Saturday, August 1, 2026
Homeಸೂರ್ಯಗಗನI ವಿದ್ಯಾರ್ಥಿಗಳ ಆತ್ಮಹತ್ಯೆ I ನಿಯಂತ್ರಣಕ್ಕೆ ಕಾರ್ಯಪಡೆ I

I ವಿದ್ಯಾರ್ಥಿಗಳ ಆತ್ಮಹತ್ಯೆ I ನಿಯಂತ್ರಣಕ್ಕೆ ಕಾರ್ಯಪಡೆ I

I ವಿದ್ಯಾರ್ಥಿಗಳ ಆತ್ಮಹತ್ಯೆ I ನಿಯಂತ್ರಣಕ್ಕೆ ಕಾರ್ಯಪಡೆ I

ಬೆಂಗಳೂರು, : ರಾಷ್ಟ್ರದಲ್ಲಿ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯ, ವೃತ್ತಿ ಶಿಕ್ಷಣ, ಕಾಲೇಜುಗಳಲ್ಲಿ ಹೆಚ್ಚಾಗುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣಗಳ ಕುರಿತು ಸರ್ವೋಚ್ಛ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಈ ನ್ಯಾಯಾಲಯ ವಿದ್ಯಾರ್ಥಿಗಳ ಆತ್ಮಹತ್ಯೆ ನಿವಾರಣೆಗೆ ರಾಷ್ಟ್ರೀಯ ಕಾರ್ಯಪಡೆ ರೂಪಿಸಲು ಶಿಫಾರಸ್ಸು ಮಾಡಿದ್ದು, ಇದರ ಅಧ್ಯಕ್ಷರಾಗಿ ನಿವೃತ್ತ ನ್ಯಾಯಾಧೀಶರಾದ ಎಸ್ ರವೀಂದ್ರ ಭಟ್ ಅವರನ್ನು ನೇಮಿಸಿದೆ. ಈ ಕಾರ್ಯಪಡೆ ಸಮಗ್ರವಾದ ವರದಿ ಸಿದ್ಧಪಡಿಸುವ ಕೆಲಸ ವಹಿಸಿಕೊಂಡಿದ್ದು ವಿದ್ಯಾರ್ಥಿಗಳು ಅನುಭವಿಸುತ್ತಿರುವ ರ್ಯಾಗಿಂಗ್, ತಾರತಮ್ಯ ಶೈಕ್ಷಣಿಕ ಒತ್ತಡ ಮುಂತಾದವುಗಳ ತಡೆಗಾಗಿ ಸಹ ಪ್ರಾಯೋಗಿಕ ಕ್ರಮಗಳನ್ನು ಶಿಫಾರಸ್ಸು ಮಾಡುತ್ತದೆ.

ವಿಶ್ವ ಆತ್ಮಹತ್ಯಾ ನಿವಾರಣಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಕಾರ್ಯಪಡೆ ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಆತ್ಮಹತ್ಯೆ ನಿವಾರಣೆ ಕುರಿತ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದೆ. ಈ ಕಾರ್ಯಪಡೆಯು ದೆಹಲಿ, ಹರಿಯಾಣ, ಕರ್ನಾಟಕ ಮತ್ತು ತಮಿಳುನಾಡಿನ 13 ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು, ಬೋಧಕರು, ಆಡಳಿತ ವರ್ಗ ಹಾಗೂ ಕುಂದು-ಕೊರತೆ ಸಮಿತಿಗಳೊಂದಿಗೆ ಸಂವಾದ ನಡೆಸಿದೆ. ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಪೂರಕವಾದ ಮೂಲ ಸೌಕರ್ಯ, ಸೇವೆಗಳನ್ನು ನೀಡುವಂತೆ ಸಹ ಸಲಹೆ ನೀಡಿದೆ.

ಕಾರ್ಯಪಡೆಯು ವೈದ್ಯಕೀಯ ವಿದ್ಯಾರ್ಥಿಗಳು, ವಿಕಲಚೇತನ, ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳೊಂದಿಗೆ ಸಹ ಸಮಾಲೋಚನೆ ನಡೆಸಿದೆ. ಅಲ್ಲದೆ ಆನ್‍ಲೈನ್ ಸಮೀಕ್ಷೆಯನ್ನು ಸಹ ಪಾಲುದಾರೊಂದಿಗೆ ನಡೆಸಿದೆ. ಸಮೀಕ್ಷೆಯನ್ನು ಜಾಳತಾಣ https://ntf.education.gov.in ನಲ್ಲಿ ಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳು, ಬೋಧಕರು, ಪೋಷಕರು, ಸೇವಾಕರ್ತರು ಹಾಗೂ ಇನ್ನಿತರರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I