ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಪಠ್ಯಪುಸ್ತಕಗಳಿಲ್ಲದ ಓದು I
ಸರ್ಕಾರಿ ಶಾಲೆಗಳಲ್ಲಿನ ಗೋಳು,
ವಿದ್ಯಾರ್ಥಿ ವರುಷದ ಖಾಲಿ ಬಾಳು..!
ಪಠ್ಯಪುಸ್ತಕಗಳಿಲ್ಲದೆ…
ಮೊದಲ ಸೆಮಿಸ್ಟರ್ ಮುಗಿಸಿದರು,
ಸಾಕ್ಸ್-ಶೂಗಳಿಲ್ಲದೆ ಪಾದಗಳ ಸವೆಸಿದರು,
ಅರಿದ ಮನಸುಗಳಿಗಿಲ್ಲಿ ಹೊಲಿಗೆ ಹಾಕಿ,
ಅರಿವುಗಳಿಲ್ಲದ ಕತ್ತಲೆಗೆ ಬೆಳಕು ಬಾಕಿ,
ಶಿಕ್ಷಣ ಮಂತ್ರಿ ಮಧು ಬಾಯಿಗೆ ಬಟ್ಟೆ ನೂಕಿ,
ಪ್ರಶ್ನಿಸಿದವರಿಗೆ ನಾ ಪ್ರಿಂಟ್ ಹಾಕ್ಲಾ ಎಂದ ಜಾಕಿ,
ಅಶಿಕ್ಷಣದ ವ್ಯಕ್ತಿತ್ವದ ದುರ್ವರ್ತನೆ,
ಮಕ್ಕಳ ಮನಸುಗಳ ಅರಿತವರು ಬೇಕಿಲ್ಲಿ,
ಖಾಸಗೀಕರಣದ ವ್ಯಾಪಾರಿಗಳು ಬೇಕಿಲ್ಲ,
ಸರ್ಕಾರಿ ಶಾಲೆಗಳ ಮೇಲಿನ ದಾಳಿಯೂ ನಿಂತಿಲ್ಲ..!
ಪಠ್ಯಪುಸ್ತಕ, ಶೂ-ಸಾಕ್ಸ್ ಕಳೆದೋಗಿದೆ,
ಸಂಘಟಕರೇ, ಮಾನವಂತರೇ ಹುಡುಕಿ ಕೊಡಿ,
ಮಕ್ಕಳ ವಿದ್ಯಾರ್ಥಿ ಜೀವನದ ನ್ಯಾಯಗಳು,
ಶಿಕ್ಷಣ ಮಂತ್ರಿ ಮಧು ರಾಜಕೀಯದಲ್ಲಿ ನಶಿಸಿದೆ,
ಸ್ವಾತಂತ್ರ್ಯ ನಂತರವೂ ಜೀತ ಓದುಗಳಿದೆ,
ಇದಕ್ಕೆ ಇಂತಿವುಗಳೇ ಸಾಕ್ಷ್ಯಗಳು, ಶಾಸನಗಳು,