I ನೀವು ಸಾಮಾನ್ಯರಲ್ಲ I
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ನೀವು ಸಾಮಾನ್ಯರಲ್ಲ I
ನೀವೆನು ಸಾಧಾರಣರಲ್ಲ ಗೊತ್ತೇ..?
ನಿಮ್ಮೊಳಗಿನ ತಾಕತ್ತಿನ ಬುತ್ತಿ ತೆರೆಯಬೇಕಷ್ಟೆ,
ಪ್ರೌಡಿಮೆ, ಪ್ರಬುದ್ದತೆ ಪ್ರಸ್ತುತಪಡಿಸಬೇಕಷ್ಟೆ,
ನೀವ್ಯಾಕೆ ಗುಂಪಿನ ಸಂದಿಯಲ್ಲಿ ಕಾಣದಾಗಿದ್ದೀರಿ,
ಒಳದನಿ ಹೇಳುತ್ತಲೇ ಇದೆ ಆಲಿಸುತ್ತಿಲ್ಲವಷ್ಟೇ..?
ವೇಗದ ಮೊದಲ ಹೆಜ್ಜೆಯನ್ನೇ ಕಟ್ಟಿ ಹಾಕಿದ್ದೀರಿ,
ಮುಜುಗರವೇಕೆ..? ಆಲಸ್ಯವೇಕೆ..?
ಮನಜಾಡ್ಯದಿ ಮುರುಕಿನೊಳಗೆ ಅವಿತಿದ್ದೀರಷ್ಟೆ,
ಕಾಲಗರ್ಭದಿ ಅಕಾಲಿಕವಾಗಿ ಸಾಯುತ್ತಲೇ ಇದ್ದೀರಿ,
ಬದುಕಿದ್ದಾಗಲೇ ಸಾವು ಲಗತ್ತಿಸಿಕೊಳ್ಳುವ ಲೇಸೆಕೆ..?
ಅವಲೋಕಿಸಿ ಬಾಹ್ಯಮುಖಿಯ ಯುದ್ದದಲ್ಲಿದ್ದೀರಿ,
ಈ ಕ್ಷಣದಿ ವೇಗದೆಜ್ಜೆಗೆ ಕಟ್ಟಿರುವ ಸರಪಳಿ ಕಳಚಿ ಬಿಡಿ,
ಏನಾಗಬೇಕೋ.. ಆತ್ಮದನಿಯಂತೆ ಹೂಗುಟ್ಟಿ,
ಹುಚ್ಚರಂತೆ ನಿಂದು, ಒಂದೊಮ್ಮೆ ಪ್ರಸ್ತುತ ಪಡಿಸಿ,
ತೀರ್ಪುಗಾರರಂತೆ ವರ್ತಿಸದಿರಿ, ಲೋಕವದು ಕಾದಿದೆ,
ಆಯಸ್ಸಿನ ಹೊತ್ತಿಗೆ ನಿಲುಗಡೆಯ ಫಲಕಗಳಿಲ್ಲ.!
ವಿಳಂಬಿಸದಿರಿ, ತಡೆಯದಿರಿ, ಗಟ್ಟಿತನದಿ ನಿರ್ಧರಿಸಿ.
@Gara Srinivas