್ಕೆ ಅವಕಾಶ ಕೊಡುತ್ತಾರೆಯೇ..? ಎನ್ನುವ ಅಸಲಿ ವರಾತಗಳಲ್ಲೊಂದು ಬೆಳವಣಿಗೆ ಶಿವಮೊಗ್ಗದಲ್ಲಿ ನಡೆದಿದೆ,

ಹೌದು ಮುಂದಿನ ಜನವರಿ-೨೩ಕ್ಕೆ ಬಿಡುಗಡೆಯ ಹೊಸ್ತಿಲಲ್ಲಿರುವ ಸಚಿವ ಜಮೀರ್ ಅಹಮದ್‌ರವರ ಸುಪುತ್ರ ಝೈದ್ ಖಾನ್ ನಾಯಕ ನಟನೆಯ ಕಲ್ಟ್ ಚಿತ್ರದ ಫ್ರೀ ಪ್ರಮೋಷನ್ ಶಿವಮೊಗ್ಗದಲ್ಲಿ ಭರ್ಜರಿಯಾಗಿಯೇ ನಡೆದು ಅತೀವ ವಿವಾದಕ್ಕೆ ಎಡೆಮಾಡಿಕೊಟ್ಟಿದೆ, ಇಂತಹದೊಂದು ಸಂಗತಿಯ ವಿಸ್ತೃತವಿಲ್ಲಿದೆ, ಅಸಲಿಗೆ ಪ್ರಮೋಷನ್‌ಗೂ ಮುನ್ನದಿ ನಗರದ ರಾಯಲ್ ಆರ್ಕಿಡ್ ಹೋಟೆಲ್ ಸಭಾಂಗಣದಲ್ಲಿ ಕಲ್ಟ್ ಕನ್ನಡ ಚಿತ್ರ ತಂಡ ಪತ್ರಿಕಾಗೋಷ್ಠಿಯನ್ನು ಎರ್ಪಡಿಸಲಾಗಿತ್ತು, ಆದರೆ ಈ ಪತ್ರಿಕಾಗೋಷ್ಠಿಯಲ್ಲಿ ಅಗತ್ಯವಾಗಿ ಎಂ.ಶ್ರೀಕಾಂತ್‌ರವರಿಗೆ ಸಂಪರ್ಕವಿರುವ ಪತ್ರಕರ್ತರನ್ನು ಮಾತ್ರ ಕರೆಯಲಾಗಿತ್ತು, ಎನ್ನುವುದು ಖಾತ್ರಿಗೊಳಿಸಿದ ಒಂದಷ್ಟು ಪತ್ರಕರ್ತರು ಇದು ಅಗತ್ಯವಿತ್ತೇ..? ಎಂದು ಪ್ರಶ್ನಿಸಿಕೊಂಡಿದ್ದಾರೆ,

ಇನ್ನೂ ಚಿತ್ರ ತಂಡ ಕರೆಯಲಾಗಿದೆ ಎನ್ನುವ ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ಝೈದ್ ಖಾನ್ ಹಾಗೂ ನಾಯಕಿ ನಟಿ ಮಲೈಕಾ ಟಿ ವಸುಪಾಲ್‌ರವರು ಉಪಸ್ಥಿತರಿದ್ದಿದ್ದು ಬಿಟ್ಟರೆ ಇನ್ನುಳಿದವರು ಎಲ್ಲಾ ಕಾಂಗ್ರೆಸ್ ಪಾರ್ಟಿಯ ಮುಖಂಡರು ಹಾಗೂ ಮುಂದಿನ ಅಸೆಂಬ್ಲಿ ಅಕಾಂಕ್ಷಿ ಧುರೀಣರು ಮುಖವಾಣಿಯಲ್ಲಿ ದರ್ಶಿಸಿದ್ದು ಒಂದು ಕಲಾ ಮಾಧ್ಯಮವನ್ನು ಅದ್ಯಾಗೆ ದುರುಪಯೋಗ ಪಡಿಸಿಕೊಳ್ಳಬಹುದು ಎನ್ನುವುದನ್ನು ಬಹಿರಂಗವಾಗಿಯೇ ಅಲ್ಲಿ ಮುಗಿಬಿದ್ದು ಸಾಕ್ಷೀಕರಿಸಿಕೊಂಡಿದ್ದಾರೆ, ಇಂತಹ ಬೆಳವಣಿಗೆಗಳು ಸ್ಯಾಂಡಲ್‌ವುಡ್ ಯಾನೆ ಚಂದನವನದ ದುರಂತದ ಪರಮಾವಧಿ ಎನ್ನಬಹುದಾಗಿದೆ, ಇದಕ್ಕೆ ಕಲ್ಟ್ ಚಿತ್ರ ತಂಡ ಅವಕಾಶ ಮಾಡಿಕೊಡದೆ ಇದ್ದಿದ್ದರೆ ಅದು ಕಲಾ ಆರೋಗ್ಯಕರ ಸಂಗತಿಯಾಗುತಿತ್ತು,

ಕಲ್ಟ್ ಚಿತ್ರದ ಶೂಟಿಂಗ್ ಚಿತ್ರೀಕರಣವನ್ನು ಯಾವುದೇ ಅನುಮತಿಗಳಿಲ್ಲದೆ ಗಂಗಾವತಿಯ ಸಾಣಾಪುರ, ರಂಗಾಪುರದ ತುಂಗಾಭದ್ರಾ ದಡದಲ್ಲಿ ನಡೆಸಿತ್ತು ಎನ್ನುವ ಕಾರಣಕ್ಕೆ ಸ್ಥಳೀಯ ಅರಣ್ಯ ಇಲಾಖಾಧಿಕಾರಿಗಳು ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ಕೈಗೊಂಡಿತ್ತು, ಇಂತಹುದೇ ದಿಸೆಯಲ್ಲಿ ದ್ರೋಣ್ ಆಪರೇಟರ್ ಮೇಲೆ ಹಲ್ಲೆ ನಡೆಸಲಾಗಿತ್ತು ಎನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬಂದಿತ್ತು, ಇಂತಹ ಸಾಲೋ ಸಾಲು ಎಡವಟ್ಟುಗಳ ನಡುವೆ ಶಿವಮೊಗ್ಗದಲ್ಲಿ ರಾಜಕೀಯ ಪ್ರೇರಿತವಾದ ಪ್ರಮೋಷನ್ ನಡೆದು ವಿವಾದಕ್ಕೊಳಗಾಗಿರುವುದು ಬಹುಷ್ಯಃ ಚಿತ್ರತಂಡ ಇನ್ನಾದರು ಎಚ್ಚೆತ್ತುಕೊಳ್ಳದೆ ಹೋದರೆ ಅದೊಂದು ಪ್ರಮಾದವಾಗುವುದರಲ್ಲಿ ಯಾವುದೇ ಅನುಮಾನಿತಗಳಿಲ್ಲವಾಗಿದೆ,

ಹೌದು ಚಿತ್ರತಂಡಕ್ಕೆ ಪ್ರಮೋಷನ್ ಮಾತ್ರವೇ ಬೇಕಾಗಿರುವುದು, ಆದರೆ ಶಿವಮೊಗ್ಗದ ಕೆಲ ರಾಜಕೀಯ ನಾಯಕರಿಗೆ ಬೇಕಾಗಿದ್ದು ಈ ಮೂಲಕ ರಾಜಕೀಯ ರಂಗಿನ ಪ್ರಚಾರ ಅದಕ್ಕಾಗಿ ಪೋಟೋಗೆ ಮುಗಿಬಿದ್ದಿರುವ ಸನ್ನಿವೇಶಗಳು, ಜೆಸಿಬಿನಲ್ಲಿ ಬಂದ ಹಾರ-ತುರಾಯಿಗಳಿಗೆ ನಾಯಕ, ನಾಯಕ ನಟಿಗಿಂತಲೂ ತಲೆತೂರಿಸಿ ನಿಂದು ಕೈ-ಬೀಸಿ ಬೈಕ್ ರ್‍ಯಾಲಿನಲ್ಲಿ ಪಾಲ್ಗೊಂಡಿರುವುದು ನೋಡಿದರೆ ಇದೊಂದು ಅಪಹಾಸ್ಯವಲ್ಲದೆ ಮತ್ತೇನು..? ಕಲಾರಂಗವನ್ನು ಇಕ್ಕಟ್ಟಿಗೆ ಸಿಲುಕಿಸಿ ಇದೊಂದು ಕಾಂಗ್ರೆಸ್ ಪಕ್ಷದ ರಾಜಕೀಯಕ್ಕೆ ಸೀಮಿತಗೊಳಿಸಲು ಪ್ರಯತ್ನಿಸಿರುವುದು ಅವಮಾನದ ಅಸೀಮ ಪ್ರತೀಕವಾಗಿದೆ,

ಮುಂದಿನ ಅಸೆಂಬ್ಲಿ ಚುನಾವಣೆಗಳ ಗುರಿ, ಇದೀಗಲೇ ಶಿವಮೊಗ್ಗ ಉತ್ತರ-ದಕ್ಷಿಣ ಎನ್ನುವ ಎರಡು ಕ್ಷೇತ್ರಗಳಾಗಿ ಬಿಡುತ್ತದೆ, ಮುಸ್ಲೀಂ ಸಮುದಾಯ ಹಾಗೂ ಹಿಂದೂಳಿದ-ದಲಿತ ಸಮುದಾಯಗಳು ಅಧಿಕವಿರುವ ದಕ್ಷಿಣ ಕ್ಷೇತ್ರದಲ್ಲಿ ಯಾವುದೇ ಅವಕಾಶ ಸಿಗಲಿ ಅದಕ್ಕೊಂದು ರಾಜಕೀಯ ರಂಗಿನ ಟಚ್ಚು ಕೊಡಬೇಕು ಎನ್ನುವ ಇರಾದೆಯಲ್ಲಿ ಜೆಡಿಎಸ್ ಪಕ್ಷದಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಪಕ್ಷದ ತ್ವರಿತಗತಿಯಲ್ಲಿ ಮುಂದಿನ ಅಸೆಂಬ್ಲಿ ಅಭ್ಯರ್ಥಿಯಾಗಿ ಶಾಸಕನಾಗಬೇಕು ಎನ್ನುವ ರಾಜಕೀಯ ಉದ್ದೇಶಕ್ಕೆ ಕಲ್ಟ್ ಚಿತ್ರದ ಪ್ರಮೋಷನ್ ಬಳಸಿಕೊಳ್ಳಲಾಗಿದೆ ಎನ್ನುವುದು ಊರಿನ ಚರ್ಚೆಯಾಗುತ್ತಿರುವುದು, ಚಿತ್ರ ತಂಡಕ್ಕೆ ಹಾಗೂ ನಾಯಕ ನಟ ಝೈದ್ ಖಾನ್‌ರವರಿಗೆ ತಿಳಿದಿಲ್ಲವಾಗಿದೆ,

ಸಚಿವ ಜಮೀರ್ ಅಹಮದ್ ಖಾನ್‌ರವರು ತಮ್ಮ ಸುಪುತ್ರ ಝೈದ್ ಖಾನ್‌ರವರಿಗೆ ಕಿವಿಮಾತು ಹೇಳಲಿ, ಕಲಾ ಪ್ರಪಂಚ ಜಾತಿ, ಧರ್ಮಗಳ ಮೀರಿದ್ದು ಅದೊಂದು ಕನ್ನಡಿಗರ ನಾಡಿ ಮಿಡಿತ, ರಾಜಕೀಯ ಮಿಡಿತವಲ್ಲ ಎನ್ನುವುದು ಮನವರಿಕೆ ಮಾಡಿಕೊಡಲಿ, ಇನ್ನೂ ಝೈದ್ ಖಾನ್ ನಟಿಸಿರುವ ಕಲ್ಟ್ ಚಿತ್ರ ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಲಿ ಎನ್ನುವುದು ಈ ವರದಿಯ ಆಶಯವಾಗಿದೆ.

Gara Srinivas

Gara Srinivas

Leave a comment

error: Content is protected !!