I ಅಕ್ರಮ ಕಟ್ಟಡ I ತೆರವಿಗೆ ಶಾಸಕ ಚೆನ್ನಬಸಪ್ಪ ಆಗ್ರಹ I ಸರಕಾರಿ ಆಸ್ತಿ ಸಂರಕ್ಷಣೆಗೆ I ಅಗತ್ಯ ಕ್ರಮಕ್ಕಾಗಿ ಒತ್ತಾಯ I
ಶಿವಮೊಗ್ಗ : ನಗರದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಶನಿವಾರ ನಡೆದ ಘಟನೆ ಸಂಬಂಧಿಸಿ, ಅನ್ಯಕೋಮಿನ ಕೆಲ ಕಿಡಿಗೇಡಿಗಳು ವಿಘ್ನವಿನಾಶಕ ಶ್ರೀ ಗಣೇಶನ ಮೂರ್ತಿಗೆ ಕಾಲಿನಿಂದ ಒದ್ದು, ನಾಗರ ದೇವರ ವಿಗ್ರಹವನ್ನು ಚರಂಡಿಗೆ ಎಸೆದಿದ್ದಾರೆ. ಈ ಕ್ರೂರ ಕೃತ್ಯದಿಂದ ಹಿಂದೂ ಸಮುದಾಯದ ಭಾವನೆಗೆ ಗಂಭೀರ ಧಕ್ಕೆಯುಂಟಾಗಿದೆ ಎಂದು ಶಾಸಕರಾದ ಚೆನ್ಮಬಸಪ್ಪನವರು ಆಕ್ರೋಶ ವ್ಯಕ್ತಪಡಿಸಿದರು,
ಅವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ನೀಡಿ ಈ ಘಟನೆಗೆ ಸಂಬಂಧಿಸಿದಂತೆ ಶನಿವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆಯಲಾಗಿತ್ತು, ಪರಿಶೀಲನೆಯ ವೇಳೆ, ಆರೋಪಿತ ವ್ಯಕ್ತಿ ಸರ್ಕಾರದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಾಣ ಹಂತದಲ್ಲಿರುವ ಮನೆ ಕಟ್ಟುತ್ತಿದ್ದನೆಂಬ ಮತ್ತು ಆ ಕಟ್ಟಡದಲ್ಲಿ ಇತ್ತೀಚೆಗೆ ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಸ್ಥಳೀಯರಿಂದ ಲಭಿಸಿದೆ ಎಂದು ತಿಳಿಸಿದರು,
ಈ ಹಿನ್ನೆಲೆಯಲ್ಲಿ, ಶಿವಮೊಗ್ಗ ಬಿಜೆಪಿ ಜಿಲ್ಲೆ ಹಾಗೂ ನಗರದ ಪ್ರಮುಖರೊಂದಿಗೆ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರನ್ನು ಭೇಟಿ ಮಾಡಿ ಹಲವು ಮಹತ್ವದ ಬೇಡಿಕೆಗಳನ್ನು ತಿಳಿಸಲಾಯಿತು, ಎಂದು ಪತ್ರಕರ್ತರೊಂದಿಗೆ ವಿವರಿಸಿದರು,
ಅಕ್ರಮ ಕಟ್ಟಡ ತೆರವುಗೊಳಿಕೆ: ಆರೋಪಿ ನಿರ್ಮಿಸುತ್ತಿರುವ ಮನೆ ಸರ್ಕಾ:ರಿ ಜಾಗದಲ್ಲಿ ಇರುವುದರಿಂದ, ತಕ್ಷಣವೇ ಅಕ್ರಮ ಕಟ್ಟಡದ ವಿರುದ್ಧ ಕ್ರಮ ಕೈಗೊಂಡು ಅದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಲಾಯಿತು.
ಸರ್ಕಾರಿ ಜಾಗದ ಸಂರಕ್ಷಣೆ: ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಟ್ಟಿರುವ ಹಲವಾರು ಸರ್ಕಾರಿ ಜಾಗಗಳನ್ನು ಅನ್ಯ ಸಮುದಾಯದವರು ಅಕ್ರಮವಾಗಿ ಅತಿಕ್ರಮಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಎಲ್ಲ ಜಾಗಗಳಲ್ಲಿ ತಡೆಗೋಡೆ ಅಥವಾ ಬೇಲಿ ಹಾಕಿಸಿ, ಸ್ವಚ್ಛತೆಗೊಳಿಸಿ, ಪಾಲಿಕೆ ವಶಕ್ಕೆ ತರುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ವಿಧಾನಪರಿಷತ್ ಶಾಸಕರಾದ ಡಾ.ಧನಂಜಯ್ ಸರ್ಜಿ, ಜಿಲ್ಲೆ ಹಾಗೂ ನಗರದ ಪ್ರಮುಖರು, ಸ್ಥಳೀಯ ಮುಖಂಡರು ಸೇರಿದಂತೆ ನಮ್ಮ ಕಾರ್ಯಕರ್ತರು ಉಪಸ್ಥಿತರಿದ್ದರು.



