Saturday, August 1, 2026
HomeಅಂಕಣI ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ I ಜಿ.ಆರ್ ರಾಘವೇಂದ್ರ ಸ್ವಾಮಿ I

I ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ I ಜಿ.ಆರ್ ರಾಘವೇಂದ್ರ ಸ್ವಾಮಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ I ಜಿ.ಆರ್ ರಾಘವೇಂದ್ರ ಸ್ವಾಮಿ I

ಶಿವಮೊಗ್ಗ ಎಂಬುದು ಖಾಲಿತನ ಅಲ್ಲವಾಗಿದೆ, ಇಲ್ಲೊಂದು ಹೋರಾಟದ ಕಿಚ್ಚಿದೆ, ಅನೇಕ ಚಳುವಳಿಗಳು ಉಗಮಿಸಿದ ಮೊಹರಿದೆ, ಕರ್ನಾಟಕ ರಾಜ್ಯದ ರಾಜಕೀಯದ ಖದರ್ ಲೇಪಿಸಿಕೊಂಡಿದೆ, ಮಲೆನಾಡಿನ ಹೆಬ್ಬಾಗಿಲಿನ ಹೊಸಿಲಿನಲ್ಲಿ ಸಾಹಿತ್ಯದ ಹೊನಲಿದೆ, ಎರಡೆರೆಡು ರಾಷ್ಟ್ರಕವಿಗಳನ್ನು ಬಳುವಳಿಯಾಗಿ ಸಾಹಿತ್ಯದ ಜಗತ್ತಿಗೆ ಕೊಡುಗೆಯಾಗಿ ಸಮರ್ಪಿಸಿದ ಈ ಮಣ್ಣು ಅಂತಹದೊಂದು ತನ್ನ ಸಾಮರ್ಥ್ಯವನ್ನು ಕಾಪಿಟ್ಟುಕೊಂಡಿದೆ, ಈ ತಳಸ್ಪರ್ಶಿಯಲ್ಲಿ ವೀಕ್ಷಿಸಿದಾಗ ಶಿವಮೊಗ್ಗವನ್ನು ಒಳಗೊಂಡಂತೆ, ಕರಾವಳಿಯ ಮಂಗಳೂರು ಪ್ರದೇಶದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಬೇಡಿಕೆಗೆ ಪ್ರಸ್ತುತ ರಾಜ್ಯ ಸರ್ಕಾರ ಅಸ್ತು ಎಂದಿರುವುದು ಸಂಪೂರ್ಣ ಅವೈಜ್ಞಾನಿಕ ನಿಲುವು ಆಗಿದೆ, ಅತೀ ಮುಖ್ಯವಾಗಿ ಶಿವಮೊಗ್ಗ ವಕೀಲರ ಸಂಘಕ್ಕೂ ಯಾವುದೇ ಮಾಹಿತಿಗಳಿಲ್ಲದೆ ಇಂತಹದೊಂದು ನಿರ್ಧಾರ ತಳೆದಿರುವುದರಿಂದ ಶಿವಮೊಗ್ಗದ ವಕೀಲ ಸಮೂಹ ನಾಯಕತ್ವ ವಹಿಸಿರುವ ಅಡ್ವೂಕೇಟ್ ಜಿ.ಆರ್ ರಾಘವೇಂದ್ರ ಸ್ವಾಮಿ ಅವರು ಕಾನೂನು ರಿತ್ಯಾ ಪ್ರಶ್ನಿಸಿ ಪ್ರತಿಭಟನೆಗೆ ಮುಂದಾಗಿರುವುದು ನಿಜಕ್ಕೂ ಶಿವಮೊಗ್ಗದ ಜನತೆಯ ಪರವಾದ ಸಾಂವಿಧಾನಿಕ ನ್ಯಾಯಸಮ್ಮತವಾಗಿದೆ.

ಹೀಗಾಗಿ ಸಾಮಾಜಿಕ ನ್ಯಾಯ ಎಂಬುದು ರಾಜಕೀಯ ಒತ್ತಡಕ್ಕೆ ಸಿಲುಕಿ ಮರಿಚಿಕೆ ಆಗಬಾರದು ಹಾಗೂ ಈಗಾಗಲೇ ಅವೈಜ್ಞಾನಿಕವಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಪ್ರಸ್ತಾಪಕ್ಕೆ ರೆಕ್ಕೆ-ಪುಕ್ಕಗಳನ್ನು ಕಟ್ಟಿರುವ ರಾಜ್ಯ ಸರ್ಕಾರ ತುಷ್ಠೀಕರಣದ ನೀತಿಗೆ ಒಳಗಾಗಿದೆ, ಯಾವುದೇ ಅಂಕಿ ಅಂಶಗಳ ಕೇಸುಗಳು, ಪ್ರತಿಕೂಲ ವಾತಾವರಣ, ಪ್ರವಾಸದ ಅನುಕೂಲತೆಗಳು, ಆರ್ಥಿಕ ಸ್ಥಿತಿಗತಿಗಳು, ಪ್ರಾಕೃತಿಕ ವಿಕೋಪಗಳು, ಶಿವಮೊಗ್ಗ ಜಿಲ್ಲಾ ವಿಭಾಗವಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ಜನತೆಗೆ ತಂದೊಡ್ಡುವ ಬಹುದೊಡ್ಡ ಸಮಸ್ಯೆಗಳಾಗಿದೆ ಎನ್ನುವುದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗೊತ್ತು ಮಾಡಿಕೊಳ್ಳಬೇಕಾದ ಅತೀ ಜರೂರತ್ತಿದೆ,

ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ವಕೀಲರ ಸಂಘವು ಅಧ್ಯಕ್ಷರಾದ ಜಿ.ಆರ್ ರಾಘವೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ, ಇದರ ವ್ಯಾಪಕತೆ ಅರ್ಥೈಸಿಕೊಂಡಿರುವ ಜನತೆಯು ಕೂಡ ಇದೀಗ ಚರ್ಚಿಸತೊಡಗಿದೆ, ಜನಪರ ಹಾಗೂ ಕನ್ನಡಪರ, ರೈತಪರ, ಸಮಾಜಪರ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲಿಸಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ, ಈ ಕುರಿತಂತೆ ಮಾತಾಡಿರುವ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್ ರಾಘವೇಂದ್ರ ಸ್ವಾಮಿ ಅವರು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಅನುಮತಿ ಕೋರಿ ಮುಖ್ಯಮಂತ್ರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಅಸಮಂಜಸವಾಗಿದೆ, ಸರ್ಕಾರದ ಈ ನಡೆಗೆ ಇಲ್ಲಿನ ಜನತೆಗೆ, ದುಡಿಯುವ ಶ್ರೀ ಸಾಮಾನ್ಯರಿಗೆ ಭೌಗೋಳಿಕ ಸಮಸ್ಯೆಗಳಾಗಿದೆ, ಅಲ್ಲದೆ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಮಂಗಳೂರು ಬೇಡಿಕೆಯ ಪೀಠಕ್ಕೆ ಜೋಡಿಸಲೊರಟಿರುವುದು ಅವೈಜ್ಞಾನಿಕ ನೀತಿಯಾಗಿದೆ, ಒಂದು ವೇಳೆ ಮಂಗಳೂರು ಪೀಠದ ಸ್ಥಾಪನೆಗೆ ರಾಜ್ಯ ಸರ್ಕಾರದ ಇಚ್ಚಾಶಕ್ತಿ ಇದ್ದರೆ ಇದರಲ್ಲಿ ಜೋಡಿಸಲಾಗಿರುವ ಶಿವಮೊಗ್ಗ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಕೈ ಬಿಡಬೇಕು, ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮುಂದಾಗಬೇಕೆಂದು ತಿಳಿಸಿರುವುದು, ಮಧ್ಯ ಕರ್ನಾಟಕದ ಜನತೆಗೊಂದು ಸಾಮಾಜಿಕ ನ್ಯಾಯವಾಗಿದೆ ಹೀಗಾಗಿಯೇ ಇದರ ಅನಾನುಕೂಲತೆಗಳನ್ನು ಮನನ ಮಾಡಿಕೊಂಡಿರುವ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಮುಷ್ಕರಕ್ಕೆ ಚಳುವಳಿಗಳ ನಾಡು ಬೆಂಬಲಿಸಿದೆ ಇದು ದಿನದಿಂದ ದಿನಕ್ಕೆ ವ್ಯಾಪಕತೆ ಪಡೆಯುತ್ತಿದ್ದು ಇದರ ಗಂಭೀರತೆ ರಾಜ್ಯ ಸರ್ಕಾರ ಗೊತ್ತು ಮಾಡಿಕೊಳ್ಳದೆ ಹೋದರೆ ಮುಂದಿನ ದಿನಗಳು ಭಾರಿ ಪ್ರತಿಭಟನೆಗೆ ನಾಲ್ಕು ಜಿಲ್ಲೆಗಳು ಮುಂದಾಗುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ,

ಈಗಾಗಲೇ ಅಂದುಕೊಂಡಂತೆ ವಕೀಲರ ಸಂಘದಿಂದ ರಾಜ್ಯದ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಮಂಗಳೂರು ಪೀಠ ಸ್ಥಾಪನೆಗೆ ಬರೆದಿರುವ ಪತ್ರದ ಮರು ಪರಿಶೀಲನೆ ಮಾಡುವಂತೆ ಹಾಗೂ ಶಿವಮೊಗ್ಗದಲ್ಲಿಯೇಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಬೇಡಿಕೆಯನ್ನು ಮುಂದಡಿಯಿಟ್ಟಿದ್ದು ರಾಜ್ಯ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಇದೊಂದು ಭಾರಿ ಹಿನ್ನಡೆ ಆಗುವುದರಲ್ಲಿ ಯಾವುದೇ ಅನುಮಾನಿತಗಳಿಲ್ಲವಾಗಿದೆ,

ಒಟ್ಟಿನಲ್ಲಿ ಬಹುದಿನಗಳ ನಂತರ ಶಿವಮೊಗ್ಗದಲ್ಲಿ ಚಳುವಳಿ ಉಗಮವಾಗಿದೆ, ಅಲ್ಲದೆ ಅದೊಂದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ, ಈ ಮೂಲಕ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್ ರಾಘವೇಂದ್ರ ಸ್ವಾಮಿ ಖಡಕ್ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ಮಧ್ಯ ಕರ್ನಾಟಕದ ಜನತೆಯ ಪರವಾಗಿ ರವಾನಿಸಿ ಸಾಂವಿಧಾನಿಕವಾದ ಬೆಳಕು ಚೆಲ್ಲಿದ್ದಾರೆ. ಈ ಮುಷ್ಕರಕ್ಕೆ ಸೂರ್ಯಗಗನ ಹಾಗೂ ಇತ್ಯಾದಿ ಪತ್ರಿಕಾ ಬಳಗವು ಹಾಗೂ ಅಕ್ಷರ ರೂಪಿ ಬೆಂಬಲ ನೀಡಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ಆಗ್ರಹಿಸಿ ಅಂಬೋಣಿಸುತ್ತದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I