Sunday, August 2, 2026
Homeಸಾಹಿತ್ಯI ಎದೆಹಾಳೆಯ ಗೆಳತಿ  I

I ಎದೆಹಾಳೆಯ ಗೆಳತಿ  I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಎದೆಹಾಳೆಯ ಗೆಳತಿ  I

ತುಸು ಕತ್ತಲ ಕವಲಿನಲಿ
ರಸಕಂಗಳ ಬಿತ್ತಿ,
ಮಿಂಚು ಹುಳುವಿನ ಬೆಳಕಿನಲಿ
ಚೆಲುವಿನ ಪಾದಗಳ ಹೊತ್ತಿ,
ನೀಳ ಕೇಶದಿ, ನೀಲಮೇಘನ
ಕಾವಣದೊಳಗಿಹ ಗೆಳತಿ
ನೀನೊಮ್ಮೆ ಹಾಡಿ ಬಿಡು…

ಹೊತ್ತಾರೆಗೆ ಹೊತ್ತಿದೆ, ಕನಸುಗಳೀಗ ಮುತ್ತಿದೆ
ಎತ್ತ ದಿಟ್ಟಿಸಿದರು ಬಿಗಿದಪ್ಪುವ ನಗುಗಳು,
ಸುಳಿದು ಹೊಕ್ಕುತಿಹವು ಪಿಸು ದನಿಗಳು
ಬಳ್ಳಿಯಂತೆ ಸುತ್ತಿ, ಕಾವಿಡುವ ಬೆಸುಗೆಯೊಳು
ಒಮ್ಮೆ ಹಾಡಿ ಬಿಡು…

ಮಲೆನಾಡ ಸೊಗಡಿನ ಸೊಗಸಿನಲಿ
ಕೈ -ಬಳೆ, ಓಲೆ-ಜುಮುಕಿಯ ಸದ್ದಿನಲಿ,
ನನ್ನ ನಾಳೆಗಳ ಹಾಳೆಗೆ
ನಿನ್ನ ಮೊಗದಾವರೆಯ ಚಿತ್ರವಿರಲಿ,
ಗೆಳತಿ ನೀನೊಮ್ಮೆ ಹಾಡಿ ಬಿಡು…

ಕೇಳಿದೆ, ನೀ ಚಿತ್ರಗಳ ಕಳುಹಿದೆ,
ಈ ಎದೆ ಗೂಡಿನಲಿ ಕತ್ತಲಗಳದು ದೂಡಿದೆ,
ಅಲ್ಲೊಂದು ಹೊಂಗನಸ ಚಿಗರೊಡೆಸಿ
ಎದೆಯ ಹಾಳೆಗಳಲಿ ರಂಜಿಸುತ್ತಿದೆ,
ಗೆಳತಿ ಹಾಡಿ ಬಿಡು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I