Sunday, August 2, 2026
Homeಸೂರ್ಯಗಗನಸಮಾಜದ ವೈದ್ಯ I ಡಾ.ಪಿ.ನಾರಾಯಣ್ I ನಿರ್ದೇಶಕ ಗಿರೀಶ್ ಕಾಸರವಳ್ಳಿ I

ಸಮಾಜದ ವೈದ್ಯ I ಡಾ.ಪಿ.ನಾರಾಯಣ್ I ನಿರ್ದೇಶಕ ಗಿರೀಶ್ ಕಾಸರವಳ್ಳಿ I

ಸಮಾಜದ ವೈದ್ಯ I ಡಾ.ಪಿ.ನಾರಾಯಣ್ I ನಿರ್ದೇಶಕ ಗಿರೀಶ್ ಕಾಸರವಳ್ಳಿ I

ಶಿವಮೊಗ್ಗ: ಮಾನವೀಯ ಸಂಪರ್ಕಕ್ಕೆ ಹೆಸರುವಾಸಿಯಾದ ನಾರಾಯಣ್ ಅವರು ಸಮಾಜದ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.

ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಡಾ.ಪಿ.ನಾರಾಯಣ ಅಭಿನಂದನಾ ಸಮಿತಿಯ ವತಿಯಿಂದ  ಏರ್ಪಡಿಸಿದ್ದ ಡಾ.ಪಿ.ನಾರಾಯಣ ಅವರಿಗೆ ‘ಜನವೈದ್ಯ ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಔಷಧಿಯ ಜೊತೆಗೆ ರೋಗಿಯಲ್ಲಿ ಅದಮ್ಯವಾದ ಆತ್ಮವಿಶ್ವಾಸ ಹುಟ್ಟಿಸುವ ಸಹೃದಯಿ ವೈದ್ಯ ನಾರಾಯಣ್. ಇಂದಿನ ವಾಣಿಜ್ಯಕರಣದ ಯುಗದಲ್ಲಿ ವೈದ್ಯರು ರೋಗಿಯೊಂದಿಗೆ ಮಾತನಾಡುವ ಕ್ರಮವೇ ಬದಲಾಗಿದೆ. ವೈದ್ಯ ಮತ್ತು ರೋಗಿಯ ಸಂಬಂಧಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡಲಾಗಿದೆ‌. ಗೂಗಲ್ ನೊಂದಿಗೆ ಮಾತನಾಡಿದ ಅನುಭವ ಈಗಿನ ವೈದ್ಯರಲ್ಲಿ ಕಾಣುತ್ತಿದೆ‌. ರೋಗಿಯಲ್ಲಿ ಆತ್ಮಸ್ಥೈರ್ಯ ತುಂಬುವ ವಾತಾವರಣ ಕುಂಟಿತಗೊಳ್ಳುತ್ತಿರುವ ಈ ಹೊತ್ತಿನಲ್ಲಿ ನಾರಾಯಣ್ ಅವರಂತಹ ವೈದ್ಯರ ಅವಶ್ಯಕತೆ ತುರ್ತಾಗಿದೆ.

ಕುಟುಂಬ ವೈದ್ಯರು ಎಂಬ ಕಲ್ಪನೆಗಳು ಬದಲಾಗುತ್ತಿದೆ. ಒಂದು ಸಲ ಆಸ್ಪತ್ರೆ ಒಳಗೆ ಹೋದರೆ, ಎಲ್ಲಾ ಪರೀಕ್ಷೆಗಳನ್ನು ಮುಗಿಸಿ, ಯಾವುದೇ ರೋಗವಿಲ್ಲ ಎಂದು ವರದಿ ಬರುವುದರೊಳಗೆ, ಜೇಬೆಲ್ಲ ಖಾಲಿಯಾಗಿರುತ್ತದೆ. ಇಂಥಹ ಹೊತ್ತಿನಲ್ಲಿ ರೋಗಿಯ ಅಂತರಾಳದಲ್ಲಿ ಸ್ಥೈರ್ಯತೆ ಶಕ್ತಿ ಬಿತ್ತುವ ಕಾರ್ಯಕ್ಕೆ, ನಾರಾಯಣ್ ಅವರಂತಹ ವೈದ್ಯರಿಂದ ಪ್ರೇರಣೆ ಪಡೆಯಬೇಕಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಪದ್ಮಶ್ರೀ ಪುರಸ್ಕೃತ ವಿ.ಆರ್.ಗೌರೀಶಂಕರ್ ಮಾತನಾಡಿ, ಕುಟುಂಬದ ವೈದ್ಯರೊಂದಿಗಿನ ಆತ್ಮೀಯತೆ ನಿಜಕ್ಕೂ ನಮಗೆ ಸಂಜೀವಿನಿ. ಸಮಾಜದಲ್ಲಿ ಇಂದು ಎಷ್ಟು ಹದಗೆಟ್ಟಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಮ್ಮ ಹೊಸ ತಲೆಮಾರಿನ ಮಕ್ಕಳಿಗೆ ಯಾವ ಆದರ್ಶಗಳನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಆತಂಕ ಕಾಡುತ್ತಿದೆ. ಅಂತಹ ಆತಂಕಗಳ ನಡುವೆ ಭರವಸೆಯ ಬೆಳಕಾಗಿ ನಿಲ್ಲುವವರು ನಾರಾಯಣ ಅವರಂತಹ ವ್ಯಕ್ತಿತ್ವಗಳು ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಸಮಾಜ ಕಂಡ ಅದ್ಭುತ ಯೋಜಕ ನಾರಾಯಣ್ ಅವರು. ಶಂಕರ ಮಠದ ಒಡನಾಟ ಅತ್ಯಂತ ಪ್ರಭಾವಯುತ ವ್ಯಕ್ತಿತ್ವ ನಿರ್ಮಾಣವಾಗಲು ಅವರಿಗೆ ಸಾಧ್ಯವಾಯಿತು. ಸಂಬಂಧ, ಸ್ನೇಹಯುತ ಸಮಾಜದ ಸಜ್ಜನ ಎಂಬ ಹೆಗ್ಗಳಿಕೆ ಅವರದು ಎಂದು ಹೇಳಿದರು.

ಅಭಿನಂದನಾ ಸಮಿತಿ ಕಾರ್ಯದರ್ಶಿ ಡಾ.ಎಚ್.ಎಸ್.ನಾಗಭೂಷಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ಡಾ.ಪಿ.ನಾರಾಯಣ್‌ ಉಪಸ್ಥಿತರಿದ್ದರು. ರಶ್ಮೀ ಕಾರಂತ್ ಪ್ರಾರ್ಥಿಸಿ, ಎ.ಎಸ್.ಕೃಷ್ಣಮೂರ್ತಿ ವಂದಿಸಿ, ತುರವನೂರು ಮಲ್ಲಿಕಾರ್ಜುನ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I