ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಅಂದು ಹರಿದು ಹೋಗಿದ್ದ ಸಾಕ್ಸ್ ಹಾಕಿಕೊಂಡಿದ್ದು I ಗೃಹಮಂತ್ರಿ ಆರಗ ಜ್ಞಾನೇಂದ್ರ I
ರಾಜಕೀಯ ಎಂದೊಡೆ ಅದೊಂದು ಅಧಿಕಾರದ ಹಪಾಹಪಿ, ಭ್ರಷ್ಠಾಚಾರ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿತ ಮತದಾರರು, ಪಕ್ಷ ಬೇದ, ಧರ್ಮಬೇದ, ಜಾತಿ ಬೇದ, ತತ್ವ-ಆದರ್ಶಗಳ ಪ್ರತಿಪಾದನೆ, ಪಂಥೀಯ ವಾದಗಳ ತಳಹದಿಯಲ್ಲಿಯೇ ಮಿಂದು ಹೋದ ಜನಪ್ರತಿನಿಧಿಗಳನೇಕರಿಗೆ ಜೀವಪರ ನಿಲುವುಗಳ ಕಾಳಜಿಯೇ ಮರೆತು ಹೋದಂತಿದೆ,
ಇಂತಹ ಸಾಲುಗಳ ವಾಸ್ತವತೆಯ ಕ್ಲಿಷ್ಟಕರ ವ್ಯವಸ್ಥೆಯಲ್ಲಿ ಒಂದಿಷ್ಟು ಮನಸುಗಳು ಯಾವ ಪಕ್ಷವಾದರೇನು ನ್ಯಾಯ-ಅನ್ಯಾಯಗಳನ್ನು ತುಲನೆಗೈದು ಪಕ್ಷಾತೀತವಾಗಿ ನಡೆದುಕೊಳ್ಳುತ್ತಾರೆ, ಯಾವ ಸಂದರ್ಭಗಳು ಎದುರಾದರು ಸರಿಯೇ ಮಾನವತಾ ವಾದವನ್ನು ಅನುಸರಿಸುತ್ತಲೇ ಶ್ರೀ-ಸಾಮಾನ್ಯರತ್ತ ಚಿತ್ತವರಿಸುವ ಮನುಷ್ಯ ಪ್ರೀತಿಗಳನ್ನು ನಾವು ದರ್ಶಿಸಬಹುದಾಗಿದೆ.
“ಕ್ರಿಯಾ ಸಿದ್ದಿ ಸತ್ವೇ ಭವತಿ ಮಹತಾಂ ನೋಪಕರಣೆ” ಎನ್ನುವ ಸಂಘದ ಗೀತೆಯ ತಾತ್ಪರ್ಯ ಅನೇಕ ಬಿಜೆಪಿ ನಾಯಕರಿಗೆ ತಿಳಿದಿಲ್ಲ, ಸಮರ್ಥನೆ, ತುಷ್ಠೀಕರಣ ನೀತಿಗಳಿಂದ ರಾಜಕೀಯ ಲಾಭ-ಲೋಭಗಳಿಗಾಗಿಯೇ ನಿಜ ಜೀವನದ ಡ್ರಾಮಿಸ್ಟ್ ಸೋಗಿನಲ್ಲಿಯೇ ತಮ್ಮ ರಾಜಕೀಯ ಸ್ಥಾನ-ಮಾನಗಳನ್ನು ಗಿಟ್ಟಿಸಿಕೊಳ್ಳುವ ಅವಸರಗಳಲ್ಲಿಯೇ ಇರುವುದನ್ನು ಜನತೆ ನೋಡಿದ್ದಾಗಿದೆ.
ಭಾರತದಂತಹ ಅತೀ ದೊಡ್ಡ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಜನ್ಮತಳೆಯುತ್ತಲೇ ಇವೆ, ಇನ್ನೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖ ಪಕ್ಷಗಳಾಗಿದ್ದರೂ ಪ್ರಾದೇಶಿಕತೆಯ ಬಿರುಗಾಳಿಗೆ ಬಹು ರಾಜ್ಯಗಳಲ್ಲಿ ರಾಷ್ಟ್ರೀಯ ವಾದಗಳಿಗೆ ಮನ್ನಣೆ ಸಿಕ್ಕಿಲ್ಲ, ಇದೀಗ ಕರ್ನಾಟಕದ ಸರಧಿಯಲ್ಲಿ ಪ್ರಾದೇಶಿಕತೆ ಬಲಿಷ್ಠಗೊಳುತ್ತಿರುವ ಬಗ್ಗೆ ರಾಜಕೀಯ ವಿಮರ್ಶೆಗಳು, ತರ್ಕಗಳು ಈ ಭಾರಿ ವೇಗಪಡೆದುಕೊಂಡಿದೆ.*
ಇಂತಹ ಅಸಲಿ ಸಂಗತಿಗಳಲ್ಲಿ ಲಭಿಸುವ ರಾಜಕೀಯ ಆಡಳಿತ ಅವಕಾಶಗಳು ಜನಾಭಿವೃದ್ದಿಗಾಗಿ, ಜನಕ್ಷೇಮಕ್ಕಾಗಿ ಬಳಕೆಯಾದರೆ ನಿಜಕ್ಕೂ “ಭಗವದ್ಗೀತೆ” ಯಲ್ಲಿರುವಂತೆ “ಜನಸೇವೆಯೇ ಜನಾರ್ಧನ ಸೇವೆ” ಎನ್ನುವ ಪದಕ್ಕೆ ಅರ್ಥ ಸಿಗಬಹುದು.
ಇಂತಿಷ್ಟು ರಾಜಕೀಯ ಬುಡಮಟ್ಟದ ಸಂಗತಿಗಳನ್ನು ಒಂದಿಷ್ಟು ಸಾಲುಗಳಲ್ಲಿ ತಿಳಿಸಿ ರಾಜಕೀಯದಲ್ಲಿದ್ದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾದ ಯಾವ ಸಂದರ್ಭಗಳಲ್ಲಿಯೂ ಶ್ರೀ-ಸಾಮಾನ್ಯರಿಂದ ದೂರ ಉಳಿಯದೇ, ಸೋಲನ್ನು ಅನುಭವಿಸಿದಾಗಲೂ ಅದೇ ಮನುಷ್ಯ ಪ್ರೀತಿಗಳೊಂದಿಗೆ ಸದಾ ನಗುವಿನ ಹೊನಲಿನಲ್ಲಿ ಕ್ಷೇತ್ರದ ಜನತೆಯನ್ನು ಅಪ್ಪುವ ಮಾತೃ ಮನಸಿನ ಜನಪ್ರತಿನಿಧಿಯಾಗಿ, ಇಡೀ ರಾಜಕೀಯ ಕೃತಿಯಲ್ಲಿ ಸರಳ -ಸಜ್ಜನಿಕೆಯ ರಾಜಕಾರಣಿಯಾಗಿ ಮಾದರಿಯಾಗಿರುವ “ಆರಗ ಜ್ಞಾನೇಂದ್ರ”ರವರು ಅಗ್ರ ಪುಟಗಳಾಗಿರುವುದನ್ನು ಸಾಬೀತುಗೊಳಿಸಿದ್ದಾರೆ.
ಇನ್ನೂ ಸಾಹಿತ್ಯಲೋಕಕ್ಕೆ ಎಂದಿಗೂ ಅಳಿಸಲಾಗದ ಶಾಸನ ಬರೆದ ಕವಿಮಾನ್ಯರು, ಲೇಖಕರು, ಸಮಾಜವಾದಿ ಚಿಂತನೆಗಳ ದುರೀಣರು. ಕೃಷಿಯಲ್ಲಿ ಅನನ್ಯ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕರು, ನಿತ್ಯ ಹಸಿರಿನ ಒಡಲಿನೊಳಗೆ ಸಾತ್ವಿಕತೆಯ ಸಾರುವ ತೀರ್ಥಹಳ್ಳಿಯ ತುಂಬು ಮಲೆನಾಡಿನ ನೆಲೆಯಲ್ಲಿ ಯಾವ ಅಬ್ಬರಗಳಿಲ್ಲದೆ ರಾಜಕೀಯದ ಇತಿಹಾಸವನ್ನು ಸರಳವಾಗಿ ಸೃಷ್ಠಿಸಿದವರು ಆರಗ ಜ್ಞಾನೇಂದ್ರರವರು.
ಹೀಗೆ ಬರೆಯುವ ಅಭಿವ್ಯಕ್ತಿಯಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ, ಇನ್ನಾವ ಲಾಭಗಳು ಬೇಕಿಲ್ಲ, ಯಾವುದು ಸರಿ-ತಪ್ಪುಗಳ ವಿಶ್ಲೇಷಣೆ, ಓರ್ವ ಬರಹಗಾರನಿಗೆ ಇರಲೇಬೇಕು, ಹಾಗೂ ಆ ಬರಹ ಮುಕ್ತವಾಗಿರಬೇಕು ಎನ್ನುವ ಗಟ್ಟಿ ನಿಲುವುಗಳನ್ನು ಹೊಂದಿರುವ ಮನಸು ಇದಾಗಿದೆ ಎಂದು ಅಭಿಪ್ರಾಯಿಸಿ, ಯಾವಾಗಲೂ ಧನಾತ್ಮಕ ಚಿಂತನೆಗಳಿಗಷ್ಟೆ ಒತ್ತು ನೀಡಿದರೆ ಅದೊಂದು ಅಪೂರ್ಣ ಎನ್ನುವ ಸಾಲನ್ನು ಎಂದಿಗೂ ಹೇಳುತ್ತಲೇ ಇರುತ್ತೇನೆ ಇಲ್ಲಿಯೂ ಕೂಡ ರಾಜಕೀಯದ ಒಳಹರಿವುಗಳಲ್ಲಿರುವ ನಕರಾತ್ಮಕ ಹಪಾಹಪಿತನವನ್ನು ಸ್ವಲ್ಪಮಟ್ಟಿಗೆ ಲಗತ್ತಿಸಿದ್ದೇನೆ.
ಮುಂದುವರೆದಂತೆ ತೀರ್ಥಹಳ್ಳಿಯ ಕ್ಷೇತ್ರವ್ಯಾಪಿ ಆರಗ ಜ್ಞಾನೇಂದ್ರರವರು ಕಟ್ಟಿಕೊಂಡ ನಿಸ್ವಾರ್ಥ ಸಂಘಟಿತ ಹೆಜ್ಜೆಗಳು ಜಿಲ್ಲೆಯಲ್ಲೂ ಪ್ರತಿಧ್ವನಿಸಿವೆ, ಶಾಸಕರಾಗಿಯೂ ಜನಮನ್ನಣೆಯ ಪ್ರಸಿದ್ದಿಯನ್ನು ಹೆಪ್ಪುಗಟ್ಟಲು ಬಿಡದೆ ತಮ್ಮ ವಿಶೇಷ ನಡೆ-ನುಡಿಯಿಂದ ಹೋರಾಟಗಳ ದನಿಯಿಂದಲೇ ಒಟ್ಟು ಸಮಾಜಪರ ದನಿಯಾಗಿ ನಿಂದವರು. ಬಹುಪಾಲು ಕ್ಷೇತ್ರದ ಅಭಿವೃದ್ದಿಗೆ ಪಟತೊಟ್ಟು ಶ್ರಮಿಸಿದವರು, ಇಲ್ಲಿನ ಪ್ರಮುಖ ಬೆಳೆಯಾದ ಅಡಕೆ ಕೃಷಿಯ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿದವರು, ಹೀಗೆ ಆರಗ ಜ್ಞಾನೇಂದ್ರವರು ಜನಶಕ್ತಿಯಾಗಿ ರೂಪುಗೊಂಡಿರುವ ಮಾತ್ರಕ್ಕೆ ಅವರಿಗೆ ಅಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸಚಿವರಾದ ಆರಗ ಜ್ಞಾನೇಂದ್ರವರಿಗೆ ಪವರ್ ಪುಲ್ ಮಿಲ್ಸ್ “ಗೃಹಖಾತೆ”ಯನ್ನು ನೀಡಿರುವುದು ಶ್ಲಾಘನೀಯ ಎನ್ನಬಹುದು.
ಈ ಖಾತೆಯಿಂದಲೇ ಕರುನಾಡಿನ ಜನತೆಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಯಾವ ಪಕ್ಷಬೇದಗಳಿಲ್ಲದೆ ನ್ಯಾಯವನ್ನು ನೀಡಬಹುದಾಗಿದೆ ಹಾಗೂ ಇಂತಹದೊಂದು ಖಾತೆಯೇ ನೀಡುತ್ತಾರೆ ಎನ್ನುವ ನೀರಿಕ್ಷೆಗಳಿಲ್ಲದ ಆರಗ ಜ್ಞಾನೇಂದ್ರರವರಿಗೆ ಅವರ ಮಾದರಿ ರಾಜಕೀಯವನ್ನು ಗಮನಿಸಿ ಸಕಾಲದಲ್ಲಿ ಬಹುದೊಡ್ಡ ಜವಾಬ್ದಾರಿ ನೀಡಿರುವುದು ಇಡೀ ರಾಜಕೀಯ ವಲಯದಲ್ಲಿ ಯಾವ ಬಿನ್ನಾಭಿಪ್ರಾಯಗಳಿಲ್ಲದೆ ಆಸ್ವಾದಿಸಿದೆ. ಯಾವಾಗ ಖಾತೆ ಹಂಚಿಕೆಯಲ್ಲಿ “ಗೃಹ ಖಾತೆ” ಆರಗ ಜ್ಞಾನೇಂದ್ರರವರಿಗೆ ನೀಡಿದ ಅಧಿಕೃತ ಘೋಷಣೆ ಹೊರಬಿತ್ತೋ ಅದಾಗಲೇ ಜನಸಾಗರವೇ ತೀರ್ಥಹಳ್ಳಿಯತ್ತ ದಾಪುಗಾಲಿಟ್ಟು ಪಕ್ಷಾತೀತವಾದ ಅಭಿನಂದನೆ ಸಲ್ಲಿಸಲಾಗುತಿತ್ತು, ಇಂತಹದೊಂದು “ಅಭಿನಂದನೆ” ಮಹಾಪೂರವನ್ನು ಕೂಡ ಎಂದಿಗೂ ನೋಡಲಾಗಿಲ್ಲ ಎನ್ನುತ್ತದೆ ರಾಜಕೀಯ ಹಾಗೂ ಸಾರ್ವಜನಿಕ ವಲಯ, ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನಸಾಗರಕ್ಕೆ, ವಿವಿಧ ರಂಗಗಳ ಬಹುತೇಕರಿಗೆ ಅಷ್ಟೆ ಸೌಮ್ಯತೆಯಿಂದ ಮಾತಾನಾಡಿಸುತ್ತಿರುವ ಆರಗ ಜ್ಞಾನೇಂದ್ರರವರು ತಮ್ಮನ್ನು ಉದ್ದೇಶಿಸಿ ಪ್ರಶ್ನಿಸಲಾಗುವ ಪತ್ರಕರ್ತರ ಬಳಿಯೂ ಅಷ್ಟೆ ನೇರವಾದ ಉತ್ತರವನ್ನು ನೀಡಿ ಅದರಂತೆ ನಡೆದುಕೊಳ್ಳುತ್ತೇನೆ ಎಂದಿದ್ದರು,
ಅವರ ರಾಜಕೀಯ ಇತಿಹಾಸದಲ್ಲಿಯೂ “ನುಡಿದಂತೆ ನಡೆದ ಜನಪ್ರತಿನಿಧಿ” ಎನ್ನುವ ಹೆಗ್ಗಳಿಕೆಯೂ ಇವರದ್ದಾಗಿದೆ, ಇಂತಹ ಸಂಗತಿಗಳಲ್ಲಿ ಅನುಸರಿಸಿ ನಾವು ಕೂಡ ಸ್ನೇಹಿತರೊಂದಿಗೆ ಅಭಿನಂದನೆ ಸಲ್ಲಿಸಿ ಬರೋಣವೆಂದು ತೀರ್ಥಹಳ್ಳಿಗೆ ಹೋಗಿದ್ವಿ, ಅಲ್ಲಿ ಮಾಜೀ ಪುರಸಭಾ ಸದಸ್ಯರಾದ ರಾಜೀವನ್ ಜತೆಯಾದರು, ಒಂದಿಷ್ಟು ಸಮಯದ ನಂತರ ಆರಗ ಜ್ಞಾನೇಂದ್ರವರು ಧಾವಿಸಿ ಬಂದ್ರು, ನಾವು ಅಭಿನಂದನೆ ಸಲ್ಲಿಸಿ ಶುಭ ಕೋರಿ ಮಾತಾಡಿಸಿದ್ವಿ, ನೀವ್ಯಾಕೆ ಇಲ್ಲಿಗೆ ಬಂದ್ರಿ ನಾನೇ ಶಿವಮೊಗ್ಗಕ್ಕೆ ಬರುತ್ತಿದ್ದೆ ಎಂದು ಆರಗ ಜ್ಞಾನೇಂದ್ರವರು ಹೇಳುತ್ತಿದ್ದಂತೆ ಒಮ್ಮೆಲೆ ಆಚ್ಚರಿಯಾಯ್ತು,
ಸುಧೀರ್ಘ ರಾಜಕೀಯ ಹಾದಿಯಲ್ಲಿ ಮೇರು ಇತಿಹಾಸ ಸೃಷ್ಟಿಸಿ ಪವರ್ ಪುಲ್ ಖಾತೆಯ ಪ್ರಸ್ತುತ ಆಡಳಿತದ ಚುಕ್ಕಾಣಿಯಲ್ಲಿ ಗೃಹ ಮಂತ್ರಿಯಾಗಿದ್ದರೂ ಅವರ ಮಾತು ಕೇಳಿದ ನಮ್ಮೆದೆಯ ಚರಿಗೆಯಲ್ಲಿ ಆತ್ಮತೃಪ್ತಿ ನೀಡಿತ್ತು, ಯಾವ ಬಿಗುಮಾನಗಳಿಲ್ಲದೆ, ಗರ್ವ-ದರ್ಪಗಳಿಲ್ಲದೆ ಸರಳವಾಗಿ ಈ ಮಾತನ್ನು ಹೇಳುವ ಜನಪ್ರೀತಿಯ ಮನಸು ಎಷ್ಟು ರಾಜಕಾರಣಿಗಳಿಗಿರುತ್ತದೆ ಹೇಳಿ..? ಒಮ್ಮೆಲೆ ಅಧಿಕಾರ ಸಿಕ್ಕೊಡೆ ನೆಲವನ್ನೇ ನೋಡದ ಬಹುತೇಕ ರಾಜಕಾರಣಿಗಳಿಗೆ ಇದು ಪಾಠವಾಗಬೇಕಿದೆ, ಸಾಮಾನ್ಯರಲ್ಲಿ ಸಾಮಾನ್ಯರು ಎದುರಾದರೂ ಸರಿ ಅವರಿಗೆ ಧೈರ್ಯ ತುಂಬುವ ಇಂತಹ ನಾಯಕರಿದ್ದರೆ ತೂತು ಬಿದ್ದ ಸೂರುಗಳು ಕೂಡ ತಹಬದಿಗೆ ಬರಬಹುದು ಅದೊಂದು ನೈತಿಕ ಬೆಂಬಲವೂ ಆಗಬಹುದು.
ಮುಂದೆ ಹೀಗೆ ಮಾತಾಡುತ್ತಲೇ ಸಂಘದ ಕಚೇರಿಯ ಒಳಸಾಗಿ ಅಲ್ಲೊಂದು ಬೇಟಿಯ ನಂತರ ಹೊರಬಂದು ಅವರು ಬಿಟ್ಟು ಹೋಗಿದ್ದ “ಶೂ” ಹಾಕಿಕೊಳ್ಳುವಾಗ ಗಮನಿಸಿದೆ ಅಲ್ಲಿಯೂ ಕೂಡ ಮನಸು ದಿಗ್ಬೃಮೆಗೊಂಡಿತು, ‘ ಏಕೆಂದರೆ ಅವರು ಹಾಕಿದ ಶೂವಿನ ಸಾಕ್ಸ್ ತುದಿ ಹರಿದು ಹೊಗಿತ್ತು ಅದನ್ನೇ ಹಾಕಿಕೊಂಡಿರುವುದನ್ನು ನೋಡಿ ಚಕಿತಗೊಂಡೇ, ಯಾರಲ್ಲಿಯೂ ಪ್ರಸ್ತಾಪಗೊಳಿಸದೆ ಇದನ್ನು ಇಲ್ಲಿ ಲೇಖನದಲ್ಲಿಯೇ ದಾಖಲಿಸುತ್ತಿದ್ದೇನೆ, ನನ್ನನ್ನೆ ಉದಾಹರಿಸುವುದೇ ಆದರೆ ನನ್ನ ಈ ದಯನೀಯ ಸ್ಥಿತಿಯ ಪತ್ರಕರ್ತನ ವೃತ್ತಿಯಲ್ಲಿಯೂ ಹರಿದ ಬಟ್ಟೆಯಾಗಲಿ, ತ್ಯಾಪೆ ಹಚ್ಚಿದ ಬಟ್ಟೆಯಾಗಲಿ ಅಥವಾ ಆರಗ ಜ್ಞಾನೆಂದ್ರರವರು ಹಾಕಿಕೊಂಡ ಹರಿದ ಸಾಕ್ಸ್ ಆಗಲಿ ನಾನ್ಯಾವತ್ತು ಹಾಕಿಕೊಳ್ಳುವ ಪ್ರಯತ್ನ ಕೂಡ ಮಾಡಲಿಲ್ಲ, ಬದಲಿಗೆ ಅದನ್ನು ದೂರ ಎಸೆಯುತ್ತಿದ್ದೆ,
-ಮುಂದುವರೆಯುತ್ತದೆ

