September 25, 2026

I ಕೆರೆ ನುಂಗಿದ ಅಕ್ರಮ ಲೇ-ಔಟ್ I

0
2000

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕೆರೆ ನುಂಗಿದ ಅಕ್ರಮ ಲೇ-ಔಟ್ I

ಬೇಲಿಯೇ ಎದ್ದು ಹೊಲ ಮೇಯ್ಯುತ್ತಿಹುದು
ಹೀಗೊಂದು ಲ್ಯಾಂಡ್ ಮಾಫಿಯಾ ಕೆರೆ ನುಂಗಿಹುದು,
ಅಕ್ರಮ ಡಿ-ನೋಟಿಪಿಕೇಶನ್ ದಾಖಲೆಗಳಿಹುದು,
ಭೂ ಪರಿವರ್ತನೆಗಳಿಲ್ಲದ ತಕ್ತೆ ದರ್ಶಿಸುತ್ತಿಹುದು,

ಏನೀದರ ಕರಾಮತ್ತು, ಭೂ ಕಬಳಿಕೆದಾರರ ಹಕೀಕತ್ತು,
ಅದೆಷ್ಟು ಸರ್ವೆ ನಂಬರ್ ಗಳ ದನಕ್ಕೆ ಮುಪತ್ತು, ಹುಲ್ಲುಬನಿ,
ಗೋಮಾಳ, ಕರಾಬು ಕಟ್ಟೆ, ಸರ್ಕಾರದ ವ್ಯತ್ಯಾಸ ವಿಸ್ತೀರ್ಣ,
ನುಂಗಿದ ರೌಡಿ ಎಲಿಮೆಂಟರಿಗಳು, ವೈಟ್ ಕಾಲರ್ಗಳು..!

ಚರಿತ್ರೆಯ ಕೆರೆಗಳು ಕಳೆದು ಹೋಗಿದೆ..?
ಲ್ಯಾಂಡ್ ಮಾಫಿಯಾ ಪೋರ್ಜರಿ ಕಡತಗಳಿಗೆ,
ಅಸ್ತೆಂದಿದ್ದಾನೆ ಜಿಲ್ಲಾಡಳಿತದ ಲಲೀತ್ ಕಿಶೋರ್,
ಮೀಸಲು ಭೂ ಪ್ರದೇಶದ ಹೆಗ್ಗಿಲ್ಲದ ಕಬಳಿಕೆಗಳು,
ಮೇವು, ಕುಡಿವ ನೀರಿಗೆ ಬರೆ ಎಳೆದಿಟ್ಟಿದೆ..!

ಜಾನುವಾರು ಬಿಡಾಡಿಗಳಾಗಿ ಬೀದಿಗೆ ಬಿದ್ದಿದೆ,
ಕಸಾಯಿಗಳಿಗಷ್ಟೆ ವಿರೋಧಿಸುವ ಗೋಹತ್ಯೆ ಅಜೆಂಡಾ,
ಗೋವಿನ ಮೀಸಲು ಗೋಮಾಳಗಳ ಉಳಿವಿಗೆ ಸೊಲ್ಲಿಲ್ಲ,
ಘನ ತ್ಯಾಜ್ಯ ತಿಂದುಂಡು ಉಬ್ಬಸ ತುಂಬಿದೆ,
ರಸ್ತೆಗಳಲ್ಲಿರುವ ಜಾನುವಾರು ಅಪಘಾತ ತಂದೊಡ್ಡಿದೆ,
ಮಾನ್ಯ ಬಿಜೆಪಿಗರೇ ನಿಲ್ಲಿಸಿ ಈ ಗೋ ಧೋರಣೆ..?

ಇನ್ನೂ ವಿಸ್ತೃತಗೊಳಿಸುವೇ..?! ದಾಖಲೆಗಳ ಜತೆಗೂಡಿ,
ವೈಟ್ ಕಾಲರ್, ಓರ್ವನ ಅಸಲಿ ದಂಧೆಯ ಕರಾಳತೆಗಳಗೂಡಿ,
ಯಾರಿಗಾಗಿ..? ಯಾವ ಸಾಮ್ರಾಜ್ಯಕ್ಕಾಗಿ ಈ ಧಾರುಣತೆಗಳು,
ರಕ್ಕಸರೂಪಿ ರುದ್ರ ರೌದ್ರತೆಗಳು, ಪಾಪಿ ಕೃತ್ಯಗಳು,
ಓ ಶಿವಮೊಗ್ಗವೇ..?! ಲ್ಯಾಂಡ್ ಮಾಫಿಯಾ ಬೇಕೆ..?!

Spread the love

Leave a Reply

Your email address will not be published. Required fields are marked *

error: Content is protected !!