I ಬ್ರಾಹ್ಮಣ ಸಮುದಾಯದ ನಿಂದನೆ I ಸಿಗಂದೂರು ರಾಮಪ್ಪನವರ ವಿರುದ್ಧ ದೂರು I
I ಬ್ರಾಹ್ಮಣ ಸಮುದಾಯದ ನಿಂದನೆ I ಸಿಗಂದೂರು ರಾಮಪ್ಪನವರ ವಿರುದ್ಧ ದೂರು I
ಸಾಗರ :ಬ್ರಾಹ್ಮಣ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ.ರಾಮಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ಅಧ್ಯಕ್ಷರಾದ ರಾಜೇಂದ್ರಪ್ರಸಾದ್ ಬಿನ್ ವೆಂಕಟಗಿರಿರಾವ್ ಅವರು ಸಾಗರದ ಪೊಲೀಸ್ ಉಪ ಅಧೀಕ್ಷಕರಿಗೆ ಫೆ.14 ರಂದು ಶನಿವಾರ ದೂರು ಸಲ್ಲಿಸಿದರು.
.
ದೂರಿನಲ್ಲಿ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪನವರು ಜನವರಿ 31 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಾಳ್ಗೋಡಿ ನಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸ ವದ ಸಭಾ ಕಾರ್ಯಕ್ರಮದಲ್ಲಿ ಧ್ವೇಷಭಾಷಣ ಮಾಡಿ ಅಸಾಂವಿಧಾನಿಕವಾಗಿ ಅವಾಚ್ಚವಾಗಿ ಮಾತಾಡಿದ್ದಾರೆ ಎಂದು ದೂರಿದ್ದಾರೆ,
ಅವರ ಭಾಷಣದ ತುಣುಕು ಜಾಲತಾಣದಲ್ಲಿ ಹರಿದಾಡಿ ಖಂಡನೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಅವಾಚ್ಛವಾಗಿ ನಿಂದಿಸಿರುವುದನ್ನು ಕುರಿತು ಭಾರತೀಯ ನ್ಯಾಯ ಸಂಹಿತೆ ಅಡಿ ದೂರು ದಾಖಲಾಗಬೇಕು,ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು ಎಂದಿದ್ದಾರೆ
.
ಸಾಗರ ಉಪ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ದೂರು ಸಲ್ಲಿಸುವ ಸಂದರ್ಭದಲ್ಲಿ ದೂರುದಾರರ ಜೊತೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಮುಖರುಗಳಾದ ಕೆ.ಎನ್.ಶ್ರೀಧರ ವಕೀಲರು,ಕೆ.ಎಚ್.ಸುದರ್ಶನ ವಕೀಲರು,ರವೀಶ್ ವಕೀಲರು, ರವಿಂದ್ರನಾಥ್ ಮಂಕಾಳೆ, ಸುರೇಶ್ ಜವಳಿ, ಗಣಪತಿಭಟ್ ಸಂತೆಕಟ್ಟೆ, ಮುರಳಿ, ಶಿವರಾಮಯ್ಯ, ಗುರುಪಾದ, ಸುಬ್ರಾವ್, ಸಮರ್ಥ ಭಟ್, ರಾಜೇಂದ್ರ ಭಟ್ ಬರಗಿ, ವಂ.ಶಂ ರಾಮಚಂದ್ರ ಭಟ್ ಹಾಗೂ ಗಜಾನನ ಹಾಜರಿದ್ದರು