ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಕನಸ ಮುಗಿಸದ ಮನಸು..I
ನಡು ರಾತ್ರಿ,
ನಡ ನಾಟ್ಯವಿಕ್ಕಿದೆ,
ಕನಸ ಹೊದ್ದು ಮನಸುಗಳು
ಬೆಸುಗೆಗಳ ಹೊಸೆದಿದೆ,
ಲೋಕದ ಅವಲೋಕನದಲಿ
ಕಾನನಗಳು ಲಗ್ಗೆಯಿಟ್ಟಿದೆ,
ಅಲ್ಲೊಂದು ಬಳ್ಳಿಯಂತೆ ಸುತ್ತಿಕೊಂಡ
ಕಾಯಗಳ ಸಾಂಗತ್ಯ…!
ಆಂತರ್ಯದ ಮಧುರ ಮದಿರೆಗಳಲಿ
ಬೆರೆತು ರಸಗಳ ಸವಿದ ಸ್ವಾದನೆಗಳ ಹಜಾರ,
ಹಸಿರ ಹೊನಲು, ಸಂಗೀತಧಾರೆಗಳ ಕೊಳಲು,
ಮಿಂಚಿ ಮರೆಯಾಗುವ ಇರುಳ ಬೆಳಕು,
ಅವಳ ಪಾದಗೆಜ್ಜೆಗಳ ಸದ್ದು, ಪಿಸುದನಿಗಳ ಮದ್ದು,
ಹಿಡಿದಿಟ್ಟ ಭಾವಗಳ ಚಿಟ್ಟೆಗಳನು
ಒಂದೊಂದೆ ಹಾರಿ ಬಿಡುವ ಮೋಹಕ ಕ್ಷಣಗಳ ಹೊತ್ತು,
ಕನಸ ಮುಗಿಸದ ಮನಸದು,
ಮಾಸದ ಚಿತ್ರಗಳಿನ್ನೂ ಸುಳಿದು ನಲಿಯುತ್ತಿದೆ,
ಎದೆ ವೀಣೆಗಳ ನುಡಿಸಿದ ಕನಸದು,
ಯಾವ ಸುರದ್ರೂಪಿ, ಸುರಾಂಗನೆಯ ಬಿಂಬವೋ..?
ಕಾಯದ ಗಾಯ ಮಾಸಿದ ದವಾಖಾನೆಯದು,
ಕನಸೇ ಕನ್ನಡಿಯಾಗಿ ಹುಡುಕಾಡುತ್ತಿದೆ,

