Saturday, August 1, 2026
Homeಸಿನಿಮಾದುರ್ಗದ ಹುಡುಗನ " ಮಾಯಾವಿ " ಶೀಘ್ರದಲ್ಲೇ ತೆರೆಗೆ

ದುರ್ಗದ ಹುಡುಗನ ” ಮಾಯಾವಿ ” ಶೀಘ್ರದಲ್ಲೇ ತೆರೆಗೆ

 

ದುರ್ಗದ ಹುಡುಗನ ” ಮಾಯಾವಿ ” ಶೀಘ್ರದಲ್ಲೇ ತೆರೆಗೆ

ಬೆಂಗಳೂರು : ಚಿತ್ರದುರ್ಗದ ಯುವಪ್ರತಿಭೆ ರಘುರಾಮ್ ನಾಯಕನಾಗಿ ನಟಿಸುತ್ತಿರುವ ಶ್ರೀ ದುರ್ಗಾ ಸೆಕ್ಯೂರಿಟಿ ಸರ್ವಿಸ್ ಅರ್ಪಿಸುವ ಚೊಚ್ಚಲ ಚಲನಚಿತ್ರ ಮಾಯಾವಿ ಶೀಘ್ರದಲ್ಲೇ ತೆರೆಗೆ ಬರಲಿದೆ.
ಸಸ್ಪೆನ್ಸ್ ,ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಪ್ರೇಮ ಕಥಾ ಹಂದರದ ಈ ಚಿತ್ರ ಪೋಸ್ಟಪ್ರೊಡಕ್ಷನ್ ಎಲ್ಲ ಕಾರ್ಯ ಮುಗಿಸಿದ್ದು ಸೆನ್ಸಾರ್‌ಗೆ ಹೊರಡಲು ಸಿದ್ದವಾಗಿದೆ. ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರ ಮೊದಲಾದ ಕಡೆ ಸುಮಾರು ಇಪ್ಪತೈದು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿವೆ. ಈಗಾಗಲೇ ಆಡಿಯೋ ಮತ್ತು ಪೋಸ್ಟರ್ ಲಾಂಚ್ ಮಾಡಲಾಗಿದೆ . ಮನೆಮಂದಿಯೆಲ್ಲ ಇಷ್ಟಪಟ್ಟು ನೋಡಬಹುದಾದ ಚಿತ್ರವಾಗಿದ್ದು ಯುವ ಪ್ರತಿಭೆಗಳನ್ನು ಪ್ರೇಕ್ಷಕರು, ಮಾಧ್ಯಮ ಬಂಧುಗಳು ಪ್ರೋತ್ಸಾಹಿಸಬೇಕು ಎಂದು ನಾಯಕನಟ ರಘುರಾಮ ತಿಳಿಸಿದ್ದಾರೆ.

ಚಿತ್ರದಲ್ಲಿ ನಾಯಕರಾಗಿ ರಘುರಾಮ್, ನಾಯಕಿಯಾಗಿ ನಿಶ್ಚಿತಾಶೆಟ್ಟಿ, ಎಂ.ಕೆ.ಮಠ, ಸುರೇಶಬಾಬು, ಸೂರ್‍ಯಪ್ರವೀಣ, ಶಿಲ್ಪಾ , ಅನುರಾಧಾ, ಖುಷಿಗೌಡ ಮೊದಲಾದವರಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ಗುರುದತ್ ಮುಸುರಿ, ಚಿತ್ರಕಥೆ-ಸಂಭಾಷಣೆ ಶಂಕರ.ಜಿ, ಅಕ್ಷತಾ ಚಕ್ರಸಾಲಿ, ಸಂಕಲನ-ವಿಎಫ್ ಎಕ್ಷ್ ,ಡಿಐಆರ್. ಅನಿಲಕುಮಾರ್, ಹಿನ್ನೆಲೆ ಗಾಯನ ವಿಜಯ ಪ್ರಕಾಶ್, ಮೇಘನಾ ಹಳಿಯಾಳ, ಕೋರಿಯೋಗ್ರಾಫ ರಘು ಆರ್. ಜೆ, ಸಂಗೀತ ಸಂತೋಷ ಅಗಸ್ತ್ಯ, ಸಾಹಸ ಮಾರುತಿ ಮಾಗಡಿ, ರಾಕೆಟ್ ವಿಕ್ರಂ, ಗೀತೆರಚನೆ ಆನಂದ ಕಮಸಾಗರ, ಸ್ಟಿಲ್ ನಾಗಭೂಷಣ, ಪಿಆರ್‌ಓ ಸುಧೀಂದ್ರ ವೆಂಕಟೇಶ್ , ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಮಹೇಶ್ವರಪ್ಪ ಚಕ್ರಸಾಲಿ, ಕಥೆ, ನಿರ್ದೇಶನ ಶಂಕರ.ಜಿ. ಅವರದಿದೆ. ನಿರ್ಮಾಪಕರು ಡಾ.ಮಹಾಂತೇಶ್ ಎಚ್. ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I