ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ರಾಜಿನಾಮೆಗೆ ಒತ್ತಾಯಿಸುತ್ತಿರುವ ವಿಪಕ್ಷಗಳ ನಿಲುವು ಖಂಡಿಸಿ ಕರ್ನಾಟಕ ಮಾದರ ಮಹಾಸಭಾದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ
I ದಲಿತ ಸಮುದಾಯದ ಉನ್ನತ ನಾಯಕರನ್ನು I ಕುಗ್ಗಿಸುವ ಹುನ್ನಾರ ಸಹಿಸುವ ಮಾತಿಲ್ಲ I ತೇಜಸ್ ಕುಮಾರ್ I
ಶಿವಮೊಗ್ಗ : ರಾಜ್ಯದಲ್ಲಿ ಧಮನಿತರ ಪರವಾದ ರಾಜಕೀಯ ದನಿಯಾಗಿರುವ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ಅವರನ್ನು ಕುಗ್ಗಿಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಷಡ್ಯಂತ್ರಕ್ಕಿಳಿದಿರುವ ಬಿಜೆಪಿ ನಾಯಕರ ನಡೆ ನಿಜಕ್ಕೂ ಖಂಡನೀಯ ಎಂದು ಕರ್ನಾಟಕ ಮಾದರ ಮಹಾಸಭಾದ ಮುಖಂಡರಾದ ತೇಜಸ್ ಕುಮಾರ್‌ರವರು ತಿಳಿಸಿದರು.
ಅವರು ಇಂದು ಬಿಜೆಪಿ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತಾನಾಡಿ ಇದೊಂದು ರಾಜಕೀಯ ಷಡ್ಯಂತ್ರವಲ್ಲದೆ ಮತ್ತೇನು ಇಲ್ಲ, ಅವರೇ ಗಾಜಿನ ಮನೆಯಲ್ಲಿದ್ದು ಅನ್ಯರ ಮನೆಗೆ ಕಲ್ಲು ತೂರುವ ಕೆಲಸ ಮಾಡುತ್ತಿದ್ದಾರೆ, ವ್ಯಥಾ ಸುಳ್ಳು ಆರೋಪಗಳನ್ನು ಸೃಷ್ಠಿಸಿ ರಾಜ್ಯದಲ್ಲಿ ಧಮನಿತರ, ಶೋಷಿತರ ನಾಯಕರಾಗಿ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ, ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಗೆ ತರುವಲ್ಲಿ ಗಣನೀಯವಾಗಿ ರಾಜಕೀಯ ದನಿಗೂಡಿಸಿ ಪ್ರಮುಖ ಪಾತ್ರ ವಹಿಸಿದ್ದಾರೆ, ರಾಜ್ಯದ ಪ್ರತಿ ಜಿಲ್ಲಾವಾರು, ತಾಲ್ಲೂಕುವಾರು ಸರ್ಕಾರಿ ಸೌಲಭ್ಯವನ್ನು ಕಲ್ಪಿಸಿಕೊಡುವಲ್ಲಿ ಸಮುದಾಯಕ್ಕೆ ಭರವಸೆಯ ಜನನಾಯಕರಾಗಿದ್ದಾರೆ, ಇದು ಭಾರತೀಯ ಜನತಾ ಪಕ್ಷಕ್ಕೆ ಸಹಿಸುವಿಕೆಯ ಗುಣಲಕ್ಷಣಗಳು ಇಲ್ಲದಿರುವುದರಿಂದ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ್ ರಾಜಿನಾಮೆಗೆ ಶತಾಯ-ಗತಾಯ ಒತ್ತಾಯಿಸುತ್ತಿರುವುದು ಅನಾಗರೀಕ ವರ್ತನೆಯಾಗಿದೆ ಎಂದು ಅವರು ವಿವರಿಸಿದರು.
ಇಂತಿವರು ಶಾಸನ ಸಭೆಯಲ್ಲಿ ದಲಿತರ ಪರವಾದ ವಿಚಾರಗಳನ್ನು ಮಂಡನೆ ಮಾಡಿದ್ದು ಅಲ್ಲದೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದ ಯಶಸ್ಸಿಗೂ ಕಾರಣಕರ್ತರಾಗಿದ್ದಾರೆ, ಹೀಗಾಗಿಯೇ ಈ ನಾಯಕತ್ವದ ಯಶಸ್ಸನ್ನು ಅಳಿಸಲು ಬಿಜೆಪಿಯವರು ತಾವೇ ಸೃಷ್ಟಿಸಿದ ಪ್ರಕರಣವನ್ನಿಟ್ಟುಕೊಂಡು ರಾಜ್ಯವಾರು ರಾಜಿನಾಮೆಗೆ ಆಗ್ರಹಿಸುತ್ತಿರುವುದು ಸಮಂಜಸವಾದುದ್ದಲ್ಲವಾಗಿದೆ, ಇದೊಂದು ಕಪೋಲಕಲ್ಪಿತ ಹೆಣೆದ ಆರೋಪಗಳ ಹಿಂದೆ ಜಾತಿ ವಿರೋಧಿ ನಿಲುವಿದ್ದು, ದಲಿತ ಸಚಿವ ಎನ್ನುವುದೇ ಮಾರಕ ಎಂಬಂತೆ ವಿಷವರ್ತುಲವನ್ನು ರಾಜ್ಯವಾರು ಬಿತ್ತುತ್ತಿರುವ ಬಿಜೆಪಿಗರ ಒತ್ತಾಯಕ್ಕೆ ಮಣಿಯದೆ ಆರ್.ಬಿ ತಿಮ್ಮಾಪುರ್ ಅವರನ್ನು ಅಬಕಾರಿ ಸಚಿವರಾಗಿ ಮುಂದುವರೆಸಬೇಕೆಂದು ಕರ್ನಾಟಕ ಮಾದರ ಮಹಾಸಭಾದಿಂದ ಮನವಿಯಾಗಿದೆ,
ಇಂತಹ ಘಟನೆಗಳು, ವ್ಯಥಾ ಆರೋಪಗಳಿಟ್ಟು ರಾಜಿನಾಮೆಗೆ ಒತ್ತಾಯಿಸಿ ದಲಿತ ನಾಯಕರ ವಿರುದ್ದ ಷಡ್ಯಂತ್ರ ಹೆಣೆಯುವುದು ನಿಲ್ಲಿಸದಿದ್ದಲ್ಲಿ ರಾಜ್ಯದಲ್ಲಿ ಕರ್ನಾಟಕ ಮಾದರ ಮಹಾಸಭಾದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ,
ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷರಾದ ತಿಮ್ಮಾಪುರ ಲೋಕೇಶ್, ಜಿಲ್ಲಾಧ್ಯಕ್ಷರಾದ ಕೆ.ಶಿವಾಜಿ, ಶಿವಲಿಂಗಪ್ಪ, ರಮೇಶ್, ಜನ್ನಾಪುರ ಮಂಜುನಾಥ್, ಗಾಜನೂರು ನಾಗರಾಜ್, ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

