Saturday, 31 October 2026 — Suryagagana
03:57 PM
ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I
ಅಂಕಣ

I ಶಿವಮೊಗ್ಗ ನಗರಿಯ I ಸೀನು ಮಾರ್ಕಾಳಿ I ಆಕ್ಟಿಂಗ್‌ ಜರ್ನಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಶಿವಮೊಗ್ಗ ನಗರಿಯ I ಸೀನು ಮಾರ್ಕಾಳಿ I ಆಕ್ಟಿಂಗ್‌ ಜರ್ನಿ I ಮಲೆನಾಡಿನ ಮಣ್ಣಿನ ಗುಣವೇ ಅಂತಹದ್ದೂ ಇಲ್ಲಿನ ಕಲೆ,ಸಾಹಿತ್ಯಗಳು ಮೇಳೈಸಿವೆ, ಹೋರಾಟಗಳು, ಚಳುವಳಿಗಳು ಉಗಮಗೊಂಡಿವೆ ಇಂತಹ ನೆಲೆಯಲ್ಲಿ ತನ್ನ ಬಾಲ್ಯಜೀವನವನ್ನು ಕಳೆಯುತ್ತಲಿ ನಟನೆಯ ಗೀಳು ಹಚ್ಚಿಕೊಂಡು…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಶಿವಮೊಗ್ಗ ನಗರಿಯ I ಸೀನು ಮಾರ್ಕಾಳಿ I ಆಕ್ಟಿಂಗ್‌ ಜರ್ನಿ I


ಮಲೆನಾಡಿನ ಮಣ್ಣಿನ ಗುಣವೇ ಅಂತಹದ್ದೂ ಇಲ್ಲಿನ ಕಲೆ,ಸಾಹಿತ್ಯಗಳು ಮೇಳೈಸಿವೆ, ಹೋರಾಟಗಳು, ಚಳುವಳಿಗಳು ಉಗಮಗೊಂಡಿವೆ ಇಂತಹ ನೆಲೆಯಲ್ಲಿ ತನ್ನ ಬಾಲ್ಯಜೀವನವನ್ನು ಕಳೆಯುತ್ತಲಿ ನಟನೆಯ ಗೀಳು ಹಚ್ಚಿಕೊಂಡು ಅದರಂತೆ ಅನುಕರಿಸುತ್ತಿದ್ದ ಹುಡುಗ ಇಂದು ಸಿನಿಮಾ ನಗರಿಯಲ್ಲಿ ಸದ್ದು ಮಾಡಿದ್ದಾರೆ, ಹೌದು ಕಲೆಗೆ ವಿದ್ಯಾರ್ಹತೆ ಬೇಕಿಲ್ಲ, ಆಸಕ್ತಿ ಇದ್ದರಷ್ಟೆ ಸಾಕು ಅಲ್ಲೊಂದು ಮೈಲಿಗಲ್ಲನ್ನು ಸ್ಥಾಪಿತಗೊಳಿಸಬಹುದೆಂದು ಗಟ್ಟಿಯಾಗಿ ಅವಲತ್ತುಕೊಂಡು ಸಾಗಿದ ಶಿವಮೊಗ್ಗದ ಶ್ರೀನಿವಾಸ್ ಇದೀಗ ಸಿನಿಮಾರಂಗದಲ್ಲಿ ರಘುರಾಜ್ ಮಲ್ನಾಡ್ ಎಂದೇ ಕರೆಯಿಸಿಕೊಳ್ಳುತ್ತಿದ್ದಾರೆ,

ನಟನೆಯ ಗುರಿಯೊಂದಿದ್ದರೆ ಸಾಲದು ಅದಕ್ಕೆ ಪೂರಕವಾಗಿ ಸಹಿಸುವಿಕೆ ಹಾಗೂ ಜಾಣ್ಮೆಗಳು ಹೊಂದಿರಬೇಕು ಸಿನಿಮಾ ರಂಗದಲ್ಲಿ ಎನ್ನುವುದು ಪ್ರತಿಯೊಬ್ಬ ಕಲಾವಿದರಿಗೆ ಗೊತ್ತಿರಬೇಕು, ಯಾರಿಗೆ ಸಹನಶೀಲತೆ ಇಲ್ಲವೋ ಆವರು ಸಿನಿಮಾ ಜಗತ್ತಿನಿಂದ ಬಹುಬೇಗನೆ ನಿರ್ಗಮಿಸುತ್ತಾರೆ, ಸಹನಾಶೀಲತೆ ಮೈಗೂಡಿಸಿಕೊಂಡು ಸಾಧಿಸಿದವರು ಅನೇಕರೂ ಇದ್ದಾರೆ ಅದರಲ್ಲಿ ಪ್ರಮುಖವಾಗಿ ಇದಕ್ಕೆ ಸಾಕ್ಷೀ ಎಂಬಂತೆ ಬಹುತೇಕ ಅಗ್ರಸಾಲಿನ ಕಲಾವಿದರನ್ನು ನಾವು ನೋಡಬಹುದಾಗಿದೆ, ಉದಾಹರಣೆಗೆ ಕಲಾತಿಲಕ ಕನ್ನಡ ಸಾಂಸ್ಕೃತಿಕ ಲೋಕದ ಮೈಲಿಗಲ್ಲಾದ ಡಾ.ರಾಕುಮಾರ್‌ರವರು ಅದೆಷ್ಟೇ ಮೇರೆತ್ತರಕ್ಕೆ ಏರಿ ನಿಂದ ಅಗ್ರಮಾನ್ಯ ಕಲಾವಿದರಾದರೂ ಅವರೆಂದಿಗೂ ಅಮ್ಮ-ಬಿಮ್ಮಗಳನ್ನು ಎಂದಿಗೂ ಬಿತ್ತಿಯೇ ಇರಲಿಲ್ಲ, ಕಲಾಭಿಮಾನಿಗಳು ದೇವರೆಂದೆ ಹೇಳುತ್ತಿದ್ದರು ಅತ್ಯಂತ ವಿನಯದಿಂದ ಮಾತಾಡಿಸುತ್ತಿದ್ದರು ಅಂತಹದೊಂದು ಬಹುದೊಡ್ಡ ಗುಣವನ್ನು ಪುನೀತ್ ರಾಜಕುಮಾರನಲ್ಲಿಯೂ ದರ್ಶಿಸಬಹುದು. ಇಂತಹ ಅನೇಕ ಕಲಾವಿದರು ಈ ಹೊಸತಲೆಮಾರಿನ ಕಲಾವಿದರಿಗೆ ಮಾದರಿ ಎನ್ನಬಹುದು. ಇಂತಿವ ಸಂಗತಿಗಳನ್ನು ಮನನ ಮಾಡಿಕೊಂಡಿಯೇ ಜೀವ, ಜೀವನ, ಉಸಿರಾಗಿಸಿಕೊಂಡಿದ್ದೇನೆ, ಎಲ್ಲಿಯವರೆಗೂ ತಿರುವುಗಳು ಸಿಗುತ್ತದೆಯೋ ಅಲ್ಲಿಯವರೆಗೂ ಕಾಯಬೇಕು, ಕಾಯದೇ ಕ್ರಾಸ್ ಆದರೆ ಆ ವಿಳಾಸಕ್ಕೆ ಅವಕಾಶಗಳು ಬಂದು ಹಿಂತಿರುಗಬಹುದು, ಹೀಗಾಗಿ ಓರ್ವ ಕಲಾವಿದನಾಗಿ ಕಲೆ ಮುಖ್ಯವಾಗಿಸಿಕೊಂಡಿದ್ದೇನೆಯೇ ಹೊರತು ಹಣ ಮುಖ್ಯವಾಗಿಸಿಕೊಂಡಿಲ್ಲ, ಹೀಗೆನ್ನುವ ಮಾತ್ರದಿ ಹಣವೇ ಬೇಡ ಎಂದರ್ಥವಲ್ಲ ಅದು ತಾನಾಗಿಯೇ ಬರುತ್ತದೆ ಯಾವಾಗ ಅಂದರೆ ನಮ್ಮಲ್ಲಿನ ಕಲಾಗುರಿ ನೇರವಾಗಿ ದೃಡವಾಗಿ ಇದ್ದಾಗ ಮಾತ್ರ ಸಾಧ್ಯ ಎನ್ನುತ್ತಾರೆ ರಘುರಾಜ್ ಮಲ್ನಾಡ್, ಕಲವಿದರಾಗಿ ನಿಂದಾಗ ಸೆಲೆಬ್ರಿಟಿ ಭಾವಗಳು ಸಹಜ, ಹಾಗೆಯೇ ದುರಭ್ಯಾಸಗಳು ಅಮರಿಕೊಳ್ಳುವುದಕ್ಕೆ ಮೇರೆ ಮೀರಿ ಬರುತ್ತದೆ, ಗುರಿಯೊಂದಿದವರು ಅಂತಹ ದುರಭ್ಯಾಸಗಳಿಂದ ಆದಷ್ಟು ದೂರವಿದ್ದು ದಿನದ ೨೪ ಗಂಟೆಗಳು ಎಚ್ಚರದಿಂದಲೇ ಇರಬೇಕಾಗಿರುತ್ತದೆ.

ಸೋಲುಗಳು ಎಂದಿಗೂ ನಮ್ಮೊಳಗಿನ ಕಲೆಗಳನ್ನು ಸೋಲಿಸಬಾರದು, ಅದರತ್ತ ಚಿತ್ತವೂ ಹರಿಸಬಾರದು, ಹರಸುವ ಚಿತ್ತಸಮಾಜದ ಮುಂದಡಿ ಎಂದಿಗೂ ವಿಧಯತೆಯಿಂದ ವಿನಮ್ರನಾಗಬೇಕು, ಅದಾಗಲೇ ಕಲಾವಿದರು ಗೆಲ್ಲಲು ಸಾಧ್ಯ ಎಂದು ಇತ್ಯಾದಿಯೊಂದಿಗೆ ಮಾತನಾಡಿದ ರಘುರಾಜ್ ಮಲ್ನಾಡ್‌ರವರು ಸಿಕ್ಕಿರುವ ಅವಕಾಶಗಳಲ್ಲಿ ನಟಿಸಿದ್ದಾರೆ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಲೇ ಇದ್ದಾರೆ. ಕನ್ನಡ. ತಮಿಳು. ತೆಲುಗು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿ ಹೊಸತೊಂದು ಹಾದಿಯಲ್ಲಿ ಬಿಗ್ ರೋಲ್ಗಾಗಿ ಡ್ರೀಮ್ ಹೊತ್ತು ಸಾಗುತ್ತಿರುವ ಉತ್ಸಾಹಭರಿತ ಕಲಾವಿದನಾಗಿ ಸ್ಯಾಂಡಲ್‌ವುಡ್‌ನಲ್ಲಿ ದರ್ಶಿಸಿಕೊಂಡಿದ್ದಾರೆ.
ಸ್ಟೈಲ್‌ಕಿಂಗ್, ದಿ ವಿಲನ್, ನಲ್ಲಿ ಕಾಣಿಸಿಕೊಂಡ ರಘುರಾಜ್ ಮಲ್ನಾಡ್‌ಗೆ ಮತ್ತೊಂದು ಮೈಲೇಜ್ ತಂದು ಕೊಟ್ಟಿದೆ, ಹೀಗೆ ೩೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ತಮಿಳು ಭಾಷೆಯ ಧಾರವಾಹಿಯಲ್ಲಿ ನಟಿಸಿ ಕಲಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇನ್ನೂ ತೆರೆ ಕಾಣಲಿರುವ ತೆಲುಗಿನ ಮೂರು ಸಿನಿಮಾಗಳಾದ ಸಿಂಹಂ-೨, ನಾನಿ, ಪ್ರೋಡಕ್ಷನ್‌ನಂ-೧,ನಲ್ಲಿ ಮುಖ್ಯಖಳನಾಯಕನಾಗಿ ನಟಿಸುತ್ತಿದ್ದಾರೆ ಅಲ್ಲದೇ ಬಿಡುಗಡೆಗೆ ಸಿದ್ದವಾಗಿರುವ ಕನ್ನಡ ಸಿನಿಮಾಗಳಾದ ಕ್ರೋಧ ದಲ್ಲಿ ಸ್ಮಗ್ಲರ್ ಪಾತ್ರದಲ್ಲಿ ನಟಿಸಿದ್ದರೆ, ಮದಕರಿಪುರದಲ್ಲಿ ಥೇಟ್ ಸಂಪತ್ತಿಗೆ ಸವಾಲಿನಲ್ಲಿ ಭರ್ಜರಿಯಾಗಿ ಘರ್ಜಿಸಿದ್ದ ವಜ್ರಮುನಿ ಪಾತ್ರದಂತೆ ಇಲ್ಲಿಯೂ ಪಾತ್ರವೊಂದನ್ನು ಕ್ರಿಯೇಟ್ ಆಗಿದ್ದು ಆ ಅವಕಾಶ ಇದೇ ರಘುರಾಜ್ ಮಲ್ನಾಡ್‌ಗೆ ಸಿಕ್ಕಿದೆ, ಮೃಗ ಸಿನಿಮಾದಲ್ಲಿ ಪತ್ತೆದಾರಿ ಪಾತ್ರ, ಉತ್ತಮರು ಸಿನಿಮಾದಲ್ಲಿ ಮುಖ್ಯ ಖಳನಾಯಕನಾಗಿ ನಟಿಸುತ್ತಿರುವ ರಘುರಾಜ್ ಈ ಚಿತ್ರಗಳು ಮುಂದಿನ ಭಾರಿ ಚಿತ್ರಗಳಲ್ಲಿನ ನಟನೆಗಳಿಗೊಂದು ಮೈಲೇಜ್ ಸಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಪೋಲೀಸ್ ಸ್ಟೋರಿ-೨ ಚಿತ್ರದಿಂದ ನಟನೆಯ ಗೀಳು ಶುರುವಿಟ್ಟುಕೊಂಡ ರಘುರಾಜ್ ಇಲ್ಲಿಗೆ ೩೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ತೆರೆಗೆ ಅಪ್ಪಳಿಸಿದ ಸಿನಿಮಾಗಳು ಸಿನಿ ಸದ್ದು ಮಾಡಿದರೆ
ರಘುರಾಜ್ ಮಲ್ನಾಡ್‌ರವರಿಗೂ ಚಿತ್ರಜೀವನ ಮುಂದಿನ ದಿನಗಳಲ್ಲಿ ಸಾಧಿತ ತಿರುವು ಕಾಣಬಹುದಾಗಿದೆ. ಇದೀಗ ವ್ಹೀಲ್ ಚೇರ್ ರೋಮಿಯೋ ದಲ್ಲಿ ತೆರೆಗೆ ಬಂದ ಸಿನಿಮಾದಲ್ಲಿ ಬಿಗ್ ರೋಲ್‌ನಲ್ಲಿ ಮಿಂಚಿದ್ದಾರೆ. ಈ ಚಿತ್ರಕಥೆಯೂ ವಾಸ್ತವತೆಯ ತಳಹದಿಯನ್ನು ಸಾರಿದ್ದು ನಟ ಶಿವರಾಜ್‌ಕುಮಾರ್‌ರವರು ಶುಭ ಹಾರೈಸಿದ್ದ ವ್ಹೀಲ್ ಚೇರ್ ಚಿತ್ರ ಬಿಡುಗಡೆಗೊಂಡು ಸದ್ದು ಮಾಡಿತ್ತು. ಇನ್ನೂ ತಮಿಳು ಚಿತ್ರರಂಗದಲ್ಲಿ ಚದುರಂಗವೇಟೆ-೨, ನಾನ್ ಚಿತ್ರದಲ್ಲಿ ಬಾಂಬೆ ಡಾನ್ ಆಗಿ ಕಾಣಿಸಿಕೊಂಡಿರುವ ಕಿರುಚಿತ್ರ ವಳ್ಳಿ ಎನ್ನುವ ಧಾರವಾಹಿ, ಕನ್ನಡದ ಗೀತಾ ಸೀರಿಯಲ್‌ಗಳಲ್ಲಿ ನಟಿಸಿ ಫ್ಯಾನ್ ಇಂಡಿಯಾ ಚಿತ್ರ ನಿರ್ಮಾಣದಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿರುವ ಹುಡುಗ ಇಂದಿಗೂ ಈ ಕ್ಷಣಕ್ಕೂ ಚಿತ್ರಜೀವನದ ಬಗ್ಗೆಯೇ ಕನಸು ಕಾಣುತ್ತಿರುವುದು ಅದಕ್ಕಾಗಿ ಶ್ರಮಿಸುತ್ತಿರುವುದು, ಕಾಯುತ್ತಿರುವುದು ನೋಡಿದಾಗ ರಘುರಾಜ್ ಮಲ್ನಾಡ್ ಕಲೆಗಾಗಿ ಜೀವವನ್ನು ಬೆಲೆ ತೆತ್ತುವ ಕೊನೆಯ ಆಸರೆಯ ತನಕವೂ ತಪಸ್ವಿಯಂತೆ ನಿಲ್ಲುತ್ತೇನೆ, ಕಲೆಯನ್ನು ಎಂದೆಂದಿಗೂ ಆರಾಧಿಸುತ್ತೇನೆ ಎನ್ನುವ ಅವರ ಕಣ್ಣಲ್ಲಿ ಕಲಾ ನಿರ್ಧಾರತೆಗಳು ಪ್ರತಿಬಿಂಬಿಸುತ್ತಿರುವುದು ಕಾಣುತ್ತದೆ.

ಕೊರೋನಾ ಅಂತಹ ಕಾಲದ ನಂತರದ ಕಲಾಬದುಕಿನ ಕುರಿತಾಗಿ ಅವರನ್ನು ಕೇಳಿದಾಗ ಅವರು ಸ್ಟಾರ್ ಸಿನಿಮಾ ನಟರ ಒಂದಿಷ್ಟು ಸೇವೆಯನ್ನು ತಿಳಿಸುತ್ತಾರೆ, ಅವರ ಸೇವೆಗಳು ಪ್ರಚುರಕ್ಕಾಗಿ ಅಲ್ಲ, ಮಾನವೀಯ ಗುಣಕ್ಕಾಗಿ ಎನ್ನುವ ಕಾರಣಕ್ಕೆ ಎಲ್ಲಿಯೂ ಅವರ ಈ ಸೇವೆಗಳು ಪ್ರಚುರ ಪಡೆದಿಲ್ಲವಷ್ಟೆ, ೨೦೨೦ರ ಸುಮಾರಿಗೆ ಎರಗಿದ್ದ ಕೊರೋನಾ ಸಾಂಕ್ರಮಿಕತೆಯಿಂದ ಶೂಟಿಂಗ್ ಸ್ಥಗಿತಗೊಂಡಿತ್ತು, ಸೀಲ್ಡೌನ್-ಲಾಕ್ಡೌನ್ ವಿಪರೀತಗಳು ಆವರಿಸಿಕೊಂಡಿದ್ದವು ಅದಾಗ ನೆರವಿಗೆ ಬಂದಿದ್ದು ನಟ ಯಶ್ ಅವರು ಮಾಡಿದಿಷ್ಟು, ಸಹಕಲಾವಿದರನ್ನು, ಪ್ರೋಡಕ್ಷನ್ ಸಿಬ್ಬಂದಿಗಳ ಪಟ್ಟಿಯಂತೆ ತಲಾ ೫೦೦೦ರೂ ನಂತೆ ಸುಮಾರು ೫ಕೋಟಿ ಹಣ ನೀಡಿದ್ದಾರಲ್ಲದೆ ಪುಡ್ ಕಿಟ್ ನೀಡಿದ್ದರು, ನಂತರ ಪುನೀತ್ ರಾಜಕುಮಾರ್‌ರವರು ಕೊರೋನಾ ಸಂತ್ರಸ್ಥ ನಿಧಿಗೆ ೫೦,ಲಕ್ಷ ಚೆಕ್ ವಿತರಿಸಿದರು, ಶಿವರಾಜ್‌ಕುಮಾರ್, ದರ್ಶನ್, ಕಿಚ್ಚಸುಧೀಪ್ ಇನ್ನೂ ಮುಂತಾದವರು ಕೊರೋನಾ ಪೀಡಿತ ಸಹಕಲಾವಿದರ ನೆರವಿಗೆ ಬಂದಿದ್ದಾರೆ, ಈ ಸಂದರ್ಭದಲ್ಲಿ ಸಾಕಷ್ಟು ಕಲಾವಿದರು ಅಸುನೀಗಿದ್ದಾರೆ, ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ, ಇದೀಗ ಕೊರೋನಾ ತಹಬದಿಗೆ ಇದ್ದು ಶೂಟಿಂಗ್ ಶುರುವಾಗಿದೆ ಎಲ್ಲಾ ಕಲಾವಿದರು ಮತ್ತೆ ಸಿನಿಮಾ ಸೆಟ್‌ಗಳತ್ತ ಕೆಲಸ ಶುರು ಮಾಡಿದ್ದಾರೆ, ಎಂತಹುದೇ ಸಂದರ್ಭದಲ್ಲಿಯೂ ಧೃತಿಗೆಡಬಾರದಷ್ಟೆ ಎನ್ನುತ್ತಾರೆ.

ಇದೀಗ ತನ್ನದೇ ಬ್ಯಾನರ್ ಅಡಿಯಲ್ಲಿ ವೆಬ್ ಸೀರೀಸ್ ಪ್ರಯತ್ನದಲ್ಲಿದ್ದೇನೆ, ಮಗ ವರ ಪ್ರಸಾದ್ ಶರ್ಮಾ ನಿರ್ದೇಶಕನಾಗಿ ಕ್ಲ್ಯಾಪ್ ಮಾಡಲು ಮುಂದಡಿಯಿಟ್ಟಿದ್ದಾನೆ ಈ ಮಲೆನಾಡಿಗರ ಹಾರೈಕೆ ಇರಲಿ ಎಂದು ಈ ಸಂದರ್ಭದಲ್ಲಿ ತಿಳಿಸಿ ಸೂರ್ಯಗಗನ ಟೀಮ್ ವತಿಯಿಂದ ಬರಹದ ಅಭಿವ್ಯಕ್ತಿಯಡಿ ಸಿಹಿಮೊಗೆಯ ಕಲಾ ದಸರಾ ದಲ್ಲಿ ಮತ್ತೊಮ್ಮೆ ಗುರುತಿಸಿ ಹಾರೈಸಿರುವ ಬರಹಕೆ ನಾವೆಂದಿಗೂ ಋಣಿ ಎಂದು ಉವಾಚಿಸಿದ್ದಾರೆ.

Gara

Gara

Leave a comment

error: Content is protected !!