Tuesday, September 15, 2026
Homeಸಾಹಿತ್ಯ I ಹಣದ ಮರ I

 I ಹಣದ ಮರ I

 I ಹಣದ ಮರ I

ಹಣ್ಣಿಲ್ಲ , ಕಾಯಿಲ್ಲ
ಹೂವಿನ ಘಮಲಿಲ್ಲ
ಕಾಸಿನ ತೂಕದಿ
ಜಣ – ಜಣ ಮರವೆಲ್ಲಾ .

ಹಣದ ಮರವೊಂದಿದ್ದರೆ
ಮರಗಳೇ ಜಗವಾಗುತ್ತಿತ್ತು
ಕಾಯುವಿಕೆ ಗಳಿಕೆಯ ಭರದಲಿ
ಭಾವದ ಬದುಕು ಬತ್ತುತ್ತಿತ್ತು .

ಕಾದು ಕೂರುವ ಬಕಪಕ್ಷಿಯಾಗಿ
ಮರವ ಅಲ್ಲಾಡಿಸಿ ನೋಟಿಗಾಗಿ
ಮರವ ತಬ್ಬಿ ಮನುಕುಲವೆಲ್ಲಾ
ಕೊಡಲಿ ಏಟು ಮರಕ್ಕಿಲ್ಲ .

ಕಾಸಿನ ನೋಟುಗಳು ತೂಗುತಿವೆ
ರೆಂಬೆ ಕೊಂಬೆಗೂ ಕಾವಲಿವೆ
ಹಸಿರಿನ ಮರೆಯಲಿ ಕಾಸಿದೆ
ಮರದೊಂದಿಗಾಗ ಪ್ರೀತಿಯಿದೆ .

ಹಣದ ಮೋಹದಿ ಜಗ ಆಗ
ಉಸಿರ ಹಸಿರಿಗೆ ಬೆಲೆ ಈಗ
ಜೊಳ್ಳು ಜೀವನ ಮಳ್ಳತನದಿ
ಬಾಂಧವ್ಯ ನರಿಯದೆ ಜಗಳ ದೊಂಬಿ .

ಆಸೆಯ ಬದುಕು
ಹಣದಗಳಿಕೆಯಲೇ ಕಳೆದೋಯ್ತು
ನೋಟಿನ ಮೋಹದಿ
ಹಸಿರು ಚಿರವಾಯ್ತು .

-ಬಿಂದು ಜೆ.ಕೆ, ಚನ್ನಾಪುರ

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news