I 2026 ರಿಂದ ಸಹಕಾರ ಡಿಪ್ಲೊಮಾ ತರಬೇತಿಗೆ ಅರ್ಜಿ I
ಶಿವಮೊಗ್ಗ:ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ (ಕೆ.ಐ.ಸಿ.ಎಂ), ಶಿವಮೊಗ್ಗ ಸಹಕಾರ ತರಬೇತಿ ಸಂಸ್ಥೆಯು 2026 ಜನವರಿ 1 ರಿಂದ 6 ತಿಂಗಳ ಅವಧಿಯ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ (ಡಿ.ಸಿ.ಎಂ) ಕೋರ್ಸ್” ಸಹಕಾರ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಸಹಕಾರ ಡಿಪ್ಲೋಮಾ ಕೋರ್ಸ್ ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ SSLCಯಾಗಿದ್ದು, ತರಬೇತಿ ಅವಧಿಯಲ್ಲಿ ಕಂಪ್ಯೂಟರ್ ತರಬೇತಿ ಸೇರಿದಂತೆ ಪ್ರತಿ ತಿಂಗಳು ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ರೂ. 600 ಶಿಷ್ಯವೇತನ ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ 500 ಶಿಷ್ಯ ವೇತನವನ್ನು ನೀಡಲಾಗುವುದು.
ರಾಜ್ಯದ ಎಲ್ಲಾ ಸಹಕಾರ ಸಂಘ, ಸಂಸ್ಥೆ/ಬ್ಯಾಂಕ್ ಗಳಲ್ಲಿನ ಉದ್ಯೋಗಗಳ ನೇಮಕಾತಿಗೆ ಮತ್ತು ಉದ್ಯೋಗದಲ್ಲಿರುವವರ ಪದೋನ್ನತಿಗೆ ಕಡ್ಡಾಯವಾಗಿರುತ್ತದೆ.
ಡಿ.ಸಿ.ಎಂ ಕೋರ್ಸ್ ತರಬೇತಿಯನ್ನು ಸಹಕಾರ ಸಂಘ/ಯಾವುದೇ ಖಾಸಗಿ ಸಂಸ್ಥೆಗಳಲ್ಲಿನ ನೌಕರರಿಗೆ ಮಾತ್ರ ದೂರ ಶಿಕ್ಷಣದ ಮೂಲಕ ತರಬೇತಿ ಪಡೆಯಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, 2ನೇ ಹಂತ, ವಿನೋಬನಗರ, ಶಿವಮೊಗ್ಗದಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು 2025 ರ ಡಿಸೆಂಬರ್ 25 ಕೊನೆಯ ದಿನವಾಗಿದೆ.
ಅರ್ಜಿಗಳು ದೊರೆಯುವ ಸ್ಥಳ:
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ (ಕೆ.ಐ.ಸಿ.ಎಂ), ಶಿವಮೊಗ್ಗ, ಜಿಲ್ಲಾ ಸಹಕಾರ ಯೂನಿಯನ್ ನಿ., ಚಿತ್ರದುರ್ಗ, ಜಿಲ್ಲಾ ಸಹಕಾರ ಯೂನಿಯನ್ ನಿ., ದಾವಣಗೆರೆ, ಜಿಲ್ಲಾಇವೆ ಎಂದಕಾರ ಯೂನಿಯನ್ ನಿ., ಚಿಕ್ಕಮಗಳೂರು. ಇಲ್ಲಿ ಲಭ್ಯ ಇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ದೂರವಾಣಿ 08182-248873, ಮೊಬೈಲ್ 9449075746, 702244115, 8310554752, 7026246493, 9482216930 ಸಂಪರ್ಕಿಸಬಹುದು.

