Sunday, August 2, 2026
HomeಸಂಪಾದಕೀಯI ಸುಫಾರಿಗಳಿಗೆ ಹೆಣಗಳುರುಳಿಸುತ್ತಿದ್ದವನೇ I ಹೆಣವಾಗಿ ಹೋಗಿದ್ದ I ತಮಿಳು ಕುಮಾರ I

I ಸುಫಾರಿಗಳಿಗೆ ಹೆಣಗಳುರುಳಿಸುತ್ತಿದ್ದವನೇ I ಹೆಣವಾಗಿ ಹೋಗಿದ್ದ I ತಮಿಳು ಕುಮಾರ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸುಫಾರಿಗಳಿಗೆ ಹೆಣಗಳುರುಳಿಸುತ್ತಿದ್ದವನೇ I ಹೆಣವಾಗಿ ಹೋಗಿದ್ದ I ತಮಿಳು ಕುಮಾರ I

    ದನ ಕಾಯುತ್ತಿದ್ದವನು ಸುಫಾರಿ ಹಂತಕನಾದ : ಹುಂಬತನದ ಮಾತಿಗೆ ಬೆರಗಾಗಿ ಸರಣಿ ಹತ್ಯೆಯೂ ಮಾಡಿದ್ದ ಕೊನೆಗೆ ಗ್ಯಾಂಗ್‌ನಿಂದಲೂ ದೂರವುಳಿದು ಒಬ್ಬಂಟಿಯಾಗಿ ಹುಡುಕುತ್ತಿದ್ದ ಪೋಲಿಸರಿಗೂ ಚಳ್ಳೆ ಹಣ್ಣು ತಿನ್ನಿಸಿ ತರಾವರಿ ವೇಷ ಮರೆಸಿಕೊಂಡು ಅಂಡಲೆದಿದ್ದ ಹೀಗೆ ತಲೆಮರೆಸಿ ಕೊಂಡಿದ್ದಷ್ಟು ದಿನ ಹಪ್ತಾ ವಸೂಲಿ ಮಾಡಿ ತಿಂದುಂಡು ಖಾಲಿಯಾಗಿದ್ದ ಅಂತೂ ವಿಧಿ ಬರಹದಂತೆ ಪೋಲಿಸರ ಬಲೆಗೆ ಸಿಲುಕಿ ಎನ್‌ಕೌಂಟರ್ ಆದನೆಂಬ ಸುದ್ದಿಯಲ್ಲಿ ಸಮಾದಿಯಾದ ಕುಮಾರ ಯಾನೆ ತಮಿಳು ಕುಮಾರನ ಬಾಕಿ ಸಂಸಾರ ಜೋಪಡಿ ಮನೆಯಲ್ಲಿಯೇ ಸಾಗಿದೆ.

ತಮಿಳು ಕುಮಾರನ ಪೀಲ್ಡ್‌ನಲ್ಲಿ ಎಂಟ್ರಿ ಪಡೆದವರನ್ನು ಸಮಾದಿಗಟ್ಟುತ್ತಿದ್ದ ಆತನ ಪಾತಕ ಲೋಕದ ಇತಿಹಾಸ ಒಮ್ಮೇಲೆ ಎಂತಹ ರೌಡಿ ಎಲಿಮೆಂಟ್‌ಗಳೂ ಆ ಹುಂಬನ ಕಣ್ಣಿಗೆ ಬೀಳಬಾರದೆಂದು ಸಂದಿಲಿ ಇಣುಕಿ ನೋಡುವ ಪರಿಸ್ಥಿತಿ ಎದುರಾಗಿತ್ತು. ಒಂದೇ ವರುಷದಲ್ಲಿ ಮುರ್‍ನಾಲ್ಕು ಸರಣಿ ಹತ್ಯೆಯ ಪ್ರಕರಣದಲ್ಲಿ ತಮಿಳುಕುಮಾರನ ನೇಮ್ ಕೇಳಿ ಬರುತ್ತಿದ್ದ ಹಾಗೆಯೇ ಶಿವಮೊಗ್ಗದ ಕಾರ್ಡ್ಸ್ ಕ್ಲಬ್‌ನಿಂದ ಹಿಡಿದು ರೌಡಿಗಳು ಕೂಡಾ ಹಪ್ತಾ ವಸೂಲಿ ನೀಡಿದ್ದ ಮಂದಿಗಳು ಇದೀಗ ರಿಯಲ್ ಎಸ್ಟೇಟ್ ದಂದೆ ಜೊತೆಗೆ ಬಡ್ಡಿಗೆ ದುಡ್ಡು ಕೊಟ್ಟು ಆರಾಮಾಗಿ ಜೀವನವಂತೂ ಸಾಗಿಸುತ್ತಿದ್ದಾರೆ. ತಮಿಳು ಕುಮಾರ ಪಾತಕ ಪ್ರಪಂಚಕ್ಕೆ ಕಾಲಿಟ್ಟ್ಟಿದ್ದು ಆಕಸ್ಮಿಕವಾದರೂ ಆತನ ಸರಣಿ ಹತ್ಯೆಗಳು ಆದೆಷ್ಟು ಜನರ ನಿದ್ದೆಗೆಡಿಸಿತ್ತು. ಹೀಗೇ ನಿದ್ದೆಗೆಟ್ಟ ಸಾಲಿನಲ್ಲಿದ್ದವರಲ್ಲಿ ಹೇವನ್‌ಇನ್ ಶೆಟ್ಟಿಯೂ ಕೂಡ ಒಬ್ಬ ಪಾತಕಿ ಸುಪಾರಿ ಹಂತಕ ತಮಿಳು ಕುಮಾರನ ಲಾಸ್ಟ್ ಬೇಟೆಯೂ ಇವನೇ ಆಗಿದ್ದ. ಶೆಟ್ಟಿಗೆ ಪುನಾಯಿಸಿ ನಿನಗೆ ಮುಗಿಸ್ತೀನಿ ಎಂದು ಬೆದರಿಕೆ ಹಾಕಿದ್ದ ಎಂಬ ಮಾತು ಸಹ ಕೇಳಿ ಬಂದಿತ್ತು. ಶೆಟ್ಟಿ ಸಂಸದರೊಬ್ಬರ ಬೆಂಬಲಿಗನಾಗಿದ್ದರಿಂದ ಅಂದಿನ ಜಿಲ್ಲಾ ರಕ್ಷಣಾಧಿಕಾರಿ ಅರುಣ್ ಚಕ್ರವರ್ತಿ ಯವರು ಸರಣಿ ಹಂತಕ ತಮಿಳುಕುಮಾರನ ಬೇಟೆಗೆ ಪೋಲಿಸ್ ತಂಡವೊಂದನ್ನು ನಿಯೋಜಿಸಿ ತಮಿಳು ಕುಮಾರನನ್ನು ಎನ್ ಕೌಂಟರ್‌ನಲ್ಲಿ ಮುಗಿಸಿದ ಸ್ಟೋರಿ ನಿಮ್ಮ ಮುಂದಿದೆ.

ಪಾತಕಿ ತಮಿಳುಕುಮಾರ ದನಕಾದಿದ್ದು. : ಶಿವಮೊಗ್ಗದ ಗುರುಪುರದಲ್ಲಿ ದನಕಾಯುತ್ತ ಸಣ್ಣದೊಂದು ಜೀವನ ಸಾಗಿಸಲು ಮುಂದಾಗಿದ್ದ ಕುಮಾರ ಒಂದಿಷ್ಟು ಹಣ ಜೋಡಿಸಿಕೊಂಡು ಇದೇ ಗುರುಪುರದಲ್ಲಿ ಬೀಡಾ ಅಂಗಡಿಯ ಮಾಲೀಕನಾದ ಹೇಗೂ ಬದುಕಿನ ಬಂಡಿ ಸಾಗಿಸುತ್ತಿದ್ದವನು ಪಕ್ಕದಲ್ಲಿಯೇ ಟಿಲ್ಲರ್ ಗ್ಯಾರೇಜ್ ನೋಡಿಕೊಂಡಿದ್ದ ಅವಳಿ ಬ್ರದರ್‍ಸ್ ಲವ- ಕುಶರ ಜೊತೆಯ ಸ್ನೇಹ ಗಾಡವಾಗಿ ಬೆಳೆಯಿತು. ದಿನನಿತ್ಯ ಗುಂಡು ಪಾರ್ಟಿಯ ಮೋಜು ಕುಮಾರನಿಗೆ ಹಿಡಿಸಿತು. ಹೀಗಾಗಿ ಲವ- ಕುಶರೆಂಬ ಅವಳಿ ಬ್ರದರ್‍ಸ್‌ಗಳ ಜೀವದ ಗೆಳೆಯನಾಗಿ ಹೋದ ಇತ್ತಕಡೆ ಲವ ಕುಶಗೂ ಕಾಮಾಕ್ಷಿಬೀದಿಯ ಗೋಣಿಗರ ಹುಡುಗರ ನಡುವೆ ಆಗಾಗ್ಗೆ ಟಗಾಫರ್ ಕೂಡ ನಡಿತಿತ್ತು. ಅಂದು ನಿಜಕ್ಕೂ ಗೋಣಿಗರ ವೆಂಕಟೇಶ್ ಮತ್ತಿತರರು ಗುರುಪುರದ ವೈನ್ ಶಾಪ್ ಮುಂದೆ ಮಾರಕಾಸ್ತ್ರಗಳಿಂದ ಲವಕುಶರ ಮೇಲೆ ಅಟ್ಯಾಕ್ ಮಾಡಿದ್ದರು. ಅದಾಗಲೇ ಲವಕುಶ ಹಾಗೂ ಕುಮಾರ ಕೂಡ ಗೋಣಿಗರ ವೆಂಕಟೇಶ್ ಮೇಲೆ ಮುಗಿಬಿದ್ದು ಆತನನ್ನು ಬರ್ಬರವಾಗಿ ಹತ್ಯೆಗೈದು ಜೈಲು ಸೇರಿದ್ದರು. ಅಷ್ಠರಲ್ಲಿಯೇ ಕುಮಾರ ಯಾನೇ ತಮಿಳು ಕುಮಾರ ಅಂದು ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಾಗಿತ್ತು.

ತಮಿಳುಕುಮಾರ ಸುಫಾರಿ ಪಡೆದು ಮಾಡಿದ ಸರಣಿ ಹತ್ಯೆಗಳು : ಹೀಗೆ ಗೋಣಿಗರ ಹುಡುಗ ವೆಂಕಟೇಶ್‌ನ ಬರ್ಬರವಾಗಿ ಹತ್ಯೆಗೈದು ಜೈಲು ಸೇರಿ ಪಾತಕ ಲೋಕಕ್ಕೆ ಎಂಟ್ರಿ ಪಡೆದಿದ್ದ ತಮಿಳುಕುಮಾರ ಜಾಮೀನಿನ ಮೇಲೆ ಹೊರ ಬರುವ ಹೊತ್ತಿಗೆ ಸುಫಾರಿ ಹಂತಕನಾಗಿ ಬದಲಾಗಿದ್ದನು. ಸುಫಾರಿ ಪಡೆದರೆ ಮುಗೀತು ಎದುರಾಳಿಯ ರಕ್ತಚೆಲ್ಲಾಡಿ ಕ್ಷಣಾರ್ಧದಲ್ಲಿಯೇ ಪರಾರಿಯಾಗುವಷ್ಠರ ಮಟ್ಟಿಗೆ ಆತನ ಪಾತಕದ ಹೆಜ್ಜೆಗಳು ಇಂದಿಗೂ ಭೂಗತಲೋಕದಲ್ಲಿ ಕಾಣ ಸಿಗುತ್ತವೆ. ಅವನನ್ನು ಮುಗಿಸಬೇಕು ಎಂದು ಎಂದಿಗೂ ಹಣಕ್ಕಾಗಿ ಸುಪಾರಿ ಪಡೆದ ಗಿರಾಕಿ ಯಲ್ಲ. ಕೇವಲ ಗ್ಯಾಂಗ್‌ನಲ್ಲಿದ್ದವರ ವಿಶ್ವಾಸಕ್ಕೆ . ಐದು- ಹತ್ತು ಸಾವಿರ ರೂಪಾಯಿಗಳಿಗೆ ಬರ್ಬರ ಹತ್ಯೆಯಂತಹ ಕ್ರೂರತನಕ್ಕೆ ಕೈ ಹಾಕಿ ಬಿಡುವ ಕಯ್ಯಾಲಿ ತಮಿಳು ಕುಮಾರನಿಗಿತ್ತು.

ಅಂದು ಮತ್ತೊಂದು ಕೊಲೆಗೆ ಸ್ಕೆಚ್ ಆಗಿದ್ದು ಬಾಪೂಜಿ ನಗರದಲ್ಲಿ ರೌಡಿ ಆಲ್ಬರ್ಟ್ ಗ್ಯಾಂಗ್‌ನಲ್ಲಿ ಗುರುತಿಸಿ ಕೊಂಡಿದ್ದ ತುಕ್ಕಿ ಯನೆ ತುಕರಾಂನನ್ನು ಮುಗಿಸಿ ಬಿಡಲು ನೆಹರು ರಸ್ತೆಯ ಮಾಣಿಕ್ಯಂ ಬಿಲ್ಟಿಂಗ್ ಎದುರು ಆಟೋ ನಿಲ್ಲಿಸಿಕೊಂಡು ಕಾದು ಕುಳಿತ್ತಿದ್ದವನೇ ಸುಫಾರಿ ಹಂತಕ ತಮಿಳುಕುಮಾರ ಮತ್ತಿತರರು. ಎಂದಿನಂತೆ ತುಕ್ಕಿ ಯಾನೇ ತುಕರಾಂ ಕೂಡ ಅಂದೂ ಬರ್ಬರವಾಗಿ ಕೊಲೆಯಾಗಿ ಹೋಗುತ್ತೇನೆನ್ನುವ ಸಣ್ಣದೊಂದು ಗುಮಾನೆಯಿಲ್ಲದೆ ಬುಲೆಟ್ ಬೈಕ್ ಸೈಡಲ್ಲಾಕಿ ನೆಹರು ರಸ್ತೆಯ ಪುಟ್‌ಫಾತ್ ಬಳಿ ಬರುತ್ತಿದ್ದ ಹಾಗೆಯೇ ಆಟೋದಲ್ಲಿ ಕಾದು ಕುಳಿತಿದ್ದ ಪಾತಕರು ತುಕ್ಕಿ ಯಾನೆ ತುಕರಾಂನನ್ನು ಭರ್ಚಿಯಿಂದ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗುತ್ತಾರೆ. ಇದೇ ವರುಷ ದಲ್ಲಿ ಬೆಂಗಳೂರಿನ ಎಪಿಎಂಸಿ ಸೇರಿದಂತೆ ಮತ್ತೆರೆಡು ಸರಣಿ ಹತ್ಯೆಯಲ್ಲಿ ಎಂಟ್ರಿ ಹಾಕಿದ್ದ ತಮಿಳುನಾಡು ಸೇರಿಕೊಂಡಿದ್ದನು. ಶಿವಮೊಗ್ಗ ಪೋಲಿಸರು ಬೆಂಬಿಡದೆ ಕುಮಾರನನ್ನು ತಮಿಳುನಾಡಿನಲ್ಲಿಯೇ ಬಂದಿಸಿ ಶಿವಮೊಗ್ಗಕ್ಕೆ ಕರೆತಂದಾಗಲೇ ಪೋಲಿಸರು ತಮಿಳುಕುಮಾರನೆಂದು ನಾಮಕರಣ ಮಾಡಿದ್ದರು.

ಆತ ಮೂಲ ತಮಿಳಿಗನೂ ಹೌದು. ಹೀಗೆ ಜೈಲು-ಜಾಮಿನಿನ ಅಂತರದಲ್ಲಿ ಸುಫಾರಿ ಹಂತಕನ ದಿನಚರಿ ಕ್ರೂರ ಕೌರ್‍ಯದಿಂದ ಮನೆ ಮಾಡಿತ್ತು. ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ತಮಿಳುಕುಮಾರ. ಗುರುಪುರದ ಸುಬ್ರಹ್ಮಣ್ಯ ಗುಡ್ಡದಲ್ಲಿರುವ ಗುಹೆಯೇ ಅಡ್ಡೆಯಾಗಿ ಮಾಡಿಕೊಂಡಿದ್ದನು. ಈತನಿಗೆ ಶೆಟ್ಟಿ ಮಿಲ್ಟ್ರಿ ಹೋಟೆಲ್‌ನಿಂದ ಪುಡ್ ಸಪ್ಲೆಯಾಗುತ್ತಿತ್ತು. ಸದಾ ಎಂಸಿ ಬ್ರಾಂಡಿಯನ್ನು ಬಿಯರ್ ಬಾಟ್ಲಿಯೊಂದಿಗೆ ಬೆರಸಿ ಕುಡಿದು ಶೆಟ್ಟಿ ಹೋಟೆಲ್‌ನ ಕಬಾಬ್ ತಿಂದು ತೇಗಿ ಮತ್ತೆ ಕಣ್ಮರೆಯಾಗುತ್ತಿದ್ದ ತಮಿಳುಕುಮಾರ ಪ್ರಮುಖ ಗ್ಯಾಂಗ್‌ನಲ್ಲಿದ್ದ ಲವ- ಕುಶ, ನವುಲೆ ಆನಂದ , ಸ್ಟಟ್‌ನಾಗ, ಕೊಕ್ರೆಶ್ಯಾಮ, ಬಾಂಡ್ಲಿಸೀನ, ಹೆಬ್ಬೆಟ್ಟು ಮಂಜ,ಮತ್ತಿತರರನ್ನು ಬಿಟ್ಟು ಒಬ್ಬಂಟಿಯಾಗಿ ತಲೆ- ಕಣ್ಣುಬ್ಬು ಕೂಡ ಬೋಳಿಸಿಕೊಂಡು ಓಡಾಡಿಕೊಂಡಿದ್ದನು,

ಇಂತಹ ತಲೆಮಾಸಿದ ಸುಫಾರಿ ಹಂತಕನಿಗೆ ಬಳಸಿಕೊಂಡವರು ಶಿವಮೊಗ್ಗ ರೌಡಿಗಳು, ಕೆಲ ರಾಜಕಾರಣಿಗಳು, ಒಂದಿಷ್ಟು ಬಡ್ಡಿಗೆ ದುಡ್ಡು ಕೊಟ್ಟವರು ಪಟ್ಟಿ.. ಬೆಳೆಯುತ್ತ ಹೋದರೆ ತಮಿಳುಕುಮಾರನ ಹೆಸರು ಕೂಡ ಭೂಗತ ಲೋಕದಲ್ಲಿ ಮೊದಲ ಲೀಸ್ಟ್‌ಲ್ಲಿತ್ತು. ಇಷ್ಟರ ಮದೈ ಭದ್ರವಾತಿಯ ಸೌದೆಪುಟ್ಟನ ಮರ್ಡರ್ ಹಾಗೂ ಲವ- ಕುಶರೆಂಬ ಅವಳಿ ರೌಡಿಗಳ ಬರ್ಬರ ಕೊಲೆಯಲ್ಲಿ ತಮಿಳುಕುಮಾರನ ಮೊದಲ ಹೊಡೆತಗಳಿದ್ದವೂ ಎಂದು ತಮಿಳುಕುಮಾರ ಎನ್‌ಕೌಂಟರ್ ಆಗುವ ಮುನ್ನ ಪೋಲಿಸ್ ರೊಂದಿಗೆ ಬಾಯ್ಬಿಟ್ಟಿದ್ದ ಇದನ್ನು ಪೋಲಿಸರು ಬಹಿರಂಗ ಪಡಿಸಲೇಯಿಲ್ಲ ಏಕೆಂದರೆ ಆತನನ್ನು ಎನ್‌ಕೌಂಟರ್ ಹೆಸರಿನಲ್ಲಿ ಮುಗಿಸಲೇಬೇಕಿತ್ತು. ಇಲ್ಲದಿದ್ರೆ ಶಿವಮೊಗ್ಗದಲ್ಲಿ ಅದೆಷ್ಟೋ ಬರ್ಬರ ಹತ್ಯೆ -ಕೊಲೆಗೈಯುತ್ತಿದ್ದನೋ ಏನೋ..? ತಮಿಳು ಕುಮಾರನೆಂಬ ಪಾಪಿ ಪಾತಕದಲ್ಲಿ ಸುಫಾರಿ ಹಂತಕನಾಗಿ ಒಂದಿಷ್ಟು ವರುಷ ಮೋಜು- ಮಜಾ ಮಾಡಲು ಹಪ್ತಾ ವಸೂಲಿ ನೀಡುತ್ತಿದ್ದವರಲ್ಲಿ ಶಿವಮೊಗ್ಗ ಕಾರ್ಡ್ಸ ಕ್ಲಬ್ ನಡೆಸುತ್ತಿದ್ದ ಮಂಜ, ಬಂಕ್ ಚಂದ್ರ, ಸರಾಯಿ ಕಂಟ್ರ್ಯಾಕ್ಟರ್ ಜೆ.ಪಿ. ನಾರಾಯಣ್ ಸ್ವಾಮಿ, ರೌಡಿ ಆಲ್ಬರ್ಟ್, ಇವರ ಜೊತೆಗೊಂದಿಷ್ಟು ರಾಜಕಾರಣಿಗಳು ಸಹ ಪಟ್ಟಿಯಲ್ಲಿದ್ದರು. ಅದು ಕೊಡುತ್ತಿದ್ದು ಮಾತ್ರ ೫ ರಿಂದ ೧೦ ಸಾವಿರದವರೆಗೆ ಮಾತ್ರವೆಂದು ತಮಿಳುಕುಮಾರನನ್ನು ಹತ್ತಿರದಿಂದ ನೋಡಿದ್ದವರು ಹೇಳುತ್ತಾರೆ.

ತಮಿಳುಕುಮಾರನನ್ನು ಎನ್‌ಕೌಂಟರ್ ಹೆಸರಿನಲ್ಲಿ ಪೋಲಿಸರು ಮುಗಿಸಿದ್ರು : ಹತ್ಯೆ ಮಾಡಿಬಿಡಬೇಕೆನ್ನುವುದು ಮನಸ್ಸಿಗೆ ಬಂತೆಂದರೆ ಸಾಕು ಯಾಮಾರಿಸಿ ಹತ್ಯೆಯಂತಹ ಬೀಕರತೆಗೆ ಮುಂದಾಗುತ್ತಿದ್ದ ತಮಿಳುಕುಮಾರನಿಗೆ ಅದೃಷ್ಠ ಕೈ ಕೊಟ್ಟಿತ್ತು. ಸಾಗರ ರಸ್ತೆಯ ಹೆವನ್ ಇನ್ ಶೆಟ್ಟಿಗೆ ಪೋನಾಯಿಸಿ ಮುಗಿಸಿ ಬಿಡುವುದಾಗಿ ಬೆದರಿಕೆಯಾಕಿದ್ದಾಗ ಹೆವೆನ್ ಇನ್ ಶೆಟ್ಟಿ ಸಂಸದ ರಾಘುವಿನ ಕಾಲು ಕಟ್ಟಿಕೊಂಡು ಗೋಗರೆದಿದ್ದನು ಇದರಿಂದ ಸಂಸದ ರಾಘು ಅಂದಿನ ಎಸ್ಪಿ ಅರುಣ್‌ಚಕ್ರವರ್ತಿಯವರಿಗೆ ತಾಕೀತು ಮಾಡಿದ್ದರು.

ಅಂದು ಶುರುವಾಗಿದ್ದೆ ತಮಿಳುಕುಮಾರನ ಎನ್‌ಕೌಂಟರ್ ಡ್ರಾಮ, ಆದಾಗ ರೌಡಿ ನಿಯಂತ್ರಣದಳದಲ್ಲಿದ್ದ ಬಾಲರಾಜ್, ಮಾದಪ್ಪ, ಶಿವಕುಮಾರ್, ಸೇರಿದಂತೆ ಇನ್ನಿತರ ಕ್ರೈಂ ಸಿಬ್ಬಂದಿಗಳು ತಮಿಳು ಕುಮಾರನನ್ನು ಬಂಧಿಸಲು ವೇಷಮರೆಸಿ ಕೊಂಡೆಲ್ಲಾ ತಡಕಾಡಿದ್ದರೂ ತಮಿಳು ಕುಮಾರ ಮಾತ್ರ ಸಿಗಲಿಲ್ಲ.
ಕೊನೆಯಲ್ಲಿ ಹೆಣ್ಣು ಕೊಟ್ಟ ಮಾವನಿಂದಲೇ ಮಾಹಿತಿ ಪಡೆದು ಭದ್ರಾವತಿಯ ಬಾರಂದೂರುನಲ್ಲಿ ಎರಡನೆಯ ಹೆಂಡ್ತಿಯ ಮನೆಯಲ್ಲಿ ಮಲಗಿದ್ದವನನ್ನು ಹಿಡಿದು ಶಿವಮೊಗ್ಗಕ್ಕೆ ಕರೆತಂದು ಗೌಪ್ಯ ಮಾಹಿತಿಗಳನ್ನು ಕಲೆಹಾಕಿ ಗಾಜನೂರು ಗೆಸ್ಟ್ ಹೌಸ್‌ನಿಂದ, ಆಯನೂರು ಗೆಸ್ಟ್ ಹೌಸ್‌ಗೆ ಕರೆತಂದು ಮತ್ತೇ ಅಲ್ಲಿಂದ ಗಾಜನೂರು ಗೆಸ್ಟ್‌ಹೌಸ್‌ನ ಮರಗಿಡಗಳ ಮಧ್ಯೆ ರಾತ್ರಿ ಮಡುಗಟ್ಟುವ ಹೊತ್ತಿಗೆ ಕುಡಿಯೊದಿಕ್ಕೆ ಬಿಯರ್ ಕೊಟ್ಟು, ತಿನ್ನುವುದಕ್ಕೆ ಧಮ್‌ಬಿರಿಯಾನಿ ನೀಡಿದ್ದರು.

ತಮಿಳುಕುಮಾರ ತಿಂದು ಮುಗಿಸುವುದರೊಳಗೆ ಪೋಲಿಸರ ಗುಂಡು ಹಣೆ, ಎದೆ, ಹೊಟ್ಟೆ ಭಾಗಗಳಲ್ಲಿ ತೂರಿ ಹೋಗಿತ್ತು. ನಂತರ ಆತನ ಹೆಣ ಹೊತ್ತು ತಂದಿದ್ದು ನಗರದ ಹೊರವಲಯದಲ್ಲಿರುವ ಗುರುಪುರದ ಮುಂದಿರುವ ಶ್ರೀನಿವಾಸ್ ರೈಸ್ ಮಿಲ್‌ನ ಹಿಂದಿರುವ ಬೋರ್ ಮೋಟರ್ ರೂಂ ನಲ್ಲಿ ಬೆಳಗಾಗುವುದರೊಳಗೆ ತಮಿಳು ಕುಮಾರನ ಎನ್ ಕೌಂಟರ್ ಸುದ್ದಿ ರಾಚಿತ್ತು, ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಹೆಣವಾಗಿ ಮಲಗಿ ತನ್ನ ಹೀನ ಚರಿತ್ರೆಯಲ್ಲಿ ಕೊನೆಯುಸಿರೆಳೆದಿದ್ದರಿಂದ ಇನ್ನೊಂದಿಷ್ಟು ಸುಫಾರಿಗಳಿಗೆ ಹೆಣಗಳುರುಳಿಸುತ್ತಿದ್ದವನು ಹೆಣವಾಗಿ ಹೋದ ಘಟನೆ ಇಂದಿಗೂ ಹಸಿಯಾಗಿಯೇ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I