I ಅಂತಾರಾಷ್ಟ್ರೀಯ ಚಲನಚಿತ್ರೊತ್ಸವಕ್ಕೆ I ಕರ್ನಾಟಕ ಅರೆಭಾಷೆ ಚಿತ್ರ ನಡುಬೆಟ್ಟು ಅಪ್ಪಣ್ಣ ಆಯ್ಕೆ I
#ಸಂಪೂರ್ಣ ಅರೆಭಾಷೆಯ ಚಿತ್ರೀವಾದ ನಡುಬೆಟ್ಟು ಅಪ್ಪಣ್ಣ ಚಲನಚಿತ್ರ ಕೊಲ್ಕತ್ತಾ ಅಂತಾರಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ ಕನ್ನಡ ಚಿತ್ರರಂಗಕ್ಕೆ ಗರಿ ಮೂಡಿಸಿದೆ. ಚಿತ್ರೋತ್ಸವದಲ್ಲಿ 2 ಪ್ರದರ್ಶನ ಕೊಲ್ಕತ್ತಾಕ್ಕೆ ಅವಕಾಶ ಕಲ್ಪಿಸಿದ್ದು 2 ನೇ ಪ್ರದರ್ಶನ ಇಂದು ಗುರುವಾರ ಪ್ರದರ್ಶನ ವಾಗಲಿದೆ, 10 ರಂದು ಪ್ರಥಮ ಪ್ರದರ್ಶನ ಪ್ರೇಕ್ಷಕರಿಂದ ತುಂಬಿತ್ತು.
ಮಲೆನಾಡ ಅರಣ್ಯದೊಳಗೆ ಯಾವತ್ತೂ ವಾಸಿಸುತ್ತ ಬಂದಿರುವ, ಇಂದಿಗೂ ನೂರಾರು ಜನ ಪ್ರತಿವರ್ಷ ಆನೆ ದಾಳಿಯ ತುಳಿತಕ್ಕೆ ಪ್ರಾಣ ಬಿಡುತ್ತಿದ್ದಾರೆ, ಇದಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ. ಎಲ್ಲಾ ಸೌಲಭ್ಯ ಗಳಿಂದಲೂ ವಂಚಿತರಾಗಿ ನಿಸರ್ಗ- ಹಸಿರನ್ನ ಬೆಳಸುತ್ತಾ ಅಲ್ಲಿನ ಉದ್ಯೋಗ ಮಾಡುತ್ತಾ ಬದುಕಿರುವ ಜನರ ಸುತ್ತ ಕಥೆ ಹೆಣೆದಿರುವ ಚಿತ್ರ. ಎಷ್ಟೇ ಮನವಿ ನೀಡಿದರು ಸರ್ಕಾರ ಇಲ್ಲಿನವರಿಗೆ ಮೂಲ ಸೌಲಭ್ಯ ನೀಡದೆ ಕಣ್ಮುಚ್ಚಿ ಕುಳಿತಾಗ. ತನ್ನ ಜೇವನದ ಮತ್ತು ಕುಟುಂಬ ಸದಸ್ಯರ ಆಸೆಗಳಿಗೂ ಸ್ಪಂದಿಸದೆ ಹಣ ಗಳಿಕೆಗಷ್ಟೆ ಗಮನ ನೀಡುತ್ತಿದ್ದ ವ್ಯಕ್ತಿ, ತನ್ನ ಜೀವನದಲ್ಲಿ ನಡೆದ ಆನೆ ತುಳಿತದಿಂದ ಕುಟುಂಬ ಸದಸ್ಯರ ಸಾವಿನ ಆಕಸ್ಮಿಕ ಘಟನೆ ಯಿಂದ ನೊಂದು ಸ್ವಾರ್ಥತತೆಯಿಂದ ದೊರಾಗಿ ಗಳಿಸಿದ ಎಲ್ಲಾ ಸ್ವತ್ತನ್ನ ಸರ್ಕಾರಕ್ಕೆ ನೀಡಿ ಕಾಡಿನ ಜನತೆಗೆ ಸರ್ಕಾರ ಮಾಡದಿರುವ ಕೆಲಸವನ್ನು ತಾನು ಮಾಡಿಸುತ್ತಾನೆ.
ಅಲ್ಲಿನ ಜನರ ನೈಜ ಜೀವನ, ನಿಸರ್ಗದ ಹಸಿರು ಕ್ಯಾಮರದ ಮೂಲಕ ಮನಸ್ಸಿನಲ್ಲಿ ಶಾಶ್ವತವಾಗಿ ಮೂಡುತ್ತದೆ. ಸಮಾಜದ ಅಭಿವೃದ್ಧಿ ಕೆಲಸಕ್ಕೆ ಸರ್ಕಾರದ ಜೊತೆಗೆ ನಾಗರಿಕರು ಕೈಜೋಡಿಸುವುದು ಕರ್ತವ್ಯ ಎನ್ನುವ ಮತ್ತು ಸ್ಥಳೀಯ ಸಂಪ್ರದಾಯಿಕ ಆಚರಣೆಗಳನ್ನ ಮತ್ತು ಈ ಸ್ಥಳ ಅದರಮೇಲೆ ಅವಲಂಬಿಸಿದೆ ಎಂದು ಹೇಳುವ ಚಿತ್ರ ನಡುಬೆಟ್ಟು ಅಪ್ಪಣ್ಣ.ಚಿತ್ರವನ್ನು ನಿರ್ದೇಶನ ಮಾಡಿ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿ ನಿರ್ದೇಶನ ಮಾಡಿರುವವರು ಅನುಪಮ ಶರಧಿ. ಸಂಪೂರ್ಣ ಅರೆಭಾಷೆ ಚಿತ್ರೀವಾಗಿರುವ ಈ ಚಿತ್ರದಲ್ಲಿ ರಂಗ ನಟ ನಟರಾಜ್ ಹೊನ್ನವಳ್ಳಿ, ಶಿಲ್ಪಾ ನಾಗರಾಜ್ Miscellaneous. ಮಲೆನಾಡ ಸೆರಗಿನ ಹಸಿರನಲ್ಲಿ ಚಿತ್ರೀಕರಿಸಿರುವ ಅಭಿಷೇಕ ಅನಗಳ್ಳಿ ಪರಿಸರವನ್ನು ಪ್ರೇಕ್ಷಕರ ಹೃದಯಕ್ಕೆ ತಟ್ಟಿದ್ದಾರೆ. ಸದ್ದಿಲ್ಲದೇ ತಯಾರಾಗಿರುವ ಇನ್ನು ಬಿಡುಗಡೆಯಗದಿರುವ ನಡುಬೆಟ್ಟು ಅಪ್ಪಣ್ಣ ಕನ್ನಡ ಚಿತ್ರರಂಗಕ್ಕೆ ಹೆಸರು ತರುವ ನಿಟ್ಟಿನಲ್ಲಿದೆ.


