I ಶಿವಮೊಗ್ಗದಿಂದ ಸವಣೂರಿನವರೆಗೆ I ಬಬ್ಲೂ ಮರ್ಡರ್ ಸ್ಕೆಚ್ ಟ್ವಿಸ್ಟ್ ಸ್ಟೋರಿ.I
ಹೀಗೊಂದು ಮರ್ಡರ್ ಸ್ಕೆಚ್ ಮಿಸ್ಟರಿಗೊಂದು ಟ್ವಿಸ್ಟ್ ಸ್ಟೋರಿ ಲಭಿಸಿದೆ, ಇದಕ್ಕೆ ಸಾಕ್ಷ್ಯಕರಿಸುವ ವೀಡಿಯೋಗಳು, ಸಾಂದರ್ಭಿಕ ಸನ್ನಿವೇಶಗಳು ಬೇರೊಂದು ವಾಸ್ತವತೆಯನ್ನು ತೆರೆದಿಡುತ್ತದೆ ಈ ಕುರಿತಾಗಿ ಹಾವೇರಿ ಜಿಲ್ಲಾರಕ್ಷಣಾಧಿಕಾರಿಗಳಾದ ಯಶೋಧಾ ವಂಟಗೋಡಿರವರು ತನಿಖಿಸಲು ಮುಂದಾದರೆ ತಮ್ಮದೇ ಇಲಾಖೆಯ ಸಿಪಿಐ ಒಬ್ಬರ ಪೂರ್ವ ಶಾಮೀಲು ಬೆಳಕಿಗೆ ಬರದೆ ಇರಲಾರದಾಗಿದೆ ಎನ್ನುವುದು ಒಂದಷ್ಟು ನಿಖರತೆಗಳಿಂದ ತಿಳಿದು ಬಂದಿದೆ,
ಅಸಲಿಗೆ ಇಂತಹದೊಂದು ಮರ್ಡರ್ ಮಿಸ್ಟರ್ ಸ್ಕೆಚ್ ಮಿಸ್ ಆಗಿದೆ ಎನ್ನುವ ವೀಡಿಯೋ ತುಣುಕುಗಳು ಶಿವಮೊಗ್ಗದಲ್ಲಿ ನೋಡಿದ ಜನತೆ ಹೌಹಾರಿದ್ದಾರೆ, ಮೊದಲೇ ಈ ನಗರಿಗಳ ಮೇಲೆ ರೌಡಿಸಂ ಅಪರಾಧದ ಅಪವಾದ ಹೊದ್ದು ಮಲಗಿದೆ, ಹೀಗಿರುವಾಗ ಶಿವಮೊಗ್ಗದಿಂದ ಸವಣೂರಿನವರೆಗೂ ಈ ಸ್ಟೋರಿ ಕಥಾನಕಗಳು ಎದ್ದು ಕುಣಿದಾಡುತ್ತಿರುವ ವಾಸ್ತವತೆಗಳು ತೆರೆದಿಡಬೇಕಾದ ಜರೂರತ್ತು ಶಿವಮೊಗ್ಗದ ಗುಪ್ತದಳದಿಂದ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್‌ರವರೆಗೆ ತನಿಖಿಸಬೇಕಾದ ಅತೀ ಜರೂರತ್ತಿದೆ,
ಇದು ಸಾಧ್ಯವಾಗದೇ ಹೋದರೆ ಶಿವಮೊಗ್ಗ ವಿಭಾಗದ ಐಜಿಪಿ ರವಿಕಾಂತೇ ಗೌಡರವರು ಒಂದು ತಂಡ ರಚಿಸಿ ತನ್ನ ಮೇಲೆ ಮರ್ಡರ್ ಸ್ಕೆಚ್ ರೂಪಿಸಿ ಬಂದಿದ್ದರು ಎನ್ನಲಾದ ಶಿವಮೊಗ್ಗದ ಹುಡುಗರನ್ನು ಹಿಡಿದು ಹೊಡೆದು ಅವರೇ ತಂದಿದ್ದಾರೆ, ಮಾರಕಾಸ್ತ್ರಗಳೊಂದಿಗೆ ವೀಡಿಯೋ ಚಿತ್ರೀಕರಣಗೊಳಿಸಿ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಲಾಗಿದೆ ಎನ್ನುವ ನೈತಿಕ ಪೊಲೀಸ್‌ಗಿರಿ ಹಾಗೂ ಬಬ್ಲೂ ಯಾನೆ ಇಮ್ರಾನ್ ಚೌದ್ರಿ ಹಾಗೂ ಜತೆಗಿದ್ದ ತಂಡದ ಮೇಲೆ ಸುಮೋಟೋ ಕೇಸು ದಾಖಲಿಸಿ ಶಿವಮೊಗ್ಗಕ್ಕೆ ಕರೆತಂದು ವಿಚಾರಣೆ ನಡೆಸಿದರೆ ಅಕ್ಷರಶಃ ಇದೊಂದು ಬ್ರೂಟಲ್ ಮರ್ಡರ್ ಸ್ಕೆಚ್‌ನ ಅಸಲಿ ವರತಾಗಳು ಬೆತ್ತಲಾಗುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ,
ಏನೇ ಇರಲಿ ಬಬ್ಲೂ ಯಾನೇ ಇಮ್ರಾನ್ ಚೌದ್ರಿಯನ್ನು ಮರ್ಡರ್ ಮಾಡಲು ೩೦ ಲಕ್ಷಕ್ಕೆ ಸುಫಾರಿ ತೆಗೆದುಕೊಳ್ಳಲಾಗಿತ್ತು, ಇದರಂತೆ ಮಾರಕಾಸ್ತ್ರಗಳೊಂದಿಗೆ ಶಿವಮೊಗ್ಗದಿಂದಲೇ ಸವಣೂರಿಗೆ ಬಂದಿದ್ದ ಸುಮಾರು ಏಳೆಂಟು ಹುಡುಗರು ಇಮ್ರಾನ್ ಚೌದ್ರಿಯನ್ನು ಅಂದು ರಾತ್ರಿ ಮಡುಗಟ್ಟುವ ವೇಳೆಗೆ ಕಾರಿನಲ್ಲಿ ಹಿಂಬಾಲಿಸಿದ್ದರು, ಇದರ ಸುಳಿವರಿತ ಬಬ್ಲೂ ತನ್ನ ಸಹೋದರನಿಗೆ ತಿಳಿಸಿ ಸಾರ್ವಜನಿಕರ ಸಹಾಯದಿಂದ ಅವರ ಮೇಲೆ ಕಲ್ಲುಗಳನ್ನು ತೂರಿ ಹಿಡಿಯುವ ಹೊತ್ತಿಗೆ ಐದು ಜನ ಪರಾರಿಯಾದರೆ ಇನ್ನೂ ಸಿಕ್ಕಿಹಾಕಿಕೊಂಡ ಇಬ್ಬರನ್ನು ವಿಚಾರಿಸಿದಾಗ ಅವರು ತಮ್ಮ ಹೆಸರು ಜುನೇದ್ ಹಾಗೂ ಸಾಗರ ಮೂಲದ ಶಕೀಬ್ ಎಂದಿದ್ದಾರೆ, ಅದೇ ಮಾರಕಾಸ್ತ್ರಗಳೊಂದಿಗೆ ವೀಡಿಯೋ ಚಿತ್ರೀಕರಣ ಮಾಡುವಾಗ ಅವರುಗಳು ಬಬ್ಲೂ ವಿಕೇಟ್ ಎತ್ತಬೇಕೆಂದು ಸವಣೂರಿನ ಜಾಕೀರ್, ಮುಹೀನ್ ಷಹಬಾಜ್, ನವಾಜ್‌ಖಾನ್ ಪಠಾಣ್‌ರವರುಗಳೇ ಸುಫಾರಿ ನೀಡಿದ್ದಾರೆ ಸುಫಾರಿನಲ್ಲಿ ೫ ಲಕ್ಷ ಮುಂಗಡ ಹಣ ಕೊಟ್ಟಿದ್ದಾರೆ ಅದು ರೂಮ್‌ನಲ್ಲಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿರುವ ವೀಡಿಯೋದಲ್ಲಿದೆ ಹಾಗೂ ಇಮ್ರಾನ್ ಕೂಡ ಅದೇ ಮಾತನ್ನ ಪುನಾರವರ್ತಿಸಿದ್ದಾನೆ,
ಹೀಗೆ ತಪ್ಪೋಪ್ಪಿಕೊಂಡವರನ್ನು ಮಾರಕಾಸ್ತ್ರಗಳ ಸಹಿತ ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎನ್ನುವ ಒಟ್ಟಾರೆ ಈ ಮ್ಯಾಟರ್‌ನಲ್ಲಿ ಅದೆಷ್ಟು ನಿಖರತೆಗಳಿದೆ ಎನ್ನುವ ತನಿಖಿಸಬೇಕಾದ ಪೊಲೀಸರು ಎಡವಟ್ಟು ಮಾಡಿಕೊಂಡಿದ್ದಾರೆಯೇ ಅಥವಾ ಶಾಮೀಲಾಗಿದ್ದಾರೆಯೇ ಎನ್ನುವುದು ಹಾವೇರಿ ಎಸ್ಪಿ ಯಶೋಧಾ ವಂಟಗೋಡಿರವರು ಖುದ್ದು ತನಿಖಿಸಬೇಕಾದ ಅಗತ್ಯತೆಗಳು ಈ ಮರ್ಡರ್ ಮಿಸ್ಟರಿ ಸ್ಕೆಚ್ ಪ್ರಕರಣದಲ್ಲಿದೆ ಎನ್ನುವುದು ಪ್ರಾಥಮಿಕ ಹಂತದಲ್ಲಿಯೇ ಗೊತ್ತು ಮಾಡಿಕೊಳ್ಳಬಹುದಾಗಿದೆ,
ಹೌದು ಈ ಹಿಂದೆ ಕಾರ್ಡ್ಸ್ ಕ್ಲಬ್ ಯಾನೇ ಇಸ್ಪೀಟ್ ದಂಧೆಯ ಕ್ಲಬ್ ಭಾರಿ ಭರ್ಜರಿಯಾಗಿಯೇ ಸಾಗುತಿತ್ತು, ಈ ಕಟ್ಟಡ ನವಾಜ್ ಖಾನ್ ಪಠಾಣ್ ಎನ್ನುವವರಿಗೆ ಸೇರಿದಾಗಿದ್ದು, ಈ ದಂಧೆಯ ಪಾಲುದಾರಿಕೆ ಹೊಂದಿದ್ದರು, ಸತತ ಆರು ವರ್ಷಗಳಿಂದ ಡಿವೈಎಸ್ಪಿ ಅನುಮತಿಯ ಮೇರೆಗೆ ನಡೆಯುತ್ತಿದ್ದ ಈ ಇಸ್ಪೀಟ್ ಅಡ್ಡೆಯಿಂದ ಸಿಪಿಐ ಸಾಹೇಬರಿಗೆ ಏನು ತಲುಪಿರಲಿಲ್ಲ ಎನ್ನುವ ಆರೋಪವಿದೆ, ಇಂತಹ ಆರೋಪಗಳಿಂದ ಈ ಸಾಹೇಬರು ನವಾಜ್ ಖಾನ್ ಪಠಾಣ್ ಮೇಲೆ ಕುಪಿತಗೊಂಡಿದ್ದರು, ಈ ತರುವಾಯ ಇಂತಿವರ ಮಗ ಮುಹಿನ್ ಖಾನ್ ಪಠಾಣ್ ಮೇಲೆ ದಂಧೆಯ ಹಿಡಿತಕ್ಕಾಗಿ ಅಟ್ಯಾಕ್ ಮಾಡಿದ್ದ ಈ ಇದೇ ಬಬ್ಲೂ ಯಾನೇ ಇಮ್ರಾನ್ ಚೌದ್ರಿಯ ತಂಡ ಮುಗಿಸಿ ಹಾಕಿದ್ದೇನೆ ಎನ್ನುವ ಗುಮಾನಿ ಮೇಲೆ ಹೊರಟು ಹೋಗುತ್ತಾರೆ, ಆದರೆ ಮುಹಿನ್ ಖಾನ್ ಪಠಾಣ್ ಬದುಕುಳಿಯುತ್ತಾನೆ, ಅತೀವ ಹೊಡೆತಗಳಿಂದ ನೆತ್ತರು ಬಸಿದುಕೊಂಡೆ ಇಲ್ಲಿನ ಸರ್ಕಾರಿ ಆಸ್ಪತ್ರೆನಲ್ಲಿ ಚಿಕಿತ್ಸೆ ಪಡೆಯುತ್ತಾನೆ,
ಈ ಘಟನೆ ನಡೆದ ನಂತರ ನವಾಜ್ ಖಾನ್ ನಡೆಸುತ್ತಿದ್ದ ಸ್ವಂತದ ಕಟ್ಟಡದಲ್ಲಿನ ಕಾರ್ಡ್ಸ್ ಕ್ಲಬ್ ಡೋರ್ ಬಂದ್ ಆಗುತ್ತದೆ, ಇಲ್ಲಿಗೆ ಬಂದ್ ಆಗಿ ಹದಿನೆಂಟು ತಿಂಗಳು ಉರುಳಿದೆ, ಅಟ್ಯಾಕ್ ಮಾಡಿದ್ದ ಇಮ್ರಾನ್ ಚೌದ್ರಿಯು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾನೆ,
ಈ ಘಟನೆಯಿಂದ ಪ್ರತಿದಾಳಿ ಮರುಕಳಿಸಬಾರದು ಎನ್ನುವ ಕಾರಣಕ್ಕಾಗಿ, ರಾಜಿ-ಸಂಧಾನಕ್ಕೆ ಮೇಜು ಸಿದ್ದಗೊಳಿಸುತ್ತಾರೆ, ನಿಖರ ಮಾಹಿತಿಯಂತೆ ಬಬ್ಲೂ ಒಮ್ಮೆಲೆ ಈ ಕಟ್ಟಡ ಸಹಿತ ಇಸ್ಪೀಟ್ ದಂಧೆಯನ್ನು ತನಗೆ ವಹಿಸಿಕೊಡಿ ಎಂದು ಡಿಮ್ಯಾಂಡ್ ಕ್ರಿಯೇಟ್ ಮಾಡುತ್ತಾನೆ, ಇದಕೊಪ್ಪದ ನವಾಜ್ ಖಾನ್ ಪಠಾಣ್ ಮೇಲೆ ಮತ್ತೊಂದು ಬಗೆಯ ಹಗೆಯನ್ನು ಸಾಧಿಸಲು ಪೂರ್ವ ಪ್ರಯತ್ನದಲ್ಲಿರುತ್ತಾನೆ ಎನ್ನುವುದು ಮೂಲಗಳು ತಿಳಿಸುತ್ತವೆ, ಇದು ಶಿವಮೊಗ್ಗದಿಂದ ಸವಣೂರಿನವರೆಗೆ ಪ್ರಕರಣದ ಮೂಲ ಕಥಾನಕವಾಗಿದೆ,
ಇನ್ನೂ ಶಿವಮೊಗ್ಗದ ಜುನೇದ್ ಈತನ ಮೇಲೆ ಶಿವಮೊಗ್ಗದ ವಿವಿಧ ಠಾಣೆಗಳಲ್ಲಿ ನಾಲ್ಕು ಕೇಸು ದಾಖಲಾಗಿದೆ, ಇನ್ನೋರ್ವ ಸಾಗರ ಮೂಲದ ಶಕೀಬ್ ಮೇಲೆ ಯಾವುದೇ ಕೇಸುಗಳಿಲ್ಲ, ಯಾವುದೋ ಒಂದು ಗಲಾಟೆ ಸಾಗರದಲ್ಲಿ ನಡೆದಿದೆ ಈ ಪ್ರಕರಣದಲ್ಲಿ ತನ್ನನ್ನು ಎಲ್ಲಿ ಸಿಲುಕಿಸಿ ಬಿಡುತ್ತಾರೋ ಎನ್ನುವ ಇರಾದೆಯಲ್ಲಿ ಶಿವಮೊಗ್ಗದ ಅವನ ಸ್ನೇಹಿತನಿಗೆ ಪೋನಾಯಿಸಿ ಮೂರ್ನಾಲ್ಕು ದಿನ ಎಲ್ಲಿಯಾದರು ಹೋಗುತ್ತೇನೆ, ಅಥವಾ ಶಿವಮೊಗ್ಗಕ್ಕೆ ಬರುವುದಾ ಎಂದು ಅವಲತ್ತುಕೊಳ್ಳುತ್ತಾನೆ ಅದಕ್ಕೆ ಆತನ ಸ್ನೇಹಿತ ಸವಣೂರು ಹೋಗು ಅಲ್ಲಿ ಕ್ಲಬ್ ಜಾಗವಿದೆ, ಅಲ್ಲಿ ಯಾರು ಇಲ್ಲ ಅಲ್ಲಿದ್ದು ಬನ್ನಿ ಎಂದು ಹೇಳಿ ಕಳಿಸಿದ್ದಾರೆ ಎನ್ನುವ ಮಾತಿದೆ, ಇದರಂತೆ ಬಾಡಿಗೆ ಕಾರು ಮಾಡಿಕೊಂಡು ನವಾಜ್ ಖಾನ್ ಪಠಾಣ್ ಕಟ್ಟಡದಲ್ಲಿ ಮೂರುದಿನಗಳು ಉಳಿದುಕೊಳ್ಳುತ್ತಾರೆ, ಬಾಡಿಗೆ ಜಾಸ್ತಿ ಆಗುತ್ತದೆ ಎನ್ನುವ ಕಾರಣಕ್ಕೆ ಇದೇ ಜುನೇದ್ ಹಾಗೂ ಶಕೀಬ್‌ರವರುಗಳು ಐದು ಜನ ಹುಡುಗರನ್ನು ವಾಪಸ್ಸು ಕಳುಹಿಸಿ ಅವರು ಅಲ್ಲಿಯೇ ಉಳಿದುಕೊಳ್ಳುತ್ತಾರೆ ಎನ್ನುವ ಮೂಲದ ಪ್ರಕಾರ, ಇದರ ಸುಳಿವಿನರಿತ ಬಬ್ಲೂ ಯಾನೇ ರೌಡಿಶೀಟರ್ ಇಮ್ರಾನ್ ಚೌದ್ರಿ ಹಾಗೂ ಅವರ ತಂಡ ಇದೇ ಕ್ಲಬ್ ಕಟ್ಟಡದ ಮೇಲೆ ಅಟ್ಯಾಕ್ ಮಾಡಿ ಇಬ್ಬರ ಮೇಲೂ ಮಾರಣಾಂತಿಕವಾಗಿ ಬಡಿದು, ಅವರ ಕೈಗಳಿಗೆ ಮಾರಕಾಸ್ತ್ರಗಳನ್ನು ಕೊಟ್ಟು ಕ್ರಿಯೇಟೆಡ್ ವೀಡಿಯೋ ಚಿತ್ರೀಕರಣ ಮಾಡಲಾಗಿದೆ, ಅಲ್ಲದೆ ಈ ಕಟ್ಟಡ ಈಗಾಗಲೇ ಡೆಡ್ಲಿ ಅಟ್ಯಾಕ್‌ನಿಂದ ಕಿಟಕಿಗಳ ಗ್ಲಾಸ್, ಕೊಠಡಿಯಲ್ಲಿನ ಗೃಹಪಯೋಗಿ ಸಾಮಾಗ್ರಿಗಳು ತುಂಡು-ತುಂಡಾಗಿದೆ, ಅಲ್ಲಲ್ಲಿ ಸಿಕ್ಕ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿರುವ ಈ ವೀಡಿಯೋ ತುಣುಕುಗಳನ್ನು ದರ್ಶಿಸಿದವರು ಪ್ರಾಥಮಿಕ ಹಂತದಲ್ಲಿಯೇ ಹೇಳಬಹುದಾಗಿದೆ,
ಈ ಕೊಲೆ ಮಾಡಲು ಸುಫಾರಿ ಪಡೆದು ಬಂದಿದ್ದೇವು ಎಂದು ಜುನೇದ್ ಹಾಗೂ ಶಕೀಬ್ ತಿಳಿಸಿರುವ ವೀಡಿಯೋ ತುಣುಕಿನಲ್ಲಿರುವಂತೆ ಬಬ್ಲೂ ಯಾನೆ ಇಮ್ರಾನ್ ಚೌದ್ರಿ ಯಾವ ರಸ್ತೆಯಲ್ಲಿ ಇವನನ್ನು ಹಿಂಬಾಲಿಸಲಾಗಿತ್ತು, ಸುಫಾರಿ ಪಡೆದವರ ಮೇಲೆ ಯಾವ ಸಾರ್ವಜನಿಕರು ನಡುರಾತ್ರಿಯಲ್ಲಿ ಕಲ್ಲು ತೂರಿದ್ದರು, ಸಿಸಿ ಟಿವಿ ಪುಟೇಜಸ್‌ಗಳು ಇದೆಯಾ..?! ಐದು ಜನ ಓಡಿ ಹೋದರು ಇವರಿಬ್ಬರ ಕೈಲಿದ್ದ ಮಚ್ಚು-ಲಾಂಗ್‌ಗಳು ಸಾರ್ವಜನಿಕರಿಂದ ಕಲ್ಲು ತೂರಿಸಿಕೊಂಡು, ಬಡಿಸಿಕೊಂಡು ಎಳೆದು ತರುವಾಗಲು ಎಲ್ಲಿಯು ಕೆಳಗೆ ಬೀಳದಿರುವುದು ಅಚ್ಚರಿ, ಇನ್ನೂ ಅವರ ಕೈಲಿದ್ದ ಮಚ್ಚು-ಲಾಂಗ್‌ಗಳನ್ನು ಹಿಡಿದುಕೊಂಡ ಜುನೇದ್ ಹಾಗೂ ಶಕೀಬ್‌ರವರುಗಳಿಂದಲೇ ನವಾಜ್ ಖಾನ್ ಪಠಾಣ್, ಜಾಕೀರ್, ಮುಹಿನ್ ಖಾನ್ ಪಠಾಣ್, ಷಹಬಾಜ್‌ರವರುಗಳ ಹೆಸರನ್ನು ಪೂರ್ವಭಾವಿಯಾಗಿ ತಯಾರಿ ಮಾಡಿ ಹೇಳಿಸಿದಂತೆ ಕೇಳುವ ವ್ಯಕ್ತಿಯ ಕೈಯಲ್ಲಿ ಏನಿತ್ತು..? ಅವರ ಸುತ್ತಲಿದ್ದಿದ್ದು ನಿಜಕ್ಕೂ ಸಾರ್ವಜನಿಕರೇ..?
ವೀಡಿಯೋದಲ್ಲಿ ಕಾಣಿಸಿಕೊಳ್ಳುವ ಸಾಕಷ್ಟು ಕೇಸುಗಳಲ್ಲಿ ಬೇಕಾಗಿರುವ ಗದಗದ ಲಕ್ಷ್ಮೀಶ್ವರದ ನಟೋರಿಯಸ್ ಅಬ್ದುಲ್ ಯಾನೆ ರೆಬಲ್ ಈತನಿಗೆಲ್ಲಿಂದ ಸಾರ್ವಜನಿಕನಾಗಿ ಕಾಣುತ್ತಾನೆ, ಇಂತಹ ಅನೇಕತೆಗಳನ್ನು ಕಟ್ಟಿಕೊಳ್ಳುವ ಈ ಪ್ರಕರಣದ ಉದ್ದಕ್ಕೂ ವೀಡಿಯೋ ಚಿತ್ರೀಕರಣ, ತಪ್ಪೊಪ್ಪಿಗೆ, ಪೊಲೀಸ್ ಠಾಣೆಗೆ ಕರೆತರುವ ಮಾರ್ಗಗಳು, ಸುತ್ತಲಿರುವ ವ್ಯಕ್ತಿಗಳ ಕುರಿತಾಗಿ ಹಾಗೂ ವೀಡಿಯೋದಲ್ಲಿರುವಂತೆ ಐದು ಲಕ್ಷ ಹಣ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಯೇ..? ಇಂತಿಷ್ಟು ಸಂಗತಿಗಳು ಬಹುಷ್ಯಃ ಸಿಪಿಐ ಸಾಹೇಬರಿಗೆ ತನಿಖಿಸಬೇಕಾದ ಜರೂರತ್ತುಗಳನ್ನು ಮರೆತಂತೆ ಕಾಣುತ್ತದೆ, ಹೀಗಾಗಿ ಈ ಪೊಲೀಸ್ ನೈತಿಕಗಿರಿಗೆ ಬಹುಮಾನ ಘೋಷಿಸಿದಂತೆ ಘೋಷಿಸಿ, ಪೋಷಿಸಿ, ರೌಡಿ ಶೀಟರ್ ಬಬ್ಲೂ ಯಾನೆ ಇಮ್ರಾನ್ ಚೌದ್ರಿ ಹೇಳುವ ಕಥೆಯನ್ನು, ವೀಡಿಯೋ ಚಿತ್ರೀಕರಣದ ಹಿಂದೆ ಅಸಲಿ ವೃತ್ತಾಂತಗಳನ್ನು ಹಾವೇರಿ ಎಸ್ಪಿ ಯಶೋಧಾ ವಂಟಗೋಡಿಯವರ ಚಿತ್ತಕ್ಕೆ ತರಲು ಹಾಗೂ ಪ್ರಕರಣದ ಒಂದಷ್ಟು ಮಾಹಿತಿಗಳನ್ನು, ಲಭಿಸಿದ ಕ್ಲಬ್ ಅಟ್ಯಾಕ್ ವೀಡಿಯೋ ತುಣುಕುಗಳನ್ನು ಸಾರ್ವಜನಿಕವಾಗಿ ವಿಸ್ತ್ರತಗೊಳಿಸುವ ಯತ್ನ ಇದಾಗಿದೆ.




