Saturday, August 1, 2026
Homeಸೂರ್ಯಗಗನ I ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾಗಬೇಕು I ಡಿ. ಮಂಜುನಾಥ I

 I ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾಗಬೇಕು I ಡಿ. ಮಂಜುನಾಥ I

 I ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾಗಬೇಕು I ಡಿ. ಮಂಜುನಾಥ I
ಶಿವಮೊಗ್ಗ : ನಮ್ಮ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಾಮಾಜಿಕ ಸಮಸ್ಯೆಗಳು ಕಡಿಮೆ ಆಗದಿರಲು ಕಾರಣವೇನು. ಶೋಷಣೆ, ಅನ್ಯಾಯ ನಡೆಯುತ್ತಲೇ ಇವೆ. ನೋಡಿಯೂ ನೋಡದಿರುವಂತೆ ಆತ್ಮವಂಚನೆ ಮಾಡಿಕೊಳ್ಳುವುದರಿಂದ ಅಪರಾಧ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಅದರಲ್ಲೂ ಮಹಿಳೆಯರು ಧ್ವನಿಎತ್ತಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ವಿವರಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಗುರುವಾರ ಮಧ್ಯಾಹ್ನ ಏರ್ಪಡಿಸಿದ್ದ ದಿ. ಜಿ.ಬಿ. ಲಲಿತಮ್ಮ ದತ್ತಿ ಮತ್ತು ದಿ. ಸಾಂಗ್ಲಿ ನಾರಾಯಣ್ ರಾವ್ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.
ದಿ. ಜಿ.ಬಿ.ಲಲಿತಮ್ಮ ದತ್ತಿ ದಾನಿಗಳಾದ ದಿ. ಗು.ಬಿ. ಗಂಗಾಧರಪ್ಪ ಅವರ ಆಶಯದಂತೆ ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ವಿಚಾರವಾಗಿ ಕನ್ನಡ ಅಧ್ಯಾಪಕ ಡಾ. ಲವ ಜಿ. ಆರ್. ಮಾತನಾಡಿ ಸಂವೇದನೆ ಗ್ರಹಿಕೆಗೆ ಸಂಬಂಧಿಸಿದ್ದು, ಹೆಣ್ಣನ್ನು ಹೀಗೆ ಇರಬೇಕು ಎನ್ನುವ ಧ್ವನಿಯಿದೆ. ಇದನ್ನು ಒಪ್ಪಿಕೊಂಡವರು ಇದ್ದಾರೆ. ಅದಕ್ಕೆ ಭಿನ್ನವಾದ ವಿಚಾರ ಹೊಂದಿದವರು ಇದ್ದಾರೆ. ಹೆಣ್ಣು ಬಜಾರಿ, ಗಯ್ಯಾಳಿ ಎಂದೆಲ್ಲ ಆರೋಪಿಸುವವರು ಇದ್ದಾರೆ. ವೀರವನಿತೆ, ದಿಟ್ಟತನ, ಹೋರಾಟಗಾರ್ತಿ ಎನ್ನುವವರು ಇದ್ದಾರೆ. ಕುವೆಂಪು ಅವರು ಗಂಡು ಹೆಣ್ಣು ಅರ್ಥಪೂರ್ಣ ಬದುಕು ಒಂದಾಗಿ ಸಾಗುತ್ತೆ ಎಂದಿದ್ದಾರೆ. ಇನ್ನೊಬ್ಬರ ನೋವನ್ನು ಅರಿತು ಅವಳ ನೆಲೆಯಲ್ಲಿ ನಿಂತು ಯೋಚಿಸುವುದು, ಪ್ರತಿಕ್ರಿಯಿಸುವ ಗುಣವೇ ಸಂವೇದನೆ. ಬೇರೆಯವರ ಕಷ್ಟ ಅನುಭವಕ್ಕೆ ಬರಬೇಕು. ವಚನಕಾರರು ‌ಹೆಣ್ಣು ಗಂಡು ಬೇರೆ ಬೇರೆ ಎಂದು ಯೋಚಿಸಿದವರಲ್ಲ. ದೈಹಿಕ ರೂಪದ ಯಜಮಾನಿಕೆಯನ್ನು ದೂರವಿಟ್ಟವರು ಎಂದು ವಿವರಿಸಿದರು.
ನಮ್ಮ ಸುತ್ತ ಅನೇಕ ಘಟನೆಗಳು ಮಹಿಳೆಯರನ್ನು ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ಏನೆಲ್ಲಾ ನಡೆದರು ಭಾರತದ ಯಾವ ಹೆಣ್ಣೂ ಪ್ರತಿರೋಧಿಸದೆ ಸಂವೇದನೆ ಸತ್ತುಹೋದಂತೆ ಬದುಕುತ್ತಿರುವುದು ಯಾವ ನ್ಯಾಯ. ಸಮಾನ ಹಕ್ಕಿಗಾಗಿ ಹೋರಾಟ ಮಾಡುವ ಈ ಕಾಲದಲ್ಲೂ ಇಂತಹ ವಾತಾವರಣ ಸರಿಯೇ ಎಂದು ಚರ್ಚೆಮಾಡಿದರು.
ದಿ. ಸಾಂಗ್ಲಿನಾರಾಯಣ ರಾವ್ ಸ್ಮಾರಕ ದತ್ತಿ ದಾನಿಗಳಾದ ಡಾ. ಬಿ. ವೆಂಕಟರಾವ್ ಆಶಯದಂತೆ ವೈದ್ಯಸಾಹಿತ್ಯದ ಮಹತ್ವ ಕುರಿತು ಮಾತನಾಡಿದ ಡಾ. ವಿನಯ ಶ್ರೀನಿವಾಸ್ ಭಾರತದಲ್ಲಿ ವೈದ್ಯ ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸವಿದೆ. ನೆಮ್ಮದಿಯ ಜೀವನಕ್ಕೆ ಆರೋಗ್ಯ ಅತಿಮುಖ್ಯ ಎನ್ನುವುದನ್ನು ಜನಪದರು, ವಚನಕಾರರು, ಸರ್ವಜ್ಞರಾದಿ ಎಲ್ಲರೂ ತಮ್ಮ ಸಾಹಿತ್ಯದಲ್ಲಿ ಆರೋಗ್ಯಕ್ಕೆ ಮಾಹಿತಿ ನೀಡಿದ್ದಾರೆ. ಕಾಯಿಲೆ ಬರುವ ಮುನ್ನ ತಡೆಗಟ್ಟುವ ಉಪಾಯವನ್ನು ವೈದ್ಯರು ತಮ್ಮ ಸಾಹಿತ್ಯದ ಮೂಲಕ ತಿಳಿಸುತ್ತಾರೆ ಎಂದರು.
ಪ್ರತಿ ರೋಗಿಗೂ ಜಾಗೃತಿ ಕುರಿತು ಹೇಳಿದರೂ ಅದು ಹೆಚ್ಚು ಜನರನ್ನು ತಲುಪಿಸಲು ಸಾಧ್ಯವಾಗದು. ಆದರೆ ಸಾಹಿತ್ಯದ ಮೂಲಕ ಹೆಚ್ಚು ಜನರಿಗೆ ತಲುಪಿಸಲು ಸಾಧ್ಯ. ಪ್ರತಿ ಮಂಗಳವಾರ ಪತ್ರಿಕೆ ಗಳಲ್ಲಿ ಪ್ರಕಟವಾಗುವ ವೈದ್ಯಸಾಹಿತ್ಯ ಓದಲು ಅವರು ಸಲಹೆ ನೀಡಿದರು. ಮೌಖಿಕವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ದೊರೆಯುತ್ತದೆ. ಅದು ಎಷ್ಟರಮಟ್ಟಿಗೆ ನೈಜವಾಗಿದೆ ಎನ್ನುವುದನ್ನು ತಿಳಿಯಬೇಕು. ಕುರುಡಾಗಿ ನಂಬಬಾರದು ಎಂದು ವಿವರಿಸಿದರು.
ಕಾಲೇಜು ಪ್ರಾಂಶುಪಾಲರಾದ ಮಹೇಶ್ವರಪ್ಪ ಟಿ. ಎಸ್. ಅವರು ಮಾತನಾಡಿ ದತ್ತಿ ಉಪನ್ಯಾಸಗಳು ಅರ್ಥಪೂರ್ಣ ವಾಗಿದ್ದವು. ನಮ್ಮ ಮಕ್ಕಳಿಗೆ ಅನೇಕ ವಿಚಾರಗಳನ್ನು ತಿಳಿಸುವಲ್ಲಿ ಸಾಫಲ್ಯ ಹೊಂದಿತ್ತು ಎಂದರು.
 ಕನ್ನಡ ಉಪನ್ಯಾಸಕಿ ಭಾರತಿ ಉಪಸ್ಥಿತರಿದ್ದರು. ವಿಷ್ಣು ರಾಜೇಶ್ ಸ್ವಾಗತಿಸಿದರು. ಡಿ. ಗಣೇಶ್ ನಿರೂಪಿಸಿದರು. ಎಂ. ಎಂ. ಸ್ವಾಮಿ ವಂದಿಸಿದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I