ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಗುಂಡಾಗಳು ಸಿಕ್ಕಿದ್ರು..! I
ಜನ ನೆತ್ತರ ಕುದಿ ಬತ್ತಿತೇ..?!
ಪ್ರಶ್ನಿಸುವ ಎದೆಗಳು ಕುಗ್ಗಿತೇ,
ರಾಜಕೀಯ ಗುಂಡಾಗಳು ಸಿಕ್ಕಿದ್ರು,
ಪೊಲೀಸರ ವಾಹನವೇರಿ ಕುಣಿದಿದ್ರು,
ಮೊಟ್ಟೆಗಳ ಎಸೆದು ನುಗ್ಗಿದ್ರು,
ತಿನ್ನುವ ಪ್ರೋಟಿನ್, ಧ್ವೇಷಕೆ ಬಳಸಿದ್ರು,
ಒಂದೆಡೆ ಗದ್ದಲವಿಟ್ಟ ಕಾಂಗ್ರೆಸ್ಸಿಗರ ದಾಳಿ
ಇನ್ನೊಂದೆಡೆ ಬಿಜೆಪಿಗರ ಪ್ರತಿದಾಳಿ,
ಇವರೆಲ್ಲಾ ಜನಪ್ರತಿನಿಧಿಗಳೇ..?!
ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟಿತ ಘಟನೆ,
ಜನಪ್ರತಿನಿಧಿಗಳ ಸೋಗಿನಡಿ ಅಟ್ಯಾಕ್,
ಮುಷ್ಕರದ ಹೆಸರಿನಲಿ ಕಾವಿಟ್ಟ ಉದ್ವಿಗ್ನತೆ,
ಸುದ್ದಿಗಾಗಿ ಸೃಷ್ಟಿಸಿದ ಆತಂಕದ ಕರಾಳತೆ,
ಜನ ನೆಮ್ಮದಿ ಹಾಳುಗೆಡುವಿದ ದಿನವಿದು,
ವೀಡಿಯೋ ದರ್ಶಿಸಿ, ಎಪ್ ಐಆರ್ ದಾಖಲಿಸಿ,
ಇದೊಂದು ಧ್ವೇಷ ಬಿತ್ತಿದ ಗುಂಡಾವರ್ತನೆ,
ಇದೇನು ಸಹಜವಲ್ಲ, ನಾಳೆಯ ಆತಂಕ,
ಅರಾಜಕತೆಯ ಮತ್ತೊಂದು ಮುಖ..!

