ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಎಲಾ ಮಾಧ್ಯಮಿಗಳೇ I ಇದೇನು ಟಿಆರ್‌ಪಿ ಸೆಕ್ಸ್ ಸ್ಟೋರಿನಾ..?! I
ಕರ್ನಾಟಕದ ಮಾಧ್ಯಮಿ ಮನಸುಗಳಿಗೆ ಯಾವುದು ಅಭಿವ್ಯಕ್ತಿ, ಯಾವುದು ಜ್ವಲಂತತೆ ಎನ್ನುವುದು ಗೊತ್ತು ಮಾಡಿಕೊಳ್ಳಬೇಕಾದ ಪರಿಮಿತಿಗಳಿಂದ ದೂರ ಉಳಿದು ಕೇವಲ ಟಿಆರ್ಪಿಗಾಗಿ ( ಟೆಲಿವಿಷನ್ ರೇಟಿಂಗ್ ಪಾಯಿಂಟ್ ) ಸಾಂವಿಧಾನಿಕವಾಗಿರುವ ಅಭಿವ್ಯಕ್ತಿಯನ್ನು ಇಲ್ಲಿ ಬಹಿರಂಗವಾಗಿಯೇ ಹರಣ ಮಾಡಿಕೊಳ್ಳಲಾಗುತ್ತಿರುವುದು ದರ್ಶಿಸಿಕೊಳ್ಳುತ್ತಿದೆ, ಅದರಲ್ಲೂ ಲೈಂಗಿಕ ವೀಡಿಯೋಗಳು, ಇದಕ್ಕೆ ಹತ್ತಿರವಾದ ಸಣ್ಣದೊಂದು ವೀಡಿಯೋ ತುಣುಕುಗಳು ಸಿಕ್ಕರೆ ಸಾಕು, ದಿನವಿಡಿ ಅದನ್ನೇ ತೋರಿಸಿ, ರಾಸಲೀಲೆ, ಕಾಮಕೇಳಿಗಳು ಎನ್ನುವ ಅವಸರದೊಳು ಸುದ್ದಿಗಳನ್ನು ಸೃಷ್ಟಿಸುವುದು, ಇದಕ್ಕಾಗಿ ಮಾನಗೇಡಿ ಡಿಬೇಟ್‌ಗಳನ್ನು ನಡೆಸುವ ಹಂತಕ್ಕೆ ಖಾಸಗಿ ಮಾಧ್ಯಮಿಗಳು ಹೋಗಿರುವುದು ದುರಂತದ ಪರಮಾವಧಿಯಾಗಿದೆ.
ಇದಕ್ಕೆ ಕಡಿವಾಣವಾಕುವ ಮಾನಸೀಕತೆಗಳು ಕೂಡ ಆಯಾ ರಾಜ್ಯ ಸರ್ಕಾರಕ್ಕೆ, ಕೇಂದ್ರ ಸರ್ಕಾರಕ್ಕೆ ಇಲ್ಲವಾಗಿರುವುದರಿಂದಲೇ ಇದೊಂದು ಲೈಂಗಿಕ ರೇಟಿನ ಸುದ್ದಿ ಚಾನೆಲ್‌ಗಳಾಗಿ ಪರಿವರ್ತಿತವಾಗುತ್ತಲೇ ಇರುತ್ತದೆ ಎನ್ನುವುದು ವಾಸ್ತವವಾಗಿದೆ, ಈ ನಿಟ್ಟಿನಲ್ಲಿ ಮೊನ್ನೆಯಷ್ಟೆ ಮತ್ತೊಂದು ವೀಡಿಯೋ ಲಭ್ಯತೆಯಾದ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಚಾನೆಲ್‌ಗಳಲ್ಲೂ ಅದುವೇ ಸಂಗತಿ ಬಹಿರಂಗಗೊಂಡು, ಡಿಬೇಟ್‌ಗಳನ್ನು ನಡೆಸಿರುವುದು ನೋಡಿ ನಾಗರೀಕ ಸಮೂಹಕ್ಕೆ ಮುಜುಗರವೇ ಆಗಿ ಹೋಗಿ ಇಡಿ ಶಾಪವಿಟ್ಟರು ತಮಗೇನು ಇಲ್ಲವೆಂಬಂತೆ, ಮುಚ್ಚು ಮರೆಯಿಲ್ಲದೆ ಸನ್ಸಾರ್ ಮಂಡಳಿಯವರು ನಾಚಿಕೊಳ್ಳುವಷ್ಟರ ಮಟ್ಟಿಗೆ ಬಿತ್ತರಗೊಳಿಸುವುದು ಸಮಂಜಸವಾದುದ್ದಲ್ಲವಾಗಿದೆ.
ಅಸಲಿಗೆ ಡಿಜಿಪಿಯಾಗಿ ಉನ್ನತ ಹುದ್ದೆಯಲ್ಲಿದ್ದ ಕೆ.ರಾಮಚಂದ್ರ ರಾವ್ ಇನ್ನೇನು ಇದೇ ವರುಷದ ಮೇ ತಿಂಗಳಲ್ಲಿ ನಿವೃತ್ತಿ ಹೊಂದಬೇಕಾಗಿದ್ದವರು, ಇದೀಗ ಕಾಮಕೇಳಿ ಸುದ್ದಿಯಲ್ಲಿ ಸದ್ದು ಮಾಡಿಕೊಂಡಿದ್ದಾರೆ, ಈ ವೀಡಿಯೋ ಚಿತ್ರೀಕರಿಸಿದ್ದು ಹಾಗೂ ಚಿತ್ರೀಕರಣದ ಹಿಂದೆ ಡೀಲಿತ್ತು, ಇದಾಗದಿದ್ದಾಗ ಬಹಿರಂಗಗೊಂಡಿದೆ ಎನ್ನುವುದು ಇದ್ದರು, ಖಾಸಗಿ ಮಾಧ್ಯಮಿಗಳು ಈ ವೀಡಿಯೋ ಇಟ್ಟುಕೊಂಡು ಸೆಕ್ಸ್ ಸ್ಟೋರಿಯಾಗಿ ಪರಿವರ್ತಿಸಿಕೊಂಡಿರುವುದು ಅಪಹಾಸ್ಯವು ಹಾಗೂ ಅಭಿವ್ಯಕ್ತಿಯು ಆಗಿದೆ,
ಇನ್ನೂ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿರುವ ಕೆ.ರಾಮಚಂದ್ರ ರಾವ್ ಅವರು ತನ್ನ ರೋಮ್ಯಾನ್ಸ್‌ಗಾಗಿ ಬಳಸಿಕೊಂಡಿದ್ದು ಸಾರ್ವಜನಿಕವಾದ ನ್ಯಾಯ ನೀಡಬೇಕಾದ ಸರ್ಕಾರಿ ಕಛೇರಿಯಲ್ಲಿ,
ಈ ರೋಮ್ಯಾನ್ಸ್‌ನಲ್ಲಿ ತೊಡಗಿರುವ ಮಹಿಳೆ ಅದ್ಯಾಗೆ ಸಂತ್ರಸ್ಥಳಾಗುತ್ತಾಳೆ, ವೀಡಿಯೋದ ತುಣುಕಿನಲ್ಲಿರುವಂತೆ ಬಲತ್ಕರಿಸುವ, ಒತ್ತಾಯಿಸುತ್ತಿರುವ ಯಾವುದೇ ಕ್ಷಣಗಳಿಲ್ಲ ಆಕೆಯು ಒಪ್ಪಿ ರೋಮ್ಯಾನ್ಸ್‌ನಲ್ಲಿ ತೊಡಗಿಸಿಕೊಂಡಿದ್ದಾಳೆ, ಆಡಿಯೋದಲ್ಲಿ ಮಾತಾಡಿದ್ದಾಳೆ ಎಂದರೆ ಇದ್ಯಾಗೆ ಖಾಸಗಿ ಟಿವಿ ಮಾಧ್ಯಮಿಗಳಿಗೆ ರಾಸಲೀಲೆ, ಕಾಮುಕತನವಾಗಿ ಬಿಡುತ್ತದೆ, ಅಸಭ್ಯವಾಗಿ, ಅಸಹ್ಯದ ಮತ್ತೊಂದು ಮುಖವಾಗಿ ಬಿಡುತ್ತದೆ..?!, ನಿಜಕ್ಕೂ ಇದನ್ನು ಈ ಪರಿಗೆ ಮುಂದು ಮಾಡಿದವರು ಡಿಜಿಪಿನೂ ಅಲ್ಲ, ಆ ಮಹಿಳೆಯು ಅಲ್ಲವಾಗಿದೆ,
ಇದನ್ನು ರಾಜ್ಯದ ಜನತೆಗೆ ಸೆಕ್ಸ್ ಸ್ಟೋರಿಯಾಗಿ ತೋರಿಸಿದ ಖಾಸಗಿ ಮಾಧ್ಯಮಿಗಳ ಮಾನಸೀಕತೆಯ ವಿರುದ್ದ ಸಂಘಟನೆಗಳು ಮಾತಾಡಬೇಕಾದ ಹೊತ್ತು ಇದಾಗಿದೆ. ಮಹಿಳೆಯ ಜೊತೆಗೆ ರೋಮ್ಯಾನ್ಸ್ ಕಿಸ್ ಮಾಡುತ್ತಿರುವ ದೃಶ್ಯಗಳು ೪೭ ಸೆಕೆಂಡ್‌ಗಳಿದ್ದು ಇದೇ ರೀತಿಯ ಮೂರು ವೀಡಿಯೋಗಳನ್ನು ಸೆರೆ ಹಿಡಿದು ಸುಮಾರು ಏಳೆಂಟು ವರುಷಗಳಿಂದ ಇಟ್ಟುಕೊಂಡು ಅಂದರೆ ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ಬೆಳಗಾವಿನಲ್ಲಿ ಹುದ್ದೆಯಲ್ಲಿದ್ದ ಸಂದರ್ಭಕ್ಕೆ ಸಂಬಂಧಿಸಿದ್ದು ಇಂತಿಷ್ಟು ಸುಧೀರ್ಘ ದಿನಮಾನಗಳ ನಂತರ ಬಹಿರಂಗವಾಗುವುದಕ್ಕೆ ಅಸಲಿ ಕಾರಣವೇನು..? ಎನ್ನುವುದನ್ನು ಪತ್ತೆ ಹಚ್ಚುವ ಜರೂರತ್ತಿದೆ, ಏಕೆಂದರೆ ಈ ರೀತಿ ಬಹಿರಂಗವಾಗುವ ಮುನ್ನದಿ ನಡೆದಿರಬಹುದಾದ ಡೀಲಿಂಗ್‌ಗಳ ವರಾತಗಳೇನು, ಇನ್ನೂ ಸುಫ್ರೀಂ ಕೋರ್ಟ್ ಹೇಳುವಂತೆ ಹದಿಹರೆಯದ ಮೇಲ್ಪಟ್ಟ ವಯಸ್ಕರು ಒಬ್ಬರಿಗೊಬ್ಬರು ಒಪ್ಪಿತ ಸೆಕ್ಸ್ ಅಥವಾ ಲೈಂಗಿಕ ಕ್ರಿಯೇನಲ್ಲಿ ತೊಡಗಿಸಿಕೊಂಡರೆ ಅದು ಅಪರಾಧವಲ್ಲ ಎಂಬುದು ಈ ಮಾಧ್ಯಮಿಗಳಿಗೆ ತಿಳಿದಿಲ್ಲವಾಯಿತೇ..?
ಸುದ್ದಿಗೆ ಗ್ರಾಸವಾಗಬೇಕಾಗಿದ್ದು ನಡೆದಿರಬಹುದಾದ ಜವಾಬ್ದಾರಿಯುತ ಕಛೇರಿಯ ಆವರಣಕ್ಕೆ ಸಂಬಂಧಿಸಿದಂತೆ, ಆದರೆ ಇಂತಿವರು ಇದನ್ನು ಬಿಟ್ಟರು ಸೆಕ್ಸ್ ಸ್ಟೋರಿ ಮಾಡುವುದಕ್ಕೆ ಮುಂದಾಗಿ, ಅದಕ್ಕೊಂದು ರಾಸಲೀಲೆ ಎಂಬುವ ಹಣೆಪಟ್ಟಿ ಕಟ್ಟಿದ್ದು ನಿಜದ ಅಭಿವ್ಯಕ್ತಿ ಅಲ್ಲವಾಗಿದೆ.
ಈ ಹಿಂದೆಯು ಶಾಸಕರ ಭವನದಲ್ಲಿ ಸಚಿವ ಎಚ್.ವೈ. ಮೇಟಿ ಅವರ ಕುರಿತಂತೆಯು ಇದೇ ಸೆಕ್ಸ್ ಸ್ಟೋರಿಯಂತೆ ಬಿಂಬಿತವಾಗಿತ್ತು, ಇದು ಕೂಡ ಬಲತ್ಕಾರವೇನಲ್ಲ, ಇಬ್ಬರ ನಡುವಿನ ಒಪ್ಪಿತ ಸೆಕ್ಸ್ ಆಗಿತ್ತು, ಆದರೆ ಸೆಕ್ಸ್ ನಡೆದ ಸ್ಥಳ ನಾಗರೀಕ ನ್ಯಾಯ ಸಮ್ಮತ ತೀರ್ಮಾನಗಳನ್ನು ಕೈಗೊಳ್ಳಬೇಕಾದ ಸರಕಾರಿ ಇಲಾಖೆಯ ಸ್ವಾಮ್ಯದ್ದಾಗಿದ್ದು ಎನ್ನುವ ಕಾರಣವನ್ನು ಬಿಚ್ಚಿಡಬೇಕಾಗಿದ್ದನ್ನು ಬಿಟ್ಟು, ರಾಸಲೀಲೆ, ಸೆಕ್ಸ್ ಸ್ಟೋರಿ ಮಾಡಿ ಜನತೆಗೆ ತೋರಿಸುವ ಉದ್ದೇಶ ಏನಿದೆ..? ರಾಜ್ಯದ ಜನತೆಗೆ ಈ ತೆವಲುಗಳು ಅಗತ್ಯವಾಗಿ ಬೇಕಾದ ಸಂಗತಿಗಳೇ..?! ಸರ್ಕಾರಿ ಕಛೇರಿಯನ್ನು ದುರುಪಯೋಗ ಪಡಿಸಿಕೊಂಡ ಕಾರಣಕ್ಕಾಗಿ ಇಂತಿವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿರುವುದಷ್ಟೆ ಈ ಪ್ರಕರಣಗಳದ್ದಾಗಿರುತ್ತದೆ,
ವಿನಃ ಇದನ್ನೇ ಸಾರ್ವಜನಿಕ ಮೂಲಭೂತ ಸೌಕರ್ಯ ಎಂಬಂತೆ ಒಬ್ಬರಿಗೊಬ್ಬರು ಮುಗಿಬಿದ್ದು ಸೆಕ್ಸ್ ಸ್ಟೋರಿಯಾಗಿ ಪರಿವರ್ತಿತಗೊಳಿಸಿ ಸುದ್ದಿ ಮಾಡುವುದು ತರವಲ್ಲವಾಗಿದೆಈ ಮೊದಲೇ ಐಪಿಎಸ್ ವಲಯದಲ್ಲಿ ವಿಡಿಯೋ, ಆಡಿಯೋ ಕ್ಲಿಪ್‌ಗಳು ಗೊತ್ತು ಮಾಡಿದ್ದವು, ಡಿಜಿಪಿ ರಾಮಚಂದ್ರರಾವ್ ಅವರಿಗೂ ಈ ಸಂಗತಿ ಮುಟ್ಟಿತ್ತು. ಆದರೆ ಇವ್ಯಾವುದಕ್ಕೂ ಜಗ್ಗದೆ ಇದ್ದ ಕಾರಣಕ್ಕಾಗಿ ಬಹಿರಂಗಗೊಂಡಿದೆ, ಇನ್ನೂ ಇದೇ ವರುಷ ಮೇ ತಿಂಗಳ ಮಾಹೆಯಲ್ಲಿ ನಿವೃತ್ತಿ ಹೊಂದ ಬೇಕಾಗಿದ್ದವರು ಹನಿಟ್ರ್ಯಾಪ್‌ಗೆ ಒಳಗಾಗಿ ಖಾಸಗಿ ಸುದ್ದಿ ಮಾಧ್ಯಮಿಗಳಿಗೆ ಆಹಾರವಾಗಿರುವುದು ದರ್ಶಿತಗೊಂಡಿದೆ.
ಪೊಲೀಸ್ ಇಲಾಖೆ ಈ ಕುರಿತಂತೆ ಮುಜುಗರದಿಂದ ತಪ್ಪಿಸಿಕೊಳ್ಳಲು ಡಿಜಿಪಿ ರಾಮಚಂದ್ರರಾವ್ ಅವರನ್ನು ಅಮಾನತ್ತಿಲ್ಲಿಟ್ಟು ವಿಚಾರಣೆ ನಡೆಸುತ್ತಿದೆ, ಸೇವೆಗಳ ನಡತೆ, ನಿಯಮಗಳು, ೧೯೬೮ ರ ನಿಯಮ ೩ ರ ಉಲ್ಲಂಘನೆಯಾಗಿರುವುದಕ್ಕೆ ಈ ಅಮಾನತ್ತು ಅನಿವಾರ್ಯ ಎಂದು ಉನ್ನತಮಟ್ಟದ ಪೊಲೀಸ್ ವಲಯ ತಿಳಿಸಿದ್ದು ಬಿಟ್ಟರೆ ರೋಮ್ಯಾನ್ಸ್ ತಪ್ಪು ಇದು ಬಲತ್ಕಾರ ಎಂದು ಎಲ್ಲಿಯು ಹೇಳಿಲ್ಲವಾಗಿದೆ, ಸುದ್ದಿ ಬಹಿರಂಗವಾದ ಬೆನ್ನಲ್ಲೆ ಕ್ರಮ ಜರುಗಿಸಿದ್ದೇವೆ ಎನ್ನುವುದು ಕೂಡ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರವರು ಪ್ರತಿಕ್ರಿಯಿಸಿ ಗೊತ್ತಿಲ್ಲ ಎನ್ನುವ ಮಾತಿನಂತೆ ಬಚಾವ್ ಆಗಿದ್ದಾರೆ.



ಸುದ್ದಿ ಮಾಧ್ಯಮ ಬದಲಾಗಿ ಮನಿ ಮಾಧ್ಯಮ, ಆಗಿದೆ, ಇದಕ್ಕೆ ಬಳಿ ಪಶು ಆಗಬಾರದು ಉನ್ನತ ಸ್ಥಾನದಲ್ಲಿ ಇರುವವರು ತುಂಬಾ ಜಾಗರೂಕತೆಯಿಂದ ಇರಬೇಕು