I ಮಾನಸ ಶಾಲೆ ವಾರ್ಷಿಕೋತ್ಸವ I ಚಂದ್ರಕಾಂತ್‌ಗೆ ಮಾನಸ ರತ್ನ ಪುರಸ್ಕಾರ I
ಶಿವಮೊಗ್ಗ: ಮಾನಸ ಇಂಟರ್‌ನ್ಯಾಷನಲ್ ಐಸಿಎಸ್‌ಇ ಶಾಲೆಯ 2025 – 26 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭ ನ.22 ರಂದು ಬೆಳಗ್ಗೆ 9 ರಿಂದ ನಡೆಯಲಿದ್ದು, ಈ ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ “ನನ್ನ ಗೋಪಾಲ” ಮಕ್ಕಳ ನಾಟಕ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಪ್ರಖ್ಯಾತ ಪತ್ರಕರ್ತರು, ರಾಜ್ಯೋತ್ಸವ ಪ್ರಶಸ್ತಿ ಪರಸ್ಕೃತರು, ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕರಾದ “ ಎಸ್. ಚಂದ್ರಕಾಂತ್‌ವರಿಗೆ” ಸಂಸ್ಥೆಯು ಮಾನಸ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನವ ಮಾನಸ ಎಜುಕೇಶನಲ್ ಮತ್ತು ಚಾರಿಟೆಬಲ್‌ಟ್ರಸ್ಟ್ ಅಧ್ಯಕ್ಷರಾದ ಈ ಹೆಚ್‌ಟಿ ನರಸಿಂಹ ಅಧ್ಯಕ್ಷತೆ ವಹಿಸುವರು ಶಿವಮೊಗ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಕಾರ್ಯಕ್ರಮ ಉದ್ಘಾಟಿಸುರು. ಮುಖ್ಯ ಅತಿಥಿಗಳಾಗಿ ಕಟೀಲು ಅಶೋಕಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ಸಂದ್ಯಾ ಕಾವೇರಿ, ಶಿಕಾರಿಪುರ ಸಾಧನಾ ಅಕಾಡೆಮಿ ಮಂಜುನಾಥ್ ಬಿ , ಶಿಕಾರಿಪುರ, ಸಂಸ್ಥೆ ಅಧ್ಯಕ್ಷರಾದ ಹೆಚ್ ಸುಬ್ಬಯ್ಯ, ಕಾರ್ಯದರ್ಶಿ ಎಸ್ .ಜನಾರ್ಧನ್, ಖಜಾಂಚಿ ಹೆಚ್ ಶಿವರಾಮ್ ಪ್ರಾಂಶುಪಾಲರಾದ ಸೌಮ್ಯ ಕೆ ಭಾಗವಹಿಸುವರು.

