Saturday, August 1, 2026
Homeಸೂರ್ಯಗಗನಜು. 6ರಂದು ಪತ್ರಕರ್ತರು, ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ 

ಜು. 6ರಂದು ಪತ್ರಕರ್ತರು, ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ 

ಜು. 6ರಂದು ಪತ್ರಕರ್ತರು, ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ   
 ಶಿವಮೊಗ್ಗ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜು.೬ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಪತ್ರಕರ್ತರು, ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಶಿಬಿರದಲ್ಲಿ ರಕ್ತದೊತ್ತಡ (ಬಿಪಿ), ಇಸಿಜಿ, ಇಕೋ, ಪಲ್ಸ್, ಸ್ಯಾಚ್ಯುರೇಷನ್, ಸಿಬಿಸಿ, ಆರ್‌ಬಿಎಸ್, ಮೂತ್ರಪಿಂಡ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ತಜ್ಞ ವೈದ್ಯರು ನಡೆಸಲಿದ್ದು,  ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆಗಳ ಕುರಿತಾಗಿಯೂ ತಪಾಸಣೆ ನಡೆಸಲಿದ್ದಾರೆ ಎಂದರು.
ನಗರದ ಪ್ರತಿಷ್ಟಿತ ಮೆಟ್ರೋ ಆಸ್ಪತ್ರೆ, ಮಾತೃ ವಾತ್ಸಲ್ಯ ಆಸ್ಪತ್ರೆ, ಹೃದಯ ಸ್ಪೆಷಾಲಿಟಿ ಕ್ಲೀನಿಕ್, ಕ್ರಿಷ ಕಿಡ್ನಿ ಕೇರ್ ಸೆಂಟರ್ ಕೈಜೋಡಿಸಿದ್ದು, ತಜ್ಞ ವೈದ್ಯರುಗಳಾದ ಡಾ. ಪೃಥ್ವಿ, ಡಾ. ದಯಾನಂದ್, ಡಾ. ನಾಗಮಣಿಯವರು ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ ೧೦ ಗಂಟೆಗೆ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಶಿಬಿರವನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್‌ಬಾನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಮೋಹನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.
ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ. ಶಿವಕುಮಾರ್ ವಹಿಸಲಿದ್ದಾರೆ. ರಾಜ್ಯ ಸಮಿತಿ ನಿರ್ದೆಶಕ ಎನ್. ರವಿಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಉಪಸ್ಥಿತರಿರಲಿದ್ದಾರೆ ಎಂದರು.
ಡಾ.ಪೃಥ್ವಿ ಮಾತನಾಡಿ, ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ತಮ್ಮ ಆರೋಗ್ಯವನ್ನು ತಾವೇ ಮರೆತು ಬಿಡುತ್ತಾರೆ. ಪ್ರತಿವರ್ಷವೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್‍ಯ ಮತ್ತು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಆಸ್ಪತ್ರೆ ಕೂಡ ನೆರವಿಗೆ ಬಂದಿದ್ದು, ಈ ಆರೋಗ್ಯ ಶಿಬಿರದಲ್ಲಿ ಎತ್ತರ, ತೂಕ, ಪಲ್ಸ್, ಮಧುಮೇಹ, ಕಿಡ್ನಿಗೆ ಸಂಬಂಧಿಸಿದಂತೆ ಹಾಗೂ ಹಿಮೋಗ್ಲೋಬಿನ್ ಹೀಗೆ ಅನೇಕ ತಪಾಸಣೆಗಳನ್ನು ಮಾಡಲಾಗುವುದು. ಜೊತೆಗೆ ವೈದ್ಯರ ಸಲಹೆ ನೀಡಲಾಗುವುದು ಎಂದರು.
ಡಾ.ನಾಗವೇಣಿ ಮಾತನಾಡಿ, ಪತ್ರಕರ್ತೆಯರು ಹಾಗೂ ಅವರ ಕುಟುಂಬದ ಮಹಿಳೆಯರಿಗೆ ವಿಶೇಷವಾಗಿ ಮುಟ್ಟಿನ ತೊಂದರೆಗಳ ಬಗ್ಗೆ ಗರ್ಭಕೋಶ ಹಾಗೂ ಸ್ತನಕ್ಯಾನ್ಸರ್ ಪರೀಕ್ಷೆ, ಬಿಳಿಸೆರಗು ಮುಂತಾದ ಮಹಿಳೆಯರಿಗೆ ಸಂಬಂಧಿಸಿದ ವಿಶೇಷ ಖಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಾಗುವುದು. ಪತ್ರಕರ್ತರು ಇದರ ಪ್ರಯೋಜನ ಪಡೆಯಬೇಕು ಎಂದರು.
ಡಾ. ದಯಾನಂದ ಮಾತನಾಡಿ, ನಮ್ಮ ದೇಹದಲ್ಲಿ ಕಿಡ್ನಿಕೂಡ ಬಹುಮುಖ್ಯವಾದ ಅಂಗವಾಗಿದೆ. ಇದರ ರಕ್ಷಣೆಕೂಡ ಬಹಳ ಮುಖ್ಯ ಹಾಗಾಗಿ ಮಧುಮೇಹ ಇರುವವರು ಮತ್ತು ಇಲ್ಲದವರು ಕೂಡ ಕಿಡ್ನಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಜೊತೆಗೆ ಹೃದಯಕ್ಕೆ ಸಂಬಂಧಪಟ್ಟಂತೆ ತಪಾಸಣಾ ಮಾಡಿಸಿಕೊಳ್ಳುವುದು ಉತ್ತಮ. ಪತ್ರಕರ್ತರು ಆರೋಗ್ಯವಂತರಾಗಿದ್ದರೆ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ. ಅವರ ಒತ್ತಡದಲ್ಲಿ ಇರುತ್ತಾರೆ. ಆರೋಗ್ಯವನ್ನು ಮರೆತುಬಿಡುತ್ತಾರೆ ಎಂದರು.
ಜಿಲ್ಲೆಯ ಪತ್ರಕರ್ತರು, ಅವರ ಕುಟುಂಬ ವರ್ಗದವರು  ಶಿಬಿರದ ಪ್ರಯೋಜನ ಪಡೆಯುವಂತೆ ಕೋರಿದರು.
ಪತ್ರಕರ್ತರು ಹಾಗೂ ಕುಟುಂಬದವರು  ತಪಾಸಣೆಗೆ ಬರುವಾಗ, ತಮ್ಮ ಆಧಾರ್ ಕಾರ್ಡ್, ಸಂಘದ ಸದಸ್ಯತ್ವ ಕಾರ್ಡ್‌ಗಳನ್ನು ಕಡ್ಡಾಯವಾಗಿ ತರಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್, ಉಪಾಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಇದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I