Sunday, 1 November 2026 — Suryagagana
04:29 AM
ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I
ಅಂಕಣ

I ದಲಿತ ನಾಯಕರಿಗೆಲ್ಲಿದೆ I ಸ್ಬೂಡಾ ಅಧ್ಯಕ್ಷೀಯ ಭಾಗ್ಯ..?! I ಕಾಂಗ್ರೆಸ್ ನಲ್ಲಿ ದಲಿತ ನಾಯಕರಿಗೆ I ಅರ್ಹತೆ ಇಲ್ಲವೇ.! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ದಲಿತ ನಾಯಕರಿಗೆಲ್ಲಿದೆ I ಸ್ಬೂಡಾ ಅಧ್ಯಕ್ಷೀಯ ಭಾಗ್ಯ..?! I ಕಾಂಗ್ರೆಸ್ ನಲ್ಲಿ ದಲಿತ ನಾಯಕರಿಗೆ I ಅರ್ಹತೆ ಇಲ್ಲವೇ.! I ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಇತಿಹಾಸದಲ್ಲಿ ವಿವಿಧ ರಾಜಕೀಯ ಪಕ್ಷಗಳ ಆಡಳಿತಾವಧಿಯಲ್ಲಿ ದಲಿತ ಸಮುದಾಯದ (ಪರಿಶಿಷ್ಟ ಜಾತಿ,ಪರಿಶಿಷ್ಟ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ದಲಿತ ನಾಯಕರಿಗೆಲ್ಲಿದೆ I ಸ್ಬೂಡಾ ಅಧ್ಯಕ್ಷೀಯ ಭಾಗ್ಯ..?! I ಕಾಂಗ್ರೆಸ್ ನಲ್ಲಿ ದಲಿತ ನಾಯಕರಿಗೆ I ಅರ್ಹತೆ ಇಲ್ಲವೇ.! I

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಇತಿಹಾಸದಲ್ಲಿ ವಿವಿಧ ರಾಜಕೀಯ ಪಕ್ಷಗಳ ಆಡಳಿತಾವಧಿಯಲ್ಲಿ ದಲಿತ ಸಮುದಾಯದ (ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ)ಗಳ ಮೇರು ಪ್ರಭಾವಿ ನಾಯಕರಿದ್ದರು ಇಂದಿಗೂ ಈ ಹೊತ್ತಿನ ಆಡಳಿತಾವಧಿಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಅನುಕಂಪಿಸುತ್ತಿವೆ ವಿನಃ ಯಾವುದೇ ಕಾರಣಕ್ಕೂ ದಲಿತ ಸಮುದಾಯದ ನಾಯಕರಿಗೆ ಗುರುತರವಾದ ಜವಾಬ್ದಾರಿಯನ್ನು ನೀಡುವಲ್ಲಿ ತಮ್ಮ ಸಾಮಾಜಿಕ ನ್ಯಾಯಕ್ಕೆ ಸುಡುಬೆಂಕಿಯನ್ನು ಹಚ್ಚಿಕೊಂಡಿದೆ, ಹೌದು ಇದಕ್ಕೆ ದಲಿತ ಸಮುದಾಯದ ಏಕತೆ, ಹೊಂದಾಣಿಕೆ, ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವಲ್ಲಿ ವಿಫಲಗೊಂಡಿರುವುದೇ ಕಾರಣವೋ..?! ಅಥವಾ ಈ ಸಮುದಾಯದ ನಾಯಕರನ್ನು ಮೇಲ್ಪಂಕ್ತಿಯಲ್ಲಿ ದರ್ಶಿಸಿಕೊಳ್ಳಬೇಕಾದ ಇರ್ಷೆಯೋ..?! ಈ ಕಾಲಘಟ್ಟದಲ್ಲಿಯೂ ಕಾಪಿಟ್ಟುಕೊಂಡಿರುವ ಅಸಲಿ ಸ್ಟೋರಿ ಇಲ್ಲಿದೆ,

ಹೌದು ಇಂದು ಕಾಂಗ್ರೆಸ್ ತನ್ನ ಪಾನ್ ತೂರಿಬಿಟ್ಟಿದೆ, ಇದೇನು ರಾಜಕೀಯ ಅನಾನುಭವಿಯೋ..? ಏನೋ Nothing But Assembly Valuable ಅಧ್ಯಕ್ಷೀಯ ಪದವಿಯನ್ನು ದಲಿತ ನಾಯಕರಿಗೆ ನೀಡಲು ಹಿಂಜರಿದು ಬಿಟ್ಟಿದೆ, ಇದಲ್ಲದೆ ತಮಗೆ ಬೇಕಾದವರನ್ನು ಭದ್ರಾವತಿಯ ಶಾಸಕ ಸಂಗಮೇಶ್ವರ ಅವರು ಸೂಚಿಸಿದ್ದಾರೆ ಎನ್ನುವ ಕಾರಣಕ್ಕೆ ಈ ಅವಕಾಶ ಕೈ-ತಪ್ಪಿದೆ ಎನ್ನುವುದು ವಾಸ್ತವವಾಗಿದೆ,

ಆದರೆ ಪ್ರಸ್ತುತ ರಾಜಕೀಯ ಲೆಕ್ಕಾಚಾರ ಹಾಗೂ ಕಳೆದ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹತ್ತಿರತ್ತಿರ “ನಾಲ್ಕು ಲಕ್ಷಕ್ಕೂ ಅಧಿಕ ಮತದಾರರು” ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದಲ್ಲಿ “ನಲವತ್ತು ಸಾವಿರದಿಂದ ಐವತ್ತು ಸಾವಿರ ಮತದಾರರು” ದಲಿತರು ನಿರ್ಣಾಯಕರಾಗಿದ್ದರೂ ಯಾವುದೇ ಪಕ್ಷಗಳು ಸಾಮಾಜಿಕ ಸಮಾನತೆ ನೀಡುವಲ್ಲಿ ಸಂಪೂರ್ಣವಾಗಿ ಸೋತಿದೆ, ಇನ್ನೂ ಕಾಂಗ್ರೆಸ್ ಪಕ್ಷ “ದಲಿತರ ಛಾವಣಿ” ಎಂದು ಉವಾಚಿಸಿಕೊಳ್ಳುವಲ್ಲಿಯೇ ಮುಖವಾಡ ಧರಿಸಿಕೊಂಡು ಅನುಕಂಪಿಸುತ್ತಿದೆ ವಿನಃ ಯಾವುದೇ ಪ್ರಮುಖ ಘಟ್ಟದ ಪದವಿಯನ್ನು ದೊರಕಿಸಿಕೊಡುವಲ್ಲಿ ಮಾನಸೀಕತೆ ಕುಬ್ಜಗೊಳಿಸಿಕೊಂಡಿದೆ, ಒಂದು ಮಾತೀದೆ, “ದಲಿತರ ಮತ ಕಿತ್ತುಕೋ ಅವರಿಗೆ ಪಟ್ಟ ಮಾತ್ರ ಕೊಡಬೇಡ” ಎನ್ನುವ ಜೀತಪದ್ದತಿಯಂತೆ ಇಂದಿಗೂ ನಡೆಸಿಕೊಳ್ಳುತ್ತಿರುವುದಕ್ಕೆ ಇಂದಿನ ಸ್ಬೂಡಾ ಅಧ್ಯಕ್ಷಗಾದಿಯತ್ತ ಕಾಂಗ್ರೆಸ್ ನಡೆ ಸಾಕ್ಷೀಕರಿಸಿದೆ, ಈ ಕಟು ಸತ್ಯವನ್ನು ಒಟ್ಟಾರೆಯಾಗಿ ದಲಿತರು ಮನನ ಮಾಡಿಕೊಳ್ಳಬೇಕಾದ ಜರೂರಿಗಳಿದೆ,

ಈ ಲೇಖನದಲ್ಲಿ ಸಮುದಾಯಗಳ ಓಲೈಕೆಗಳ ಉದ್ದೇಶವಲ್ಲ, ಸಾಮಾಜಿಕ ನ್ಯಾಯದ ಮರೀಚಿಕೆಯನ್ನು ಪ್ರತಿಪಾದಿಸಿ ಸಾಂವಿಧಾನಿಕವಾಗಿ ಅಭಿವ್ಯಕ್ತಗೊಳಿಸುತ್ತಿದ್ದೇನೆ, ಈ ಮೂಲಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಹಾಗೂ ರಾಜ್ಯಾಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಅವರಿಗೆ ಪ್ರಶ್ನಿಸುತ್ತಿದ್ದೇನೆ, ತಮ್ಮಲ್ಲಿರುವ ಸಾಮಾಜಿಕ ಹಾಗೂ ಜೀವಪರತೆಗಳನ್ನು ಮತ್ತೊಮ್ಮೆ ಅವಲೋಕಿಸಿಕೊಳ್ಳಿ, ದಲಿತರ ಮತಗಳೇ ಹೆಚ್ಚಿರುವ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರವ್ಯಾಪಿಯಲ್ಲಿ ದಲಿತ ನಾಯಕರೊಬ್ಬರು ಕಾಂಗ್ರೆಸ್ ಜಿಲ್ಲಾ ಘಟಕದಲ್ಲಿ ಅರ್ಹತೆ ಪಡೆದಿಲ್ಲವೇ, ಅಥವಾ ದಲಿತರನ್ನು ಸೂಚಿಸುವ ಮನೋಧೈರ್ಯ ಈ ಹೊತ್ತಿನ ಜಾಗತಿಕ ದಿನಮಾನದಲ್ಲಿ ಇಲ್ಲವಾಯಿತೇ..?!

ದಲಿತರನ್ನು ಹೇಗೆ ಬೇಕಾದರು ನಡೆಸಿಕೊಳ್ಳಲು, ತಮಗೇನು ಸಾಮಾಜಿಕ ಅರ್ಹತೆ ಇದೆ, ಎಲ್ಲಾ ವೇದಿಕೆಗಳಲ್ಲೂ ದಲಿತರ ಕುರಿತಾದ ಮೊಸುಳೆ ಕಂಬನಿಗಳು ಯಾಕೆ ತೊಟ್ಟಿಕ್ಕುತ್ತದೆ, ಸ್ಬೂಡಾ, ಕಾಡಾದಲ್ಲಿ ಇನ್ನೂಳಿದ ನಿಗಮ ಮಂಡಳಿಗಳಲ್ಲಿ ದಲಿತ ಸಮುದಾಯದ ನಾಯಕರಿಗೆ ಸದಸ್ಯ ಸ್ಥಾನ ಮೀಸಲು ಪಡೆದಿವೆಯೇ..?! ಅಧ್ಯಕ್ಷೀಯ ಗಾದಿಗೆ ಇಂದಿಗೂ ಅರ್ಹತೆ ಹೊಂದಿಲ್ಲವೇ..?! ಇಂತಹ ಅನೇಕತೆಯ ಪ್ರಶ್ನೆಗಳು ಈ ಮೂಲಕ ತಮ್ಮ ಆವಾಗಹನೆಯತ್ತ ಕಳುಹಿದ್ದೇನೆ,

ಉತ್ತರಿಸುವ ಹಣೆಬರಹವೂ ನಿಮ್ಮದೇ, ಮುಂದಿನ ಚುನಾವಣೆಯಲ್ಲಿ ಇದರ ಗಂಭೀರತೆಯ ಹೊಣೆಗಾರಿಕೆಯು ತಮ್ಮದೇ, ಏಕೆಂದರೆ ದಲಿತರು ಬದಲಾಗಿದ್ದಾರೆ, ಎಲ್ಲರೂ ಅವರದೇ ಒಕ್ಕೂಟವನ್ನು ಎತ್ತಿ ಹಿಡಿದು ಪ್ರಾಬಲ್ಯವನ್ನು ತೋರುವುದಾದರೇ, ಖಂಡಿತವಾಗಿಯೂ ಶಿವಮೊಗ್ಗ ಸಂಸದರ ಕ್ಷೇತ್ರ ಹಾಗೂ ಶಿವಮೊಗ್ಗ ನಗರ, ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ, ಸೊರಬ ಕ್ಷೇತ್ರವಾರು ದಲಿತರ ಮತಗಳು ನಿರ್ಣಾಯಕವಾಗಿರುವುದರಿಂದ ಒಟ್ಟಾಗಿ ಏಕತೆಯಲಿ ತಮ್ಮಗಳ ಸಾಮರ್ಥ್ಯವನ್ನು ಪ್ರಸ್ತುತಪಡಿಸಿ ಕಾಂಗ್ರೆಸ್ ಪಕ್ಷ ತೋರಿದ ದಲಿತ ಧಮನೀಯತೆಗೆ ಪಾಠ ಕಲಿಸಬೇಕಾದ ಕ್ರಾಂತಿಯ ಸದ್ದು ನಿಮ್ಮಗಳ ಮುಂದಡಿಯಿದೆ, ಇದೊಂದು ಕಟುವಾದ ಸಾಲುಗಳಾಗಿದ್ದರು “ಸಾಂವಿಧಾನಿಕ ಸಮಾನತೆಗಳು” ಯಾರ ಪಿತ್ರಾರ್ಜಿತವಲ್ಲ ಎನ್ನುವ ಸಂದೇಶವನ್ನು ಲೇಖನದ ಮೂಲಕ ನಾಗರೀಕರ ವಲಯದತ್ತ ರವಾನಿಸುತ್ತಿದ್ದೇನೆ,

ಒಟ್ಟಾರೆ ದುರ್ಬಲ ಸಮುದಾಯಗಳಿಗೆ ಅವಕಾಶ ನೀಡಿದರೆ ಅಂತಹ ಸಮುದಾಯಗಳ ಪ್ರತಿನಿಧ್ಯದಿಂದ ಸಾಮಾಜಿಕ ನ್ಯಾಯದ ಕೊರತೆ ನೀಗಿಸುವ ಪ್ರಯತ್ನವಾಗುತ್ತದೆ ಎಂಬುದೇ ನನ್ನಯ ಅಂಬೋಣ,

Gara

Gara

Leave a comment

error: Content is protected !!