September 25, 2026

I ಗಾಜನೂರಿನ ಸಕ್ರೆಬೈಲಿನಲ್ಲಿ I ಮಹ್ಮದ್ ದಸ್ತಗಿರಿ ಮೇಲೆ ಮಾರಣಾಂತಿಕ ಹಲ್ಲೆ I ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ ಐ ಆರ್ I

0
2016-05-28

I ಗಾಜನೂರಿನ ಸಕ್ರೆಬೈಲಿನಲ್ಲಿ I ಮಹ್ಮದ್ ದಸ್ತಗಿರಿ ಮೇಲೆ ಮಾರಣಾಂತಿಕ ಹಲ್ಲೆ I ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ ಐ ಆರ್ I

ಶಿವಮೊಗ್ಗ : ಗಾಜನೂರಿನ ಸಕ್ರೆಬೈಲಿನ ಶಿವಣ್ಣನ ಕ್ಯಾಂಟಿನ್ ನಲ್ಲಿ ಚಹಾ ಕುಡಿಯಲು ನಿಂತಿದ್ದ ಮಹ್ಮದ್ ದಸ್ತಗಿರಿ ಹಾಗೂ ಆತನ ಸ್ನೇಹಿತನ ಮೇಲೆ ನಿಹಾಲ್ ಸೇರಿದಂತೆ ಆರು ಹುಡುಗರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಿನ್ನೆ ರಾತ್ರಿ 8ರ ಹೊತ್ತಿಗೆ ಘಟಿಸಿದೆ,

ಶಿವಮೊಗ್ಗದಲ್ಲಿ ಇದೀಗ ರೌಡಿಸಂ, ಹಲ್ಲೆ, ಬೆದರಿಕೆ, ಕ್ರೈಂ ರೇಟಿಂಗ್ ಸಾಮಾನ್ಯವಾಗಿ ಬಿಟ್ಟಿದೆ, ಇಂತಹ ಸಾಲಿನಲ್ಲಿ ನಿನ್ನೆಯ ಘಟನೆಯು ಸೇರಿಕೊಂಡಿದೆ, ಇನ್ನೂ ಮೀಸೆ ಮೂಡುವ ಹೊತ್ತಿಗೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿವ ಕ್ರೇಜಿನಲ್ಲಿ ಯುವ ಸಮುದಾಯ ಮುಗಿ ಬೀಳುತ್ತಿರುವುದು ದುರಂತವಾಗಿದೆ, ಅಲ್ಲದೆ ಪೊಲೀಸ್ ಇಲಾಖೆಯ ಮೇಲಿನ ಸವಾಲುಗಳು ಹೆಚ್ಚಿದೆ,

ಅಸಲಿಗೆ ಮಹ್ಮದ್ ದಸ್ತಗಿರಿ ಎಂಬಾತ ಮಂಗಳೂರಿನಿಂದ ಒಂದು ಕಾರು ಖರಿದಿಸಿ ಅದನ್ನು ರೆಡಿ ಮಾಡಿಕೊಂಡು ಓಡಾಡುತ್ತಿದ್ದನು ಈತನ ಕೆಲಸವು ಕೂಡ ಟಿಂಕರಿಂಗ್ ಹಾಗೂ ವಾಹನ ಡೀಲಿಂಗ್ ಬ್ರೋಕಿಂಗ್ ಮಾಡುವುದು ಆಗಿದೆ, ಇದು ಈತನ ವಹಿವಾಟು, ಆದರೆ ಇದೇ ಕಾರು ತನಗೆ ಬೇಕೆಂದು ಧಮ್ಕಿ ಹಾಕಿ ಸುಮಾರು 3.50000 ರೂ ಮೌಲ್ಯದ ಮಾರುತಿ ರಿಡ್ಜ್ ಕಾರನ್ನು ಅನಾಮತ್ತಾಗಿ ಹಳೆ ಮಂಡ್ಲಿಯಲ್ಲಿರುವ ರೈಸ್ ಮಿಲ್ ಬಳಿ ಹೊಡೆದು, ಕಸಿದುಕೊಂಡು ಏನಾದರೂ ದೂರು ನೀಡಿದರೆ ನಿನ್ನ ಸ್ಟೋರಿ ಮುಗಿಸುತ್ತೇವೆ ಎಂದು ನಿಹಾಲ್ ಮತ್ತು ಆತನ ಗುಂಪು ಜೀವಬೆದರಿಕೆಯೊಡ್ಡಿ ಹೋಗಿರುತ್ತಾರೆ,

ಈ ನಂತರ ದೂರು ನೀಡುವುದಾಗಿ ತಿಳಿಸಿದ್ದ ಮಹ್ಮದ್ ದಸ್ತಗಿರಿ ಭಾನುವಾರ ಸಕ್ರೆಬೈಲಿನಲ್ಲಿರುವ ಪತ್ನಿ ಮನೆಗೆ ಹೋಗಿದ್ದು ಈ ಸಂದರ್ಭದಲ್ಲಿ ಶಿವಣ್ಣನ ಕ್ಯಾಂಟಿನ್ ಬಳಿ ಸ್ನೇಹಿತನೊಂದಿಗೆ ಇರುವುದು ಖಾತ್ರಿ ಪಡಿಸಿಕೊಂಡ ನಿಹಾಲ್ ಮತ್ತು ಆತನ ಗುಂಪು ಹೊಂಚು ಹಾಕಿದಂತೆ ಇವರುಗಳ ಮೇಲೆರಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುತ್ತಾರೆ, ಈ ಘಟನೆ ಘಟಿಸುತ್ತಿದ್ದಂತೆ ಜನರು ಸುತ್ತುವರೆದಿದ್ದು ನೋಡಿ ಪಲಾಯನಗೈದಿರುವ ಕಿಡಿಗೇಡಿಗಳ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಪ್ ಐ ಆರ್ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ,

ಹಲ್ಲೆಗೊಳಗಾದ ಮಹ್ಮದ್ ದಸ್ತಗಿರಿ ಹಾಗೂ ಆತನ ಸ್ನೇಹಿತನನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುತ್ತಾರೆಂದು ತಿಳಿದು ಬಂದಿದೆ.

 

Spread the love

Leave a Reply

Your email address will not be published. Required fields are marked *

error: Content is protected !!