Wednesday, 4 November 2026 — Suryagagana
06:51 PM
ಸೂರ್ಯಗಗನ I ಶೋಷಿತ ಸಮುದಾಯದ ಮೇಲಿನ ವಂಚನೆ I ನೇರನೇಮಕಾತಿಯಲ್ಲಿನ ಭ್ರಷ್ಟಾಚಾರ ಖಂಡಿಸಿ I ಕರ್ನಾಟಕ ಮಾದರ ಮಹಾಸಭಾದಿಂದ ಬೇಟಿ, ಮನವಿ ಸಲ್ಲಿಕೆ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಶೋಷಿತ ಸಮುದಾಯದ ಮೇಲಿನ ವಂಚನೆ I ನೇರನೇಮಕಾತಿಯಲ್ಲಿನ ಭ್ರಷ್ಟಾಚಾರ ಖಂಡಿಸಿ I ಕರ್ನಾಟಕ ಮಾದರ ಮಹಾಸಭಾದಿಂದ ಬೇಟಿ, ಮನವಿ ಸಲ್ಲಿಕೆ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I
ಸಾಹಿತ್ಯ

I ಯುದ್ಧವೆನ್ನುತ್ತಾರೆ I

I ಯುದ್ಧವೆನ್ನುತ್ತಾರೆ I ಅವರು ಯುದ್ಧವೆನ್ನುತ್ತಾರೆ ಮಡುಗಟ್ಟಿದ ರಕ್ತದ ಕಲೆಗಳನ್ನು, ಮುಗ್ಧ ಜನರ ನೋವಿನ ಕೂಗನ್ನು ಅನಾಥ ಮಕ್ಕಳ ಕಣ್ಣೀರನ್ನು, ಸೂರಿಲ್ಲದ ನಿರಾಶ್ರಿತರ ಗೋಳನ್ನು ಮಾನವೀಯತೆ ಮರೆತ ಮನುಷ್ಯನ ಕೃತ್ಯಕ್ಕೆ ಯುದ್ಧವೆನ್ನುವರು ಅವರು, ಪ್ರೀತಿಯ ಉಸಿರ ಕಟ್ಟಿಸಿ ದ್ವೇಷದ ಹೊಗೆಯ ಹಾಕುವರು,…

I ಯುದ್ಧವೆನ್ನುತ್ತಾರೆ I

ಅವರು ಯುದ್ಧವೆನ್ನುತ್ತಾರೆ
ಮಡುಗಟ್ಟಿದ ರಕ್ತದ ಕಲೆಗಳನ್ನು,
ಮುಗ್ಧ ಜನರ ನೋವಿನ ಕೂಗನ್ನು
ಅನಾಥ ಮಕ್ಕಳ ಕಣ್ಣೀರನ್ನು,
ಸೂರಿಲ್ಲದ ನಿರಾಶ್ರಿತರ ಗೋಳನ್ನು
ಮಾನವೀಯತೆ ಮರೆತ ಮನುಷ್ಯನ ಕೃತ್ಯಕ್ಕೆ
ಯುದ್ಧವೆನ್ನುವರು ಅವರು,

ಪ್ರೀತಿಯ ಉಸಿರ ಕಟ್ಟಿಸಿ
ದ್ವೇಷದ ಹೊಗೆಯ ಹಾಕುವರು,
ಅರಳುವ ಹೂಗಳ ಬಾಡಿಸಿ
ತರತರದಿ ಕಾಡಿಸುವರು,
ಅಸಹಾಯಕತೆ, ಕಣ್ಣೀರು ರಾಜ್ಯವಾಳುವಾಗ
ಅದಾವ ವ್ಯವಸ್ಥೆ ಗೆಲ್ಲುವುದೋ,
ಅದಾರ ಹೊಟ್ಟೆಗೆ ತಂಪೆರೆವುದೊ,

ಕಣ್ಣೆದುರಲಿ ಕಾಡುವ ಬದುಕು
ಪ್ರಶ್ನೆಯಾಗಿಯೇ ಉಳಿವ ಭವಿಷ್ಯ,
ರಕ್ತದ ಹಾದಿಯಲಿ ನಡೆದು
ಕೆಂಪಾದ ಅಂಗಾಲಿಗೆ,
ಅದೆಂತು ಹಾಸುವುದೋ ಹೂವನ್ನು
ಮುರುಟಿದ ಭರವಸೆಗಳ ಬೇರನು,
ಚಿಗುರಿಸಬಲ್ಲದು ಪ್ರೀತಿಯ ನೀರೊಂದೇ,

-ರಶ್ಮಿ ಶಮಂತ್  ಹೊಸನಗರ

Gara

Gara

Leave a comment

error: Content is protected !!