Saturday, August 1, 2026
Homeಸೂರ್ಯಗಗನI ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಹೆಸರುವಾಸಿ I ಎಸ್.ಎನ್.ಚನ್ನಬಸಪ್ಪI

I ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಹೆಸರುವಾಸಿ I ಎಸ್.ಎನ್.ಚನ್ನಬಸಪ್ಪI

I ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಹೆಸರುವಾಸಿ I ಎಸ್.ಎನ್.ಚನ್ನಬಸಪ್ಪI
ಶಿವಮೊಗ್ಗ : ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಗಳನ್ನು ಮಾಡಿರುವ ಈ ಫ್ರೆಂಡ್ಸ್ ಸೆಂಟರ್ ಸಂಸ್ಥೆ 60 ನೇ ವರ್ಷಕ್ಕೆ ಕಲಿಟ್ಟಿದ್ದು, ಶಿವಮೊಗ್ಗದಲ್ಲಿ ಅತೀ ಹೆಚ್ಚು ವರ್ಷಗಳನ್ನು ಮತ್ತು ಪೂರ್ವ ಅಧ್ಯಕ್ಷರನ್ನು ಒಳಗೊಂಡ ಸಂಸ್ಥೆಯಾಗಿದೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ರವರು ಹೇಳಿದರು.
ಗೋಪಾಳದ ಫ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ನಡೆದ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ 60 ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಯುವಜನ ನಾಯಕತ್ವ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ರಾಜ್ಯ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳು ಕಲೆ ಮತ್ತು ಸಂಸ್ಕೃತಿಗೆ, ರಕ್ತದಾನ ಮತ್ತು ನೇತ್ರಾದಾನ ಶಿಬಿರಗಳ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲ್ಲಿಕಾರ್ಜುನ ಕಾನೂರ್ ರವರು, ನಿತ್ಯ ಜೀವದ ಪ್ರಯಾಣದಲ್ಲಿ ಪ್ರತಿ ಕ್ಷಣವೂ ಹೊಸ ಪರಿಚಯ, ಸ್ನೇಹ, ಪರಿಚಿತರ ಬೀಳ್ಕೊಡಿಗೆಯೊಂದಿಗೆ ಸಾಗುತ್ತಿದೆ. ನಾವು ಇಲ್ಲದಿದ್ದರೂ ಜನರ ಮನಸಿನಲ್ಲಿ ಜೀವಿಸುವಂತಿರಬೇಕು, ಹೆಜ್ಜೆ ಗುರುತು ಉಳಿದರೆ ಅರ್ಥ ಬದ್ಧ ಜೀವನ ನಮ್ಮದಾದರೆ ಅದು ಒಂದು ಸಾರ್ಥಕ ಬದುಕಾಗುತ್ತದೆ. ಮನದಕಣ್ಣು ತೆರೆಯದೆ ನಾಗರೀಕತೆಯನ್ನು ದೋಷಸುವ ನಮ್ಮ ನಿಲುವು ಬದಲಾಗಬೇಕು. ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸುವಲ್ಲಿ ಈ ಸಂಸ್ಥೆಯ ಪಾತ್ರ ದೊಡ್ಡದಾಗಿದೆ.
ಮನುಷ್ಯ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಹಾಗೂ ಸಹಕಾರವನ್ನು ಬೆಳೆಸುವ ನ್ಯೆತಿಕ ಗುಣಗಳು ವ್ಯಕ್ತಿಯನ್ನು ಇತರರೊಂದಿಗೆ ಮಾನವೀಯತೆಯಿಂದ ಬದುಕಲು ಕಲಿಸುತ್ತದೆ. ಮತ್ತು ದ್ಯೆನಂದನ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಅರೋಗ್ಯಕರ ಬದುಕನ್ನು ಸಾಧಿಸಬೇಕಾಗಿದೆ. ಜೀವನದಲ್ಲಿ ಯಾವುದೇ ಹಂತದಲ್ಲಿಯೂ ಹೊಸ ಆರಂಭ ಸಾಧ್ಯ ಎಂದ ಅವರು, ಕಾರ್ಯಕಾರಿ ಮಂಡಳಿಯ ಹೆಸರನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಅಶ್ವಥ್ ನಾರಾಯಣ್ ಮತ್ತು ರಾಜೇಶ್ ಪಿ. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂದ್ಯಾ ಸತ್ಯನಾರಾಯಣ ಪ್ರಾರ್ಥನೆ ಮಾಡಿದರು, ರವೀಂದ್ರನಾಥ್ ಐತಾಳ್ ವಾರ್ಷಿಕ ವರದಿ ಓದಿದರು, ರಮೇಶ್ ಬಾಬು ಎಸ್.ಜಿ. ಸ್ವಾಗತಿಸಿದರು, ಮೋಹನ್ ಕುಮಾರ್ ಎಲ್.ಎಂ. ವಂದಿಸಿದರು, ಜಿ.ವಿಜಯಕುಮಾರ್ ನಿರೂಪಿಸಿದರು.
ಈ ವೇಳೆ ಪೂರ್ವಧ್ಯಕ್ಷರಾದ ನಾಗರಾಜ್ ವಿ. ಸಂಸ್ಥೆಯ ಪ್ರಗತಿ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್, ನಿಕಟ ಪೂರ್ವ ಅಧ್ಯಕ್ಷರಾದ ಧನರಾಜ್ ಬಿ.ಜೆ., ಸ್ವಪ್ನ ಬದರಿನಾಥ್, ಸುನೀತಾ ಚೇತನ್, ಸ್ಮಿತಾ ನವೀನ್, ಅನಿತ ಸುರೇಂದ್ರ ಕಾಸಲ, ಉಮಾ ವೆಂಕಟೇಶ್, ಲೋಕೇಶ್ ಹೆಚ್.ಕೆ., ಪಂಚಾಕ್ಷರಯ್ಯ ಹಿರೇಮಠ್, ಸತ್ಯನಾರಾಯಣ ಜಿ., ವೆಂಕಟೇಶ್ ಮೂರ್ತಿ ಟಿ.ಆರ್., ಮಹೇಶ್ವರಪ್ಪ ಹೆಚ್., ಮೋಹನ್ ಡಿ.ಪಿ. ಸೇರಿಂದತೆ ಇನ್ನಿತರರು ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I