Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸಾಹಿತ್ಯ

I ಗುಳಿ ಚೆಲುವೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಗುಳಿ ಚೆಲುವೆ I ಬೈತಲೆ ಬಿಂದಿಗೆ, ಗುಳಿ ಕದಪಿನ ನೈದಿಲೆ ಮೋಹಕ ನಯನದಿ ದಿಟ್ಟಿಸಿ ಈ ಎದೆಯೊಳಗೆ ಭಾವ ಬಿತ್ತಿ ಚಿಗುರೊಡೆಸದಿರು. ರಮ್ಯದಿ ಘಮಿಸುವ ಪರಿಮಳ ಸ್ವಾದ ನೀಳ ನವಿರಾದ ಕೇಶರಾಶಿಯ ಸಾಂಗತ್ಯ, ಸೊಗಸಿನ ಮೊಗದಾವರೆಯ ಹೊಳಪು…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಗುಳಿ ಚೆಲುವೆ I

ಬೈತಲೆ ಬಿಂದಿಗೆ, ಗುಳಿ ಕದಪಿನ ನೈದಿಲೆ
ಮೋಹಕ ನಯನದಿ ದಿಟ್ಟಿಸಿ
ಈ ಎದೆಯೊಳಗೆ ಭಾವ ಬಿತ್ತಿ
ಚಿಗುರೊಡೆಸದಿರು.

ರಮ್ಯದಿ ಘಮಿಸುವ ಪರಿಮಳ ಸ್ವಾದ
ನೀಳ ನವಿರಾದ ಕೇಶರಾಶಿಯ ಸಾಂಗತ್ಯ,
ಸೊಗಸಿನ ಮೊಗದಾವರೆಯ ಹೊಳಪು
ಕಪ್ಪು ಕಾಡಿಗೆ ರಹದಾರಿ, ಹಚ್ಚ ಹಸಿವಿನ ಮಕರಂದ.
ಜಗ ಮರೆಸುವ ಸುಕೋಮಲತೆ.

ಬಣ್ಣಿಸಲಾರದೇ ಸೊರಗಿ ಸುಣ್ಣವಾಗುವೆ
ನಿನ್ನ ಎದೆಸೂರಿಗೆ ಬಣ್ಣವಾಗುವೆ‌
ಚೆಲುವೆ, ಈ ಭಾವಗಳು ಬುಗ್ಗೆಗಳೆಬ್ಬಿಸಿವೆ‌
ಚಿತ್ತಾರದಿ ಹೊಂಗನಸುಗಳ ಹೆಣೆಯುತ್ತಿವೆ.

ಮೊದಲ ಸಲದಿ ಸುಳಿದ ನಿನ್ನ ಚಿ‌ತ್ರ ಫಲಕ
ಅಂತರಾಳದಿ ಲಗತ್ತಿಸಿದ್ದೇನೆ,
ವಿರಮಿಸದೇ ಚಿಗುರೊಡೆದ ಭಾವಗಳಿಗೆ ಅಂಕುಶವಾಗಿಸು
ನೀ ಮೌನದಿ ಮುಗಳ್ನಕ್ಕರೆ
ಬರೆವ ಸಾಲು ಮುಗಿಯದ ಮುಗಿಲಾದಿತು.
ಕೊನೆಯಿಲ್ಲದ ಎದೆಪುಟಗಳ ಹೊತ್ತಿಗೆಯಾದಿತು.
‌‌‌‌‌‌

Gara Srinivas

Gara Srinivas

Leave a comment

error: Content is protected !!