Saturday, August 1, 2026
HomeUncategorized I ಮಾದನಾಯಕನ ಹಳ್ಳಿ ಠಾಣೆಯ ಪೊಲೀಸರ ದೌರ್ಜನ್ಯ  I ವಕೀಲರಾದ ನಿಖಿಲ್ ‌ಎಂ ಖಂಡನೆ I

 I ಮಾದನಾಯಕನ ಹಳ್ಳಿ ಠಾಣೆಯ ಪೊಲೀಸರ ದೌರ್ಜನ್ಯ  I ವಕೀಲರಾದ ನಿಖಿಲ್ ‌ಎಂ ಖಂಡನೆ I

 I ಮಾದನಾಯಕನ ಹಳ್ಳಿ ಠಾಣೆಯ ಪೊಲೀಸರ ದೌರ್ಜನ್ಯ  I ವಕೀಲರಾದ ನಿಖಿಲ್ ‌ಎಂ ಖಂಡನೆ I

ಬೆಂಗಳೂರು : ಮಾದನಾಯಕನಹಳ್ಳಿ ಪೋಲೀಸ್ ಠಾಣೆಯ ಆವರಣದಲ್ಲಿ ನಡೆದ ಮಾತುಕತೆಯಲ್ಲಿ ಮಹಿಳೆಯ ಮೇಲಿನ ಪೋಲೀಸ್ ದೌರ್ಜನ್ಯವು ಮಾನವೀಯ ಮೌಲ್ಯಗಳಿಗೂ, ಸಂವಿಧಾನಾತ್ಮಕ ಹಕ್ಕುಗಳಿಗೂ ವಿರುದ್ಧವಾಗಿದೆ. ರೈತರೊಬ್ಬರಿಗೆ ಆದ ಅನ್ಯಾಯವನ್ನು ಶಾಂತಿಯುತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದ ಮಹಿಳೆಯರನ್ನು ಎಳೆಯುವುದು, ನೆಲಕ್ಕುರುಳಿಸುವುದು, ಹೆಲ್ಲೆ ನಡೆಸುವುದು (ಮುಖ್ಯವಾಗಿ ಇನ್ಸ್ ಪೆಕ್ಟರ್ ಮುರಳೀಧರ್ ಹಾಗೂ ನರೇಂದ್ರ ಬಾಬು) ಇವು ಕೇವಲ ಅನೈತಿಕಮಾತ್ರವಲ್ಲದೆ IPC ಸೆಕ್ಷನ್ 354 (ಮಹಿಳೆಯರ ಗೌರವಕ್ಕೆ ಧಕ್ಕೆ), 323 (ಹಲ್ಲೆ), 342 (ಅಕ್ರಮ ಬಂಧನ) ಅಡಿಯಲ್ಲಿ ಗಂಭೀರ ಅಪರಾಧವಾಗಿದೆ ಎಂದು ವಕೀಲರಾದ ನಿಖಿಲ್ ಎಂ, ವಿವರಿಸಿದ್ದಾರೆ,

ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದು, ಮೆರವಣಿಗೆಗಳನ್ನು ನಡೆಸುವುದು, ತಮ್ಮ ಅಭಿಪ್ರಾಯಗಳನ್ನು ವ್ಯೆಕ್ತಪಡಿಸುವುದು ಸಂವಿಧಾನಾತ್ಮಕ ಹಕ್ಕು [ಅನುಚ್ಛೇದ 19(1)(a) & 19(1)(b)]. ಆದರೆ ಈ ಹಕ್ಕುಗಳನ್ನು ಪೋಲೀಸರು ಹಿಂಸಾತ್ಮಕವಾಗಿ ಹತ್ತಿಕ್ಕುವುದು ಅನುಚ್ಛೇದ 21 ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಗಂಭೀರ ಉಲ್ಲಂಘನೆಯಾಗಿದೆ ವಕೀಲರಾದ ನಿಖಿಲ್ ತಿಳಿಸಿದ್ದಾರೆ,

ಕಾನೂನು ಬಾಹಿರ ಬಂಧನ ಹಾಗೂ ಪೋಲೀಸರ ಹಿಂಸೆಯ ವಿರುದ್ಧ, ಶಾಂತಿಯುತ ಪ್ರತಿಭಟನಕಾರರ ಮೇಲಿನ ಪೋಲೀಸ್ ದಾಳಿ, Article 21 ರ ಉಲ್ಲಂಘನೆ ಕುರಿತಂತೆ ಸುಪ್ರಿಂಕೋರ್ಟ್ ನಲ್ಲಿ Dk Basu vs State of Bengal, Ramlila Maidan Delhi ಘಟನೆ, Kishan Chad V State Of Hariyana ಕಿಶನ್ ಚಂದ್ ವಿ. ಸ್ಟೇಟ್ ಆಫ್ ಹರಿಯಾಣ ಸೇರಿದಂತೆ ಹತ್ತಾರು ತೀರ್ಪುಗಳು ಬಂದರೂ ರಾಜ್ಯಗಳಿಗೆ ಹಾಗೂ ಇಲಾಖೆಗಳಿಗೆ ಅದರ ಗಂಭೀರತೆ ಅರ್ಥವಾಗುತ್ತಿಲ್ಲ ಎಂದು ಘಟಿತ ಘಟಿನೆಯನ್ನು ಖಂಡಿಸಿದ್ದಾರೆ

ಮಾದನಾಯಕನಹಳ್ಳಿ ಮಾತ್ರವಲ್ಲದೇ ಹಲವಾರು ಕಡೆಗಳಲ್ಲಿ ಸಾಕಷ್ಟು ಪೋಲೀಸ್ ಅಧಿಕಾರಿಗಳು ತಮ್ಮ ಸ್ಟೇಷನ್ ಗಳನ್ನು ಡೀಲಿಂಗ್ ಸೆಂಟರ್ ಗಳಾಗಿ ಮಾಡಿಕೊಂಡು ಬಡವರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ದ ನ್ಯಾಯಲಯ ನಿರಂತರವಾಗಿ ಮಧ್ಯಪ್ರವೇಶ ಮಾಡಿ ಪೋಲೀಸ್ ಇಲಾಖೆಯನ್ನು ಕಡ್ಡಾಯವಾಗಿ ಸುಧಾರಣೆಗೊಳಿಸಿ ರಾಜಕೀಯ ಪ್ರಭಾವದಿಂದ ಮುಕ್ತಗೊಳಿಸಲು ಆದೇಶಮಾಡಿದೆ. ಹಾಗೆಯೇ ಅನಧಿಕೃತವಾಗಿ ಬಂಧನ ವಿರೋಧಿಸಿ ಪೋಲೀಸರ ಅಧಿಕಾರ ದುರುಪಯೋಗ ತಡೆಯ ಬಗ್ಗೆ Arnesh Kumar vs. State of Bihar ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪೋಲೀಸರ ಕರ್ತವ್ಯ ಕಾನೂನು ಪಾಲನೆಗೆ ಸಹಾಯವನ್ನು ಮಾಡುವುದು, ಜನರ ಸುರಕ್ಷೆತೆಯನ್ನು ಕಾಪಾಡುವುದು ಆದರೆ ಪೋಲೀಸರು ಶಾಂತಿಯುತ ಪ್ರತಿಭಟನೆಯನ್ನು ಹಿಂಸಾಚಾರದಿಂದ ಕುಗ್ಗಿಸಲು ಯತ್ನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವ ರಾಜ್ಯದಲ್ಲಿ ‘ಪ್ರಭುತ್ವದ ಭಯಾನಕ ಮುಖವನ್ನು’ ತೋರಿಸುತ್ತಿದೆ ಎಂದು ಅವರು ಹೇಳಿದ್ದಾರೆ,

ಮಾದನಾಯಕನಹಳ್ಳಿ ಪೋಲೀಸರ ಮೇಲೆ ಸ್ವತಂತ್ರ ನ್ಯಾಯಾಂಗ ತನಿಖೆಯಾಗಲಿ, ಹಲ್ಲೆಗೆ ಒಳಗಾದ ಮಹಿಳೆಗೆ ರಾಜ್ಯ ಸರ್ಕಾರ ಅದರ ಹೊಣೆಹೊತ್ತು ಪರಿಹಾರ ನೀಡಬೇಕು, ಪೋಲೀಸರಿಗೆ ನಿರಂತರವಾಗಿ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ಸೇರಿದಂತೆ ತರಬೇತಿ ನೀಡಿ ಅದರ ಉಲ್ಲಂಘನೆಯ ಹೊಣೆಗಾರಿಕೆಯನ್ನು ತಿಳಿಸಬೇಕು. ಮಹಿಳಾ ಆಯೋಗ ಕೇವಲ ವರದಿ ಕೇಳುವುದಕ್ಕೆ ಮಾತ್ರ ಸೀಮಿತವಾಗದೇ ಸು-ಮೋಟೋ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ನಿಖಿಲ್ ಎಂ  ವಕೀಲರು ವಿವರಿಸಿದ್ದಾರೆ,

ಇಂದು ಸಮಾಜವು ಮೌನವಾಗಿದ್ದರೆ ನಾಳೆ ಪ್ರತಿಯೊಬ್ಬರ ಹಕ್ಕುಗಳು ದೌರ್ಜನ್ಯಕ್ಕೆ ಒಳಗಾಗುತ್ತವೆ. ಇಂದು ಈ ಪೋಲೀಸರ ಹಿಂಸೆಯನ್ನು ಖಂಡಿಸುವುದು – ನಾಳೆಯ ನ್ಯಾಯದ ಹೋರಾಟಕ್ಕೆ ಬುನಾದಿ. ಎಂದು ಅವರು ತಿಳಿಸಿದ್ದಾರೆ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I