Sunday, August 2, 2026
HomeಅಂಕಣI ರಾಜ್ಯದಲ್ಲಿ ಸದ್ದಿಟ್ಟಿದ I 'ಲ್ಯಾಂಡ್ ಲಾರ್ಡ್' I ಇದು ಸಂಧಾನವಲ್ಲ ಸಂವಿಧಾನ I

I ರಾಜ್ಯದಲ್ಲಿ ಸದ್ದಿಟ್ಟಿದ I ‘ಲ್ಯಾಂಡ್ ಲಾರ್ಡ್’ I ಇದು ಸಂಧಾನವಲ್ಲ ಸಂವಿಧಾನ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ರಾಜ್ಯದಲ್ಲಿ ಸದ್ದಿಟ್ಟಿದ I ‘ಲ್ಯಾಂಡ್ ಲಾರ್ಡ್’ I ಇದು ಸಂಧಾನವಲ್ಲ ಸಂವಿಧಾನ I

ಚಲನಚಿತ್ರರಂಗದ ಬಣ್ಣ ಬದಲಾಗಿದೆ, ಮತ್ತದರ ಮೇಲಿನ ಹಿಡಿತಗಳಿಗಾಗಿ ಹಪಾಹಪಿತನಗಳ ಬಿತ್ತುವ ಕಿಡಿಗೇಡಿಗಳು ವ್ಯಾಪಕರಿಸುತ್ತಿದೆ, ಹೀಗಾಗಿ ಸಾಮಾಜಿಕ ಜಾಲತಣದಲ್ಲಿ ನಾಯಕ ನಟ, ನಟಿಯರುಗಳ ಅದರಲ್ಲೂ ಸ್ಟಾರ್ ಸೆಲಿಬ್ರಿಟಿಗಳ ಜಾತಿಗಳನ್ನು ಹೊತ್ತು ಕೊಟ್ಟು ವೈರಲ್ ಮಾಡುತ್ತಿದೆ, ಈ ಬೇನಾಮಿಗಳಿಗೆ ಕಲಾ ಮಾಧ್ಯಮವಿದು ಎಂದಿಗೂ ಜಾತಿ, ಧರ್ಮಗಳನ್ನು ತುಷ್ಠೀಕರಿಸಲಾಗದು, ಸಮರ್ಥನೆಯು ಮಾಡಲಾಗದು, ಇವೆರಡರಿಂದ ದೂರವಿದ್ದು ಏಳು ಕೋಟಿ ಕನ್ನಡಿಗರ ಜಗಲಿಗಳಲ್ಲಿ ವಿರಾಜಿಸಬೇಕು, ಇದರಲ್ಲೂ ಜಾತಿಯತೆಯ ವಿಷವರ್ತುಲವನ್ನು ಸಿಕ್ಕಿಸಬಾರದು ಎನ್ನುವುದಿದ್ದರು ಇತ್ತೀಚೆಗೆ ಸ್ಟಾರ್ ಕಲಾವಿದರ ಜಾತಿಯತೆಯ ಜನ್ಮ ಕುಂಡಲಿಯನ್ನು ಬಿಡದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವ ಅಧಮರು ತಿಳಿದಂತೆ, ಅಥವಾ ಯೋಜಿಸಿದಂತೆ ಆಗದು ಎನ್ನುವುದಕ್ಕೆ ಸಮಗ್ರತ್ವದ ಮನೋಭಾವನೆಯಡಿ ಕನ್ನಡಿಗರು ಕನ್ನಡದ ಕಲಾವಿದರನ್ನು ಅಪ್ಪಿಕೊಳ್ಳುತ್ತಿರುವುದಕ್ಕೆ ನಟ ಝೈದ್ ಖಾನ್ ಕಾರಣರೆಂದೇಳಬಹುದು, ಇದಲ್ಲದೆ ಇತ್ತೀಚೆಗೆ ತೆರೆಕಂಡಿದ್ದ ನಟ ದರ್ಶನ್ ಅಭಿನಯದ ಕಾಟೇರಾ ಕೂಡ ಇಂತಹದೊಂದು ಸಮುದಾಯದ ತಳಸ್ಪರ್ಶಿ ಕತೆಯನ್ನು ಹೆಣೆದು ಚಿತ್ರ ಸಮಾಜವನ್ನು ಸೆಳೆದಿತ್ತು,

ಕಾಟೇರಾದ ಕತೆಯನ್ನು ಜಡೇಶ್ ಹಂಪಿ ಬರೆದು ಯಶಸ್ಸು ಆಗಿದ್ದರು, ಇದೀಗ ಅಂತಹುದೇ ಕತೆಯನ್ನು ಹೆಣೆದಿರುವ ಇಂತಿವರು ಲ್ಯಾಂಡ್ ಲಾರ್ಡ್ ಗೂ ಕತೆಯನ್ನು ಬರೆದು ನಿರ್ದೇಶಿಸಿದ್ದಾರೆ, ಅಸಲು ಈ ಕತೆ ಹಾಗೂ ಕಥಾನಾಯಕನಾಗಿ ಪ್ರಮುಖ ಪಾತ್ರವಾದ ರಾಚಯ್ಯನಾಗಿ ನಟಿಸಿರುವ ದುನಿಯಾ ವಿಜಯ್ ಹಾಗೂ ನಟಿ ರಚಿತಾರಾಮ್ ಕ್ರಾಂತಿ ಕಡಲಿನಲ್ಲಿ ತೇಲಿಸಿದ್ದಾರೆ, ಭೂಮಿಯ ಹಕ್ಕಿಗಾಗಿ ಹೋರಾಡುವ ಹೆಜ್ಜೆಗಳು ಈ ಹೊತ್ತಿಗೂ ಪ್ರಸ್ತುತ ಬಲಿತವರ ಮುಂದಡಿ ದುರ್ಬಲ ವರ್ಗದವರ ಹಾಡು-ಪಾಡು ವಾಸ್ತವ ಮಜಲಿನಲ್ಲಿ ಇರುವುದರಿಂದಲೇ ಈ ಕತೆ ಜನತೆಗೆ ಇಷ್ಟವಾಗಿದೆ, ಅಲ್ಲದೆ ಈ ಚಿತ್ರದ ಎಲ್ಲಾ ಪಾತ್ರಗಳು ಅದಷ್ಟೆ ಜೀವತುಂಬಿ ಘರ್ಜಿಸಿದೆ.

ಚಿತ್ರಕತೆನಲ್ಲಿರುವಂತೆ ೮೦ರ ದಶಕದ ಒಂದು ಹಳ್ಳಿಯ ಸ್ಟೋರಿ ಇದಾಗಿದ್ದರು ನಟನೆಗಳು ಈ ಹೊತ್ತಿನ ಎಲ್ಲಾ ಜನ ಸಮುದಾಯದಲ್ಲಿರುವ ಶೋಷಿತರಿಗೆ ರೊಚ್ಚಿಗೆಬ್ಬಿಸಿದೆ, ಒಂದು ಚಿತ್ರ, ಸಾವಿರಾರು ಸೂರುಗಳ ದಿಟ್ಟ ಹೆಜ್ಜೆಗೆ ಲ್ಯಾಂಡ್ ಲಾರ್ಡ್ ಕಾರಣವಾಗಿದ್ದು ಇದು ಸಂಧಾನವಲ್ಲ ಸಂವಿಧಾನ ಎನ್ನುವ ಸಂಭಾಷಣೆಯ ಸಾಲುಗಳು ಗಮನಾರ್ಹವಾಗಿದೆ, ಬಡವರ ಹಕ್ಕುಗಳಿಗೆ ಚ್ಯುತಿ ಆಗಬಾರದು, ಸಹಿಸಿಕೊಳ್ಳುವ ಮಾತಿಲ್ಲದೆ ಹೋರಾಟ ನಡೆಸಿ ಕಿತ್ತುಕೊಳ್ಳಬೇಕಾದ ಸಾಂದರ್ಭಿಕತೆಗಳು ಜನರ ಮುಂದಿದೆ ಎನ್ನುವ ಸಂದೇಶಾತ್ಮಕ ದೃಶ್ಯಾವಳಿಗಳಿಂದ ಜನ ಅರಿವಿಗೆ ಹಿಡಿದ ದೀವಿಗೆಯಂತೆ ದುನಿಯಾ ವಿಜಯ್ ಹಾಗೂ ರಚಿತಾ ರಾಮ್, ಹಿರಿಯ ನಟಿ ಉಮಾಶ್ರೀ, ರಿತನ್ಯಾ ರವರುಗಳು ನಟಿಸಿ ಜನಮೆಚ್ಚುಗೆಗಳಿಸಿದ್ದಾರೆ.

ಈ ಚಿತ್ರದ ಒಟ್ಟು ಸಾರಾಂಶ, ನಟನೆ, ಈ ಕಾಲಘಟ್ಟದಲ್ಲಾಗುತ್ತಿರುವ ಕಾನೂನು ದುರುಪಯೋಗ, ಬಲಿತವರ ಮುಂದಡಿ ಬಡ ಹಾಗೂ ದುರ್ಬಲ ವರ್ಗದವರನ್ನು ಅದ್ಯಾಗೆ ವ್ಯವಸ್ಥಿತವಾಗಿ ಧಮನಿಸಲಾಗುತ್ತದೆ ಎನ್ನುವುದು ದರ್ಶಿಸಿದ ದೃಶ್ಯಾವಳಿಗಳಿಂದ ಜನ ಹಾಗೂ ಜನ ಸಂಘಟನೆಗಳು, ಸಂಘಟಿತ ಮನಸುಗಳು ಬೇಷ್ ಎಂದಿದೆ ಅಲ್ಲದೆ, ಚಿತ್ರ ಪರವಾದ ಅಭಿಪ್ರಾಯ ಮಂಡಿಸಿದ್ದಾರೆ, ಇಲ್ಲಿ ತಿಳಿಯಬೇಕಾದದ್ದು ಇಷ್ಟೆ, ನಟ ದುನಿಯಾ ವಿಜಯ್ ಕೊಡಲಿ ರಾಚಯ್ಯನಾಗಿ ತೆರೆಯ ಮ್ಯಾಲೆ ಆರ್ಭಟಿಸಿರುವ ಮುಂದಡಿ ಸಾಮಾಜಿಕ ವಾಸ್ತವ ತಳಹದಿಯಲ್ಲಿಯು ಅನೇಕ ಸವಾಲುಗಳನ್ನು ಎದುರಿಸಬೇಕಾದ ಪ್ರಮೇಯಗಳನ್ನು ದೂರತಳ್ಳಿ ನಾನೆಂದಿಗೂ ಇಂತಹ ತಳಸ್ಪರ್ಶಿ ಕತೆಗಳಿಗೆ ಯಾರು ಕಾಸು ಹಾಕಲು ಮನಸು ಮಾಡಿದಿದ್ದರು ಸರಿ ಸ್ವತಃ ಖುದ್ದು ನಾನೇ ಕಾಸು ಹಾಕಿ ಇಂತಹ ಮತ್ತಷ್ಟು ಸಿನಿಮಾಗಳನ್ನು ಮಾಡುತ್ತೇನೆ, ಈ ಮೂಲಕ ಬಡವರ ಪರವಾದ ದನಿಯಾಗುತ್ತೇನೆ ಎನ್ನುವುದು ಒಪ್ಪಿಕೊಳ್ಳಬೇಕಾದದ್ದಾಗಿದೆ,

ಸಮಾನತೆ, ಸಂವಿಧಾನದ ಮೂಲ ಆಶಯಗಳನ್ನು ಗಾಳಿಗೆ ತೂರುವ ಒಂದಷ್ಟು ಬೆಳವಣಿಗೆಗಳಲ್ಲಿ , ಕಿಳಿರಿಮೆಗಳನ್ನಿಟ್ಟು ದಾಳಿ ನಡೆಸುವ ಜಾತಿಯ ಅಧಮರ ಗುಂಪುಗಳ ಕುತಂತ್ರ ಹಾಗೂ ತಂತ್ರಗಾರಿಕೆಗಳಿಗೆ ತಲೆಯೊಡ್ಡಿ ಎದೆಗೊಟ್ಟು ಆಶಯಗಳನ್ನು ಉಳಿಸುತ್ತೇನೆ ಎನ್ನುವ ನಟ ದುನಿಯಾ ವಿಜಯ್ ಈ ಹೊತ್ತಿನ ಕ್ರಾಂತಿ ಕಲಾವಿದ ಎಂದೇ ಬಣ್ಣಿಸಲ್ಪಡುತ್ತಾರೆ, ನಿರ್ಮಾಪಕರಾದ ಕೆ.ವಿ. ಸತ್ಯಪ್ರಕಾಶ್‌ರವರು ಇಂತಹ ಕತೆಗಳು ದುಡ್ಡು ಮಾಡುವುದಿಲ್ಲ, ಇಂತಹ ಚಿತ್ರಗಳಿಗೆ ಬಜೆಟ್ ಹಾಕಬೇಡಿ ಎನ್ನುವ ಕಿವಿಮಾತುಗಳಿಗೆ ಜಗ್ಗದೆ ಕಲಾವಿದರ ಮೇಲಿನ ನಂಬಿಕೆ, ಕತೆಯ ಆಶಯಗಳ ಮೇಲಿನ ಗೌರವ, ಬಡವರ ಪರವಾಗಿ ನಿಲ್ಲಬೇಕಾಗಿರುವ ಆಧ್ಯತೆಗಳಿಗೆ ಗಮನ ಕೊಟ್ಟಿರುವುದು ಹಾಗೂ ಗೌರವಿಸಿರುವುದರಿಂದಲೇ ಸಿನಿಮಾ ಸೋಲುವುದಕ್ಕೆ ಜನತೆ ಬಿಟ್ಟಿಲ್ಲವಾಗಿದೆ, ಕಳೆದ ದಿನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಜಾಥ ನಡೆಸಿ ಸಿನಿಮಾ ನೋಡಿರುವುದು ಸ್ಯಾಂಡಲ್‌ವುಡ್‌ನಲ್ಲಿ ಇದೇ ಮೊದಲಾಗಿದೆ. ಚರಿತ್ರೆಯು ಆಗಿದೆ.

ಸಿನಿಮಾ ತಂಡದ ಗಟ್ಟಿತನ, ಮಗಳ ಪಾತ್ರದಲ್ಲಿ ನಟಿಸಿರುವ ರಿತನ್ಯಾ ಅವರ ಮೊದಲ ಸಿನಿಮಾ ಇದಾಗಿದ್ದರು, ಓರ್ವ ಅನುಭವಿ ಕಲಾವಿದರಂತೆ ನಟಿಸಿ ಸೈ ಎನಿಸಿಕೊಂಡಿರುವುದು ಶ್ಲಾಘನೀಯ, ಇನ್ನೂ ಈ ಚಿತ್ರದಲ್ಲಿ ಪ್ರತಿಭಾವಂತ ಕಲಾವಿದ ದಂಡು ಇದೆ. ಹಿರಿಯ ನಟಿ ಉಮಾಶ್ರೀ ಅವರು ಈ ಸಿನಿಮಾದಲ್ಲಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ತಮ್ಮ ಛಾಪು ಮೂಡಿಸಿದ್ದಾರೆ. ಇನ್ನೂ ರಾಜ್ ಬಿ. ಶೆಟ್ಟಿ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ದರ್ಶಿಸಿಕೊಂಡು ಈ ಪಾತ್ರಕ್ಕೂ ನ್ಯಾಯ ತುಂಬಿದ್ದಾರೆ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I