I ಓಂ ಪ್ರಕಾಶ್ ಡೈರೆಕ್ಟರ್ I ಲೋ ಕ್ಲಾಸ್ ಕ್ಯಾರೆಕ್ಟರ್ I
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಓಂ ಪ್ರಕಾಶ್ ಡೈರೆಕ್ಟರ್ I ಲೋ ಕ್ಲಾಸ್ ಕ್ಯಾರೆಕ್ಟರ್ I
ಕನ್ನಡ ಸಿನಿಮಾಗಳು ಹಾಗೂ ಕನ್ನಡ ಕಲಾವಿದರುಗಳ, ತಂತ್ರಜ್ಞರು, ನಿರ್ದೇಶನ, ನಿರ್ಮಾಪಕರುಗಳ ಸಮಷ್ಟಿ ಸಿನಿಮಾ ಪ್ರಜ್ಞೆಯ ಹಿಡಿತ ಕೈ ಬಿಟ್ಟು ಹೋಗುತ್ತಿದಿಯಾ..? ಹೀಗೊಂದು ಅನುಮಾನಿತಗಳು ಕಾಡುವುದಕ್ಕೆ ಶುರುವಾದಂತಿದೆ, ಇನ್ನೂ ಸ್ಯಾಂಡಲ್‌ವುಡ್ ಸ್ಟಾರ್ ನಟರುಗಳ ನಡುವೆ ಕಂದಕದ ಕುಣಿ ಅಗೆದು ಟಿಆರ್‌ಪಿ ( ಟೆಲಿವೀಷನ್ ರೇಟಿಂಗ್ ಪಾಯಿಂಟ್) ಎನ್ನುವ ಬಿಸಿ ತುಪ್ಪದ ಸ್ವಾದಕ್ಕೆ ಅವಸರದಿ ಮುಂದಾಗಿ ಅಭಿವ್ಯಕ್ತಿಯ ಮಾರಣ ಹೋಮವನ್ನೆ ಸುರಿಸಿ ಕಾಸಿಗಾಗಿ ಸುದ್ದಿಯ ಕೋಟೆ ಕಟ್ಟಿಕೊಂಡಿರುವ ಕೆಲ ಖಾಸಗಿ ಮಾಧ್ಯಮಿಗಳು ಈಗಾಗಲೇ ಕನ್ನಡ ಚಿತ್ರೋದ್ಯಮ, ಅದರ ಕಲಾವಿದರನ್ನು ಇಂಚಿಂಚು ಬಿಡದೆ ಹಾದಿ-ಬೀದಿಗೆ ತಂದಿರುವ ಆತಂಕದ ನಡುವೆ ಸಿನಿಮಾ ಮಂದಿಗಳೊಮ್ಮೆ ಅವಲೋಕಿಸಿಕೊಳ್ಳಬೇಕಾದ ಜರರೂತ್ತಿದೆ,
ಇಂತಹ ಬಿಗುವಿನ ನಡುವೆ ಸ್ವಯಂಕೃತ ಅಪರಾದ ಎಂಬಂತೆ, ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಹುಚ್ಚಾಟಗಳ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣ ತುಂಬೆಲ್ಲಾ ಗೊಬ್ಬು ಎಬ್ಬಿಸಿದೆ,
ಹೌದು ಇದೊಂದು ಆಕ್ಷನ್ ಕಟ್ ನೆಪದಲ್ಲಿ ತಾನೇ ಸ್ವಮೇಕ್ ಚಿತ್ರ ನಿರ್ಮಿಸುತ್ತಿದ್ದೇನೆ, ಕರ್ನಾಟಕ ಸೇರಿದಂತೆ ಹೊರ ರಾಜ್ಯದಲ್ಲಿ ಶೂಟಿಂಗ್ ನಡೆಸಲಾಗಿರುವ ಫಿನೀಕ್ಸ್ ಚಿತ್ರದ ಕಥಾ ಹಂದರದಲ್ಲಿ ರಿಯಲ್ ಘಟನಾವಳಿಗಳನ್ನು ರೀಲ್‌ನಲ್ಲಿ ತಂದಿರಿಸಿದ್ದೇನೆ, ಎನ್ನುವ ನಿರ್ದೇಶಕ ಓಂ ಪ್ರಕಾಶ್ ರಾವ್ ಚಿತ್ರ ತಂಡದ ಜೊತೆಯಲ್ಲಿ ಕ್ಯಾಮೆರಾ ಮುಂದಡಿ ನಿಂತರೆ ಬಾಯಿಗೆ ಬಂದಂತೆ ಹರಚುತ್ತಾ, ತಲೆ ಕೆದರಿಕೊಂಡು ಮುಖ ಪರಚಿಕೊಂಡು, ಕಲಾವಿದರನ್ನು ಕುರಿತು ವಾಚಮಗೋಚರವಾಗಿ ಪ್ರತಿ ಡೈಲಾಗ್ ಕಟ್‌ನಲ್ಲಿ ನಿನ್ನಮ್ಮನ್, ನಿನ್ನಕ್ಕನ್ ನೀ ಎಲ್ಲಿಯಾದ್ರೂ ನೇಣು ಹಾಕಿಕೊಂಡು ಸಾಯಿ, ಹೀಗೆ ಹುಚ್ಚಾಟ ನಡೆಸುತ್ತಿರುವುದು ಯಾವ ನೈಜತೆಯ ಡೈರೆಕ್ಷನ್ ಎಂದೇಳುತ್ತಾರೆ..!
ಮಹಿಳಾ ಅಸೋಸಿಯಟ್ ಡೈರೆಕ್ಟರ್‌ಗೆ ಕರೆದು ಸಮಾ ಉಗಿದಿಡುವ ಶೂಟಿಂಗ್ ಸ್ಪಾಟ್‌ನಲ್ಲಿ ಇನ್ನಿಲ್ಲದ ಬೈಗುಳವಿಟ್ಟು ಹೀಗೆಯೇ ವರ್ತಿಸೋದು, ಯಾವನೇನು ಮಾಡಿಕೊಂಡ್ರು ಪರವಾಗಿಲ್ಲ, ಇದನ್ನೇ ಎಲ್ಲಾ ಕಡೆ ವೈರಲ್ ಮಾಡಿ ನಿನ್ನಕ್ಕನ್ ಎನ್ನುವುದು ಯಾವ ಕಲಾ ಸಂಸ್ಕೃತಿ..? ಸಭ್ಯತೆ ಆಗಿದೆ, ಅರೆ ಹುಚ್ಚನಂತೆ ವರ್ತಿಸುವ ಈ ಅರೆ ಬೆಂದವನ ಮಾನಸೀಕತೆಯ ಮುಂದಡಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡರೆ ಸಾಕು ಎಂದು ಕಲಾವಿದರು ತಲೆತಗ್ಗಿಸಿಯೇ ಡೈಲಾಗ್ ಹೇಳಿ ಕ್ಯಾಮೆರಾಕ್ಕೆ ಕೈಮುಗಿವುದು ನೋಡಿದರೆ ಇದೋಂದು ಶೋಷಣೆಯ ಪತಂಗವಲ್ಲದೆ ಮತ್ತೇನು..?! ಈತನ ಬೈಗುಳಗಳು ಇದನ್ನು ಆಲಿಸುವ ಇತರೆ ಮನಸುಗಳ ನಗೆಗಳು, ಬೈಗುಳಕ್ಕೆ ತುತ್ತಾದವರ ಪ್ರಾಣಸಂಕಟಗಳ ಸಂಗತಿಗಳ ದೃಶ್ಯಾವಳಿಗಳ ಘಟನೆಗಳು ಈ ಮಾನವ ಹಕ್ಕುಗಳ ಕಚೇರಿ ಬಾಗಿಲು ಬಡಿಯುವುದರಲ್ಲಿಯು ಯಾವುದೇ ಅನುಮಾನವಿಲ್ಲವಾಗಿದೆ,
ಸಿನಿಮಾ ಮಾಡಿ ಆದರೆ ಸಿನಿಮಾ ನೆಪದಲ್ಲಿ ನಮ್ಮ ಕನ್ನಡದ ಚಿತ್ರ ಸಂಸ್ಕೃತಿಯನ್ನು ಮರೆಯದಿರಿ ಅದನ್ನು ಕಾಪಿಟ್ಟುಕೊಳ್ಳುವತ್ತ ಚಿತ್ತವರಿಸಬೇಕಾದ ಅಗತ್ಯತೆ ಇದೆ ಎನ್ನುವ ಕನಿಷ್ಠ ಜ್ಞಾನದ ಕೊರತೆಯೋ..? ಸಾಕಷ್ಟು ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟಿದ್ದೇನೆ ಎನ್ನುವ ಆಹಂಕಾರದ ಪರಮಾಧಿಯೋ..? ಎನೋ ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಅತಿರೇಕದ ವರ್ತನೆ ಕನ್ನಡದ ಚಿತ್ರೋದ್ಯಮ ಸಂಸ್ಕೃತಿಗೆ ಮಸಿ ಬಳಿದಂತಾಗಿದೆ,
ಇಲ್ಲವೇ ಗಾಸಿಪ್‌ಗಳು, ಈ ರೀತಿಯ ಅರೆಬೆಂದ ಹುಚ್ಚಾಟಗಳು, ಹೇಳಿಕೆಗಳಿಂದ ಶೂಟಿಂಗ್ ಸಂದರ್ಭದಲ್ಲಿಯೇ ಭಾರಿ ಪ್ರಚುರತೆಗಿಟ್ಟಿಸಿಕೊಳ್ಳುವ ಗಿಮಿಕ್‌ಗಳ ಒಳಸುಳಿಗಳ ಹಪಾಹಪಿತನಕ್ಕೆ ಕನ್ನಡ ಚಿತ್ರೋದ್ಯಮ ಅವನತಿಯ ಹಾದಿಯತ್ತ ಸಾಗುತ್ತಿರುವುದು ಕನ್ನಡಿಗರು ದರ್ಶಿಸಿಕೊಳ್ಳುತ್ತಿದ್ದಾರೆ, ಇನ್ನೂ ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ಹೇಳಿಕೆಯಲ್ಲಿ ಇದುವರೆಗೂ ಎಲ್ಲಾ ಚಿತ್ರಗಳನ್ನು ಕದ್ದು ಮಾಡಿದ್ದೇನೆ ಆದರೆ ಫೀನಿಕ್ಸ್ ಚಿತ್ರ ಮಾತ್ರ ಸ್ವಮೇಕ್ ಆಗಿ ಸ್ಟ್ರೇಟ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದು ಹೇಳಿರುವ ಹಿಂದೆ ನೋಡಿದರೆ ಈತನೋರ್ವ ಸಾರಾಸಗಟಾಗಿ ಫೀನಿಕ್ಸ್ ಚಿತ್ರ ಶೂಟಿಂಗ್ ಸ್ಪಾಟ್‌ನಲ್ಲಿಯೇ ಭಾರಿ ಪ್ರಚುರತೆಯ ಗ್ರಾಸಕ್ಕೆ ಕಾರಣವಾಗಲಿ ಎನ್ನುವ ಉದ್ದೇಶಪೂರ್ವಕವಾಗಿ ರಿಯಲ್ ಅಕ್ಟಿಂಗ್ ಮಾಡುತ್ತಿದ್ದಾರೆ ಚಿತ್ರನಗರಿ ಗುನುಗುಡುತ್ತಿದೆ,
ಇದೇನೇ ಇದ್ದರೂ ರಾಜ್ಯದ ಕನ್ನಡ ಸಂಘಟನೆಗಳು ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿ ಗೆ ಹಾಗೂ ನಿರ್ಮಾಪಕರ ಸಂಘದ ಕಛೇರಿಗಳಿಗೆ ಬೀಗ ಜಡಿದು, ಹೊರದೊಬ್ಬವ ಕೆಲಸ ಮಾಡಬೇಕಿದೆ, ಇದಾಗದಿದ್ದರೆ ಇಂತಹ ಮಖೇಡಿ ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅಂತಹವರ ಈ ಹುಚ್ಚಾಟಕ್ಕೆ ಕೊನೆಯ ಮೊಳೆ ಹೊಡೆಯುವುದು ಅಸಾಧ್ಯವಾಗಿದೆ, ಇಂತಹ ಹೇಸಿಗೆಯನ್ನು ಕೂಡ ಕೆಲ ಖಾಸಗಿ ಮಾಧ್ಯಮಿಗಳು ಸುದ್ದಿ ಮಾಡಿ ಈ ವರ್ತನೆಯನ್ನು ನ್ಯೂಸ್ ಸ್ಕ್ರೀನ್ ನಲ್ಲಿ ತೋರಿಸಿ ಮಜವಾಗಿ ಮಾತಾಡಿಕೊಳ್ಳುತ್ತಿರುವುದು ಅಚ್ಚರಿಯಾಗಿದೆ, ಎಲ್ಲಾ ಟಿಆರ್‌ಪಿ ಮಯವೋ..?! ಏನೋ ಸ್ಟಾರ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಹುಚ್ಚಾಟವನ್ನು ಕೂಡ ಸಹಿಸಿಕೊಳ್ಳಬೇಕಾದ ಹೊತ್ತು ಚಿತ್ರ ಸಮಾಜದ್ದಾಗಿದೆ.