ಬರೆಯುತ್ತಾರೆ ಗಾರಾ.ಶ್ರೀನಿವಾಸ್
ಮಚ್ಚಾ ಮಂಜನ ಕೊಲೆ ರಿವೇಂಜಿಗಾಗಿ ಬಿದ್ದಿದ್ದೂ ಮೂವತ್ತಕ್ಕೂ ಹೆಚ್ಚು ಹೆಣಗಳೂ..
I ಭೂಗತ ಲೋಕದ ಕೋಟೆಗಾಗಿ I ನೆಕ್ಸ್ಟ್ ಟಾರ್ಗೆಟ್ ಮುಲಾಮ ಅಲಿಯಾಸ್ I ಮುದಿ ಲೋಕೇಶನೇ..?!
ಬರೋಬ್ಬರಿ ಇಪ್ಪತ್ತು ವರುಷದ ನಂತರವೂ ಬೆಂಗ್ಳೂರು ಭೂಗತ ಲೋಕವನ್ನು ಬೆಚ್ಚಿ ಬೀಳಿಸುತ್ತದೆ ಈ ಮಚ್ಚಾ ಮಂಜನ ಮರ್ಡರ್ ರಿವೇಂಜಿನ ಕೇಸು..! ಹೌದು ಮಚ್ಚಾ ಮಂಜನನ್ನು ಮುಗಿಸಿ ಹಾಕಿದ ತರುವಾಯ ಒಂದಿಷ್ಟು ರೌಡಿಗಳು, ಡಾನ್‌ಗಳು ಅವಿತಿಟ್ಟುಕೊಳ್ಳುವ ರೇಂಜಿಗೆ ಬದಲಾಗಿತ್ತು ಅಂದಿನ ಭೂಗತ ಲೋಕ.. ಇದು ಮಚ್ಚಾ ಮಂಜನ ಕೊಲೆ ರಿವೇಂಜಿನ ಕೊನೆ ಕೊಲೆ ಲಿಟಿಗೇಶನ್ ಲಕ್ಷ್ಮಣನದ್ದೆ ಎಂದು ವಿಧಿ ಲಿಖಿತ ಬರೆಯಲಾಗಿತ್ತು ಎಂದೆನಿಸಿದೆ ಹೀಗಾಗಿಯೇ ಅಂದು ಈ ಮರ್ಡರ್ ಮಿಸ್ಟರಿಯಿಂದ ಮಹಾನಗರಿ ಬೆಂಗಳೂರಿನಲ್ಲಿ ಮತ್ತೇ ನೆತ್ತರು ಹರಿದಿತ್ತು,
ಭೂಗತ ಲೋಕದ ಲಿಟಿಗೇಶನ್ ರೌಡಿ ಲಕ್ಷ್ಮಣನನ್ನ ನಡುರಸ್ತೆಯಲ್ಲಿ ಕತ್ತರಿಸಿ ಹಾಕಿದ ಮತ್ತೊಂದು ಗ್ಯಾಂಗ್ ಮಚ್ಚಾ ಮಂಜನ ಕೊಲೆಯ ದ್ವೇಷದ ಹಿನ್ನಲೆಯಲ್ಲಿ ಮಾಡಿತ್ತೇ..? ಅಥವಾ ಹಳೆಯ ರೌಡಿಗಳನ್ನು ಮುಗಿಸಿ ಭೂಗತ ಲೋಕದಲ್ಲಿ ಹೆಸರು ಮಾಡುವ ಹುಚ್ಚುತನದ ಗೀಳಿಗೆ ಸಿಲುಕಿದವರದ್ದಾಗಿತ್ತೇ..? ಅಲ್ಲಿ ತನಿಖೆಗೆ ನಿಂತ ಪೊಲೀಸರಷ್ಟೇ ಹೇಳಬೇಕಾಗಿತ್ತು,
ಆದರೆ ಇದೇ ಘಟನೆಯ ಆಧಾರಿತವಾಗಿ ಅಂದಿನ ಕ್ರೈಂ ಬ್ರಾಂಚ್ನ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್‌ರವರು ಕುಖ್ಯಾತ ರೌಡಿಗಳಾದ ಲೋಕೇಶ್ ಅಲಿಯಾಸ್ ಮುಲಾಮ, ಕೊಮ್ಮಘಟ್ಟ ಮಂಜ, ಲಕ್ಷ್ಮಣ, ಮಾಹೀಮ್, ಜಾಂಟಿ, ಲಕ್ಕಸಂದ್ರ ವಿಜಿ, ರಾಬರಿ ಗಿರಿ, ತೊದಲ ಮಂಜ, ಮೈಕೆಲ್ ಡಿಸೋಜಾ, ಜೆ.ಸಿ ರೋಡ್ ಶಂಕರ, ಅಪ್ಪು ಕೊಡಿಗೆಹಳ್ಳಿ, ಗಾಳಿ ರವಿ, ಜೆಸಿಬಿ ನಾರಾಯಣ, ದಡಿಯಾ ಮಹೇಶ್, ರವಿ ಅಲಿಯಾಸ್ ದೂದ್ ರವಿ, ಬೆತ್ತನಗೆರೆ ಶಂಕರ, ಮಾರೇನಹಳ್ಳಿ ಜಗ್ಗ, ವೇಡಿಯಪ್ಪನ್, ಅತೂಷ್, ರಾಜಾ ಕುಟ್ಟಿ, ತಿರುಮಾರನ್, ತನ್ವೀರ್, ಅಮೀರ್ ಖಾನ್ ಇನ್ನು ಮುಂತಾದವರಿಗೆ ರೌಡಿ ಪೆರೆಡ್ ನಡೆಸಿ ಕೋಕಾ ಕಾಯ್ದೆಯಡಿ ಜೈಲು ಕೋಣೆಗೆ ನೂಕುತ್ತೇನೆ ಎಂದು ಅಬ್ಬರಿಸಿದ್ದರು ಅಲ್ಲದೆ ಇಂತಿವರುಗಳ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ ಭೂ ದಾಖಲೆಗಳು, ಫೈನಾನ್ಸ್ ವಹಿವಾಟಿನ ಬ್ಲ್ಯಾಂಕ್ ದಾಖಲೆಗಳು ಸೇರಿದಂತೆ ಮಾರಕಾಸ್ತ್ರ, ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು, ಆಂದೆ ಕ್ರೈಂ ಬ್ರಾಂಚ್ ಪೊಲೀಸರು ಮುದಿ ರೌಡಿ ಕೊರಂಗು ಕೃಷ್ಣನ ನಿವಾಸದ ಮೇಲೂ ಇಂತಹುದೇ ದಾಳಿಗಳು ನಡೆಸಿ ಪೆರೆಡ್ ಮಾಡಿದ್ದರೆ ದಿ ಮೋಸ್ಡ್ ಡೇಂಜರಸ್ ರೌಡಿ ಎಲಿಮೆಂಟ್ ಲಕ್ಷ್ಮಣನ ಹೆಣ ಯಶವಂತಪುರದ ಸೋಪ್ ಫ್ಯಾಕ್ಟರಿ ಬಳಿ ನೆತ್ತರು ಬಸಿದುಕೊಂಡು ಅನಾಥವಾಗಿ ಬೀಳುತ್ತಿರಲಿಲ್ಲವೇನೋ..? ಎನ್ನುವುದು ಭೂಗತ ಜಗತ್ತು ಇಂದಿಗೂ ಮಾತಾಡಿಕೊಳ್ಳುತ್ತಿದೆ, ಹೌದು ನಟೋರಿಯಸ್ ಲಕ್ಷ್ಮಣನ ಮರ್ಡರ್ ಹಿಂದೆ ಕೊರಂಗುವಿನ ನೆರಳಿತ್ತು, ಎನ್ನುವುದಕ್ಕೆ ಹಲವು ಕಾರಣಗಳಿವೆ, ಈ ಭೂಗತ ಜಗತ್ತು. ಈ Rowdy sheeter Lakshmana murder ನಲ್ಲಿ ಮಚ್ಚಾ ಮಂಜನ ಕೊಲೆಯ ಧ್ವೇಷವೇ ಕಾರಣವೆನ್ನಲಾಗುತಿತ್ತು, ಆದರೆ ಲಕ್ಷ್ಮಣನ ಮರ್ಡರ್ ಮಿಸ್ಟರಿ ಇಂದಿಗೂ ಪ್ರಶ್ನಾರ್ಥಕವಾಗಿದೆ.
ಅಸಲಿಗೆ ಇಪ್ಪತ್ತು ವರುಷದ ಹಿಂದೆ ಯಶವಂತಪುರಕ್ಕೆ ಹಾದು ಹೋಗುವ ಮಾರ್ಗ ಮಧ್ಯದಲ್ಲಿರುವ ಅಲ್ಲಾಳ್ ಸಂದ್ರದ ಕ್ಲಬ್ ನಲ್ಲಿ ಮಚ್ಚಾ ಮಂಜ ಬೀಡು ಬಿಟ್ಟಿದ್ದ ಈ ಮಾಹಿತಿಯಂತೆ ಮುಗಿಸಿ ಹಾಕಿದ್ದ ಗ್ಯಾಂಗ್ ಗೆ ಅಂದು ಜೈಲು ಹಕ್ಕಿಯಾಗಿದ್ದ ರೌಡಿ ಮುಲಾಮ ಅಲಿಯಾಸ್ ಲೋಕೆಶ್ ಹಾಗೂ ನಡುರಸ್ತೆಯಲ್ಲಿ ಕೊಲೆಯಾಗಿ ಹೋದ ಲಕ್ಷ್ಮಣ,ಹಾಗೂ ಬದಲಾದ ದಿನಮಾನದಲ್ಲಿರುವ ಗೋಪಾಲಯ್ಯ ಸೇರಿದಂತೆ ಇತರರು ಸುಫಾರಿ ಕೊಟ್ಟಿದ್ದರು ಎನ್ನುವ ದ್ವೇಷದ ಅಮಲಿಗೆ ಬರೊಬ್ಬರಿ ಹೆಣಗಳರುಳಿದ್ದು ಇಲ್ಲಿಗೆ ಮೂವತ್ತಕ್ಕು ಹೆಚ್ಚು,.! ಹೀಗೆ ಓರ್ವ ಮಚ್ಚಾ ಮಂಜನ ಕೊಲೆಯ ದ್ವೇಷದ ಸೇಡು ಇನ್ನೂ ಈ ಭೂಗತ ಲೋಕದಲ್ಲಿ ಹಾರಿಲ್ಲ, ಎನ್ನುವುದಕ್ಕೆ ಇಂದು ಹಾಡುಹಗಲೇ ಬೀಕರ ಬಿಭತ್ಸಕರ ಹೆಣವಾಗಿ ಹೋದ ನಟೋರಿಯಸ್ ಲಕ್ಷ್ಮಣನ ಪ್ರಕರಣವೇ ಸಾಕ್ಷಿಯಾಗಿ ನಿಲ್ಲುತ್ತಿದೆಯಾ..? ಎಂದು ಬಲವಾಗಿ ಅನುಮಾನಿಸಲಾಗುತ್ತಿದೆ
ಒಟ್ಟಿನಲ್ಲಿ ಕ್ರೈಂ ಬ್ರಾಂಚ್ನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್‌ರವರು ಯಾವುದೇ ಮುಲಾಜಿಲ್ಲದೆ ಮುದಿ ರೌಡಿ ಕೊರಂಗು ಕೃಷ್ಣನ ಮೇಲೆ ಪೊಲೀಸ್ ರಿವಾಜಿನಂತೆ ಟ್ರೀಟ್ ನಡೆಸಿದಿದ್ದರೆ ಎಲ್ಲಾ ಅಸಲಿಯತ್‌ಗಳು ಹೊರ ಬೀಳುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿತ್ತು ಆದರೆ ಆಗಿದ್ದೇ ಬೇರೆ, ಅಸಲಿಗೆ ಬಹುರೋಗದಿಂದ ಬಳಲುತ್ತಿದ್ದ ಕೊರಂಗು ಕೃಷ್ಣ ದಫನ್ ಆಗಿ ಜಮಾನವೇ ಆಗಿದೆ ಈತನ ಗೋರಿಯಲ್ಲಿಯೇ ಅದೆಷ್ಟು ಸತ್ಯಗಳು ಮುಚ್ಚಿ ಹೋಗಿದೆ.
ಇನ್ನೂ ಮುಂದುವರೆದಂತೆ ಇದೀಗ ಬ್ಯಾಂಗ್ಲೂರು ಭೂಗತ ಜಗಲಿಯಲ್ಲಿ ಮತ್ತೊಂದು ಮುದಿ ಹೆಣಕ್ಕಾಗಿ ಲಾಸ್ಟ್ ಮೂರು ವರ್ಷದಿಂದ ಕಾದು ಕೂತಿತ್ತು, ಇನ್ನೇನು ಮುಲಾಮನನ್ನು ಮುಗಿಸಿ ಹಾಕುವ ಸ್ಕೆಚ್ ಎಡವಟ್ಟು ಆಗಿದೆ ಎನ್ನುವ ಬಲವಾದ ಚರ್ಚೆಗಳಿಂದಾಗಿಯೇ ಮುಲಾಮ ಇಂದಿಗೂ ನೂರಾರು ಹುಡುಗರ ಎಸ್ಕಾರ್ಟ್ ಪವರ್ ಇಲ್ಲದೆ ಹೊರಗೆ ಕಾಲು ಇಡುವಂತಿಲ್ಲ, ಈ ಪ್ರಸ್ತುತ ದಿನಮಾನದಲ್ಲಂತೂ ಆತನಿಗಿರುವ ರೋಗಗಳಿಂದ ನಡಿಗೆಯ ಹಾದಿ ತಪ್ಪಿಸಿದೆ, ಹೀಗಾಗಿಯೇ ಈತನ ಮೇಲಿದ್ದ ಮರ್ಡರ್ ಕಯ್ಯಾಲಿ ಬೇರೊಂದು ಕಡೆ ವಾಲಿದಂತಿದೆ, ಆದರೂ ಇದೊಂದು ಕರಾಳ ಲೋಕವೇ ಆಗಿರುವುದರಿಂದ ಫಿಲ್ಡ್ ಮಾಡಿ ಕಾಸು ಕೋಟಿಗಳ ಕೋಟೆಯ ಮ್ಯಾಲೆ ದಾಳಿ ಮಾಡುವ ಹೊಂಚುಗಳಿಗೇನು ಕಡಿಮೆ ಇಲ್ಲವಾಗಿದೆ, ಒಂದು ಮಾಹಿತಿಯ ಪ್ರಕಾರ ಮುಲಾಮನನ್ನು ಅಂದು ಮುಗಿಸಿ ಹಾಕಲು ಟೆರರ್ ಅಟ್ಯಾಕ್‌ಗೆ ಸಜ್ಜಾಗಿ ಲೀಡ್ ಮಾಡಿದ್ದು ಶಿವಮೊಗ್ಗದ ಪೋರ..! ಎನ್ನುವ ವರಾತಗಳಿದ್ದವು, ಸಾಲದಕ್ಕೆ ಒಂದಷ್ಟು ಬ್ಯಾಚ್‌ಗಳು ಶಿವಮೊಗ್ಗದ ಕಡೆ ಟೂರ್ ಮಾಡಿಕೊಂಡು ಬಂದು, ಪೋಟೋ ತೋರಿಸಿ, ಹುಡುಕಾಟ ನಡೆಸಿದೆ, ಆದರೆ ಯಾರಿಗೂ ವಿಷಯ ತಿಳಿಯದೆ ಹಿಂತಿರುಗಿ ಹೋಗಿ ವರುಷಗಳೂ ಉರುಳಿದೆ, ಇಂದಿಗೂ ಈ ಟೆರರ್ ಹುಡುಗ ಯಾರೆಂದು..? ಮುಲಾಮನಿಗೆ ಗೊತ್ತು ಮಾಡಿಕೊಳ್ಳುವುದಕ್ಕೆ ಸಾಧ್ಯವೂ ಆಗಿಲ್ಲ,
ಶಿವಮೊಗ್ಗದಲ್ಲಿರುವ ಈ ಹುಡುಗನ ಪತ್ತೆ ಹಚ್ಚುವ ಎಲ್ಲಾ ಪ್ರಯತ್ನಗಳು ಇಂದಿಗೂ ಹುಸಿಯಾಗಿದೆ, ಎಂದರೆ ಈ ಹುಡುಗ ಯಾರೆಂದು ಕುತೂಹಲ ಮೂಡಿಸಿದೆ..! ಅಲ್ಲದೆ ಆತನ ಮೀಟರ್ ಕುರಿತಾಗಿ ಭೂಗತ ಲೋಕ ಪೆಚ್ಚು ಬೀಳುವಂತೆ ಮಾಡಿದೆ, ಇನ್ನೂ ಇದೇ ಶಿವಮೊಗ್ಗದ ವೈಟ್ ಕಾಲರ್ ಪೊಲಿಟಿಕಲ್ ಮೇಸ್ತ್ರಿಯೋರ್ವ ಭೂಗತ ಲೋಕದ ಡಾನ್‌ಗಳೊಂದಿಗೆ ಹಾಗೂ ರೌಡಿಗಳೊಂದಿಗೆ ಪುಟಾಲು ಬಿಟ್ಟು ಓಡಾಡಿಕೊಂಡು ಪಾರ್ಟಿ, ಮೋಜು ಮಸ್ತಿಗಳ ಮಾಡಿಸುವ ಕಯ್ಯಾಲಿ, ಈ ನಂತರ ಇಂತಿವರುಗಳೊಂದಿಗೆ ಓಡಾಡುವ, ಮಾತಾಡುವ, ಕಾರಿನಿಂದ ಇಳಿದು ಬಂದು ಬೊಕ್ಕೆ ಕೊಡುವ ವೀಡಿಯೋ ತುಣುಕುಗಳನ್ನು ಮಾಡಿಸಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್ ರೌಂಡ್‌ನಲ್ಲಿ ಮ್ಯೂಸಿಕ್ ಸಾಂಗ್ ಹಾಕಿಸಿ ಅಪ್‌ಲೋಡ್ ಮಾಡಿಕೊಳ್ಳುವ ತೆವಲಿನ ಕಯ್ಯಾಲಿಗಳಿಂದಾಗಿ, ಅಗ್ನಿ ಶ್ರೀಧರ್, ಸೈಲೆಂಟ್ ಸುನೀಲ, ಒಂಟೆ ರೋಹಿತಾ, ಇನ್ನೂ ಮುಂತಾದವರೆಲ್ಲಾ ತನ್ನ ಬೆಂಬಲಿಗರು ತಾನೇ ಡಾನ್ ಎನ್ನುವಷ್ಟರ ಮಟ್ಟಿಗೆ ಪುಗ್ಸಾಟೆ ಹವಾ ಕ್ರಿಯೇಟ್ ಮಾಡಿಕೊಂಡಿರುವ ಈತನೋರ್ವ ಖಾಲಿ ಪಲಾವ್ ಎಂಬುದು ಗೊತ್ತು ಮಾಡಿಕೊಳ್ಳಬೇಕಾದ ಹೊತ್ತು ಇದಾಗಿದೆ. ಈತನಿಗೂ ಮುಲಾಮನ ಮೇಲೆ ಟೆರರ್ ಅಟ್ಯಾಕ್ ಮಾಡಲು ಸಜ್ಜಾಗಿದ್ದ ಹುಡುಗರ ಗ್ಯಾಂಗ್ ಯಾವುದು..? ಇದನ್ನು ಲೀಡ್ ಮಾಡಿದ ಶಿವಮೊಗ್ಗದ ಹುಡುಗನಾರು ಎಂದು ಕೇಳಿದ್ದಾರೆ..? ಆದರೆ ಈತನಿಗೂ ಈ ಸಂಗತಿ ತಿಳಿದಿಲ್ಲ ಎಂದಾಗ ಪಕ್ಕಾ ಖಾಲಿ ಫಲಾವ್ ಎಂಬುದು ಖಾತ್ರಿ ಪಡಿಸಿಕೊಂಡಿರುವ ಮುಲಾಮ ಅಲಿಯಾಸ್ ಲೋಕೇಶ್ ರೋಗಗಳ ಬಾಧೆಯಿಂದ ಮನೆಯಿಂದ ಹೊರ ಬರಲಾಗದೆ ಮನೆಯಲ್ಲಿಯೇ ಕೂತು ಮಾನಸೀಕನಾಗಿ ಕುಬ್ಜನಾಗಿದ್ದಾನೆ ಎನ್ನುವ ವದಂತಿಗಳಿದೆ.
ಅಸಲಿಗೆ ಈತ ಯಾರು ಗೊತ್ತೇ..?
ಕುಖ್ಯಾತ ರೌಡಿ ಬಲರಾಮನ ಸಹಚರ ಮುಲಾಮ ಯಾನೆ ಲೋಕೇಶನನ್ನು ಗೂಂಡಾ ಕಾಯ್ದೆಯಡಿ ೨೦೧೪ರಲ್ಲಿ ಪೊಲೀಸರು ಬಂಧಿಸಿದ್ದರು. ೧೮ನೇ ವಯಸ್ಸಿಗೆ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ ಮುಲಾಮನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದ ಅನ್ವಯ ರೌಡಿ ಮುಲಾಮನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ರಾಜರಾಜೇಶ್ವರಿ ನಗರದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಬಹುಮಹಡಿಯ ಬಂಗಲೆ ಕಟ್ಟಿಕೊಂಡು ಅಲ್ಲಿ ಮುಲಾಮ ವಾಸಿಸುತ್ತಿದ್ದ. ಈತನ ಮೇಲೆ ಸುಮಾರಿಗೆ ಲೆಕ್ಕಕ್ಕೆ ಸಿಕ್ಕಿದಂತೆ ೧೯ ಪ್ರಕರಣಗಳಿವೆ. ಮುಲಾಮ ೧೮ನೇ ವಯಸ್ಸಿಗೆ ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿದ್ದನೆಂಬ ಪೊಲೀಸ್ ದಾಖಲೆಗಳು ಪುಷ್ಠೀಕರಿಸುತ್ತವೆ. ೧೯೮೫ರಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಈತನ ಹೆಸರಿನಲ್ಲಿ ರೌಡಿಪಟ್ಟಿ ತೆರಯಲಾಗಿತ್ತು. ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ರಾಜಾರಾಜೇಶ್ವರಿನಗರ ಪೊಲೀಸ್ ಠಾಣೆ ರೌಡಿ ಶೀಟರ್ ಪಟ್ಟಿಯಲ್ಲಿ ಈತನ ಹೆಸರಿದೆ..
ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದ್ದ ಈತನ ಹಪ್ತಾ ವಸೂಲಿ ಬಾಜಿ ಇದೀಗಲೂ ಜಾರಿಯಲ್ಲಿದೆ ಎನ್ನುವುದು ಭೂಗತ ಲೋಕ ಹೇಳುತ್ತಿದೆ, ಒಟ್ಟಾರೆ ನೆಕ್ಸ್ಟ್ ಟಾರ್ಗೆಟ್ ಮುಲಾಮ ಅಲಿಯಾಸ್ ಲೋಕೇಶ್ ಎಂಬುವ ಸ್ಟೋರಿ ಭೂಗತ ಲೋಕದಲ್ಲಿ ಪಕ್ಕಾ ಲೀಕಾಗಿದೆ.

