Sunday, August 2, 2026
Homeಸೂರ್ಯಗಗನಕಲಿತ ವಿದ್ಯೆ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗವಾಗಲಿ : ಡಾ.ಮೋಹನ್ ಚಂದ್ರಗುತ್ತಿ

ಕಲಿತ ವಿದ್ಯೆ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗವಾಗಲಿ : ಡಾ.ಮೋಹನ್ ಚಂದ್ರಗುತ್ತಿ

ಕಲಿತ ವಿದ್ಯೆ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗವಾಗಲಿ : ಡಾ.ಮೋಹನ್ ಚಂದ್ರಗುತ್ತಿ
ಶಿವಮೊಗ್ಗ : ಆಧುನಿಕತೆಯ ಅಹಂಕಾರಕ್ಕೆ ಸಿಕ್ಕಿಕೊಳ್ಳದೆ, ನಾವು ಕಲಿತ ವಿದ್ಯೆ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗವಾಗಲಿ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವತಿಯಿಂದ ಏರ್ಪಡಿಸಿದ್ದ 2025-26 ನೇ ಸಾಲಿನ ವಿದ್ಯಾರ್ಥಿನಿ ಸಂಘ ಉದ್ಘಾಟಿಸಿ ಮಾತನಾಡಿದರು.
ನಾವು ಭಗವಂತನನ್ನು ಪ್ರಾರ್ಥಿಸುವಾಗ ಸುಖ ಸಂಪತ್ತುಗಳನ್ನು ಬೇಡುತ್ತೇವೆ ವಿನಃ, ಒಳ್ಳೆಯ ಮನುಷ್ಯನನ್ನಾಗಿ ಮಾಡು ಎಂದು ಕೇಳುತ್ತಿಲ್ಲ. ಯಾವಾಗ ನಾವು ಕೇಳುವುದಿಲ್ಲ ಆಗ ನಮ್ಮ ತನವನ್ನು ನಾವು ಕಳೆದುಕೊಂಡಿದ್ದೇವೆ ಎಂದರ್ಥ. ನಿಮ್ಮ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ. ಎಲ್ಲರೂ ಉನ್ನತ ಅಂಕ ಪಡೆಯಿರಿ ಎನ್ನುವುದಕ್ಕಿಂತ, ಜೀವನವನ್ನು ಪ್ರೀತಿಯಿಂದ ಬದುಕಿ ಎಂದಾಗಬೇಕು.
ಇಂದು ಮೊಬೈಲ್ ಗೀಳಿಗೆ ಬಿದ್ದು ಯುವ ಸಮೂಹ ಮೂಲೆ ಸೇರುತ್ತಿದ್ದಾರೆ. ಆಧುನಿಕತೆಯ ಮೂಲಕ ಕುಳಿತಲ್ಲಿಯೆ ಎಲ್ಲವೂ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ‌. ನಿಜವಾದ ಬದುಕುವ ಕಲೆ ಕಲಿಯಬೇಕಿದೆ. ಸೂಕ್ಷ್ಮವಾಗಿ ಬದುಕುವ ಕ್ರಮಗಳಿಂದ ಹೊರ ಬನ್ನಿ. ಅಂಧಕಾರ, ಮೌಡ್ಯತೆ, ವೈರುದ್ಯಗಳನ್ನು ಹೋಗಲಾಡಿಸಿ.
ಅಧ್ಯಯನ ನಮ್ಮನ್ನು ಪುಣ್ಯವಂತನಾಗಿ ಮಾಡುತ್ತದೆ. ನಮ್ಮಲ್ಲಿ ಒಡಮೂಡುವ ಸಾಮಾಜಿಕ ಜವಾಬ್ದಾರಿಗಳು ನಮ್ಮನ್ನು ಪುಣ್ಯವಂತರನ್ನಾಗಿ ಪರಿವರ್ತಿಸುತ್ತದೆ. ಆಡಂಬರಕ್ಕೆ ಬಲಿಯಾಗಬೇಡಿ. ಬಹಳಷ್ಟು ವಿದ್ಯಾರ್ಥಿಗಳು ಪ್ರೌಢಶಾಲೆಯ ನಂತರ ಸೃಜನಶೀಲತೆಯ ಚಿಂತನೆಗಳನ್ನು ಬಿಟ್ಟುಬಿಡುತ್ತಾರೆ. ಅಂತಹ ಸೀಮಿತತೆಗೆ ಒಳಗಾಗಬೇಡಿ. ನಿಮ್ಮ ಪರಿಸರದಲ್ಲಿ ಒಳ್ಳೆಯದನ್ನು ಬಿತ್ತುವ ಕಾರ್ಯವಾಗಲಿ. ಅಸಹಾಯಕರಿಗೆ ಸಹಾಯ ಮಾಡುವಲ್ಲಿ ನಿರತರಾಗಿ‌. ನಮ್ಮ ಬದುಕಿನ ವಾಸ್ತವತೆಯನ್ನು ಒಪ್ಪಿಕೊಳ್ಳಿ. ಸಿರಿತನ ಬಡತನ ಎಲ್ಲವನ್ನೂ ಸ್ವೀಕರಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಆಜೀವ ಸದಸ್ಯರಾದ ಡಾ.ಅರವಿಂದ.ಎಸ್.ಟಿ, ನಿವೃತ್ತ ಸಂಸ್ಕೃತ ಉಪನ್ಯಾಸಕ ಜಿ.ಎಸ್.ನಟೇಶ್, ಕಸ್ತೂರಬಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮಾತನಾಡಿದರು.
ಶಾಲೆಯ ಉಪ ಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಧಾನಿ ಶ್ರೇಯಾ, ವಿರೋಧ ಪಕ್ಷದ ನಾಯಕಿ ಯಶಸ್ವಿನಿ ಉಪಸ್ಥಿತರಿದ್ದರು. ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I