Saturday, August 1, 2026
HomeಸಿನಿಮಾI ಸಾಹಸಮಯವಾದ ಒಂದು I ದೈವಿ ಸಂಗ್ರಹದ ಪ್ರಯತ್ನವೇ I ಕಾಂತಾರ ಅಧ್ಯಾಯ-೧ I

I ಸಾಹಸಮಯವಾದ ಒಂದು I ದೈವಿ ಸಂಗ್ರಹದ ಪ್ರಯತ್ನವೇ I ಕಾಂತಾರ ಅಧ್ಯಾಯ-೧ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸಾಹಸಮಯವಾದ ಒಂದು I ದೈವಿ ಸಂಗ್ರಹದ ಪ್ರಯತ್ನವೇ I ಕಾಂತಾರ ಅಧ್ಯಾಯ-೧ I

ಕಾಂತಾರ ಚಾಪ್ಟರ್-೧ ಒಂದು ದಂತ ಕತೆಯ ಮೊದಲ ಭಾಗದಿಂದ ಮುಂದಿನ ಭಾಗ ಬೆಳ್ಳಿ ಪರದೆಯಲ್ಲಿ ಇದೀಗ ಅಬ್ಬರಿಸಿದೆ, ಭಕ್ತಿಪಂಥಗಳ ಮನಸಿಗೆ ಇದೊಂದು ದೈವಿ ದೃಷ್ಠಿಯಾದರೆ, ಚಿತ್ರ ಸಮೂಹಕೆ ಇದೊಂದು ಮನರಂಜನೆಯ ಚಿತ್ರವಾಗಿದೆ, ಒಂದಷ್ಟು ಚಿತ್ರ ಮನಸುಗಳು ಅನೇಕತೆಯಲ್ಲಿ ಬಣ್ಣಿಸಿವೆ, ಕಾಂತಾರ ಸಿನಿಮಾ ಹೊಸತೊಂದು ಇತಿಹಾಸ ಸೃಷ್ಟಿಸಿದೆ ಅಲ್ಲದೆ ಕನ್ನಡದಲ್ಲಿನ ಮೊದಲ ಪ್ರಯೋಗ ಎಂದಿದ್ದಾರೆ, ಇರಲಿ ಒಂದು ಪ್ರಯತ್ನ ನೂರು ಅಭಿಪ್ರಾಯ ಎಲ್ಲವುದಕ್ಕೂ ಅವಕಾಶವಿದೆ,

ಚಿತ್ರ ನಾನು ನೋಡಿದೆ, ನಿಜಕ್ಕೂ ತಾರಾಬಳಗದ ಕೇಂದ್ರ ಬಿಂದು ರಿಷಬ್ ಶೆಟ್ಟಿ, ದೈವಾಂಶ ಸಂಭೂತನಾಗಿ ಅಜಾನುಬಾಹುವಾಗಿ ನಟಿಸಿದ್ದರೆ, ರುಕ್ಮಿಣಿ ವಸಂತ್ ಕನಕವತಿ ರಾಜಕುಮಾರಿಯಾಗಿ ಜೀವದುಂಬಿದ್ದಾರೆ, ಇನ್ನೂ ಗುಲ್ಶನ್ ದೇವಯ್ಯ ಮತ್ತು ಜಯರಾಮ್ ರವರುಗಳು ರಾಜವಂಶಜರಾಗಿ ನಿರ್ವಹಿಸಿರುವ ಪಾತ್ರ ನಿಜಕ್ಕೂ ಮೆಚ್ಚುವಂತಹದ್ದಾಗಿದೆ, ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿರುವ ಈ ಚಿತ್ರ ಮತ್ತು ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

ಸಿನಿಮಾ ಮೇಕಿಂಗ್, ಸ್ಟಂಟ್ಸ್‌ಗಳ ಸಾಹಸಮಯ ದೃಶ್ಯಗಳು ಹೊಸತನಗಳ ಕಟ್ಟಿಕೊಟ್ಟಿದೆ, ಆಯಾ ಪಾತ್ರಧಾರಿಗಳ ಕಾಸ್ಟ್ಯೂಮ್ಸ್‌ಗಳು ಆಕರ್ಷಿತಗೊಂಡು ಗತಕಾಲಕ್ಕೆ ಕರೆದೊಯ್ಯುತ್ತದೆ, ಆದರೆ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಬಳಸಿಕೊಂಡಿರುವ ಕೆಲ ಪ್ರಾಪರ್ಟಿಗಳು ಅತ್ಯಾಧುನಿಕವಾಗಿರುವುದು ಕಂಡು ಬಂದರು ನೋಡುಗರಿಗೆ ಇದು ಸಡನ್ನಾಗಿ ಪೈಂಡೌಟ್ ಮಾಡುವುದಕ್ಕೆ ಆಗುವುದಿಲ್ಲ, ಒಂದು ಸನ್ನಿವೇಶದಲ್ಲಿ ರಾಜರು ಕುಳಿತು ಊಟ ಮಾಡುವಾಗ ಬಳಸಿಕೊಂಡಿರುವ ಟರ್ನಿಂಗ್ ಚೇರುಗಳು ಈ ಹೊತ್ತಿನ ಟೆಕ್ನಾಲಜಿಗಳಲ್ಲಿ ಟರ್ನಿಂಗ್ ಆಗಿರುವ ಚೇರುಗಳಾಗಿದೆ, ಬಹುಷ್ಯಃ ಪ್ರಾಪರ್ಟಿ ಬಳಕೆ, ಹಾಗೂ ನೋಟ್‌ಗಳು ಕೂಡ ಇಲ್ಲಿ ಗತ ದಿನಕ್ಕೆ ಕೊಂಡೊಯ್ಯುವ ಉದ್ದೇಶಿತಗಳಿರಬೇಕಾಗಿರುವಾಗ ಚಿತ್ರ ಅಸೋಸಿಯೆಟ್ಸ್‌ಗಳು ನೋಟ್ ಮಾಡಿಕೊಂಡು ಚಿತ್ತವರಿಸಬೇಕಾದ ಅತಿ ಜರೂರತ್ತಿದೆ, ಹೀಗೆಂದ ಮಾತ್ರದಿ ಚಿತ್ರೀಕರಿಸುವ ಲೋಕೇಶನ್‌ಗಳು ಅಷ್ಟೇ ಪುರಾತನಗಳ ದಿನಮಾನವನ್ನು ನೆನಪಿಸುವಂತೆ ಮಾಡುತ್ತದೆ,

ಯಾವುದೇ ಅಬ್ಬರಗಳಿಂದ ದೈವಿ ಪರಂಪರೆಯನ್ನು ನೋಡುಗರ ಎದೆಗೆ ಮುಟ್ಟಿಸಬಹುದು ಎನ್ನುವ ಚಿತ್ರ ಸೂತ್ರ ಕಂಡು ಕೊಂಡಿರುವ ರಿಷಬ್ ಶೆಟ್ಟಿ ಮತ್ತೊಂದು ಪ್ರಯತ್ನದಲ್ಲಿ ಖಾಲಿ ಸಾಹಸಮಯಕ್ಕೆ ಮೊದಲ ಪ್ರಾಶ್ಯಸ್ತ ನೀಡಿದ್ದಾರೆ, ಏಕೆಂದರೆ ಮೊದಲ ಭಾಗದ ಕಾಂತಾರದ ಕೊನೆಯ ಹದಿನೈದು ನಿಮಿಷಗಳ ಕಾಲದ ಕ್ಲೈಮಾಕ್ಸ್‌ಗೆ ಚಿತ್ರ ಕೋಟಿ, ಕೋಟಿ ಸಂಪಾದನೆ ಮಾಡಿತ್ತು ಅಲ್ಲದೆ ಚಿತ್ರ ಯಶಸ್ಸಿಗೂ ಕಾರಣವಾಗಿತ್ತು, ಅದಾಗ ಅವರೇ ಹೇಳಿದಂತೆ ಹಿಂದಿನ ಪ್ರಯತ್ನಗಳಲ್ಲಿ ಸಿನಿಮಾ ಮಂದಿರಗಳು ಖಾಲಿ, ಖಾಲಿಯಾಗಿಯೇ ಇರುತಿತ್ತು, ಆದರೆ ಇದೀಗ ಚಿತ್ರಮಂದಿರ ತುಂಬಿದೆ, ಟಿಕೇಟ್ ಖಾಲಿ ಆಗಿದೆ ಎನ್ನುವ ಅಸಲಿ ವರಾತಗಳೇ ಮತ್ತೊಂದು ಕಾಂತಾರದ ಚಾಪ್ಟರ್‌ಗೆ ಕ್ಲೈಮಾಕ್ಸ್ ಎನ್ನುವ ಸಾಹಸಮಯಗಳೇ ದೈವಿ ನೆರಳಿನಡಿ ತುಂಬಿ ಬಿಡಬೇಕೆಂದು ನಿರ್ಧರಿಸಿದ್ದರು ಅನಿಸುತ್ತದೆ, ಹೀಗಾಗಿಯೇ ಕಾಂತಾರ ಚಾಪ್ಟರ್-೧ ಅಂತಹದೊಂದು ಸಾಹಸಮಯವನ್ನು ಹೊತ್ತು ತಂದಿದೆ,

ಇನ್ನೂ ಅನಾದಿಕಾಲದಿಂದಲೂ ಇರುವ ಶೋಷಣೆಗಳು, ಅಂದಿನ ರಾಜರುಗಳ ಮನಸ್ಥಿತಿಗಳನ್ನು ತೆರೆದಿಟ್ಟಿದೆ, ಇನ್ನೂ ಕನಕವತಿ ರಾಜಕುಮಾರಿಯಾಗಿರುವ ರುಕ್ಮಿಣಿ ವಸಂತ್ ಅವರ ಪಾತ್ರ ಟ್ವಿಸ್ಟ್ ನೀಡುತ್ತದೆ ಎನ್ನುವುದು ಮೊದಲ ಭಾರಿಗೆ ನೋಡಿದವರಿಗೆ ಗೊತ್ತಿರುವುದಿಲ್ಲ, ಇದೊಂದು ಕೂತೂಹಲದ ಬುಟ್ಟಿ ತೆರೆದಿಡಿಸುತ್ತದೆ, ಆಕೆಯ ವಾಮಚಾರಗಳ ಪ್ರಯೋಗಗಳಿಂದ ಈಶ್ವರವನವನ್ನು ಕಬ್ಜಾ ಮಾಡಿಕೊಳ್ಳಬೇಕು ಎನ್ನುವ ಕುತಂತ್ರಗಳು ಫಲಿಸದೆ ನಾಶವಾಗುತ್ತಾಳೆ, ಇಲ್ಲಿ ರಿಷಬ್ ಶೆಟ್ಟಿ ಶಿವಾಂಶನೂ ಹೌದು ಪಾರ್ವತಿಯ ಅರ್ಧಾಂಗಿಯು ಹೌದು ಹೀಗಾಗಿ ಆಕೆಯನ್ನು ಆಹ್ವಾನಿಸಿ ಈ ಮೂಲಕ ಕನಕವತಿಯನ್ನು ಸಂಹರಿಸುವ ದೃಶ್ಯಾವಳಿಗಳು ಒಂದಕ್ಕಿಂತ ಒಂದು ಅತ್ಯಧ್ಬುತವಾಗಿದೆ, ಮೂರು ಸನ್ನಿವೇಶಗಳಲ್ಲಿ ಹುಲಿ ಆಗಮನ ರೋಚಕತೆಯನ್ನು ಹುಟ್ಟಿ ಹಾಕುತ್ತದೆ,

ಒಟ್ಟಾರೆ ಸಿನಿಮಾ ಅದ್ಬುತ ಮೇಕಿಂಗ್, ಹಾಗೂ ನಿಚ್ಚಳವಾದ ಮನಸಿನ ಪಾತ್ರಗಳು, ನಿರ್ಮಾಣ ಎಲ್ಲಾ ಪ್ರಯತ್ನಗಳು ಉತ್ತಮವಾಗಿದೆ, ಚಿತ್ರವೀಕ್ಷಕ ಸಮೂಹವು ಒಪ್ಪಿಕೊಂಡು ಹಾರೈಸಿದೆ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I