Sunday, August 2, 2026
Homeಸಾಹಿತ್ಯI ಚಲಿಸುವ ಮೋಡಗಳು I

I ಚಲಿಸುವ ಮೋಡಗಳು I

I ಚಲಿಸುವ ಮೋಡಗಳು I

ಚಲಿಸುವ ಮೋಡ ಬಾನಲ್ಲಿ ನೋಡ
ಅಲ್ಲಿ ತಂಗಾಳಿ ಹಾಡಿತು ಒಂದು ಹಾಡ
ಮೋಡ ಮೋಡಗಳಿಗೂ ಘರ್ಷಣೆ ಕೂಡ
ಜಿನುಗಿತು ಮಳೆಯಾಗಿ ಭೂಮಿಗೆ ಆ ಆಷಾಢ

ಗಗನದಲಿ ಗುಡುಗಿನ ಸಪ್ಪಳಕೆ
ಕಾರ್ಮೋಡಗಳ ಸರಸ ಸಲ್ಲಾಪಕೆ
ಮುಗಿಲಲಿ ಬೆಳ್ಳಿ ಮೋಡ ಚಲನಕೆ
ಅಲ್ಲಿ ಹಕ್ಕಿಗಳ ಹಾರಾಟದ ಕಲರವಕೆ

ಬಾನಿನಲಿ ರವಿ ಜಾರುವ ಸಮಯ
ಬಂಗಾರ ಬಣ್ಣಗಳಿಂದ ವಿನಿಮಯ
ಸಂಧ್ಯಾಕಾಲದ ಅದುವೇ ವಿಸ್ಮಯ
ಮಕ್ಕಳ ಕಣ್ಣಿಗೆ ಅದು ಅಯೋಮಯ

ಆಕಾಶದಲಿ ಗುಡುಗು ಮಿಂಚಿನ ಸದ್ದಿಗೆ
ಭೋರ್ಗರೆಯುವ ಮಳೆ ಬಂದಿತು ಭುವಿಗೆ
ಮೊದಲು ಸುರಿಯಿತು ಆಲಿಕಲ್ಲು ಧರೆಗೆ
ತಂಪಾದಳು ಇಳೆ ಕಾರ್ಮೋಡದ ಮಳೆಗೆ         

     – ನಿತ್ಯಶ್ರೀ ಸುಶಿಲ್ ತುಮಕೂರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I